Trigraha Yoga: ಸಿಂಹ ರಾಶಿಯಲ್ಲಿ ಚಂದ್ರ ಶುಕ್ರ ಮಂಗಳ ಸಂಯೋಗ: ಈ 3 ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಣೆ!

ಗ್ರಹಗಳು ರಾಶಿಗಳನ್ನು ಬದಲಾಯಿಸುವ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸಬಹುದು. ಹೀಗೆ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಅವು ಕೆಲವು ಯೋಗಗಳನ್ನು ಸೃಷ್ಟಿಸುತ್ತವೆ. ಐಷಾರಾಮಿ, ಪ್ರೀತಿ, ಸೌಂದರ್ಯ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲ್ಪಟ್ಟಿರುವ ಶುಕ್ರ ಗ್ರಹ ಸಿಂಹರಾಶಿಯಲ್ಲಿ ಸಂಚರಿಸುತ್ತಿದೆ. ಗ್ರಹಗಳ ಅಧಿಪತಿ ಮತ್ತು ಧೈರ್ಯ ಮತ್ತು ಶೌರ್ಯದ ಅಂಶವಾದ ಮಂಗಳ ಗ್ರಹವೂ ಸಿಂಹರಾಶಿಯಲ್ಲಿ ಸಾಗುತ್ತಿದೆ.

ಈ ವೇಳೆ ಚಂದ್ರ ಗ್ರಹ ಕೂಡ ಸಿಂಹ ರಾಶಿಗೆ ಪ್ರವೇಶಿಸಿದೆ. ಹೀಗೆ ಸಿಂಹರಾಶಿಯಲ್ಲಿ ಚಂದ್ರ, ಮಂಗಳ ಮತ್ತು ಶುಕ್ರರ ಸಂಯೋಗದಿಂದ ತ್ರಿಗ್ರಹ ಯೋಗ ಉಂಟಾಗುತ್ತದೆ. ಇದೊಂದು ಶುಭ ಯೋಗವಾಗಿದ್ದು, ಈ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಯವರಿಗೆ ಈ ಯೋಗದಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

Moon Venus Mars Conjunction in Leo 2023: Financial condition of these 3 signs will improve!

ಮೇಷ ರಾಶಿ

ತ್ರಿಗ್ರಹ ಯೋಗ ಮೇಷ ರಾಶಿಯ 5ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮಗೆ ಸಾಲದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮತ್ತು ಹಠಾತ್ ಹಣದ ಹರಿವನ್ನು ಪಡೆಯಲು ಸಹಾಯ ಮಾಡುತ್ತದೆ. ಜೊತೆಗಿದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವೃತ್ತಿಪರ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ತಮ್ಮ ಕಾರ್ಯನಿರ್ವಹಣೆಗೆ ಕಛೇರಿಯಲ್ಲಿ ಉತ್ತಮ ಮೆಚ್ಚುಗೆಯನ್ನು ಪಡೆಯುತ್ತಾರೆ. ಜೊತೆಗೆ ಬಡ್ತಿಯನ್ನು ಪಡೆಯುವರು. ಹೊಸ ಜವಾಬ್ದಾರಿಗಳನ್ನು ಪಡೆಯುತ್ತಾರೆ.

Moon Venus Mars Conjunction in Leo 2023: Financial condition of these 3 signs will improve!

ಮಿಥುನ ರಾಶಿ

ತ್ರಿಗ್ರಹ ಯೋಗ ಮಿಥುನ ರಾಶಿಯ 3ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ಮಿಥುನ ರಾಶಿಯವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವರು. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಈ ಸಮಯದಲ್ಲಿ ನೀವು ಭೂಮಿ ಮತ್ತು ಮನೆ ಖರೀದಿಸಲು ಅವಕಾಶಗಳನ್ನು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ತೀರ್ಪುಗಳು ಅನುಕೂಲಕರವಾಗಿರುತ್ತದೆ.

Moon Venus Mars Conjunction in Leo 2023: Financial condition of these 3 signs will improve!

ಸಿಂಹ ರಾಶಿ

ಸಿಂಹ ರಾಶಿಯ ಮೊದಲ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕೆಲಸ ಮಾಡುವವರು ತಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಾರೆ. ಕೆಲವರಿಗೆ ಬಡ್ತಿಯ ಅವಕಾಶವಿದೆ. ಮಕ್ಕಳು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಉತ್ತಮ ಅಂಕಗಳನ್ನು ಪಡೆದು ಯಶಸ್ವಿಯಾಗುತ್ತಾರೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿಯನ್ನು ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+