June 2025 Horoscope: ಜೂನ್ ತಿಂಗಳು ಈ ರಾಶಿಯವರಿಗೆ ರಾಜ ಯೋಗ; ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ
2025 ಜೂನ್ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. 14.05.2025ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಜೊತೆಗೆ ಸೂರ್ಯ ಕೂಡ ವೃಷಭ ರಾಶಿಯಲ್ಲಿ ಸಂಚಾರ ಮಾಡಲಿದೆ. ಜೂನ್ ತಿಂಗಳಲ್ಲಿ 07.06.2025ರಂದು ಬಕ್ರೀದ್ ಇದೆ. 01.06.2025 ರಿಂದ 31.06.2025ರವರೆಗೆ ಒಟ್ಟಾರೆ ಗ್ರಹಗಳ ಸಂಚಾರ ಹನ್ನೆರಡು ರಾಶಿಗಳ ಆರ್ಥಿಕ, ವೃತ್ತಿ, ಕೌಟುಂಬಿಕ, ಪ್ರೀತಿ ಜೀವನದಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಈಗ ತಿಳಿಯೋಣ.

ಮೇಷರಾಶಿ
ಈಗ ನಿಮಗೆ ಅರ್ಧ ಗುರುಬಲ. ಮೂರನೇ ಮನೆಯ ಗುರು ಸಹ ಅಲ್ಪ ಫಲವನ್ನು ನೀಡುತ್ತಾನೆ. ಸಾಡೆಸಾತಿ ಶುರುವಾಗಿದೆ ಅದರ ಬಿಸಿ ಅನುಭವಕ್ಕೆ ಬರುತ್ತಿದೆ. ಆದರೆ ರಾಹು ೧೧ ನೇಮನೆ ಲಾಭಸ್ಥಾನಕ್ಕೆ ಪ್ರವೇಶವಾಗಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗುತ್ತದೆ. ಯಾವೂದೋ ಊಹಿಸದ ಮೂಲದಿಂದ ಹಣದ ಸಹಾಯ ಒದಗಿ ಬರುತ್ತದೆ. ಹೊಸ ಪ್ರಾಜೆಕ್ಟ್ ಗಳು ಸಿಗುತ್ತವೆ. ಶೇರ್‍ಸ್ ನಲ್ಲಿ ಹಣ ಹೂಡಿದ್ದರೆ ಲಾಭ ಬರುತ್ತದೆ.ಸೂರ್ಯ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಇರುವುದರಿಂದ ತಂದೆಯ ಆರೋಗ್ಯಕ್ಕೆ ಸಮಸ್ಯೆ ಇದೆ. ಶನಿ ಹನ್ನೆರಡನೇ ಮನೆಗೆ ಬಂದಿರುವುದರಿಂದ ಖರ್ಚುಗಳು ಹೆಚ್ಚು. ಆದಷ್ಟು ಯೋಚಿಸಿ ವಿವೇಚನೆಯಿಂದ ಮುಂದುವರೆಯಿರಿ. ಬುಧ ನಿಮ್ಮ ರಾಶಿಯಲ್ಲಿದ್ದು ತಕ್ಕಮಟ್ಟಿನ ರಕಷಣೆ ಕೊಡುತ್ತಾನೆ. ಹನುಮಂತನ ಪ್ರಾxನೆ ಮಾಡಿ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳುವಾಗ ಯೋಚಿಸಿ ಮುಂದುವರೆಯಿರಿ.
ವೃಷಭರಾಶಿ
ಈಗ ನಿಮಗೆ ಗುರುಬಲ ಶನಿಬಲ ಎರಡೂ ಇದೆ. ರಾಹು ಹತ್ತನೇ ಮನೆಯ ಪ್ರವೇಶದಿಂದ ಲಾಭ ಇಲ್ಲದಿದ್ದರೂ ನಷ್ಟವೇನೂ ಇಲ್ಲ. ಆದರೆ ಶನಿ ಲಾಭಸ್ಥಾನದಲ್ಲಿ ಇದ್ದು ಧನಲಾಭ ಕಾರ್ಯ ಸಫಲತೆ ಕೊಡುತ್ತಾನೆ. ಅಭಿವೃದ್ಧಿ ಇದೆ. ಈ ತಿಂಗಳ ಅಂತ್ಯದವರೆಗೂ ಶನಿಯ ಜೊತೆ ಶುಕ್ರನೂ ಲಾಭಸ್ಥಾನದಲ್ಲಿ ಇದ್ದು ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾರೆ. ಪ್ರಗತಿ ಚೆನ್ನಾಗಿ ಇರುತ್ತದೆ. ಈ ಎರಡೂ ಗ್ರಹಗಳೂ ನಿಮ್ಮ ಯಶಸ್ಸು ಅಭಿವೃದ್ಧಿಗೆ ಕಾರಣರಾಗುತ್ತಾರೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಕೌಟುಂಬಿಕಸೌಖ್ಯ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ. ಕಾರ್ಯಸಿದ್ಧಿ ಕಾರ್ಯ ಸಫಲತೆ ಕಾಣುವಿರಿ.
ಮಿಥುನರಾಶಿ
ಶುಭಫಲಗಳನ್ನು ಪಡೆಯಲು ನೀವು ಇನ್ನೂ ಕಾಯಬೇಕು. ಆದರೆ ಬುಧ ನಿಮಗೆ ಲಾಭಸ್ಥಾನದಲ್ಲಿ ಇರುವುದರಿಂದ ವೃತ್ತಿಯಲ್ಲಿ ವ್ಯಾಪಾರದಲ್ಲಿ ಲಾಭಗಳು ಒಳ್ಳೆಯ ಸಂಗತಿಗಳು ಜರುಗುತ್ತವೆ. ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಆದರೆ ಗುರುಬಲ ಶನಿಬಲ ಯಾವುದೂ ಇಲ್ಲ. ಹತ್ತನೇ ಮನೆಯಲ್ಲಿ ಶುಕ್ರ ರಾಹು ಶನಿ ನಿಮ್ಮ ವೃತ್ತಿಯನ್ನು ಸಂಭಾಳಿಸುತ್ತಾರೆ. ಬಡ್ತಿ ಸಮೇತ ವರ್ಗಾವಣೆ, ಅಥವಾ ಒಳ್ಳೆಯ ಸ್ಥಾನಮಾನ ಪದವಿ ನಿರೀಕ್ಷೆ ಮಾಡಬಹುದು. ಗುರು ನಿಮ್ಮ ರಾಶಿಗೇ ಬಂದಿದ್ದಾನೆ. ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಶುಭಕಾಐಕ್ಕೆ ಖರ್ಚು ಮಾಡುತ್ತೀರಿ. ಈಗ ಕೇತು ಮೂರನೇ ಮನೆಗೆ ಬಂದಿರುವುದರಿಂದ ಹೆಚ್ಚಿನ ಧನಲಾಭ ಅನುಕೂಲ ಇದೆ. ವೃಥಾ ಅಲೆದಾಟ, ದೈಹಿಕ ಶ್ರಮ ಕಡಿಮೆಯಾಗುತ್ತದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ತಾಯಿಯಿಂದ ಸಹಾಯ ಇದೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.
