ನರೇಂದ್ರ ಮೋದಿಗೂ ಸಂಖ್ಯೆ 8ಕ್ಕೂ ಎಂಥ ನಂಟು?

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್‌ 08) ರಂದು ಎಂಟು ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಮೋದಿ ಅವರಿಗೆ ಸಂಬಂಧಿಸಿದ ಈ ಹಿಂದಿನ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಮೋದಿ ಅವರಿಗೂ ಸಂಖ್ಯ ಎಂಟಕ್ಕೂ ಏನೋ ಸಂಬಂಧ ಇದೆಯೆಂಬುದು ಗೊತ್ತಾಗುತ್ತದೆ.

ನರೇಂದ್ರ ಮೋದಿ ಅವರು ಬಹಳ ಮುಖ್ಯವಾದ ಅಪನಗದೀಕರಣ ಘೋಷಣೆ ಮಾಡಿದ್ದು ನವೆಂಬರ್ 8ರಂದು ಅದು ಮೋದಿ ಅವರಿಗೆ ಭಾರಿ ಪ್ರಖ್ಯಾತಿ ತಂದುಕೊಟ್ಟಿತ್ತಲ್ಲದೆ, ದೇಶದಲ್ಲಿ ಸಾಕಷ್ಟು ಬದಲಾವಣೆಗಳಿಗೂ ಕಾರಣವಾಯಿತು.

ದೇಶದ ಜನರ ರಕ್ತ ಕುದಿಯುವಂತೆ ಮಾಡಿದ ಪುಲ್ವಾಮಾ ದಾಳಿಗೆ ಪ್ರತಿಕಾರ ತೀರಿಸಲು ವಾಯುಸೇನೆಯಿಂದ ಪ್ರತಿ ದಾಳಿಗೆ ಮೋದಿ ಆಯ್ದು ಕೊಂಡದ್ದು ಫೆಬ್ರವರಿ 26, 2+6= 8.

Narendra Modis lucky number is 8

ಇನ್ನು ನರೇಂದ್ರ ಮೋದಿ ಅವರ ಜನ್ಮ ದಿನ ಸೆಪ್ಟೆಂಬರ್ 17 ಅಂದರೆ 1+7= 8. ಲೋಕಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ ನರೇಂದ್ರ ಮೋದಿ. ಇವತ್ತು ಆಗಸ್ಟ್ 8. ಆಗಸ್ಟ್‌ ವರ್ಷದ ಎಂಟನೇ ತಿಂಗಳು ಎಂಬುದು ವಿಶೇಷ.

ಇನ್ನೂ ಅಚ್ಚರಿಯ ವಿಷಯ ಅಂದರೆ ನವೆಂಬರ್ 8 ಹಾಗೂ ಆಗಸ್ಟ್ 8 ಎರಡೂ ದಿನವೂ ಅವರು ದೇಶದ ಜನರ ಎದುರು ಬರಲು ಆಯ್ದುಕೊಂಡ ಸಮಯ ರಾತ್ರಿ 8.

ಸಂಖ್ಯಾ ಶಾಸ್ತ್ರದ ಪ್ರಕಾರ 8 ಅಂದರೆ, ಶನಿ ಎನ್ನುತ್ತಾರೆ. ಈ ಗ್ರಹವನ್ನು ಹಿರಿಯ ಎಂದಲೂ ಪರಿಗಣಿಸಲಾಗುತ್ತದೆ. ಧರ್ಮಾಧರ್ಮವನ್ನು ತೂಕ ಹಾಕಿ, ಫಲ ನೀಡುವ ಗ್ರಹವಂತೆ.

ಮೂಲಗಳ ಪ್ರಕಾರ, ನರೇಂದ್ರ ಮೋದಿ ಅವರು ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಆಯ್ದುಕೊಳ್ಳುವ ದಿನಾಂಕ 8. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಸಹ ಅವರು ಎಂಟರ ಸಂಖ್ಯೆಗೆ ಮಹತ್ವ ನೀಡುತ್ತಿದ್ದರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+