Kendra Trikona Rajyoga: ಈ ರಾಶಿಯವರ ಕೈ ಹಿಡಿಯುತ್ತೆ ಕೇಂದ್ರ ತ್ರಿಕೋನ ರಾಜಯೋಗ
ಗ್ರಹಗಳ ಸಂಚಾರದ ಸಮಯದಲ್ಲಿ ಕೆಲವೊಮ್ಮೆ ಗ್ರಹಗಳ ಸಂಯೋಗಗಳು ರೂಪುಗೊಳ್ಳುತ್ತವೆ. ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಒಟ್ಟುಗೂಡುತ್ತದೆ. ಅಂದರೆ ಕೆಲವೊಮ್ಮೆ ಒಂದೇ ಕಕ್ಷೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಚರಿಸಬಹುದು. ಗ್ರಹಗಳ ಸಂಯೋಜನೆಯು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡುತ್ತದೆ. ಈ ಯೋಗಗಳ ಪ್ರಭಾವವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ.
ಹೀಗೆ ಐಷಾರಾಮಿ ಮತ್ತು ಸಂಪತ್ತಿನ ಅಂಶವೆಂದು ಪರಿಗಣಿಸಲ್ಪಟ್ಟಿರುವ ಶುಕ್ರನು ಅಕ್ಟೋಬರ್ 2 ರಂದು ಸಿಂಹರಾಶಿಗೆ ಪ್ರವೇಶಿಸಿದನು. ಶುಕ್ರನು ಸಿಂಹರಾಶಿಗೆ ಪ್ರವೇಶ ಮಾಡುವುದರಿಂದ ಮತ್ತು ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ 30 ವರ್ಷಗಳ ನಂತರ ಸಮಾಸಪ್ತಮ ಮತ್ತು ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಶುಭ ಯೋಗವಾಗಿದೆ. ಈ ಯೋಗದಿಂದಾಗಿ ಕೆಲ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, 4 ರಾಶಿಯ ಜನರು ಈ ರಾಜಯೋಗದಿಂದ ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಏರಿಕೆ, ಜೀವನದಲ್ಲಿ ಪ್ರಗತಿ ಮತ್ತು ಉತ್ತಮ ಖ್ಯಾತಿಯನ್ನು ಕಾಣುತ್ತಾರೆ. ಹಾಗಾದರೆ ಕೇಂದ್ರ ತ್ರಿಕೋನ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಈಗ ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಕೇಂದ್ರ ತ್ರಿಕೋನ ರಾಜಯೋಗದಿಂದ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಬಹಳ ದಿನಗಳಿಂದ ಕೈ ಸೇರದ ಹಣವು ಈ ಯೋಗಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ವ್ಯಾಪಾರಿಗಳು ಹೊಸ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಅದು ಭವಿಷ್ಯದಲ್ಲಿ ಅವರಿಗೆ ಉತ್ತಮ ಲಾಭವನ್ನು ತರುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗದಿಂದ ಶುಭವಾಗಲಿದೆ. ಇಲ್ಲಿಯವರೆಗೂ ಇದ್ದ ಸಮಸ್ಯೆಗಳು ದೂರವಾಗಿ ಭಾಗ್ಯಗಳು ಬೆಳಗಲಿವೆ. ಪಿತ್ರಾರ್ಜಿತ ಆಸ್ತಿ ಉತ್ತಮ ಲಾಭವನ್ನು ನೀಡುತ್ತದೆ. ಹಣದ ವಹಿವಾಟಿನಿಂದ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ. ಮುಖ್ಯವಾಗಿ ಈ ಸಮಯದಲ್ಲಿ ನೀವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣದಿಂದ ಉತ್ತಮ ಹಣದ ಲಾಭವನ್ನು ಪಡೆಯುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗ ಅನೇಕ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಬುದ್ಧಿವಂತಿಕೆಯಿಂದ ನೀವು ಸಾಕಷ್ಟು ಹಣವನ್ನು ಗಳಿಸುವಿರಿ. ಈ ಅವಧಿಯಲ್ಲಿ ನಿಮ್ಮ ಸುದೀರ್ಘ ಪರಿಶ್ರಮವು ಪ್ರತಿಫಲವನ್ನು ಪಡೆಯುತ್ತದೆ. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ಕಛೇರಿಯಲ್ಲಿ ಅಧಿಕ ಕಾರ್ಯಕ್ಷಮತೆಯಿಂದಾಗಿ ಉದ್ಯೋಗಿಗಳು ಬಡ್ತಿ ಪಡೆಯಬಹುದು.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು ಆರ್ಥಿಕವಾಗಿ ತುಂಬಾ ಒಳ್ಳೆಯದು. ನೀವು ಅನಿರೀಕ್ಷಿತ ಸ್ಥಳದಿಂದ ಹಣವನ್ನು ಸ್ವೀಕರಿಸಬಹುದು. ವೃತ್ತಿಪರವಾಗಿ ಈ ಯೋಗವು ಉತ್ತಮ ಪ್ರಗತಿ ಮತ್ತು ಲಾಭವನ್ನು ನೀಡುತ್ತದೆ. ಈ ಯೋಗದ ಅವಧಿಯಲ್ಲಿ ನಿಮ್ಮ ಆಸೆಗಳು ಈಡೇರಬಹುದು. ಮುಖ್ಯವಾಗಿ ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications