Vish yoga 2023: ಶನಿ ಚಂದ್ರನಿಂದ ಉಂಟಾಗುವ ವಿಷ ಯೋಗ: ಇಂದಿನಿಂದ ಈ 4 ರಾಶಿಗಳ ಬಗ್ಗೆ ಎಚ್ಚರದಿಂದಿರಿ
ಜ್ಯೋತಿಷ್ಯದಲ್ಲಿ ಶನಿಯನ್ನು ಅತ್ಯಂತ ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಶನಿಯು ಒಬ್ಬರ ಕಾರ್ಯಗಳಿಗನುಗುಣವಾಗಿ ಫಲಿತಾಂಶವನ್ನು ಕೊಡುವವನು. ಶನಿ ಗ್ರಹದ ಸ್ಥಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳಿದ್ದರೂ ಸಹ ಅದರ ಪ್ರಭಾವ ಎಲ್ಲಾ 12 ರಾಶಿಗಳಲ್ಲಿ ಕಂಡುಬರುತ್ತದೆ.
ಕುಂಭದನಲ್ಲಿ ಶನಿಯು ಸಂಕ್ರಮಿಸಿದಾಗ ಚಂದ್ರ ಗ್ರಹ ಕೂಡ ಈ ರಾಶಿಯಲ್ಲಿ ಸಂಚರಿಸುತ್ತಿದೆ. ಕೆಲವೊಮ್ಮೆ ಶನಿಯೊಂದಿಗೆ ಇತರ ಗ್ರಹಗಳ ಸಂಯೋಗವೂ ಸಂಭವಿಸುತ್ತದೆ. ಶನಿಯು ಈ ರೀತಿಯಲ್ಲಿ ಇತರ ಗ್ರಹಗಳನ್ನು ಸೇರಿದಾಗ, ಅದು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡುತ್ತದೆ.
ಆ ರೀತಿಯಲ್ಲಿ ಚಂದ್ರ ಮತ್ತು ಶನಿದೇವರ ಸಂಯೋಗದಿಂದ ಸೆ.12ರಂದು ಅತ್ಯಂತ ಕೆಟ್ಟ ಯೋಗ ಉಂಟಾಗಲಿದೆ. ಅದು ವಿಷ ಯೋಗ. ಈ ವಿಷ ಯೋಗವು ಖಿನ್ನತೆ, ಅಸಮಾಧಾನ, ಬಡತನ, ಆತಂಕ ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗ ಚಂದ್ರ ಮತ್ತು ಶನಿಯ ಸಂಯೋಜನೆಯಿಂದ ಉಂಟಾಗುವ ವಿಷ ಯೋಗದಿಂದ ಯಾವ ರಾಶಿಗಳು ಜಾಗರೂಕರಾಗಿರಬೇಕು ಎಂದು ನೋಡೋಣ.

ವೃಷಭ ರಾಶಿ
ವೃಷಭ ರಾಶಿಯವರು ಚಂದ್ರ ಮತ್ತು ಶನಿಯಿಂದ ಉಂಟಾಗುವ ವಿಷ ಯೋಗದ ಕಾರಣ ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ವೃಷಭ ರಾಶಿಯವರ ವೃತ್ತಿಪರ ಜೀವನ ಕೆಟ್ಟದಾಗಿರುತ್ತದೆ. ಈ ರಾಶಿಯ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು. ಅಪನಂಬಿಕೆ ಉಂಟಾಗಬಹುದು. ಉದ್ಯೋಗಿಗಳಿಗೆ ಬಡ್ತಿಯಲ್ಲಿ ವಿಳಂಬವಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಸಿಗುವಲ್ಲಿ ವಿಳಂಬವಾಗುತ್ತದೆ. ಕಚೇರಿಯಲ್ಲಿ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ
ಸೆಪ್ಟೆಂಬರ್ 12 ರಿಂದ ಮುಂದಿನ ಎರಡು ದಿನಗಳು ವಿಷ ಯೋಗದಿಂದ ಕರ್ಕಾಟಕ ರಾಶಿಯವರಿಗೆ ಸ್ವಲ್ಪ ಕೆಟ್ಟದಾಗಿರುತ್ತದೆ. ಈ ಅವಧಿಯಲ್ಲಿ ಅಪಘಾತಗಳು, ಗಾಯಗಳಾಗುವ ಸಾಧ್ಯತೆ ಇದೆ. ಹಾಗಾಗಿ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಅನಿರೀಕ್ಷಿತ ಮತ್ತು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಜಗಳಗಳು, ಕಾನೂನು ಸಮಸ್ಯೆಗಳು ಉಂಟಾಗಬಹುದು. ಮನಸ್ಸು ಉದ್ವಿಗ್ನವಾಗಿಯೇ ಇರುತ್ತದೆ. ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗುತ್ತದೆ. ವೈವಾಹಿಕ ಜೀವನ ಒತ್ತಡದಿಂದ ಕೂಡಿರಬಹುದು.

ಸಿಂಹ ರಾಶಿ
ಸಿಂಹ ರಾಶಿಯವರು ಸೆಪ್ಟೆಂಬರ್ 12ರಿಂದ ವಿಷ ಯೋಗದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ನೀವು ವಿಶೇಷವಾಗಿ ವೈವಾಹಿಕ ಜೀವನ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರಸ್ಥರು ಪಾಲುದಾರರೊಂದಿಗೆ ಜಗಳವಾಡಬಹುದು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಮನಸ್ಸು ಸ್ವಲ್ಪ ಉದ್ವಿಗ್ನವಾಗಿರಬಹುದು. ಈ ಅವಧಿಯಲ್ಲಿ ನೀವು ಇತರರೊಂದಿಗೆ ಜಗಳದಲ್ಲಿ ತೊಡಗುತ್ತೀರಿ ಮತ್ತು ಸೇಡು ತೀರಿಸಿಕೊಳ್ಳುವಿರಿ. ವೈಯಕ್ತಿಕ ಜೀವನವು ಸ್ವಲ್ಪ ಕೆಟ್ಟದಾಗಿರುತ್ತದೆ. ಹೀಗಾಗಿ ಮನಸ್ಸಿನ ಕೈಗೆ ಬುದ್ಧಿ ಕೊಡಬೇಡಿ.

ಕುಂಭ ರಾಶಿ
ವಿಷ ಯೋಗ ಕುಂಭ ರಾಶಿಯವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ಚಿಂತೆ ಮಾಡುತ್ತೀರಿ. ಭೀತಿಯನ್ನು ಅನುಭವಿಸಬಹುದು. ನೀವು ಅನಗತ್ಯ ಚಿಂತೆಗಳಿಂದ ಸುತ್ತುವರೆದಿರಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ವಿಳಂಬವಾಗುತ್ತದೆ. ಅನೇಕ ವಿಷಯಗಳಲ್ಲಿ ಅಡೆತಡೆಗಳಿಂದಾಗಿ ನಿರಾಶೆಯನ್ನು ಎದುರಿಸಬಹುದು. ವೈವಾಹಿಕ ಜೀವನ ಕೆಟ್ಟದಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಾಕಷ್ಟು ವಾದಗಳನ್ನು ಮತ್ತು ಜಗಳಗಳನ್ನು ಎದುರಿಸಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications