Get Updates
Get notified of breaking news, exclusive insights, and must-see stories!

ಸಂಖ್ಯೆ 3 ವ್ಯಕ್ತಿಗಳು: ಖುಷಿ-ನಗು ಕಾಂಬೋ, ಚಟುವಟಿಕೆ ಜಂಬೋ ಪ್ಯಾಕ್

ಸಂಖ್ಯಾಶಾಸ್ತ್ರ, ಟಾರೋ ಕಾರ್ಡ್ ರೀಡಿಂಗ್, ಹೀಲಿಂಗ್ ಹೀಗೆ ನಾನಾ ಬಗೆಯ ವಿದ್ಯೆಯಲ್ಲಿ ಶೀಲಾ ಬಜಾಜ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಅಷ್ಟೇ ಅಲ್ಲ, ಕಂಪೆನಿ, ವೆಬ್ ಸೈಟ್, ವ್ಯಾಪಾರ- ವ್ಯವಹಾರ ಹಾಗೂ ಮಳಿಗೆಗಳಿಗೆ ಸೂಕ್ತ ಹೆಸರು ಕೂಡ ಸೂಚಿಸುತ್ತಾರೆ ಶೀಲಾ.

ಇದರ ಜತೆಗೆ ಚಿತ್ರರಂಗದಲ್ಲೂ ನಿರ್ದೇಶಕರು- ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಹೆಸರಿಡುವ ಮುಂಚೆ ಇವರ ಬಳಿ ಸಲಹೆ ಕೇಳುವುದು ಉಂಟು. ವೆಬ್ ಸೈಟ್ ಗಳಿಗೆ, ಬ್ಲಾಗ್ ಗಳಿಗೆ ಕೂಡ ಸೂಕ್ತ ಹೆಸರನ್ನು ಸೂಚಿಸಿ, ಯಶಸ್ಸು ದೊರೆಯುವಂತೆ ಮಾಡುವಲ್ಲಿಯೂ ಒಳ್ಳೆ ಹೆಸರು ಪಡೆದಿದ್ದಾರೆ.

ಮೂಲತಃ ಬೆಂಗಳೂರಿನವರೇ ಆದ ಶೀಲಾ ಬಜಾಜ್ ರ ಪರಿಚಯ ಒನ್ಇಂಡಿಯಾ ಕನ್ನಡ ಓದುಗರಿಗೆ ಬಹಳ ಚೆನ್ನಾಗಿಯೇ ಇದೆ. ಇದೀಗ ಸಂಖ್ಯಾಶಾಸ್ತ್ರದಲ್ಲಿ 1ರಿಂದ 9ರ ವರೆಗಿನ ಸಂಖ್ಯೆಯ ಮಹತ್ವದ ವಿಚಾರಗಳ ಬಗ್ಗೆ ತಿಳಿಸಲು ಸರಣಿ ಆರಂಭಿಸಿದ್ದಾರೆ ಶೀಲಾ ಬಜಾಜ್.

ಜೂನ್ ಹದಿನೈದನೇ ತಾರೀಕಿನಿಂದ ಆ ಸರಣಿಯು ಸಂಖ್ಯೆ 1ರಿಂದ ಆರಂಭವಾಗಿದೆ. ಶೀಲಾ ಬಜಾಜ್ ರಿಗೆ ಅಭಿಮಾನಿಗಳು ಹೆಚ್ಚು. ಹಾಗೂ ಅವರು ನೀಡುವ ಸಲಹೆ- ಸೂಚನೆ ಪಾಲಿಸುವವರ ಸಂಖ್ಯೆಯೂ ಹೆಚ್ಚು. ಒನ್ಇಂಡಿಯಾ ಕನ್ನಡದಲ್ಲಿ ಶುರುವಾಗಿರುವ ಈ ಸರಣಿ ಬಗ್ಗೆ ಇತರರಿಗೆ ಕೂಡ ತಿಳಿಸಿ. ಅಂದಹಾಗೆ, ನೀವು ಯಾವ ಸಂಖ್ಯೆಯವರು?

ಇಂದಿನ ಸಂಖ್ಯಾಶಾಸ್ತ್ರವು 3ರ ವಿಚಾರವಾಗಿರುತ್ತದೆ. ಅಂದಹಾಗೆ ಇಲ್ಲಿರುವ ವಿಚಾರ ನಿಮಗೆ ತಾಳೆಯಾಗುತ್ತದಾ ಎಂಬುದರ ಬಗ್ಗೆ ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಹಾಕಿ.

ಊಹಿಸಲು ಕೂಡ ಸಾಧ್ಯವಿಲ್ಲದಂಥ ಕ್ರಿಯೇಟಿವಿಟಿ

ಊಹಿಸಲು ಕೂಡ ಸಾಧ್ಯವಿಲ್ಲದಂಥ ಕ್ರಿಯೇಟಿವಿಟಿ

ತಾವು ತಿಳಿಸಬೇಕಾದ ವಿಷಯವನ್ನು ತುಂಬ ಸ್ಪಷ್ಟವಾಗಿಯೂ ಮನದಟ್ಟಾಗುವಂತೆ ತಿಳಿಸುವಲ್ಲಿಯೂ ಇವರ ಕೌಶಲ ಅದ್ಭುತ. ಊಹಿಸಲು ಕೂಡ ಸಾಧ್ಯವಿಲ್ಲದಂಥ ಕ್ರಿಯೇಟಿವಿಟಿ ಇವರದು. ಜತೆಗೆ ಒಳ್ಳೆ ಮನರಂಜನೆ ನೀಡುತ್ತಾರೆ. ಈ ಸಂಖ್ಯೆಯವರ ಎನರ್ಜಿ ಲೆವೆಲ್ ಕೂಡ ಬಹಳ ಪ್ರಖ್ಯಾತವಾಗಿರುತ್ತದೆ. ಅಂದರೆ ಚಟಪಟ ಮಾತನಾಡುತ್ತಾ, ಗುಡು ಗುಡು ಓಡಾಡುತ್ತಾ ಬಹಳ ಚಟುವಟಿಕೆಯಾಗಿ ಇರುತ್ತಾರೆ. ಇವರು ಇರುವ ಕೂಡ ನಗುವಿಗಂತೂ ಕೊರತೆ ಇರುವುದಿಲ್ಲ. ತಮ್ಮ ಸುತ್ತ ಒಂದು ಪ್ರಭಾ ವಲಯವನ್ನು ಸೃಷ್ಟಿಸಿಕೊಳ್ಳುವ ಇವರ ಕೂಡ ಆಕರ್ಷಿತರಾಗದೇ ಇರುವವರು ವಿರಳ.

ವೃತ್ತಿ ಅಥವಾ ಉದ್ಯೋಗ ಜೀವನದಲ್ಲೇ ಬಹಳ ಸಮಯ

ವೃತ್ತಿ ಅಥವಾ ಉದ್ಯೋಗ ಜೀವನದಲ್ಲೇ ಬಹಳ ಸಮಯ

ಇನ್ನು ಈ ಸಂಖ್ಯೆಯ ಮಕ್ಕಳು ತಮ್ಮದೇ ವಯಸ್ಸಿನ ಇತರ ಮಕ್ಕಳಿಗಿಂತ ವಿಪರೀತ ಎನಿಸುವಷ್ಟು ಮಾತನಾಡುತ್ತವೆ. ಒಟ್ಟಿನಲ್ಲಿ ಇವಕ್ಕೆ ಮಾತು ಬೇಕು. ತಮ್ಮ ಮಾತಿನಿಂದ ಎದುರಿನವರಿಗೆ ಬೇಸರ ಆಗಬಹುದು ಅನ್ನಿಸಿಬಿಟ್ಟರೆ, ನೀವು ಹೇಳೋದು ಸರಿ ಎಂದು ಅವರ ದಾರಿಗೆ ಹೋಗಿಬಿಡ್ತಾರೆ. ಒಟ್ಟಿನಲ್ಲಿ ಇವರಿಗೆ ಯಾರೊಂದಿಗೆ ಜಗಳ, ಕದನ, ಭಿನ್ನಾಭಿಪ್ರಾಯಗಳು ಬೇಡ. ಈ ಸಂಖ್ಯೆಯವರು ತಮಗೆ ಅನಿಸಿದ್ದನ್ನು ಹೇಳಲು ಅವಕಾಶ ಮಾಡಿಕೊಟ್ಟರೆ ಅದ್ಭುತವಾದದ್ದನ್ನು ಸಾಧಿಸುತ್ತಾರೆ. ಸ್ವಭಾವತಃ ಮಹತ್ವಾಕಾಂಕ್ಷಿಗಳಾದ ಇವರ ಮನಶ್ಶಕ್ತಿಯೂ ಅಗಾಧ. ತಮ್ಮ ವೃತ್ತಿ ಅಥವಾ ಉದ್ಯೋಗ ಜೀವನದಲ್ಲೇ ಬಹಳ ಸಮಯ ಕಳೆಯುತ್ತಾರೆ.