ಕಟಕರಾಶಿ
ಅಷ್ಟಮಶನಿಯಿಂದ ಮುಕ್ತಿ ಸಿಕ್ಕಿದೆ. ಶನಿ ಈಗ ನವಮಸ್ಥಾನದಲ್ಲಿ ಇದ್ದಾನೆ. ಧರ್ಮದಲ್ಲಿ ಮನಸ್ಸು ನೀಡುತ್ತಾನೆ. ಧರ್ಮಕಾರ್ಯಗಳನ್ನು ಮಾಡಿಸುತ್ತಾನೆ ಅದಕ್ಕೆ ಸರಿಯಾಗಿ ಗುರು ಸಹ ೧೨ ನೇ ಮನೆಗೆ ಬಂದಿರುವುದು ನೀವು ಸಾಧು ಸಂತರ ಸೇವೆ ದೇವರ ಕಾರ್ಯ ಧರ್ಮಕಾರ್ಯ ಮಾಡುವುದನ್ನು ಸೂಚಿಸುತ್ತದೆ. ಒಂಬತ್ತನೇ ಮನೆಯಲ್ಲಿ ಶನಿಯ ಜೊತೆ ಶುಕ್ರ, ರಾಹು ಇರುವುದು ಕೂಡ ನಿಮಗೆ ಲಾಭಕರೆವೇ ಆಗಿದೆ. ರಾಹು ಈಗ ಎಂಟನೇ ಮನೆಯಲ್ಲಿ ಇದ್ದಾನೆ. ಪಾಪಗ್ರಹಗಳು ಎಂಟನೇ ಮನೆಯಲ್ಲಿ ಇದ್ದರೆ ತೊಂದರೆ ಇಲ್ಲ. ಆದರೂ ಊಟ ತಿಂಡಿ ವಿಷಯದಲ್ಲಿ ಅಪಥ್ಯವಾಗದಂತೆ ಎಚ್ಚರಿಕೆ ವಹಿಸಿ. ಕೇತು ಎರಡನೇ ಮನೆಗೆ ಬರುತ್ತಾನೆ. ಕೌಟುಂಬಿಕವಾಗಿ ಕೊಂಚ ಅಶಾಂತಿ ಇರುತ್ತದೆ. ಈ ಮಾಸ ನಿಮಗೆ ಮಿಶ್ರಫಲ. ಯಾರೊಡನೆಯೂ ವಾದವಿವಾದಕ್ಕೆ ಹೋಗಬೇಡಿ.
ಸಿಂಹರಾಶಿ
ನಿಮಗೆ ಅಷ್ಟಮಶನಿ ಪ್ರಾರಂವಾಗಿದೆ. ಕೊಂಚ ಕಿರಿಕಿರಿ ಆತಂಕದ ವಾತಾವರಣ, ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ಏರುಪೇರಿನ ಪರಿಸ್ಥಿತಿ ಎದುರಾಗಬಹುದು. ಆದರೆ ಗುರು ಲಾಭಸ್ಥಾನಕ್ಕೆ ಪ್ರವೇಶ ಮಾಡಿರುವುದರಿಂದ ಕಳೆದ ತಿಂಗಳಿನಷ್ಟು ಒತ್ತಡ ಇರುವುದಿಲ್ಲ. ಸಾಕಷ್ಟು ಪರಿಹಾರಗಳು ನಿಮ್ಮ ಕಣ್ಣಮುಂದೆ ಕಾಣಿಸುತ್ತದೆ. ಲಾಭದ ಗುರು ನಿಮಗೆ ಅನೇಕ ಭಾಗ್ಯಗಳನ್ನೂ ಸೌಖ್ಯಗಳನ್ನೂ ಕೊಡುತ್ತಾನೆ. ಹಣಕಾಸಿನ ಏರುಪೇರು ನಿಯಂತ್ರಣಕ್ಕೆ ಬರುತ್ತದೆ. ಬುಧ ಈ ಮಾಸದಲ್ಲಿ ಒಂಬತ್ತನೇ ಮನೆಯಲ್ಲಿ ಇರುತ್ತಾನೆ. ಇದೂ ಸಹ ನಿಮಗೆ ರಕ್ಷಣೆ ಕೊಡುತ್ತದೆ. ರಾಹು ಏಳನೆ ಮನೆಯಲ್ಲಿ ಕೇತು ನಿಮ್ಮ ರಾಶಿಯಲ್ಲೇ ಇದ್ದಾರೆ. ರಾಹುವಿ ದೃಷ್ಟಿ ನಿಮಗೆ ಅಷ್ಟು ಒಳ್ಳೆಯದಲ್ಲ. ದೃಷ್ಟಿ ದೋಷ, ಉಸಿರಾಟ, ಅಲರ್ಜಿ, ಫಂಗಲ್ ಇನಫೆಕ್ಷನ್, ಬ್ಯಾಕ್ಟೀರಿಯಲ್ ಇನಫೆಕ್ಷನ್ ಬರಬಹುದು. ಇದು ನಿಮಗೆ ವೈಯುಕ್ತಿಕ ಆರೋಗ್ಯ ಬೆಳವಣಿಗೆಗೆ ತೊಂದರೆ ಬರಬಹುದು. ಸುಭ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ. ಆದರೆ ಗುರುಬಲ ಇರುವುದರಿಂದ ಪರಿಸ್ಥಿತಿ ವಿಷಮಕ್ಕೆ ಹೋಗದಂತೆ ತಡೆಯುತ್ತದೆ.
