ಕರ್ಕ : ಉತ್ತಮ ಫಲಿತಾಂಶಗಳು ಲಭಿಸಲಿವೆ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳು ನಿಮಗೆ ಉತ್ತಮ ಫಲಿತಾಂಶಗಳು ಲಭಿಸಲಿವೆ. ವೃತ್ತಿಪರವಾಗಿ ನೋಡಿದಾಗ ಉತ್ತಮ ಸಮಯ ಕಾಣಿಸುತ್ತಿದೆ. ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳಿಂದ ಸಹಕಾರ ಲಭಿಸಲಿದೆ. ಉದ್ಯೋಗ ನಿಮಿತ್ತ ಪರದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಅಲ್ಲಿ ಉತ್ತಮ ಸ್ಥಾನಮಾನ, ಇನ್ನೂ ಹೆಚ್ಚಿನ ಅಧಿಕಾರ ಯೋಗ ಸಿಗುತ್ತದೆ.

ಸಾಮಾನ್ಯವಾಗಿಯೇ ಈ ತಿಂಗಳು ನಿಮಗೆ ಪ್ರಯಾಣಗಳು ಹೆಚ್ಚು ಇವೆ. ಅನ್ಯರೊಡನೆ ಮಾತನಾಡುವಾಗ ಎಚ್ಚರ ಇರಲಿ. ನಿಮ್ಮನ್ನು ಅವರು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ತಿಂಗಳ ಮಧ್ಯಭಾಗ ದಾಟುತ್ತಿದ್ದಂತೆ ಕೆಲಸದ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಆದರೆ ಆರ್ಥಿಕವಾಗಿ ನೋಡಿದಾಗ ಈ ತಿಂಗಳು ಪೂರ್ಣವಾಗಿ ಅತ್ಯುತ್ತಮವಾಗಿದೆ.

Cancer monthly horoscope in Kannada for July 2017

ಹಣದ ಒಳಹರಿವು ಉತ್ತಮವಾಗಿದ್ದು, ಅನಿರೀಕ್ಷಿತ ಧನಲಾಭ ಸಹ ಕಾಣಿಸುತ್ತಿದೆ. ದುಡ್ಡು ಉತ್ತಮವಾಗಿ ಬರುತ್ತಿರುವುದರಿಂದ ಖರ್ಚುಗಳನ್ನೂ ಹೆಚ್ಚು ಮಾಡುತ್ತೀರಿ. ಅದರಲ್ಲಿಯೂ ಐಷಾರಾಮಿ ಜೀವನ ಅರಿವಿಲ್ಲದಂತೆ ರೂಢಿ ಆಗಿಬಿಡುತ್ತದೆ. ಆದರೆ ಆ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿದಲ್ಲಿ ಮಾತ್ರ ಅತ್ಯುತ್ತಮ.

ಸ್ತ್ರೀಯರು: ಆರೋಗ್ಯ ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಹೊಸ ಪ್ರಯೋಗಗಳನ್ನು ನಿಮ್ಮ ತ್ವಚೆಯ ಮೇಲೆ ಮಾಡಲು ಹೋಗಿ, ಇಲ್ಲದ ಚರ್ಮ ವ್ಯಾಧಿ ತಂದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ ಸಹ ಆಗಬಹುದು, ಎಚ್ಚರ. ಬಾಳಸಂಗಾತಿ ಜೊತೆ ಹಲವು ಕಾರ್ಯಕ್ರಮಗಳಿಗೆ ಹೋಗಬಹುದು ಹಾಗೂ ಅವರ ಕಡೆಯಿಂದ ಉಡುಗೊರೆ ಸಹ ಸಿಗಲಿದೆ.

ಕೌಟುಂಬಿಕವಾಗಿ ಉತ್ತಮವಾಗಿ ಕಾಣುತ್ತಿದೆ. ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಾ ಇದ್ದೀರಿ ಎಂದಾದಲ್ಲಿ ಉತ್ತಮ ಲಾಭ ಇದೆ. ಮನೆಯಲ್ಲಿ ಗೊತ್ತಿಲ್ಲದೆ ಕೊಟ್ಟ ಸಾಲ ಹಿಂತಿರುಗಿ ಬರುತ್ತದೆ.

ವಿದ್ಯಾರ್ಥಿಗಳು: ನಿಮಗಿದು ಅತ್ಯುತ್ತಮ ಸಮಯ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಶಾಲಾ- ಕಾಲೇಜು ಪರಿಸರದಲ್ಲಿ ಎಲ್ಲರೂ ಗುರುತಿಸುವಂತೆ ಆಗುತ್ತದೆ.

Karkataka ( Cancer ) Rashi : People Who Belongs To This Sign Are Lucky |Watch video|Oneindia Kannada

ಪರಿಹಾರ: ಈ ತಿಂಗಳಿನಲ್ಲಿ ಕಷ್ಟ ಆದರೂ ಹೇಗಾದರೂ ಒಮ್ಮೆ ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಮಾಡಿ ಬನ್ನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Get the complete month predictions of September 2017. Read monthly horoscope of Gemini in Kannada. Get free monthly horoscope, astrology and monthly predictions in Kannada.
Please Wait while comments are loading...