Raksha Bandhan 2024 Horoscope: ನಿಮ್ಮ ಸಹೋದರ ಯಾವಾಗಲೂ ಸಂತೋಷವಾಗಿರಬೇಕಾ? ಹಾಗಾದರೆ ಅವರ ರಾಶಿಗೆ ಸೂಕ್ತವಾದ ರಾಖಿ ಕಟ್ಟಿ..
ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 19ರ ಸೋಮವಾರದಂದು ಆಚರಿಸಲಾಗುತ್ತದೆ. ರಕ್ಷಾ ಬಂಧನ ಹಬ್ಬವು ಸಹೋದರ ಸಹೋದರಿಯರ ಪ್ರೀತಿಯ ಸಂಕೇತವಾಗಿದೆ.
ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಆದರೆ ಸಹೋದರನ ರಾಶಿಯ ಪ್ರಕಾರ ರಾಖಿಯನ್ನು ಕಟ್ಟಿದರೆ ಅದು ಸಹೋದರರನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅವನ ಜೀವನ ದುಃಖವಿಲ್ಲದೆ ಸಂತೋಷವಾಗಿರುತ್ತದೆ. ಹಾಗಾದರೆ ಈಗ ಪ್ರತಿಯೊಂದು ರಾಶಿಗೆ ಸೂಕ್ತವಾದ ರಾಖಿ ಬಣ್ಣ ಯಾವುದು ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳವಾಗಿದೆ. ಹಾಗಾಗಿ ಈ ರಾಶಿಯ ಸಹೋದರರಿಗೆ ಕೆಂಪು ಬಣ್ಣದ ರಾಖಿ ಕಟ್ಟುವುದು ಉತ್ತಮ. ಈ ಬಣ್ಣದಲ್ಲಿ ರಾಖಿ ಕಟ್ಟಿದರೆ ಸಹೋದರನ ಜೀವನದಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ. ಅಲ್ಲದೆ ಅವನು ಶಕ್ತಿಯುತನಾಗಿರುತ್ತಾನೆ. ಹೀಗಾಗಿ ಈ ಬಾರಿ ರಾಖಿ ಹಬ್ಬದಂದು ಮೇಷ ರಾಶಿಯ ಸಹೋದರಿನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟಿ.

ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ರಾಶಿಗೆ ಸೇರಿದವರು ಬಿಳಿ ಬಣ್ಣದ ರಾಖಿಯನ್ನು ಧರಿಸಬೇಕು. ವೃಷಭ ರಾಶಿಯ ಸಹೋದರನಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದರಿಂದ ಜೀವನ ಸುಖಮಯ ಮತ್ತು ಸಮೃದ್ಧವಾಗಿರುತ್ತದೆ. ಹೀಗಾಗಿ ಈ ಬಾರಿ ರಾಖಿ ಹಬ್ಬದಂದು ವೃಷಭ ರಾಶಿಯ ಸಹೋದರಿನಿಗೆ ಬಿಳಿ ಬಣ್ಣದ ರಾಖಿಯನ್ನು ಕಟ್ಟುವುದು ಒಳ್ಳೆಯದು.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧವಾಗಿದೆ. ಈ ಜನರು ಹಸಿರು ಬಣ್ಣದ ರಾಖಿ ಕಟ್ಟುವುದು ಉತ್ತಮ. ಇದು ಅವರಿಗೆ ಜೀವನದಲ್ಲಿ ಪ್ರಗತಿಯ ಅದೃಷ್ಟವನ್ನು ನೀಡುತ್ತದೆ ಮತ್ತು ದೀರ್ಘಾಯುಷ್ಯವನ್ನು ತರುತ್ತದೆ. ಹೀಗಾಗಿ ಈ ಬಾರಿ ರಾಖಿ ಹಬ್ಬದಂದು ಮಿಥುನ ರಾಶಿಯ ಸಹೋದರಿನಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವಾಗಿದೆ.

ಕರ್ಕ ರಾಶಿ
ಚಂದ್ರನು ಕರ್ಕ ರಾಶಿಯ ಅಧಿಪತಿಯಾಗಿದೆ. ಈ ರಾಶಿಯವರು ಬಿಳಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಉತ್ತಮ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ ಗ್ರಹವಾಗಿದೆ. ಈ ರಾಶಿಯವರು ಕೆಂಪು ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಉತ್ತಮ. ಹೀಗಾಗಿ ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಉಳಿಸಿಕೊಳ್ಳುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಈ ರಾಶಿಯವರು ಜನರಿಗೆ ಹಸಿರು ಬಣ್ಣದ ರಾಖಿ ಕಟ್ಟುವುದು ಸೂಕ್ತವಾಗಿದೆ. ಇದು ಸಹೋದರ ಸಹೋದರಿಯರ ನಡುವೆ ಅದೃಷ್ಟ ಮತ್ತು ದೀರ್ಘಾವಧಿಯ ಪ್ರೀತಿಯನ್ನು ತರುತ್ತದೆ.

ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ರಾಶಿಯ ಜನರು ನೀಲಿ ಅಥವಾ ಬಿಳಿ ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವಾಗಿದೆ. ಇದು ಅವರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಈ ರಾಶಿಯವರು ಕೆಂಪು ಅಥವಾ ಗುಲಾಬಿ ಬಣ್ಣದ ರಾಕಿಯನ್ನು ಕಟ್ಟುವುದು ಉತ್ತಮ. ಇದು ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರುವಾಗಿದೆ. ಈ ರಾಶಿಚಕ್ರದವರು ಚಿನ್ನದ ಅಥವಾ ಹಳದಿ ಬಣ್ಣದ ರಾಕಿಯನ್ನು ಕಟ್ಟುವುದು ತುಂಬಾ ಒಳ್ಳೆಯದು. ಹೀಗಾಗಿ ಜೀವನವು ಸಮೃದ್ಧ, ಸಂತೋಷದಿಂದ ಕೂಡಿರುತ್ತದೆ.

ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ. ಈ ರಾಶಿಯವರು ಕಡು ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಅವರ ಜೀವನದಲ್ಲಿನ ದುಃಖಗಳನ್ನು ತೊಡೆದುಹಾಕುತ್ತದೆ ಮತ್ತು ಅವರ ಜೀವನವನ್ನು ಸಂತೋಷಪಡಿಸುತ್ತದೆ.

ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿಯಾಗಿದೆ. ಈ ರಾಶಿಯವರು ಕಡು ನೀಲಿ ಬಣ್ಣದ ರಾಖಿ ಕಟ್ಟುವುದು ಉತ್ತಮ. ಇದರಿಂದ ಜೀವನದಲ್ಲಿ ಕಷ್ಟಗಳು ದೂರವಾಗಿ ಸಂಪತ್ತು ಹೆಚ್ಚುತ್ತದೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರುವಾಗಿದೆ. ಈ ರಾಶಿಯ ಜನರು ಹಳದಿ ಅಥವಾ ಹಸಿರು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವಾಗಿದೆ. ಇದರಿಂದ ಜೀವನ ಸುಖಮಯ ಮತ್ತು ತೊಂದರೆ ಮುಕ್ತವಾಗಿ ಸಮೃದ್ಧಿಯಾಗುತ್ತದೆ.












Click it and Unblock the Notifications