Saturn Nakshatra Transit 2024: ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಕ್ರಮಣ: ಈ ರಾಶಿಗೆ ಸಂಪತ್ತು, ಪ್ರಗತಿ
ಜ್ಯೋತಿಷ್ಯದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಇದನ್ನು ಕರ್ಮ ಗ್ರಹವೆಂದು ಕರೆಯಲಾಗುತ್ತದೆ. ಅದು ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ. ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿದ್ದು ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತದೆ.
2024ರ ಕೊನೆಯಲ್ಲಿ ಶನಿಯು ಡಿಸೆಂಬರ್ 27 ರಂದು ರಾತ್ರಿ 10:42ಕ್ಕೆ ಪೂರ್ವಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತದೆ. ಇದನ್ನು ಗುರುವಿನ ನಕ್ಷತ್ರಪುಂಜ ಎಂದು ಕರೆಯಲಾಗುತ್ತದೆ. ಈ ಬದಲಾವಣೆಯು 2025ರಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಈ ಸಾಗಾಣೆಯಿಂದ ಸಂಪತ್ತು ಮತ್ತು ಪ್ರಗತಿಯನ್ನು ಕಾಣುವ ರಾಶಿಗಳ ಬಗ್ಗೆ ತಿಳಿಯೋಣ.

ವೃಷಭ ರಾಶಿ
ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿ ಗ್ರಹ ಸಂಕ್ರಮಣದಿಂದ ವೃಷಭ ರಾಶಿಯವರ ಲಕ್ ಬದಲಾಗಲಿದೆ. ಶನಿಯ ಈ ಬದಲಾವಣೆಯು ವೃಷಭ ರಾಶಿಯವರಿಗೆ ವಿಶೇಷ ಪ್ರಯೋಜನ ನೀಡಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಉದ್ಯೋಗಸ್ಥರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಾಗಲಿದೆ. ಈ ಸಮಯದಲ್ಲಿ ಲಾಭದ ಮಾರ್ಗಗಳು ತೆರೆದುಕೊಳ್ಳುತ್ತವೆ. ಬಾಕಿ ಇರುವ ಕೆಲಸ ಹಾಗೂ ಎಲ್ಲೋ ಸಿಕ್ಕಿಕೊಂಡ ಹಣವನ್ನು ಪಡೆಯುವ ಸಾಧ್ಯತೆಯೂ ಇದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ವಿದೇಶ ಪ್ರವಾಸ ಹೋಗುವ ಸಾಧ್ಯತೆಗಳಿವೆ.

ಸಿಂಹ ರಾಶಿ
ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿ ಗ್ರಹ ಸಂಕ್ರಮಣದಿಂದ ಸಿಂಹ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ. ಸಿಂಹ ರಾಶಿಯವರ ಜೀವನದಲ್ಲಿ ಪ್ರೀತಿ ಮತ್ತು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ವ್ಯಾಪಾರದಲ್ಲಿ ಲಾಭ ಮತ್ತು ಹೊಸ ಗಳಿಕೆಯ ಅವಕಾಶಗಳನ್ನು ಪಡೆಯುವಿರಿ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ.
ನಿಮ್ಮ ಜೀವನ ಶಾಂತಿಯಿಂದ ಕೂಡಿರುತ್ತದೆ. ಸಿಂಹರಾಶಿಯವರು ಶನಿ ಆಶೀರ್ವಾದಿಂದ ಸಿಂಹದಂತೆ ವಾಸಿಸುತ್ತಾರೆ. ಅಂದುಕೊಂಡ ಕೆಲಸಗಳು ಸರಿಯಾದ ರೀತಿಯಲ್ಲಿ ನೆರವೇರುತ್ತವೆ. ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ನಿಮ್ಮ ಸಹೋದರರೊಂದಿಗಿನ ನಿಮ್ಮ ಸಂಬಂಧದಲ್ಲಿ ಹೊಸತನದ ಛಾಯೆ ಇರುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ಸಂತೋಷದಿಂದ ಕೂಡಿರುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಯಶಸ್ಸು ಇದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ನಷ್ಟವಾಗಿದ್ದರೆ ಅದು ಸುಧಾರಿಸುತ್ತದೆ. ವೈವಾಹಿಕ ಜೀವನವೂ ಸಮೃದ್ಧವಾಗುತ್ತದೆ.
ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಅದೃಷ್ಟದ ಹೊಳೆ ಹರಿಯಲಿದೆ. ಮನೆಗೆ ಧನಲಕ್ಷ್ಮೀ ಆಗಮಿಸುವ ಸಮಯ ಇದಾಗಿದೆ. ಮುಂಬರುವ ವರ್ಷ ನೀವು ಹೊಸ ಉದ್ಯೋಗವನ್ನು ಆರಂಭಿಸಬಹುದು. ಜೊತೆಗೆ ಅದರಿಂದ ತುಂಬಾ ಲಾಭ ಸಿಗಲಿದೆ. ಮನೆಯ ವಾತಾವರಣ ಸುಖಕರವಾಗಿರಲಿದೆ.
(ಗಮನಿಸಿ: ಈ ಮಾಹಿತಿಯನ್ನು ವಿವಿಧ ಜ್ಯೋತಿಷಿಗಳು ಮತ್ತು ಪಂಚಾಂಗಗಳಿಂದ ಸಂಗ್ರಹಿಸಲಾಗಿದೆ, ಇದನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಹಂಚಿಕೊಳ್ಳಲಾಗಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರಿಂದ ಸಲಹೆ ಪಡೆಯಿರಿ)












Click it and Unblock the Notifications