Ravi Pushya Yoga 2025: ರಾಮ ನವಮಿಯಂದು ರವಿ ಪುಷ್ಯ ಯೋಗ- ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯುತ್ತೆ
ಇದೇ ಏಪ್ರಿಲ್ 6ರಂದು ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ರಾಮನವಮಿಯಂದು ಅತ್ಯಂತ ಶುಭ ಯೋಗ ರೂಪಗೊಳ್ಳುತ್ತಿವೆ. 13 ವರ್ಷಗಳ ನಂತರ ಏಪ್ರಿಲ್ 6ರಂದು ರವಿ ಪುಷ್ಯ ಯೋಗ ರೂಪಗೊಳ್ಳುತ್ತಿದೆ. ಪುಷ್ಯ ನಕ್ಷತ್ರ ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ. ಅದರ ಶುಭ ಪರಿಣಾಮದಿಂದಾಗಿ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ. ಹಣ ಸಿಗುವ ಸಾಧ್ಯತೆಗಳು ಇವೆ.
ಉತ್ತರಪ್ರದೇಶದ ಅಯೋಧ್ಯೆ ಶ್ರೀ ರಾಮನ ಜನ್ಮಸ್ಥಳವಾಗಿದೆ. ಇಲ್ಲಿ ನಡೆಯುವ ರಾಮ ನವಮಿ ಆಚರಣೆಗಳು ಅದ್ಭುತ ಮತ್ತು ವಿಶಿಷ್ಟವಾಗಿರುತ್ತವೆ. ರಾಮನವಮಿಯ ಸಂದರ್ಭದಲ್ಲಿ ಭಕ್ತರು ದೂರದೂರದಿಂದ ಅಯೋಧ್ಯೆಗೆ ಆಗಮಿಸುತ್ತಾರೆ. ರಾಮ ನವಮಿಯಂದು ರಾಮನ ಪೂಜೆಗೆ ಶುಭ ಸಮಯ ಬೆಳಿಗ್ಗೆ 11.08 ರಿಂದ ಮಧ್ಯಾಹ್ನ 1.39 ರವರೆಗೆ ಇರುತ್ತದೆ. ಈ ದಿನ ಸೃಷ್ಟಿಯಾಗುವ ರವಿ ಪುಷ್ಯ ಯೋಗ ಯಾವ ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರಲಿದೆ ಎಂದು ಈಗ ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯ ಜನರು ರಾಮ ನವಮಿಯಂದು ರವಿ ಪುಷ್ಯ ನಕ್ಷತ್ರದ ಶುಭ ಪರಿಣಾಮದ ಲಾಭವನ್ನು ಪಡೆಯುತ್ತಾರೆ. ನಿರುದ್ಯೋಗಿಗಳಿಗೆ ಅಥವಾ ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಶುಕ್ರನ ಕೃಪೆಯಿಂದ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನಿಮಗೆ ದೊಡ್ಡ ಜವಾಬ್ದಾರಿ ಸಿಗಬಹುದು. ಅದನ್ನು ನಿರ್ವಹಿಸಿ ನೀವು ಕಚೇರಿಯಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ.
ನಿಮ್ಮವರಿಗಾಗಿ ನೀವು ಪಟ್ಟ ಶ್ರಮ ಉತ್ತಮ ಫಲ ನೀಡಲಿದೆ. ಈ ದಿನ ನೀವು ಪ್ರವಾಸ ಕೈಗೊಳ್ಳಬಹುದು. ಕುಟುಂಬಸ್ಥರೊಂದಿಗೆ ಶ್ರೀ ರಾಮನ ದೇವಸ್ಥಾನಕ್ಕೆ ತೆರಳಬಹುದು. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಮನೆಯಲ್ಲಿ ಧನಲಕ್ಷ್ಮಿ ಆಗಮಿಸುತ್ತಾಳೆ. ಮನೆಯಲ್ಲಿ ಸಾಂತಿ ನೆಮ್ಮದಿ ವಾತಾವರಣ ಇರುತ್ತದೆ.

ಮಕರ ರಾಶಿ
ರಾಮ ನವಮಿಯಂದು ರವಿ ಪುಷ್ಯ ಯೋಗದ ಶುಭ ಪರಿಣಾಮದಿಂದಾಗಿ ಮಕರ ರಾಶಿಯವರಿಗೆ ವಾಹನ ಮತ್ತು ಆಸ್ತಿ ಖರೀದಿಸುವ ಯೋಗವಿದೆ. ಉದ್ಯೋಗದಲ್ಲಿ ಯಶಸ್ಸು ಮತ್ತು ಬಡ್ತಿಯ ಸಾಧ್ಯತೆಗಳಿವೆ. ಸರ್ಕಾರಿ ಯೋಜನೆಗಳ ಲಾಭವನ್ನೂ ನೀವು ಪಡೆಯುತ್ತೀರಿ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚಾಗಲಿದೆ.

ಕುಂಭ ರಾಶಿ
ರಾಮ ನವಮಿ ಹಬ್ಬ ಕುಂಭ ರಾಶಿಯವರ ಜೀವನದಲ್ಲೂ ಸಂತೋಷವನ್ನು ತರುತ್ತದೆ. ಈ ದಿನದಂದು ರೂಪುಗೊಳ್ಳುವ ಅಪರೂಪದ ಯೋಗ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಆರೋಗ್ಯ ಸುಧಾರಿಸಲಿದೆ. ನಿಮ್ಮ ಚಿಂತೆಗಳು ದೂರವಾಗಲಿವೆ. ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿದೆ.
ಹೊಸ ಲಾಭದಾಯಕ ಕೆಲಸಗಳಿಂದ ಹೆಚ್ಚೆಚ್ಚು ಆದಾಯ ಬರಲಿದೆ. ಹಣ ಹುಡುಕಿಕೊಂಡು ಮನೆಗೆ ಬರುವ ಸಾಧ್ಯತೆಗಳು ಈ ಸಂದರ್ಭದಲ್ಲಿ ಹೆಚ್ಚಾಗಿವೆ. ಆಪ್ತ ವಲಯದಲ್ಲಿ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಅಲ್ಲದೆ ಶತ್ರುಗಳೆಲ್ಲರೂ ಮಿತ್ರರಾಗುವ ಸಮಯ ಇದಾಗಿದೆ.












Click it and Unblock the Notifications