Get Updates
Get notified of breaking news, exclusive insights, and must-see stories!

ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಎಂಥ ಜೋಡಿ?

ಯೌವನದ ಹೊಸ್ತಿಲು ಎಂದರೆ ಅದು ಆಕರ್ಷಣೆಯ ಮುಗಿಲು. ಆ ಸಮಯದಲ್ಲಿ ಈ ಪ್ರೀತಿ ಪ್ರೇಮದ ಪಾಶದಲ್ಲಿ ಸಿಲುಕದವರು ತೀರಾ ವಿರಳ. ವಿಜ್ಞಾನವು ಅದನ್ನು ವಯಸ್ಸಿನ ಸ್ವಾಭಾವಿಕತೆ ಎಂದು ಸಾರಿದರೂ ಜ್ಯೋತಿರ್ವಿಜ್ಞಾನ ಬೇರೆಯದೇ ಕಥೆ ಹೇಳುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಚಾರದಲ್ಲಿ ವಿಭಿನ್ನತೆ ಇದೆ, ನಿಗೂಢತೆ ಇದೆ ಹಾಗೂ ನಿಮ್ಮ ಹಣೆ ಬರಹ ಇದೆ. ಗ್ರಹಗಳ ಚಲನೆ ಹಾಗೂ ಜನ್ಮ ಜಾತಕದಲ್ಲಿ ಗ್ರಹಗಳ ಸ್ಥಿತಿ ಪ್ರಸಕ್ತ ಇರುವ ಗ್ರಹಗಳ ದಶೆಯು ಈ ಪ್ರೀತಿ ಪ್ರೇಮ ವಿಚಾರದಲ್ಲಿ ನಿಮ್ಮ ಸ್ಥಿತಿಗತಿಗಳನ್ನು ವಿವರಿಸುತ್ತದೆ.

ಈ ಪ್ರೀತಿ- ಪ್ರೇಮ ಎಂದಾಗ ನವಗ್ರಹಗಳಲ್ಲಿ ಶುಕ್ರ ಬಹಳ ಪ್ರಧಾನವಾದ ಪಾತ್ರ ವಹಿಸುತ್ತಾನೆ. ನಿಮ್ಮ ಜಾತಕದಲ್ಲಿ ಶುಕ್ರ ಗ್ರಹದ ಸ್ಥಿತಿ, ಶುಕ್ರ ದಶೆ ಅಥವಾ ನಿಮ್ಮ ಜನ್ಮ ರಾಶಿ, ಜನ್ಮ ಲಗ್ನದ ಮೇಲೆ ಶುಕ್ರನ ದೃಷ್ಟಿಯು ಪ್ರೀತಿ-ಪ್ರೇಮದ ವರ್ತಮಾನ ಹಾಗೂ ಭವಿಷ್ಯವನ್ನು ಸೂಚಿಸುತ್ತದೆ.

ಶುಕ್ರ ದಶೆ ಬೇಕೆಂದು ಎಲ್ಲರೂ ಆಸೆ ಪಟ್ಟರೂ ಇದೇ ಕಾರಣದಿಂದಾಗಿ ವಿದ್ಯಾರ್ಥಿ ಜೀವನದಲ್ಲಿ ಶುಕ್ರನ ಆಗಮನ ಆಗಬಾರದು ಎಂದು ನಾನು ಹಿಂದೆ ಹಲವು ನನ್ನ ಲೇಖನಗಳಲ್ಲಿ ತಿಳಿಸಿದ್ದೆ. ನೀವು ಯೌವನದಲ್ಲಿ ಇದ್ದು, ಜನ್ಮ ಲಗ್ನ ಅಥವಾ ರಾಶಿಯಿಂದ ಏಳನೇ ಮನೆಯಲ್ಲಿ ಶುಕ್ರ ಇದ್ದರೆ ಪ್ರೀತಿ-ಪ್ರೇಮ ಇತ್ಯಾದಿಗಳಲ್ಲಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಆ ಪ್ರೀತಿಯು ವಿವಾಹದ ತನಕ ಬರುವ ಸಾಧ್ಯತೆಗಳು ಕಡಿಮೆ.

ದ್ವಾದಶ ರಾಶಿಗಳ ಮೇಲೆ ಪ್ರೀತಿ ವಿಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಮೇಷ

ಮೇಷ

ನೀವು ಕಠೋರ ಹೃದಯಿ ಆಗಿದ್ದರೂ ನೀವು ಪ್ರೀತಿಸುವವರು ಅಥವಾ ನಿಮ್ಮನ್ನು ಪ್ರೀತಿಸುವರು ಹಾಗೆ ಇರುವುದಿಲ್ಲ. ಅವರು ಬಹಳ ಲೆಕ್ಕಾಚಾರದ ವ್ಯಕ್ತಿ ಆಗಿರುತ್ತಾರೆ. ನಿಮ್ಮ ಮೇಲೆ ಖರ್ಚು ಮಾಡಿದ್ದು ಇರಲಿ, ತಮಗೆ ಖರ್ಚು ಮಾಡಿಕೊಂಡಿದ್ದರ ಲಾಭ ಎಷ್ಟು ಬಂದಿದೆ ಎಂದು ಲೆಕ್ಕ ಹಾಕಿ ನೋಡಿಕೊಳ್ಳುತ್ತ ಕುಳಿತಿರುತ್ತಾರೆ. ನಿಮ್ಮೊಂದಿಗೆ ಬಾಳ್ವೆ ಮಾಡಲು ಅವರಿಂದ ಮಾತ್ರ ಸಾಧ್ಯ.

ವೃಷಭ

ವೃಷಭ

ಈ ರಾಶಿಯ ಹುಡುಗ ಅಥವಾ ಹುಡುಗಿ ಇತರರನ್ನು ಪ್ರೀತಿ ಮಾಡುವದಕ್ಕಿಂತ ಇವರನ್ನು ಪ್ರೀತಿಸುವವರು ಹೆಚ್ಚು ಇರುತ್ತಾರೆ. ಕೆಲವೊಮ್ಮೆ ಪರಿಸ್ಥಿತಿ ಹೇಗೆ ಇರುತ್ತದೆ ಅಂದರೆ, ವೃಷಭ ರಾಶಿಯ ಹುಡುಗಿಗೆ ಅವಳನ್ನು ಪ್ರೀತಿಸುವ ಹುಡುಗರ ಸಂಖ್ಯೆ ಉಹಿಸಲೂ ಸಾಧ್ಯವಿಲ್ಲ! ಆದರೆ ಕೊನೆಯದಾಗಿ ಅವರು ಮದುವೆ ಆಗುವ ಹುಡುಗ ಮಾತ್ರ ಚಲನಚಿತ್ರ, ಕಲೆ, ಸಂಗೀತ ಇತ್ಯಾದಿ ಯಾವುದೇ ಮನರಂಜನೆಗಳಲ್ಲಿ ಆಸಕ್ತಿ ಇಲ್ಲದವನೇ ಆಗಿರುತ್ತಾನೆ. ಜತೆಗೆ ಜಾಸ್ತಿ ಸಿಟ್ಟು ಮಾಡುವ ಬಾಳಸಂಗಾತಿ ಸಿಗುತ್ತಾರೆ ಎಂಬುದೇ ಬೇಸರದ ಸಂಗತಿ.

ಮಿಥುನ ರಾಶಿ

ಮಿಥುನ ರಾಶಿ

ನಿಮ್ಮಂಥ ಪ್ರೇಯಸಿ ಅಥವಾ ಪ್ರಿಯತಮ ಲಭಿಸುವ ವಿಚಾರದಲ್ಲಿ ಅದೃಷ್ಟ ಇರಬೇಕು. ಏಕೆಂದರೆ ನೀವು ವಿಷಯ, ವ್ಯಕ್ತಿ ಅಥವಾ ವಸ್ತುಗಳಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು. ಆದುದರಿಂದ ನಿಮ್ಮಿಂದ ಪ್ರೀತಿಯನ್ನು ದೀರ್ಘ ಅವಧಿಗೆ ಬಯಸುವವರು ಬಹಳ ಅದೃಷ್ಟ ಮಾಡಿರಬೇಕು. ಇಲ್ಲದಿದ್ದರೆ ನೀವು ಯಾವುದನ್ನೂ, ಯಾರ ಪ್ರೀತಿಯನ್ನೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.

