Get Updates
Get notified of breaking news, exclusive insights, and must-see stories!

ಸಂಖ್ಯೆ 1ರ ಬಗ್ಗೆ ದೇಶದ ಖ್ಯಾತ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್

Recommended Video

      ಖ್ಯಾತ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಸಂಖ್ಯೆ 1ರ ಬಗ್ಗೆ ಹೇಳೋದು ಹೀಗೆ | Oneindia Kannada

      ಸಂಖ್ಯಾಶಾಸ್ತ್ರ, ಟಾರೋ ಕಾರ್ಡ್ ರೀಡಿಂಗ್, ಹೀಲಿಂಗ್ ಹೀಗೆ ನಾನಾ ಬಗೆಯ ವಿದ್ಯೆಯಲ್ಲಿ ಶೀಲಾ ಬಜಾಜ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಅಷ್ಟೇ ಅಲ್ಲ, ಕಂಪೆನಿ, ವೆಬ್ ಸೈಟ್, ವ್ಯಾಪಾರ- ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೂಕ್ತ ಹೆಸರು ಕೂಡ ಸೂಚಿಸುತ್ತಾರೆ ಶೀಲಾ.

      ಜತೆಗೆ ಚಿತ್ರರಂಗದಲ್ಲೂ ನಿರ್ದೇಶಕರು- ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಹೆಸರಿಡುವ ಮುಂಚೆ ಇವರ ಬಳಿ ಸಲಹೆ ಕೇಳುವುದು ಉಂಟು. ಮೂಲತಃ ಬೆಂಗಳೂರಿನವರೇ ಆದ ಶೀಲಾ ಬಜಾಜ್ ರ ಪರಿಚಯ ಒನ್ಇಂಡಿಯಾ ಕನ್ನಡ ಓದುಗರಿಗೆ ಇದೆ. ಇದೀಗ ಸಂಖ್ಯಾಶಾಸ್ತ್ರದಲ್ಲಿ 1ರಿಂದ 9ರ ವರೆಗಿನ ಸಂಖ್ಯೆಯ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಸರಣಿ ಆರಂಭಿಸಲಿದ್ದಾರೆ ಶೀಲಾ ಬಜಾಜ್.

      ಇಂದಿನಿಂದ ಆ ಸರಣಿಯು ಸಂಖ್ಯೆ 1ರಿಂದ ಆರಂಭವಾಗುತ್ತದೆ. ಶೀಲಾ ಬಜಾಜ್ ರಿಗೆ ಅಭಿಮಾನಿಗಳು ಹಾಗೂ ಅವರು ನೀಡುವ ಸಲಹೆ- ಸೂಚನೆ ಪಾಲಿಸುವವರ ಸಂಖ್ಯೆ ಹೆಚ್ಚು. ನಮ್ಮ ವೆಬ್ ಸೈಟ್ ನಲ್ಲಿ ಶುರುವಾಗುವ ಈ ಸರಣಿ ಬಗ್ಗೆ ಇತರರಿಗೆ ಕೂಡ ತಿಳಿಸಿ. ನೀವು ಯಾವ ಸಂಖ್ಯೆಯವರು? ಇಲ್ಲಿರುವ ವಿಚಾರ ನಿಮಗೆ ತಾಳೆಯಾಗುತ್ತದಾ ಎಂಬುದರ ಬಗ್ಗೆ ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಹಾಕಿ.

      ದೊಡ್ಡದ್ದನ್ನು ಸಾಧಿಸುವ ಹುಟ್ಟಾ ನಾಯಕರು

      ದೊಡ್ಡದ್ದನ್ನು ಸಾಧಿಸುವ ಹುಟ್ಟಾ ನಾಯಕರು

      ಸಂಖ್ಯೆ 1ರ ವ್ಯಕ್ತಿತ್ವ ಸ್ವಭಾವತಃ ಸ್ವತಂತ್ರವಾದದ್ದು. ಹುಟ್ಟಾ ನಾಯಕತ್ವ ಗುಣ ಇರುತ್ತದೆ. ಜತೆಗೆ ಮಹತ್ವಾಕಾಂಕ್ಷಿಗಳು ಮತ್ತು ದೊಡ್ಡದನ್ನು ಸಾಧಿಸುವಂಥವರು. ಇವರ ಆಲೋಚನೆಗಳು ಒರಿಜಿನಲ್ ಆಗಿರುತ್ತವೆ. ಹೊಸ ವಿಚಾರ ಅಥವಾ ವಿಷಯಗಳನ್ನು ಆರಂಭಿಸುವ ಜವಾಬ್ದಾರಿ ಇವರಿಗೆ ವಹಿಸಿದರೆ ಅದರ ಯಶಸ್ಸಿಗೆ ಶತಾಯಗತಾಯ ಯತ್ನಿಸುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಈ ಸಂಖ್ಯೆಯ ಅಧಿಪತಿ ಸೂರ್ಯ. ಇದನ್ನು ಕುಟುಂಬದ ಯಜಮಾನ ಅಂತ ಕರೆಯಲಾಗುತ್ತದೆ. ಈ ಸಂಖ್ಯೆಯವರು ಸಿಕ್ಕಾಪಟ್ಟೆ ಕ್ರಿಯೇಟಿವ್, ಅದ್ಭುತ ಊಹಾ ಶಕ್ತಿ ಇರುವಂಥವರು. ಒಂದು ಸಲ ನಿರ್ಧಾರ ಮಾಡಿದರೆ ಅದರಿಂದ ಆಚೀಚೆ ಸರಿಯುವಂಥವರಲ್ಲ. ಮಿತಿಗಳನ್ನು ಇಷ್ಟಪಡದ ಇವರು, ಸಲಹೆಗಳನ್ನು ಕೇಳುವುದು ವಿರಳಾತಿವಿರಳ.

      ಸ್ವತಂತ್ರವಾಗಿ ಕೆಲಸ ಮಾಡಲು ಬಯಸುತ್ತಾರೆ

      ಸ್ವತಂತ್ರವಾಗಿ ಕೆಲಸ ಮಾಡಲು ಬಯಸುತ್ತಾರೆ

      ಇವರಿಗೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಬೇಕು. ಸ್ವತಂತ್ರವಾಗಿ ಕೆಲಸ ನಿರ್ವಹಿಸಬೇಕು. ಬಹಳ ಸಲ ಇವರಿಗೆ ಮ್ಯಾನೇಜರ್ ಅಥವಾ ಸಹೋದ್ಯೋಗಿಗಳು ಯಾರೂ ಬೇಡ. ಎಲ್ಲವನ್ನೂ ತಾವೇ ಮಾಡಬಲ್ಲೆವು ಅಂತಲೇ ಯೋಚಿಸುತ್ತಾರೆ. ಇವರು ಒಮ್ಮೆ ಗುರಿ ನಿಗದಿ ಮಾಡಿಕೊಂಡುಬಿಟ್ಟರೆ ಅದು ಆಚೀಚೆ ಆಗೋದೇ ಇಲ್ಲ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವ ಜಾಯಮಾನದವರು ಇವರು ಎಂದು ನೋಡಿದವರಿಗೆ ಖಂಡಿತಾ ಅನಿಸುತ್ತದೆ. ಇನ್ನು ಈ ಸಂಖ್ಯೆಯ ಮಕ್ಕಳು ಏನು ಕೇಳಿದರೂ ಕೊಡಿಸಲೇಬೇಕು. ಇಲ್ಲದಿದ್ದರೆ ಬೇಕು ಎಂದದ್ದು ಸಿಗುವವರೆಗೆ ಬಿಡುವ ಜಾಯಮಾನದವರಲ್ಲ. ಅವರಿಗೆ ಬೇಕಾದದ್ದು ಹೇಗೆ ಸಿಕ್ಕಿತು, ಅದಕ್ಕಾಗಿ ಪಡುವ ಶ್ರಮ ಇತ್ಯಾದಿ ವಿಚಾರವನ್ನೂ ಅವರಿಗೆ ತಿಳಿಸಿಕೊಡಿ. ಇಲ್ಲದಿದ್ದರೆ ಮನೆಯೇ ಅಲ್ಲೋಲಕಲ್ಲೋಲ ಆಗಿಬಿಡುತ್ತದೆ. ಈ ಮಕ್ಕಳ ಜತೆಗೆ ಸೂಕ್ಷ್ಮವಾಗಿ ವರ್ತಿಸಲೇ ಬೇಕು.

