Pitru Paksha 2026: ಮಹಿಳೆಯರು ಶ್ರಾದ್ಧ ಮಾಡಬಹುದೇ? ಈ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ?

ನಾಳೆ ಅಂದರೆ ಸೆಪ್ಟೆಂಬರ್ 26 ರಿಂದ ಪಿತೃ ಪಕ್ಷ ಆರಂಭ. ಅಕ್ಟೋಬರ್ 10ಕ್ಕೆ ಪಿತೃ ಪಕ್ಷ ಕೊನೆಯಾಗುತ್ತದೆ. ಈ ಮಾಸದಲ್ಲಿ ಕುಟುಂಬದ ಹಿರಿಯರು ಪೂರ್ವಜರಿಗೆ ಶ್ರಾದ್ಧ, ಪಿಂಡದಾನ ಮತ್ತು ತರ್ಪಣ ಬಿಡುತ್ತಾರೆ. ಅನ್ನದಾನ, ವಸ್ತ್ರದಾನ ಮಾಡುವ ಪದ್ದತಿಯೂ ಇದೆ. ಅಲ್ಲದೆ ಪಿಂಡ ಪ್ರದಾನ ಮಾಡುವಾಗ ತಯಾರಿಸುವ ಆಹಾರವನ್ನು ಕಾಗೆಗೆ ನೀಡಲಾಗುತ್ತದೆ. ಪೂರ್ವಜರು ಕಾಗೆಯ ರೂಪದಲ್ಲಿ ಬಂದು ನಾವು ನೀಡುವ ಆಹಾರವನ್ನು ತಿಂದು ಸಂತ್ರಪ್ತರಾಗುತ್ತಾರೆ ಎನ್ನುವುದು ನಂಬಿಕೆ.

ಮಹಿಳೆಯರು ಶ್ರಾದ್ಧ ಮಾಡಬಹುದೇ?

ನಮ್ಮ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಶ್ರಾದ್ಧ, ಪಿಂಡಪ್ರದಾನ ಮತ್ತು ತರ್ಪಣದಂತಹ ಆಚರಣೆಗಳನ್ನು ಪುರುಷರು ಮಾತ್ರ ಮಾಡಿಕೊಂಡು ಬರುತ್ತಿರುವುದು. ಪುರುಷರೇ ಮಾಡಬೇಕು ಎನ್ನುವುದು ಒಂದು ನಂಬಿಕೆ ಕೂಡಾ.

Pitru Paksha 2026 Can Women Of The House Perform Shraadha Must Know The Fact What Garuda Puraana Says

ಮಗ ತರ್ಪಣ ಬಿಟ್ಟರೆ ಮಾತ್ರ ಪೂರ್ವಜರು ಸಂತೋಷಪಡುತ್ತಾರೆ, ಇಲ್ಲದಿದ್ದರೆ ಅತೃಪ್ತರಾಗುತ್ತಾರೆ ಅನ್ನುವ ನಂಬಿಕೆ ಕೂಡಾ ಬಹಳ ಮಂದಿಗೆ ಇದೆ. ಆದರೆ ಮನೆಯಲ್ಲಿ ಕೇವಲ ಹುಡುಗಿಯರೇ ಇದ್ದಾಗ ಅಥವಾ ಕುಟುಂಬದ ಪುರುಷ ಅಥವಾ ಮುಖ್ಯಸ್ಥ ವಿದೇಶದಲ್ಲೋ ದೂರದ ಊರಿನಲ್ಲಿಯೋ ಇದ್ದಾಗ, ಅನಾರೋಗ್ಯದಿಂದ ಶ್ರಾದ್ಧ ಮಾಡುವುದು ಸಾಧ್ಯವಾಗದೇ ಹೋದಾಗ ಏನು ಮಾಡಬೇಕು? ಅಂತಹ ಸಂದರ್ಭಗಳಲ್ಲಿ, ಮಹಿಳೆಯರು ಶ್ರಾದ್ಧ ಮಾಡಬಹುದೇ? ಮಹಿಳೆಯರು ಪಿಂಡಪ್ರದಾನ ಮಾಡಿದರೆ ಪೂರ್ವಜರಿಗೆ ಅದು ಸಲ್ಲುತ್ತದೆಯೇ ಎನ್ನುವ ಅನೇಕ ಸಂದೇಹಗಳು ಬಹಳ ಜನರ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ.

