Shani Nakshatra: ಡಿಸೆಂಬರ್ವರೆಗೆ ಈ 4 ರಾಶಿಯವರಿಗೆ ಮಹಾ ಅದೃಷ್ಟ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಹರಿಯುವುದು ಸಂಪತ್ತಿನ ಸುಧೆ
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಮುಂದಿನ ತಿಂಗಳು ಶನಿಯು ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. ಈ ಬದಲಾವಣೆಯು ನಾಲ್ಕು ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವುದು. ಹಿಂದೆ ಮಾಡಿದ ಒಳ್ಳೆಯ ಕಾರ್ಯಗಳು ಈ ಸಮಯದಲ್ಲಿ ಫಲ ನೀಡುವುದು. 2026 ರಲ್ಲಿ ಶನಿಯು ತನ್ನ ನಕ್ಷತ್ರವನ್ನು ಮೂರು ಬಾರಿ ಬದಲಾಯಿಸುತ್ತಾನೆ. ರಾಶಿ ಬದಲಾಯಿಸುವುದರ ಜೊತೆಗೆ ಶನಿಯು ನಿರ್ದಿಷ್ಟ ಸಮಯದಲ್ಲಿ ನಕ್ಷತ್ರವನ್ನು ಕೂಡಾ ಬದಲಾಯಿಸುತ್ತಾನೆ. ಈ ಬದಲಾವಣೆಗಳ ಪರಿಣಾಮದಿಂದಾಗಿ, ಕೆಲವು ರಾಶಿಯವರ ಜೀವನದಲ್ಲಿ ಶುಭಫಲಗಳು ಗೋಚರಿಸುವುದು.
ಅಕ್ಟೋಬರ್ 9, 2026 ರಂದು ಶನಿಯು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಸೂರ್ಯನ ಮಗ ಎಂದೂ ಕರೆಯಲ್ಪಡುವ ಶನಿಯು ಹೊಸ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯ ಮತ್ತು ಕರ್ಮದ ಅಧಿಪತಿ ಎಂದು ಕರೆಯಲಾಗುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಶನಿ ಯಾವಾಗಲೂ ಅನುಕೂಲಕರ ಫಲವನ್ನೇ ನೀಡುತ್ತಾನೆ. ಈ ಸಮಯದಲ್ಲಿ ಶನಿಯು ಉತ್ತರಭಾದ್ರ ನಕ್ಷತ್ರದ ಮತ್ತೊಂದು ಪಾದವನ್ನು ಪ್ರವೇಶಿಸುವುದರಿಂದ ಕೆಲವು ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಗಳು ಕಂಡು ಬರುವುದು. ಗುರುವನ್ನು ಈ ನಕ್ಷತ್ರದ ಅಧಿಪತಿ ಎಂದು ಕರೆಯಲಾಗುತ್ತದೆ. ಶನಿಯ ನಕ್ಷತ್ರ ಗೋಚರ ಕೆಲವು ರಾಶಿಯವರಿಗೆ ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಅವಕಾಶಗಳನ್ನು ನೀಡುವುದು.

ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿರುವುದು. ಹಿಂದೆ ಮಾಡಿದ ಕಠಿಣ ಪರಿಶ್ರಮವು ಫಲ ಈ ಅವಧಿಯಲ್ಲಿ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಉದ್ಯೋಗದಲ್ಲಿ ಸ್ಥಿರತೆಯ ಜೊತೆಗೆ, ಹಳೆಯ ಸಮಸ್ಯೆಗಳು ಮತ್ತು ತೊಂದರೆಗಳಿಂದಲೂ ಮುಕ್ತಿ ಸಿಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿಯಾಗುವುದು. ಜೀವನದಲ್ಲಿ ಹೊಸ ಅವಕಾಶಗಳು ಎದುರಾಗುವುದು. ಹಣಕಾಸಿನ ಸಮಸ್ಯೆ ನೀಗುವುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದರ ಜೊತೆಗೆ, ಧೈರ್ಯ ಮತ್ತು ಉತ್ಸಾಹ ಕೂಡಾ ಹೆಚ್ಚಾಗುವುದು.
ಮಕರ ರಾಶಿ (Capricorn)
ಮಕರ ರಾಶಿಯವರಿಗೆ ಶನಿಯ ನಕ್ಷತ್ರ ಗೋಚರ ಉತ್ತಮ ಫಲವನ್ನು ನೀಡುವುದು. ಜೀವನದಲ್ಲಿನ ಕೆಲವು ಸಮಸ್ಯೆಗಳು ನಿವಾರಣೆಯಾಗುವುದು. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಅವಕಾಶಗಳು ಸಿಗುವುದು. ಮನೆಯಲ್ಲಿ ಮತ್ತು ಹೊರಗೆ ಶಾಂತಿಯುತ ವಾತಾವರಣ ನಿರ್ಮಾಣವಾಗುವುದು. ಶನಿಯ ಪ್ರಭಾವದ ಕಾರಣದಿಂದ ಕೆಲವು ಸವಾಲುಗಳು ಕೂಡಾ ಎದುರಾಗಬಹುದು. ಆದ್ದರಿಂದ ಅವರು ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಕುಟುಂಬ ಜೀವನವು ಸಂತೋಷವಾಗಿರುವುದು. ಮನಸ್ಸಿನ ಬಹುಕಾಲದ ಕೆಲವು ಆಸೆಗಳು ಈಡೇರಬಹುದು.
Shani Nakshatra: ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಕೆಲಸದಲ್ಲಿ ಬಡ್ತಿ ಸಿಗುವುದು. ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಕೂಡಾ ಸಿಗಬಹುದು. ಆರ್ಥಿಕವಾಗಿ ಹೆಚ್ಚಿನ ಹಣವನ್ನು ಪಡೆಯುವ ಅವಕಾಶಗಳು ಒಲಿದು ಬರುವುದು. ಶ0ನಿಯ ಪ್ರಭಾವದಿಂದಾಗಿ ಕೆಲವು ಒತ್ತಡ ಅಥವಾ ಸವಾಲುಗಳನ್ನು ಎದುರಾಗುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನೀವು ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗಿರಬೇಕು. ಸಮಸ್ಯೆಗಳು ಒಂದೊಂದಾಗಿಯೇ ಬಗೆಹರಿಯುವುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಜೀವನದಲ್ಲಿ ಕೆಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದು.
Shani Nakshatra: ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಶನಿಯ ಸಂಚಾರವು ಅನುಕೂಲಕರವಾಗಿರುವುದು. ಅದೃಷ್ಟ ನಿಮ್ಮ ಜೊತೆ ಇರುವುದು. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ದೂರದ ಊರಿಗೆ ಪ್ರಯಾಣ ಬೆಳೆಸುವ ಅವಕಾಶ ಸಿಗುವುದು. ಜೀವನದಲ್ಲಿನ ಕೆಲವು ಸಮಸ್ಯೆಗಳು ಕ್ರಮೇಣ ಕಡಿಮೆಯಾಗಬಹುದು. ಒಟ್ಟಾರೆಯಾಗಿ, ಈ ಅವಧಿಯು ಹೊಸ ಅವಕಾಶಗಳಿಗೆ ಕಾರಣವಾಗಬಹುದು. ಕಂಡ ಕನಸು ಈ ಅವಧಿಯಲ್ಲಿ ನನಸಾಗುವುದು. ಕುಟುಂಬ ಸದಸ್ಯರ ಬೆಂಬಲ ಇರುವುದು.


Click it and Unblock the Notifications