      ಎತ್ತರದ ಸ್ಥಾನಕ್ಕೆ ತಲುಪುತ್ತಾರೆ

      ಎತ್ತರದ ಸ್ಥಾನಕ್ಕೆ ತಲುಪುತ್ತಾರೆ

      ಈ ಸಂಖ್ಯೆಯವರು ವೃತ್ತಿಯಲ್ಲಾಗಲಿ, ಉದ್ಯೋಗದಲ್ಲಾಗಲಿ ಅಥವಾ ಬದುಕಿನಲ್ಲಾಗಲಿ ಊಹಿಸಲು ಸಾಧ್ಯವಾಗದ ಎತ್ತರಕ್ಕೆ ಏರುತ್ತಾರೆ. ಆದರೆ ಒಂದು ಮಾತು: ಇವರ ಕುಟುಂಬದವರು ಬೆಂಬಲ ನೀಡಿದರೆ ಮಾತ್ರ. ಇನ್ನು ಈ ಸಂಖ್ಯೆಯವರಿಗೆ ಎಲ್ಲ ವಿಚಾರದಲ್ಲೂ ತಾವೇ ನಾಯಕರಾಗಿರಬೇಕು. ಅದಕ್ಕಾಗಿ ತಮ್ಮೆಲ್ಲ ಬುದ್ಧಿಶಕ್ತಿಯನ್ನೂ ಇವರು ಖರ್ಚು ಮಾಡುತ್ತಾರೆ. ಸಂಬಂಧದ ವಿಚಾರದಲ್ಲೂ ಇವರದೇ ಡ್ರೈವರ್ ಸೀಟ್. ತಮ್ಮ ಪ್ರೀತಿಯ ಕಾರಣವನ್ನು ಅಥವಾ ಉದ್ದೇಶವನ್ನು ಅವರೇ ನಿರ್ಧರಿಸುತ್ತಾರೆ. ಅದರಲ್ಲಿ ಜಯಿಸುವವರೆಗೆ ಅಥವಾ ಆಸಕ್ತಿ ಕಳೆದುಕೊಳ್ಳುವ ತನಕ ಅವರು ಅದನ್ನು ಕೈ ಬಿಡಲ್ಲ. ಇವರು ಪದೇಪದೇ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಅದು ಕೂಡ ತುಂಬ ಅಪರೂಪದ ವ್ಯಕ್ತಿತ್ವ ಇರುವಂಥವರ ಜತೆಗೆ. ಯಾರಾದರೂ ತಮ್ಮನ್ನು ತಿರಸ್ಕರಿಸಬಹುದು ಎಂಬ ಭಯ ಇವರಿಗೆ ಎಂದಿಗೂ ಕಾಡುವುದಿಲ್ಲ.

      ಶೀಲಾ ಬಜಾಜ್ ಅವರ ಭೇಟಿಗಾಗಿ

      ಶೀಲಾ ಬಜಾಜ್ ಅವರ ಭೇಟಿಗಾಗಿ

      ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಯೂ ವಿಶಿಷ್ಟ. ಅವರ ಗುಣ- ನಡತೆ, ಆಲೋಚನೆ ಎಲ್ಲವೂ ವಿಭಿನ್ನವಾಗಿರುತ್ತದೆ. ಇಲ್ಲಿ ತಿಳಿಸಲಾಗುವ ಗುಣ- ವಿಶೇಷಗಳನ್ನು ತಾಳೆ ಮಾಡಿಕೊಳ್ಳಿ. ಆ ನಂತರ ಅವುಗಳಲ್ಲಿ ನಕಾರಾತ್ಮಕವಾಗುತ್ತದೆ ಎಂದೆನಿಸುವ ಗುಣಗಳನ್ನು ಕಡಿಮೆ ಮಾಡಿಕೊಳ್ಳಿ. ಸಕಾರಾತ್ಮಕವಾದ ವಿಚಾರಗಳನ್ನು ಹೆಚ್ಚು ಮಾಡಿಕೊಳ್ಳಿ. ಹೆಸರಿನ ಸಂಖ್ಯೆ ಕೂಡ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಅದು ಕೂಡ ಸರಿಯಾಗಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.

      ಮುಂದುವರಿಯುವುದು

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+