ಕರ್ಕ

ಕರ್ಕ

ನಿಮ್ಮ ಸಿಟ್ಟನ್ನು ತಾಳಿಕೊಂಡು, ಹೊಗಳುತ್ತ, ನಿಮ್ಮ ಜೀವನ ಪದ್ಧತಿಯನ್ನು ಅನುಸರಿಸಿದರೆ ನಿಮ್ಮ ಪ್ರೀತಿಸುವವರು ಗೆದ್ದಂತೆಯೇ. ನೀವು ಸುಖ ಇದ್ದರೂ (ಜಿಪುಣತನ ಅಲ್ಲದೇ) ಅನುಕೂಲ ಇದ್ದರೂ ಅಥವಾ ಸೌಕರ್ಯ ಮಾಡಿಕೊಳ್ಳುವ ಅವಕಾಶ ಇದ್ದರೂ ಬೇಕು ಎಂದು ಕೆಲ ಕಠಿಣ ಪರಿಸ್ಥಿತಿಗಳನ್ನು ಅಳವಡಿಸಿಕೊಳ್ಳುತ್ತೀರಿ. ಅದನ್ನು ನಿಮ್ಮನ್ನು ಪ್ರೀತಿ ಮಾಡುವವರು ಅನುಸರಿಸಿದರೆ ಉತ್ತಮ. ಆದರೆ ನಿಮಗೆ ಬಾಳಸಂಗಾತಿಯಾಗಿ ಲಭಿಸುವವರು ಆಲಸಿ ಆಗಿರುತ್ತಾರೆ.

ಸಿಂಹ

ಸಿಂಹ

ನೀವು ಹೆಚ್ಚಿನ ಪಕ್ಷದಲ್ಲಿ ಶಿಸ್ತಿನ ಸಿಪಾಯಿ. ಯಾವುದು ಹೇಗೆ ಇರಬೇಕೋ ಹಾಗೆಯೇ ಇರಬೇಕು ಎಂದು ಬಯಸುತ್ತೀರಿ. ನಿಮ್ಮ ಪ್ರೀತಿಸುವವರು ಅಥವಾ ನೀವು ಪ್ರೀತಿಸುವವರು ಅದಕ್ಕೆ ತದ್ವಿರುದ್ಧವಾಗಿ ಇರುವುದು ನಿಮ್ಮ ಹಣೆ ಬರಹ. ನಿಮ್ಮ ಕಠಿಣ ನಿರ್ಧಾರಗಳನ್ನು, ಉಗ್ರ ಸ್ವಭಾವವನ್ನು ಅದೇ ವಿಧದಲ್ಲಿ ಪ್ರಣಯವನ್ನು ಎಲ್ಲವನ್ನೂ ಸರಿದೂಗಿಸಿ ಹೋಗುವ ಬಾಳ ಸಂಗಾತಿಯ ಅವಶ್ಯ ಇರುತ್ತದೆ.

ಕನ್ಯಾ

ಕನ್ಯಾ

ನಿಮ್ಮ ಅತಿಯಾದ ಬುದ್ಧಿವಂತಿಕೆ, ಸಮಾಜದಲ್ಲಿ ದೊಡ್ಡ ಸ್ಥಾನಮಾನದಿಂದ ಬಂದ ಅಹಂಕಾರವನ್ನು, ಎಲುಬಿಲ್ಲದ ನಾಲಗೆಯ ಚಪಲವನ್ನು ಉತ್ತಮ ಸಂಸ್ಕಾರಗಳಿಂದ ಅಲ್ಲಲ್ಲಿ ತಿದ್ದುತ್ತ, ನೀವು ಪ್ರತಿ ದಿನ ಮಾಡುವ ಎಡವಟ್ಟುಗಳನ್ನು ಸಹಿಸಿಕೊಳ್ಳುತ್ತಾ ಸಾಗುವ ಪ್ರೇಮಿ ನಿಮಗೆ ಅವಶ್ಯ ಇರುತ್ತದೆ. ಇಲ್ಲಿ ಕೆಲಸ ಮಾಡುವ ವಿಚಾರ ಎಂದರೆ ನೀವು ಏನನ್ನೂ ಮುಚ್ಚಿಡದೆ ಎಲ್ಲ ವಿಚಾರವನ್ನೂ ಬಿಡಿಸಿ ಕಾಲಕಾಲಕ್ಕೆ ತಿಳಿಸಿ ಹೇಳಿಬಿಡುತ್ತೀರಿ. ಇದರಿಂದ ಮನಸ್ತಾಪಗಳು ಕಡಿಮೆ.