ಪಿತೃ ಕರ್ಮದಲ್ಲಿ ಮಹಿಳೆ ಭಾಗಿಯಾಗಬಹುದು :

ಗಂಡು ಮಕ್ಕಳಿಲ್ಲದ ಕುಟುಂಬಗಳಲ್ಲಿ, ಪಿತೃ ಪಕ್ಷದ ಸಮಯದಲ್ಲಿ ಮಹಿಳೆಯರು ಶ್ರಾದ್ಧವನ್ನು ಹೇಗೆ ಮಾಡುವುದು ಎನ್ನುವ ಚಿಂತೆ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಕೆಲವು ಸಂಬಂಧಿಕರು ಅಥವಾ ಹಿರಿಯರು ಮಹಿಳೆಯರು ಪಿಂಡ ಪ್ರದಾನ ಮಾಡಬಾರದು ಅಥವಾ ಪೂಜೆಯಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳುತ್ತಾರೆ. ಆದರೆ, ಕೆಲವು ಸಂಪ್ರದಾಯಗಳು ಮತ್ತು ಧಾರ್ಮಿಕ ಗ್ರಂಥಗಳ ವ್ಯಾಖ್ಯಾನಗಳ ಪ್ರಕಾರ, ಮಹಿಳೆಯರು ವಿಶೇಷ ಸಂದರ್ಭಗಳಲ್ಲಿ ಪಿತೃ ಕರ್ಮದಲ್ಲಿಯೂ ಭಾಗವಹಿಸಬಹುದು. ಕೆಲವು ಸಂಪ್ರದಾಯಗಳು ಕುಟುಂಬದಲ್ಲಿ ಮಹಿಳೆಯರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು ಎಂದು ಹೇಳುತ್ತವೆ. ವಿಶೇಷವಾಗಿ ಕುಟುಂಬದಲ್ಲಿ ಪುರುಷ ಉತ್ತರಾಧಿಕಾರಿ ಇಲ್ಲದ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಮುಂದೆ ನಿಂತು ಈ ಕಾರ್ಯವನ್ನು ನೆರವೇರಿಸಬಹುದಂತೆ.

ಗರುಡ ಪುರಾಣದಲ್ಲಿ ಉಲ್ಲೇಖ :

ಗರುಡ ಪುರಾಣದಲ್ಲಿ ಹೇಳಿರುವಂತೆ, ಮನೆಯಲ್ಲಿ ಗಂಡು ಮಗು ಇಲ್ಲದ ಸಂದರ್ಭಗಳಲ್ಲಿ, ಮಗಳು, ಹೆಂಡತಿ, ಸೊಸೆ ಅಥವಾ ತಾಯಿ ಹೀಗೆ ಕುಟುಂಬದ ಮಹಿಳೆ ಶ್ರಾದ್ಧವನ್ನು ನೆರವೇರಿಸಬಹುದು ಎಂದು ಹೇಳಲಾಗಿದೆ. ಇದಕ್ಕೆ ಉದಾಹರಣೆಯಾಗಿ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ದೇವಿಯ ಕಥೆಯನ್ನು ಸಹ ಉಲ್ಲೇಖಿಸಲಾಗಿದೆ. ಶ್ರೀ ರಾಮ ಮತ್ತು ಲಕ್ಷ್ಮಣ ಪೂಜಾ ಸಾಮಗ್ರಿಗಳನ್ನು ತರಲು ಹೋದಾಗ, ಸೀತಾ ದೇವಿಯು ಫಲ್ಗುಣಿ ನದಿಯ ದಡದಲ್ಲಿ ದಶರಥನಿಗೆ ಸೀತೆಯೇ ಪಿಂಡ ಪ್ರದಾನ ಮಾಡುತ್ತಾಳೆ ಎನ್ನುತ್ತದೆ ಕಥೆ.

ಶಾಸ್ತ್ರ ಸಂಪ್ರದಾಯ ಭಿನ್ನವಾಗಿರಬಹುದು :

ಆದರೆ ಮಹಿಳೆಯರು ಶ್ರಾದ್ಧವನ್ನು ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಬೇರೆ ಬೇರೆ ಧರ್ಮಶಾಸ್ತ್ರಗಳು ಮತ್ತು ಸಂಪ್ರದಾಯಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಕೆಲವು ಸಂಪ್ರದಾಯಗಳ ಪ್ರಕಾರ, ಮಹಿಳೆಯರು ನೇರವಾಗಿ ತರ್ಪಣ ಮಾಡುವ ಬದಲು ಬ್ರಾಹ್ಮಣರ ಮಾರ್ಗದರ್ಶನದಲ್ಲಿ ಅವರ ಸೂಚನೆಗಳ ಪ್ರಕಾರ ಪಿಂಡಪ್ರದಾನ ಮತ್ತು ತರ್ಪಣದಂತಹ ಆಚರಣೆಗಳನ್ನು ಮಾಡಬಹುದು. ಆದ್ದರಿಂದ, ಇಲ್ಲಿ ಕುಟುಂಬದ ಪದ್ಧತಿ, ಪ್ರಾದೇಶಿಕ ಸಂಪ್ರದಾಯ ಮತ್ತು ಸಂಬಂಧಪಟ್ಟ ಪುರೋಹಿತರ ಸೂಚನೆಗಳನ್ನು ಪರಿಗಣಿಸುವುದು ಸೂಕ್ತ.

ಕೆಲವು ಸಂಪ್ರದಾಯಗಳು ಶ್ರಾದ್ಧದ ಸಮಯದಲ್ಲಿ ಧರಿಸಬೇಕಾದ ಉಡುಪಿನ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನು ನೀಡುತ್ತವೆ. ಸಾಮಾನ್ಯವಾಗಿ, ಈ ಪೂಜೆಯನ್ನು ಬಹಳ ಶಾಂತಿ ಮತ್ತು ಭಕ್ತಿಯಿಂದ ಮಾಡಲಾಗುತ್ತದೆ. ಉಡುಪಿನ ಕುರಿತಾದ ಪದ್ಧತಿಗಳು ಕುಟುಂಬ ಅಥವಾ ಪ್ರದೇಶವನ್ನು ಅವಲಂಬಿಸಿ ಬದಲಾಗಬಹುದು. ಆದ್ದರಿಂದ, ಎಲ್ಲರಿಗೂ ಒಂದೇ ನಿಯಮ ಅನ್ವಯಿಸುತ್ತದೆ ಎಂದು ಹೇಳುವುದು ಸರಿಯಲ್ಲ.

ಯಾರಿಗೆ ಆದ್ಯತೆ :

ಅದೇ ರೀತಿ, ಶ್ರಾದ್ಧ ಆಚರಣೆಗಳಲ್ಲಿ ಯಾರು ಭಾಗವಹಿಸಬೇಕು ಎಂಬುದರ ಕುರಿತು ಕುಟುಂಬ ಸಂಪ್ರದಾಯಗಳಲ್ಲಿ ಬದಲಾವಣೆಗಳಾಗುವುದೂ ಇದೆ. ಕೆಲವು ಸಂಪ್ರದಾಯಗಳಲ್ಲಿ, ವಯಸ್ಸಾದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಇತರ ಸಂಪ್ರದಾಯಗಳಲ್ಲಿ, ಕುಟುಂಬದ ಸಂದರ್ಭಗಳನ್ನು ಅವಲಂಬಿಸಿ, ಮಗಳು, ಹೆಂಡತಿ ಅಥವಾ ಇತರ ಕುಟುಂಬ ಸದಸ್ಯರು ಭಾಗವಹಿಸಬಹುದು.

ಒಟ್ಟಾರೆಯಾಗಿ, ಮಹಿಳೆಯರು ಶ್ರಾದ್ಧ ಮಾಡುವ ಕ್ರಮ ಕೂಡಾ ಕೆಲವು ಧರ್ಮಗ್ರಂಥಗಳು, ಕುಟುಂಬ ಪದ್ಧತಿಗಳು ಮತ್ತು ಪ್ರಾದೇಶಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಬದಲಾಗಬಹುದು. ಆದ್ದರಿಂದ, ಪಿತೃ ಕರ್ಮವನ್ನು ಮಾಡಲು ಬಯಸುವವರು ತಮ್ಮ ಕುಟುಂಬ ಸಂಪ್ರದಾಯವನ್ನು ಗೌರವಿಸಬೇಕು ಮತ್ತು ಪುರೋಹಿತರು ಅಥವಾ ಧಾರ್ಮಿಕ ತಜ್ಞರ ಸಲಹೆಯನ್ನು ಪಡೆಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+