ಮನೆಯಲ್ಲಿ ಈ ಗಿಡಗಳನ್ನು ಇಡಬೇಡಿ! ಇದರಿಂದಾಗುವ ಆರ್ಥಿಕ ತೊಂದರೆಗಳ ಬಗ್ಗೆ ವಾಸ್ತು ಏನು ಹೇಳುತ್ತದೆ?

ಮನೆ ಅಲಂಕಾರಕ್ಕೆ ಸಸ್ಯಗಳನ್ನು ಇಡುವುದು ಈಗ ಸಾಮಾನ್ಯವಾಗಿದೆ. ಇವು ಮನೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲದೆ, ಪ್ರಕೃತಿಯ ಜೊತೆಗಿನ ಸಂಪರ್ಕವನ್ನೂ ಹೆಚ್ಚಿಸುತ್ತವೆ. ಆದರೆ ವಾಸ್ತು ಮತ್ತು ಫೆಂಗ್‌ ಶೂಯಿ ಪ್ರಕಾರ ಕೆಲವು ಸಸ್ಯಗಳನ್ನು ಮನೆಯೊಳಗೆ ಅಥವಾ ಮನೆಯ ಸುತ್ತಮುತ್ತ ಇಡಬಾರದು ಎಂದು ಹೇಳಲಾಗುತ್ತದೆ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುವ ಸಾಧ್ಯತೆ ಇರುತ್ತದೆ ಎನ್ನುವ ನಂಬಿಕೆ ಇದೆ.

ಹುಣಸೆ ಮರ

ಫೆಂಗ್‌ ಶೂಯಿ ಪ್ರಕಾರ ಹುಣಸೆ ಮರ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಮನೆಯ ಹತ್ತಿರ ಈ ಮರ ಇದ್ದರೆ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದ್ದರಿಂದ ಮನೆಗಳು ಇರುವಂತಹ ಜಾಗಗಳಲ್ಲಿ ಹುಣಸೆ ಮರ ಬೆಳೆಸಬಾರದು ಎಂದು ಸಲಹೆ ನೀಡಲಾಗುತ್ತದೆ.

Plants

ಎಕ್ಕದ ಗಿಡಗಳು

ಕೆಲವು ಗಿಡಗಳ ಎಲೆ ಅಥವಾ ಕಾಂಡವನ್ನು ಮುರಿದಾಗ ಅದರಿಂದ ಹಾಲಿನಂತಹ ಬಿಳಿ ದ್ರವ ಹೊರಬರುತ್ತದೆ. (ಉದಾಹರಣೆಗೆ: ಎಕ್ಕದ ಗಿಡದ ಕೆಲವು ಪ್ರಭೇದಗಳು ಅಥವಾ ಅಲಂಕಾರಿಕ ರಬ್ಬರ್ ಗಿಡದ ಕೆಲವು ತಳಿಗಳು). ಈ ತರಹದ ಗಿಡಗಳನ್ನು ಮನೆಯೊಳಗೆ ಇಡುವುದು ವಾಸ್ತು ಪ್ರಕಾರ ಅಶುಭ ಎಂದು ಪರಿಗಣಿಸಲಾಗುತ್ತದೆ. ಇವುಗಳು ಮನೆಯಲ್ಲಿ ಒತ್ತಡ, ಅಸಮಾಧಾನ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ ಇದೆ.

Plants

ಹತ್ತಿ ಗಿಡ

ಮನೆಯೊಳಗೆ ಹತ್ತಿ ಗಿಡ ಇಡುವುದನ್ನು ಕೆಲವರು ಅಶುಭ ಎಂದು ಪರಿಗಣಿಸುತ್ತಾರೆ. ಹತ್ತಿಯ ಬಿಳಿ ಬಣ್ಣವನ್ನು ದುಃಖ ಮತ್ತು ನಷ್ಟದ ಸಂಕೇತವಾಗಿ ಎಂದು ಪರಿಗಣಿಸಲಾಗುತ್ತದೆ. ಫೆಂಗ್‌ ಶೂಯಿ ಪ್ರಕಾರ ಇದು ಬೇಸರ ಮತ್ತು ಸಂಕಷ್ಟವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ.

ಮನಿ ಪ್ಲಾಂಟ್ ನೆಟ್ಟ ನಂತರವೂ ಹಣ ಉಳಿಯುತ್ತಿಲ್ಲವೇ? ಗಿಡ ಹೀಗಿದೆಯಾ ಒಮ್ಮೆ ಚೆಕ್‌ ಮಾಡಿ
ಮನಿ ಪ್ಲಾಂಟ್ ನೆಟ್ಟ ನಂತರವೂ ಹಣ ಉಳಿಯುತ್ತಿಲ್ಲವೇ? ಗಿಡ ಹೀಗಿದೆಯಾ ಒಮ್ಮೆ ಚೆಕ್‌ ಮಾಡಿ

