ಕುಂಭ : ಸಂಕಲ್ಪಕ್ಕೆ ಅಡ್ಡಿ- ಆತಂಕ
ಪುರುಷರು: ನಿಮಗೆ ಬರಬೇಕಾದ ಹಣದ ಬಾಕಿ ಇದ್ದರೆ ಅದನ್ನು ಹಿಂತಿರುಗಿ ಪಡೆಯಲು ಹೋಗಲೂ ಸಮಯದ ಅಭಾವ ಇದ್ದಲ್ಲಿ ಈಗ ಅವುಗಳನ್ನು ವಸೂಲಿ ಮಾಡಲು ಬೇಕಾದಷ್ಟು ಸಮಯ ಲಭಿಸುತ್ತದೆ. ಸಮಯವನ್ನು ಸರಿಯಾಗಿ ಹಾಗೂ ಉತ್ತಮ ವಿಧಾನದಲ್ಲಿ ಬಳಸುವುದನ್ನು ನೀವು ಮೊದಲು ಕಲಿಯಲೇಬೇಕು.
ಕೇವಲ ಆಲಸ್ಯದಿಂದ ಬಹಳ ಸಮಯವನ್ನು ವ್ಯರ್ಥ ಮಾಡುತ್ತೀರಿ. ಅದನ್ನು ಸ್ವಯಂಪ್ರೇರಿತವಾಗಿ ನೀವೇ ಕಂಡುಹಿಡಿದು ಬಿಡಬೇಕು. ದೊಡ್ಡದೊಂದು ಕಾರ್ಯ ಮಾಡಬೇಕೆಂದು ಸಂಕಲ್ಪ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ಆ ನಿಮ್ಮ ಸಂಕಲ್ಪಕ್ಕೆ ಅಡ್ಡಿ- ಆತಂಕಗಳು ಬಹಳ ಕಾಣಿಸುತ್ತಿವೆ.

ಆ ಎಲ್ಲ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಕಾರ್ಯ ಸಾಧನೆ ಮಾಡಬೇಕು. ತೈಲ ಹಾಗೂ ಔಷಧ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಆಗಿ ಲಾಭ ಬರುವಂತೆ ಕಾಣಿಸುತ್ತಿದೆ. ವಿದೇಶ ಪ್ರಯಾಣದ ಆಸೆಗಳಿದ್ದಲ್ಲಿ ಸ್ವಲ್ಪ ಕಷ್ಟ ಆಗಬಹುದು. ಹೊಸ ವಾಹನ ಖರೀದಿ ಆಲೋಚನೆಗಳಿದ್ದಲ್ಲಿ ಸಂತೋಷವಾಗಿ ಖರೀದಿಸಿ, ಸಮಸ್ಯೆ ಇಲ್ಲ.
ಸ್ತ್ರೀಯರು: ಸಿಕ್ಕಿ ಬೀಳುವ ಅವಕಾಶ ಇಲ್ಲದಿದ್ದರೂ ಯಾವುದೇ ವಿಧದ ದುರಭ್ಯಾಸಗಳಿದ್ದಲ್ಲಿ ಅದನ್ನು ಬಿಟ್ಟು ಬಿಡಿ. ಏಕೆಂದರೆ, ಅವುಗಳನ್ನೆಲ್ಲ ಬಿಟ್ಟು ಉತ್ತಮ ಜೀವನ ನಿರ್ವಹನೆ ಮಾಡಲು ಸುಸಮಯ. ವಿವಾಹ ವಿಚಾರದಲ್ಲಿ ಸಮಸ್ಯೆ ಆಗಬಹುದು. ನಿಶ್ಚಿತ ವಿವಾಹ ಸಹ ವಿಘ್ನಗಳಿಗೆ ಬಲಿ ಆದಲ್ಲಿ ಆಶ್ಚರ್ಯವಿಲ್ಲ!
ಸ್ನೇಹಿತೆ ಸಾಲ ಕೇಳುತ್ತಾಳೆ ಎಂದು ಅವಳ ಅವಶ್ಯಕತೆ ಪರೀಕ್ಷಿಸದೆ ಸಾಲ ಕೊಟ್ಟಲ್ಲಿ ಆ ದುಡ್ಡಿನ ಆಸೆ ಬಿಡಿ. ಉದ್ಯೋಗ ಹುಡುಕುತ್ತಾ ಇದ್ದಲ್ಲಿ ಈ ತಿಂಗಳ ಆದಿ ಅಥವಾ ಮಧ್ಯದೊಳಗೆ ಕೆಲಸ ಗಿಟ್ಟಿಸಿಕೊಳ್ಳಿ.
ವಿದ್ಯಾರ್ಥಿಗಳು: ನಿಮ್ಮಲ್ಲಿ ಅದ್ಭುತ ಪ್ರತಿಭೆಯಿದೆ, ಅದನ್ನು ಗುರುತಿಸಬೇಕಷ್ಟೆ. ನಿಮ್ಮ ನೆನಪಿನ ಶಕ್ತಿ ಉತ್ತಮವಾಗುತ್ತದೆ. ನಿಮ್ಮ ಸ್ವಾಭಾವಿಕ ಮರೆಗುಳಿತನ ಸ್ವಲ್ಪ ಕಡಿಮೆ ಆದಂತೆ ಭಾಸವಾಗುತ್ತದೆ. ನಿಮ್ಮಲ್ಲಿಯ ಈ ಬದಲಾವಣೆ ಪೋಷಕರ ಗಮನಕ್ಕೂ ಬರುವ ಸಾಧ್ಯತೆಗಳಿವೆ.
ಪರಿಹಾರ: ಈ ತಿಂಗಳಿನಲ್ಲಿ ಒಮ್ಮೆ ತಿರುಪತಿ ತಿರುಮಲ ವೇಂಕಟೇಶ್ವರ ದರ್ಶನ ಮಾಡಿ ಬಂದರೆ ಉತ್ತಮ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications