ಫಾಲ್ಗುಣ ಮಾಸದ ವಾರದ ಪಂಚಾಂಗ : ಮಾರ್ಚ್ 13ರಿಂದ 19
ಮಾಘ ಮಾಸದ ಮಾರ್ಚ್ 13ರಿಂದ ಮಾರ್ಚ್ 19ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಮಾ.13. ರವಿವಾರ : ಭರಣಿ ನಕ್ಷತ್ರ. ಕೃಷಿ ಚಟುವಟಿಕೆ ಮತ್ತು ಹೊಸದಾಗಿ ಕಲಿಯಲು ಶುಭಕರ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಮಾ.14. ಸೋಮವಾರ : ಕೃತ್ತಿಕಾ. ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಮಾ.15. ಮಂಗಳವಾರ : ರೋಹಿಣಿ. ದೂರ ಪ್ರಯಾಣದಿಂದ ಲಾಭ. [ಹೊಟ್ಟೆಕಿಚ್ಚು ಪಡುವಂತೆ ಬದುಕುವ ರೋಹಿಣಿ ನಕ್ಷತ್ರದವರು]
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಮಾ.16. ಬುಧವಾರ : ಮೃಗಶಿರಾ. ದೂರ ಪ್ರಯಾಣದಿಂದ ಅದೃಷ್ಟ. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಮಾ.17. ಗುರುವಾರ : ಆರಿದ್ರಾ. ಉತ್ತರಾಭಾದ್ರಪದ ಮಳೆ ಆರಂಭ. ವಿದ್ಯಾರ್ಥಿಗಳಿಗೆ ಶುಭ, ಕಲಾವಿದರಿಗೆ ಶುಭಕರ. ದೂರ ಪ್ರಯಾಣದಿಂದ ನಷ್ಟ. [ಆರಿದ್ರಾ ನಕ್ಷತ್ರದವರೇ, ಸಂಶಯ ಬಿಡಿ ಸ್ವಾಮಿ]
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಮಾ.18. ಶುಕ್ರವಾರ : ಪುನರ್ವಸು. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಮಾ.19. ಶನಿವಾರ : ಪುಷ್ಯ. ಏಕಾದಶಿ. ದೂರ ಪ್ರಯಾಣದಿಂದ ಸಂತಸ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಸೋಮವಾರ, ಮಂಗಳವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯ ಮಾಡಿಕೊಳ್ಳದೇ ಇರುವುದು ಉತ್ತಮ.
ಈ ವಾರದ ಗ್ರಹಗತಿ : ಮೇಷ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಸಿಂಹ : ಗುರು+ರಾಹು. ವೃಶ್ಚಿಕ: ನೀಚಶನಿ+ ಮಂಗಳ. ಕುಂಭ : ಬುಧ+ರವಿ+ ಕೇತು+ಶುಕ್ರ.












Click it and Unblock the Notifications