ಒಣಗಿದ ಅಥವಾ ಸತ್ತ ಗಿಡಗಳು

ಮನೆಯೊಳಗೆ ಒಣಗಿದ ಅಥವಾ ಸತ್ತ ಗಿಡಗಳನ್ನು ಇಡುವುದು ವಾಸ್ತು ಪ್ರಕಾರ ಮಂಗಳಕರವಲ್ಲ. ಇವು ನಕಾರಾತ್ಮಕತೆಯನ್ನು ಸೆಳೆಯುತ್ತವೆ ಮತ್ತು ಮನೆಯ ಸಮತೋಲನಕ್ಕೆ ಹಾನಿ ಮಾಡುತ್ತವೆ ಎನ್ನುವ ನಂಬಿಕೆ ಇದೆ. ಫೆಂಗ್‌ ಶೂಯಿಯಲ್ಲಿ ಇವು ಸ್ಥಗಿತ, ನಷ್ಟ ಮತ್ತು ಕುಸಿತದ ಸಂಕೇತವೆಂದು ಹೇಳಲಾಗುತ್ತದೆ.

ಕಳ್ಳಿ ಗಿಡ

ಕಳ್ಳಿ ಗಿಡ ಮರುಭೂಮಿಯಂತಹ ಶುಷ್ಕ ವಾತಾವರಣದಲ್ಲಿ ಬೆಳೆಯುವ ಮುಳ್ಳಿನ ಸಸ್ಯವಾಗಿದೆ. ಕಳ್ಳಿ ಗಿಡದ ಮುಳ್ಳುಗಳು ಮನೆಯಲ್ಲಿ ಕೆಟ್ಟ ಶಕ್ತಿ ಹರಡಿಸುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡಬಹುದು ಎನ್ನಲಾಗುತ್ತದೆ. ವಾಸ್ತು ಪ್ರಕಾರ ಕ್ಯಾಕ್ಟಸ್‌ ಗಿಡವನ್ನು ಮನೆಯೊಳಗೆ ಇಡುವುದಕ್ಕಿಂತ ಹೊರಭಾಗದಲ್ಲಿ ಇಡುವುದು ಉತ್ತಮ.

ಈ ಗಿಡಗಳು ಮನೆಯಲ್ಲಿದ್ದರೆ ಹೆಚ್ಚುವುದು ಅದೃಷ್ಟ: ಹರಿದು ಬರುವುದು ಧನ ಸಂಪತ್ತು, ನೆಲೆಸುವುದು ಸುಖ, ಶಾಂತಿ
ಈ ಗಿಡಗಳು ಮನೆಯಲ್ಲಿದ್ದರೆ ಹೆಚ್ಚುವುದು ಅದೃಷ್ಟ: ಹರಿದು ಬರುವುದು ಧನ ಸಂಪತ್ತು, ನೆಲೆಸುವುದು ಸುಖ, ಶಾಂತಿ

ಮುಳ್ಳುಗಳಿರುವ ಗಿಡಗಳು

ಗುಲಾಬಿ ಸೇರಿದಂತೆ ಮುಳ್ಳುಗಳಿರುವ ಗಿಡಗಳನ್ನು ಮನೆಯೊಳಗೆ ಇಡಬಾರದು ಎಂದು ಕೆಲ ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಮುಳ್ಳುಗಳು ಮನೆಯಲ್ಲಿ ಭಾವನಾತ್ಮಕ ಅಶಾಂತಿ ಮತ್ತು ಕಲಹಕ್ಕೆ ಕಾರಣವಾಗಬಹುದು ಎನ್ನುವ ನಂಬಿಕೆ ಇದೆ. ಗಿಡದ ಸೌಂದರ್ಯ ಆಕರ್ಷಕವಾಗಿದ್ದರೂ ಮನೆಯೊಳಗೆ ಇಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

Plants

ಬೋನ್ಸಾಯ್ ಗಿಡಗಳು

ಬೋನ್ಸಾಯ್ ಗಿಡಗಳು ನೋಡಲು ಬಹಳ ಆಕರ್ಷಕ ಮತ್ತು ಕಲಾತ್ಮಕವಾಗಿ ಕಂಡರೂ, ವಾಸ್ತು ಮತ್ತು ಫೆಂಗ್‌ ಶೂಯಿ ಪ್ರಕಾರ ಇವುಗಳನ್ನು ಮನೆಯೊಳಗೆ ಇಡುವುದು ಸೂಕ್ತವಲ್ಲ. ಬೋನ್ಸಾಯ್ ಎಂದರೆ ನೈಸರ್ಗಿಕವಾಗಿ ಬೆಳೆಯಬೇಕಾದ ಗಿಡವನ್ನು ಕೃತಕವಾಗಿ ಕುಂಠಿತಗೊಳಿಸುವುದು. ಇದು ಬೆಳವಣಿಗೆಯ ಅಡೆತಡೆಯನ್ನು ಸೂಚಿಸುತ್ತದೆ. ಮನೆಯ ಸದಸ್ಯರ ವೃತ್ತಿಜೀವನ ಅಥವಾ ಆರ್ಥಿಕ ಪ್ರಗತಿಯಲ್ಲಿ ಕುಂಠಿತ ಉಂಟಾಗಬಹುದು ಎಂಬ ನಂಬಿಕೆ ಇದೆ. ಸರಿಯಾಗಿ ಕಾಳಜಿವಹಿಸಿದರೆ ಈ ಗಿಡಗಳು ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಕಾಲ ಬದುಕಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+