ಕನ್ಯಾರಾಶಿ
ಈಗ ನಿಮಗೆ ಗುರುಬಲ ಇಲ್ಲ. ಶನಿ ಏಳನೇ ಮನೆಯಲ್ಲಿ ಇದ್ದಾನೆ. ಶನಿಬಲ ಗುರುಬಲ ಎರಡೂ ಇಲ್ಲದಿರುವುದರಿಂದ ವೈಯುಕ್ತಿಕ ಬೆಳವಣಿಗೆ ಕಡಿಮೆ. ಅನಾರೋಗ್ಯ ಕಾಡಬಹುದು. ಶನಿ ಒತ್ತಡಗಳನ್ನು ಕೊಡುತ್ತಾನೆ ಹಾಗೂ ಕೋಪ ಸಿಡುಕು ಅಸಹನೆ ಮುಂತಾದ ಸ್ವಭಾವ ಹೆಚ್ಚು ಮಾಡುತ್ತಾನೆ. ರಾಹು ಆರನೇ ಮನೆಗೆ ಬಂದಿರುವುದು ನಿಮಗೆ ಹಣಕಾಸಿನ ಅನುಕೂಲ ಆಗುತ್ತದೆ. ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗಿರುವುದರಿಂದ ಅಲರ್ಜಿಗಳು ಕಡಿಮೆಯಾಗುತ್ತದೆ. ಗುರುವಿನ ಹತ್ತನೇ ಮನೆಯ ಪ್ರವೇಶ ಸ್ಥಾನಮಾನ ಬದಲಾವಣೆಯನ್ನು ತೋರಿಸುತ್ತದೆ. ಪದಚ್ಯುತಿಯೂ ಆಗಬಹುದು. ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ನಿಂತಲ್ಲೇ ನಿಂತು ಬಿಡುತ್ತದೆ. ಕೌಟುಂಬಿಕ ವಾತಾವರಣ ಕೂಡ ಆಹ್ಲಾದದಾಯಕವಾಗಿರುವುದಿಲ್ಲ. ನಿಮ್ಮ ಮನೆ ದೇವರ ಸ್ಮರಣೆ ದರ್ಶನ ವಿಹಿತ.
ತುಲಾರಾಶಿ
ಈಗ ನಿಮಗೆ ಗುರು ಭಾಗ್ಯಸ್ಥಾನಕ್ಕೆ ಬಂದಿದ್ದಾನೆ. ಇಲ್ಲಿಯವರೆಗೆ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಗುರು ಒಂಬತ್ತನೇ ಮನೆಗೆ ಪ್ರವೇಶ ಮಾಡಿರುವುದರಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಅನೇಕ ಅವಕಾಶಗಳು ನಿಮ್ಮ ಮುಂದೆ ಬರುತ್ತದೆ. ನಿಂತು ಹೋಗಿದ್ದ ಕೆಲಸಗಳೆಲ್ಲ ಚಕಚಕನೆ ಮುಂದುವರೆಯುತ್ತದೆ. ವೃತ್ತಿಯಲ್ಲಿ ಮಹತ್ತರ ಬದಲಾವಣೆ ಇದೆ. ಪದವಿ ಬಡ್ತಿ ಅಧಿಕಾರ ಪ್ರಾಪ್ತಿ ಇದೆ. ಬಹಳ ದಿನಗಳಿಂದ ಕಂಗೆಸುತ್ತಿದ್ದ ಸಮಸ್ಯೆಗಳು ಈಗ ಪರಿಹಾರ ಕಾಣುತ್ತದೆ. ಶನಿ ಕೂಡ ಪಂಚಮದಿಂದ ಷಷ್ಠಕ್ಕೆ ಬಂದಿದ್ದಾನೆ. ಆರನೇ ಮನೆಯ ಶನಿ ಬಹಳ ಉಪಕಾರಿ. ಹಣಕಾಸು ಸ್ಥಿತಿ ಸುಗಮವಾಗುತ್ತದೆ. ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ಸಹಾ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಎಲ್ಲ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶ ಇದೆ. ವಿದೇಶಪ್ರವಾಸ/ಪ್ರಯಾಣಕ್ಕೆ ಅನುಕೂಲಗಳು ಒಅದಗಿ ಬರುತ್ತವೆ.