ಎಲ್ಲವನ್ನೂ ಚೆನ್ನಾಗಿ ಪ್ಲಾನ್ ಮಾಡಿಕೊಳ್ಳುತ್ತಾರೆ

ಎಲ್ಲವನ್ನೂ ಚೆನ್ನಾಗಿ ಪ್ಲಾನ್ ಮಾಡಿಕೊಳ್ಳುತ್ತಾರೆ

ಸಂಖ್ಯೆ 3ರ ವ್ಯಕ್ತಿಗಳಿಗೆ ಸಹೋದ್ಯೋಗಿಗಳಾಗಿ ಮತ್ತೊಬ್ಬರ ಜತೆ ಕೆಲಸ ಮಾಡುವುದು ಹಿಂಸೆಯ ಸಂಗತಿ. ಅಧಿಕಾರ ಅಂದರೇನು, ಅದನ್ನು ಹೇಗೆ ಬಳಸಬೇಕು ಎಂಬುದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳುವಷ್ಟು ಚೈತನ್ಯ ಹಾಗೂ ಉತ್ಸಾಹ ಸದಾ ಉಳಿಸಿಕೊಂಡಿರುತ್ತಾರೆ. ಇವರಿಗೆ ಅನುಮಾನ- ಸಂದೇಹ ಬರುವುದೇ ಇಲ್ಲ. ಅಷ್ಟೇ ಅಲ್ಲ, ಬೇರೆ ಯಾರಾದರೂ ಗೊಂದಲದಲ್ಲಿ ಇದ್ದರೆ ಅದನ್ನೂ ಇವರು ಸಹಿಸಲ್ಲ. ಎಲ್ಲವನ್ನೂ ಚೆನ್ನಾಗಿ ಪ್ಲಾನ್ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅವುಗಳನ್ನು ಚೆನ್ನಾಗಿ ಆಚರಣೆಗೂ ತರುತ್ತಾರೆ. ಯಾವುದಕ್ಕೂ ಹೆದರದ ಇವರು ಸ್ವಲ್ಪ ಮಟ್ಟಿಗೆ ಸಂಖ್ಯೆ 1ರ ವ್ಯಕ್ತಿತ್ವದಂಥವರೇ.

ಪ್ರೀತಿ-ಪ್ರೇಮದಲ್ಲಿ ಬಿದ್ದರೋ 'ಬೇಟೆಗಾರ'ರಂತೆ

ಪ್ರೀತಿ-ಪ್ರೇಮದಲ್ಲಿ ಬಿದ್ದರೋ 'ಬೇಟೆಗಾರ'ರಂತೆ

ಪ್ರೀತಿ-ಪ್ರೇಮ-ಪ್ರಣಯ ಇವಕ್ಕೆಲ್ಲ ಹೆಚ್ಚು ಸಮಯ ಕೊಡಲು ಇವರಿಗೆ ಆಗುವುದೇ ಇಲ್ಲ. ಆದರೆ ಒಂದು ವೇಳೆ ಪ್ರೀತಿ-ಪ್ರೇಮದಲ್ಲಿ ಬಿದ್ದರೋ 'ಬೇಟೆಗಾರ'ರಂತೆ ಆಗಿಬಿಡುತ್ತಾರೆ. ಬೆನ್ನತ್ತಿ ಪ್ರೀತಿ ಮಾಡುತ್ತಾರೆ. ತಮ್ಮ ಮನಸ್ಸಿನ ವಿಚಾರ ತಿಳಿಸುತ್ತಾರೆ. ಆದರೆ ಅವರ ಸಂಗಾತಿ ಹೀಗೇ ನಡೆದುಕೊಂಡರೆ ಅದನ್ನು ಇವರು ಸಹಿಸಲ್ಲ. ಇವರಿಗೆ ಸಂಗಾತಿ ಆಗುವಂಥವರು ಮೃದು ಹೃದಯಿ ಆಗಿರಬೇಕು. ಎಲ್ಲ ಸನ್ನಿವೇಶಕ್ಕೂ ಹೊಂದಿಕೊಂಡು ಹೋಗುವಂಥವರಾಗಿರಬೇಕು. ಸ್ವಭಾವತಃ ಇವರೇನೂ ಜಗಳ ಮಾಡುವಂಥವರೇನಲ್ಲ. ಆದರೆ ಕೆಲವರು ತಾವಾಗಿಯೇ ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಬೇರೆಯವರೂ ಕೂಡ ತನ್ನಂತೆಯೇ ಬಲಶಾಲಿ ಆಗಿರುವುದಿಲ್ಲ, ಗಟ್ಟಿ ಆಗಿರುವುದಿಲ್ಲ ಎಂಬ ಸಂಗತಿ ಇವರಿಗೆ ಅರ್ಥವಾಗಲ್ಲ.

ಕೋಪ ನಿಯಂತ್ರಿಸಬೇಕು

ಕೋಪ ನಿಯಂತ್ರಿಸಬೇಕು

ಈ ವ್ಯಕ್ತಿಗಳು ತಮ್ಮ ಕೋಪವನ್ನು ನಿಯಂತ್ರಿಸುವುದು ಕಲಿತುಕೊಳ್ಳಬೇಕು. ಜತೆಗೆ ವಿಪರೀತ ಮಹತ್ವಾಕಾಂಕ್ಷೆಯನ್ನು ಬಿಡಬೇಕು. ಇನ್ನೊಬ್ಬರನ್ನು ಸಹಿಸಿಕೊಂಡು ಹೋಗುವುದು ಕೂಡ ರೂಢಿ ಮಾಡಿಕೊಳ್ಳಬೇಕು. ಈ ಎಲ್ಲ ವಿಚಾರಗಳಲ್ಲಿ ಸುಧಾರಿಸಿಕೊಂಡರೆ, ಇವರಿಂದ ಅತ್ಯುತ್ತಮವಾದದ್ದನ್ನು ನಿರೀಕ್ಷಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+