ವೃಶ್ಚಿಕರಾಶಿ
ಗುರು ಎಂಟನೇ ಮನೆಗೆ ಬಂದಿದ್ದಾನೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸಗಳು ಕಾಣಬಹುದು. ಪಂಚಮ ಶನಿ ಪ್ರಾರಂಭವಾಗಿದೆ. ಒತ್ತಡಗಳು ಇರುತ್ತದೆ. ನೀವು ಸರಿ ಇದ್ದರೂ ತಲೆ ತಗ್ಗಿಸುವ ಸಂದರ್ಭಗಳು ಬರಬಹುದು. ಪ್ರವಾಹಕ್ಕೆ ಎದುರಾಗಿ ಈಜುವ ಪರಿಸ್ಥಿತಿ ನಿರ್ಮಾಣವಾಗಬಹುದು. ಯಾವ ಬಲವಾದ ಗ್ರಹಬಲವೂ ಈಗ ನಿಮಗೆ ಕಾಣುತ್ತಿಲ್ಲ. ಹಣಕಾಸಿನ ಸ್ಥಿತಿ ಕೊಂಚ ಇಳಿಯಬಹುದು. ನಿಮ್ಮ ಯೋಜನೆಗಳು ನಿಮ್ಮ ಅನಿಸಿಕೆಯಂತೆ ನಡೆಯದೆ ಇರಬಹುದು. ವಿಳಂಬವಾಗಬಹುದು. ಈಗ ಐದನೇ ಮನೆಯಲ್ಲಿ ಶುಕ್ರ ಇರುವುದರಿಂದ ನಿಮಗೆ ತಕ್ಕಮಟ್ಟಿನ ಬಲ ನೀಡುತ್ತದೆ. ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳಿದ್ದರೂ ಸಾಗುತ್ತಿದ್ದೀರಿ. ಕಾರ್ಯಕ್ಷೇತ್ರದಲ್ಲಿ ನಿಧಾನ ಪ್ರಗತಿ. ಒಳ್ಳೆಯ ಅವಕಾಶಗಳು ಮುಂದೆ ಮುಂದೆ ಹೋಗುತ್ತವೆ. ಕೈಗೆ ಸಿಕ್ಕಿದರೂ ಸಿಗದಂತೆ ತಪ್ಪಿಸಿಕೊಳ್ಳುತ್ತದೆ. ನಮಗೆ ಕಾಣದಂತೆ ಎಲ್ಲೋ ಹೊಡೆತ ಬೀಳುತ್ತದೆ. ಸಂಬಂಧಗಳಲ್ಲಿ ಕಿರಿಕಿರಿ ಶುರುವಾಗಬಹುದು. ಸಾಕಷ್ಟು ಖರ್ಚುಗಳು ಇವೆ. ಶನಿ ಸವಾಲುಗಳನ್ನು ಕೊಡುತ್ತಾನೆ, ಹನುಮಾನ್ ಚಾಲೀಸ ಪಠಿಸಿ.
ಧನಸ್ಸುರಾಶಿ
ಈಗ ನಿಮಗೆ ಮೂರನೇ ಮನೆಯಲ್ಲಿ ರಾಹು ಹಾಗೂ ನಾಲ್ಕನೇ ಮನೆಯಲ್ಲಿ ಶನಿ ಪ್ರವೇಶವಾಗಿದ್ದಾರೆ. ಗುರು ಏಳನೇ ಮನೆಯಲ್ಲಿ ಇದ್ದಾನೆ. ಸಂಪೂರ್ಣ ಗುರುಬಲ ಇದೆ. ಈಗ ಪರಿಸ್ಥಿತಿ ನಿಮ್ಮ ಹಿಡಿತಕ್ಕೆ ಬರುತ್ತಿದೆ. ಆರೋಗ್ಯದಲ್ಲಿ ಹಾಗೂ ಆರ್ಥಿಕತೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದೀರಿ. ಮಾನಸಿಕ ಕ್ಲೇಶ ಅನುಭವಿಸಿದ್ದೀರಿ. ಈಗ ಅದಕ್ಕೆಲ್ಲ ಒಂದು ಸರಳ ಪರಿಹಾರ ಗೋಚರಿಸುತ್ತದೆ. ನೀವು ಯಾವುದನ್ನು ಬೆಟ್ಟದ ಹಾಗಿರುವ ಕಷ್ಟ ಎಂದು ತಿಳಿದಿದ್ದೀರೋ ಅದು ಹತ್ತಿಯಂತೆ ಹಗುರವಾಗಿ ಹಾರಿಹೋಗುತ್ತದೆ. ರಾಹು ಕೂಡ ಮೂರನೇ ಮನೆಗೆ ಪ್ರವೇಶವಾಗಿ ನಿಮ್ಮನ್ನು ಬಲಪಡಿಸುತ್ತಾನೆ. ಹಣಕಾಸಿನ ಸ್ಥಿತಿ ಸುಗಮವಾಗುತ್ತದೆ. ಹಾಗೂ ಧೈರ್ಯ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಸಂಗಾತಿಯಿಂದ ಸಹಾಯ ಬೆಂಬಲ ಪಡೆಯುತ್ತೀರಿ. ವಿದೇಶ ಯಾತ್ರೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ. ಕೋರ್ಟು ವ್ಯಾಜ್ಯಗಳಲ್ಲಿ ಜಯ ಸಿಗುತ್ತದೆ. ಪರಿಸಿತಿಗಳು ನಿಮಗೆ ಅನುಕಲೂಲವಾಗಿ ಪರಿಣಮಿಸುತ್ತದೆ.
ಮಕರರಾಶಿ
ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಒಂದು ಮಹತ್ತರ ಬದಲಾವಣೆಯನ್ನು ತರುತ್ತದೆ. ಇದುವರೆಗೂ ಇದ್ದ ಸಾಡೆಸಾತಿ ಪ್ರಭಾವದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಕಾಲ ಬಂದಿದೆ. ಕೀರ್ತಿ ಯಶಸ್ಸು ನಿಮ್ಮ ಹೆಗಲೇರಲಿದೆ. ಹಣಕಾಸಿನ ಸ್ಥಿತಿ ಸುಗಮವಾಗಲಿದೆ. ನಿಮ್ಮ ವಿರೋಧಿಗಳು ಕೂಡ ಈಗ ಸ್ನೇಹಹಸ್ತ ಚಾಚುತ್ತಾರೆ. ಅಪರಿಚಿತರು ಸಹ ಸಹಾಯ ಮಾಡುವ ಕಾಲ. ದೇವರ ಅನುಗ್ರಹ ದೊರೆತು ಎಲ್ಲ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ಶನಿಯ ಬಲ ಸಂಪೂರ್ಣವಾಗಿ ಇದ್ದರೂ ಈಗ ನಿಮಗೆ ಗುರುಬಲ ಇಲ್ಲ. ಹೊಸ ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುಬಲ ಇಲ್ಲದೆ ನಿಧಾನವಾಗುತ್ತದೆ. ಆರೋಗ್ಯ ಜೋಪಾನ. ಎರಡನೇ ಮನೆಗೆ ರಾಹು ಬಂದಿರುವುದರಿಂದ ಹಣಕಾಸು ಸ್ಥಿತಿ ಉತ್ತಮಗೊಳ್ಳಲಿದೆ.
ಕುಂಭರಾಶಿ
ಸಾಡೆಸಾತಿಯ ಕೊನೆಯ ಹಂತದಲ್ಲಿ ಇದ್ದೀರಿ. ಈಗ ಅಷ್ಟೇನೂ ನಿಮಗೆ ತ್ರಾಸದಾಯಕವಲ್ಲ ಆದರೂ ತಕ್ಕಮಟ್ಟಿನ ಎಚ್ಚರಿಕೆಯಲ್ಲಿ ಇರಿ. ಗುರುವಿನ ಐದನೇ ಮನೆ ಪ್ರವೇಶ ವೈಯುಕ್ತಿಕ ಬೆಳವಣಿಗೆಗೆ ಸಹಾಯವಾಗಲಿದೆ. ಇದುವರೆಗೂ ಚತುರ್ಥದ ಗುರುವಿನಿಂದ ವಿನಾಕಾರಣ ನೋವು ಅಪಮಾನಗಳನ್ನುಅನುಭವಿಸಿದ್ದೀರಿ. ಯಾವ ಕೆಲಸಕ್ಕೆ ಕೈಹಾಕಿದರೂ ನಿಂತಲ್ಲೇ ನಿಲ್ಲುತ್ತಿತ್ತು. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳಿಂದ ನೊಂದಿದ್ದೀರಿ. ಈಗ ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶ ಮಾಡಿದ್ದಾನೆ. ಸಂಪೂರ್ಣ ಗುರುಬಲ ಇದೇ ಕಾರಣದಿಂದ ಅನೇಕ ಶುಭಫಲಗಳು ದೊರೆಯಲಿದೆ. ಒತ್ತಡಗಳಿಂದ ದೂರವಾಗುತ್ತೀರಿ. ಕತ್ತಿನ ಮೇಲೆ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಎರಡನೇ ಮನೆಯಲ್ಲಿ ಶುಕ್ರ, ಮೂರನೇ ಮನೆಯಲ್ಲಿ ಬುಧ ಸಹ ಶುಭಫಲಗಳನ್ನು ಕೊಡುತ್ತಾರೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಕೊಂಚ ಕಿರಿಕಿರಿ ಇದೆ.
ಮೀನರಾಶಿ
ಈಗ ಸಾಡೆಸಾತಿಯ ಎರಡನೇ ಭಾಗದಲ್ಲಿ ಇದ್ದೀರಿ. ಹಾಗಾಗಿ ಹೆಚ್ಚಿಗೆ ಏನೂ ನಿರೀಕ್ಷೆ ಇಲ್ಲ. ಇದ್ದಂತೆ ನಡೆದುಕೊಂಡು ಹೋದರೆ ಅದೇ ಅದೃಷ್ಟ. ಆದರೆ ಕೇತು ಆರನೇ ಮನೆಗೆ ಪ್ರವೇಶವಾಗಿದ್ದಾನೆ. ಇದು ನಿಮಗೆ ಆರೋಗ್ಯದಲ್ಲಿ ಚೇತರಿಕೆ ಕೊಡುತ್ತದೆ. ಹಣಕಾಸು ಸ್ಥಿತಿ ಸುಧಾರಿಸುತ್ತದೆ. ರಾಹು ಕೂಡ ಕುಂಭರಾಶಿಗೆ ಪ್ರವೇಶ ಮಾಡಿದ್ದಾನೆ. ಆರೋಗ್ಯ ಉತ್ತಮಗೊಳ್ಳುತ್ತದೆ. ವೈರಲ್ ಇನಫೆಕ್ಷನ್, ಉಸಿರಾಟದ ತೊಂದರೆ ಅಲರ್ಜಿ ಇವೆಲ್ಲ ನಿವಾರಣೆ ಆಗುತ್ತದೆ. ಈ ತಿಂಗಳು ಶುಕ್ರ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಹಾಗೂ ಬುಧ ಎರಡನೇ ಮನೆಯಲ್ಲಿ ಇದ್ದಾನೆ. ಹಾಗಾಗಿ ಕೆಲವು ಶುಭಸಂಗತಿಗಳು ನಿಮಗೆ ಸಂತೋಷ ಕೊಡುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಶುಕ್ರ ನಿಮ್ಮನ್ನು ಕಾಪಾಡುತ್ತಾನೆ ಗುರು ಈಗ ನಾಲ್ಕನೇ ಮನೆಗೆ ಪ್ರವೇಶ ಮಾಡಿರುವುದರಿಂದ ಕೊಂಚ ಒತ್ತಡದ ಜೀವನ. ಕೌಟುಂಬಿಕ ನಿರ್ವಹಣೆ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ಏನೇ ಆದರೂ ಯಾವುದೇ ಕೆಲಸ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ. ಸಹನೆ ಸಮಾಧಾನ ನಿಮ್ಮ ಮಂತ್ರವಾಗಿರಲಿ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು












Click it and Unblock the Notifications