ತುಲಾ

ತುಲಾ

ನಿಮ್ಮ ಅತಿಯಾದ ವಾಸ್ತವ ಮನಸ್ತತ್ವವನ್ನು, ಪ್ರತಿಯೊಂದು ವಿಚಾರದಲ್ಲಿ ನಿಮಗಾಗುವ ಲಾಭ ಏನು ಎಂದು ಚಿಂತಿಸುವ ಬುದ್ಧಿಯನ್ನು ಹಾಗೂ ವಿಶೇಷವಾಗಿ ನೀವು ನಿಗೂಢವಾಗಿ ಯಾರಿಗೂ ತಿಳಿಸದೇ ಮಾಡುವ ಕಾರ್ಯಗಳು ತಿಳಿದರು ನಿಮ್ಮೊಂದಿಗೆ ಜಗಳ ಆಡದೇ ಹೊಂದಿಕೊಂಡು ಹೋಗುವವರು ಅವಶ್ಯ ಇದ್ದಾರೆ. ಆದರೆ ಅಂಥ ಜನ ನಿಮಗೆ ಸಿಗುವುದಿಲ್ಲ. ನಿಮ್ಮ ವೈಯಕ್ತಿಕ ರಹಸ್ಯಗಳು ಹೊರ ಬಂದ ದಿನ ಎಲ್ಲ ಮುಕ್ತಾಯ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಿಮಗೆ ಯಾವುದೂ ದೊಡ್ಡ ಸಮಸ್ಯೆ ಅಥವಾ ವಿಚಾರ ಅಲ್ಲ.

ವೃಶ್ಚಿಕ

ವೃಶ್ಚಿಕ

ಜಾಸ್ತಿ ಅಳುವುದು, ಅನಗತ್ಯ ಸಿಟ್ಟು ಹಾಗೂ ಅತ್ಯಂತ ಚಿಕ್ಕಪುಟ್ಟ ವಿಚಾರಗಳನ್ನು ಭೂತಗನ್ನಡಿಯ ದೃಷ್ಟಿಯಿಂದ ನೋಡಿ ದೊಡ್ಡದಾಗಿ ಅದನ್ನೇ ದಿನವಿಡೀ ಚಿಂತಿಸುತ್ತ ಇರುತ್ತೀರಿ. ಅದನ್ನು ಅರ್ಥ ಮಾಡಿಕೊಂಡು ಯಾವ ವಿಚಾರಗಳು ನಿಮಗೆ ಹೇಳಬೇಕು, ಯಾವುದನ್ನು ಬಿಡಬೇಕು, ನಿಮಗೆ ತಿಳಿಸುವ ವಿಚಾರಗಳೇ ಆಗಿದ್ದರೂ ಸಹ ಯಾವಾಗ, ಎಲ್ಲಿ- ಹೇಗೆ ಎನ್ನುವ ಜ್ನಾನ ಇರುವ ವ್ಯಕ್ತಿಯನ್ನು ನೀವು ಪ್ರೀತಿಸಿದರೆ ಉತ್ತಮ. ಎಲ್ಲರೂ ಆಲ್ಲದಿದ್ದರೂ ಸಾಮಾನ್ಯವಾಗಿ ನೀವು ಪ್ರೀತಿ- ಪ್ರೇಮದಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚು ಇರುತ್ತವೆ.

ಧನು

ಧನು

ನಿಮ್ಮ ಮುಗ್ಧತೆ, ಸರಳತೆ, ಸನ್ನಡತೆ ಇತ್ಯಾದಿಗಳನ್ನು ದುರುಪಯೋಗ ಪಡಿಸಿಕೊಳ್ಳದವರು ನಿಮಗೆ ಅವಶ್ಯ ಇದೆ. ನೀವು ಮಾತು ಕಡಿಮೆ, ಮೌನ ಜಾಸ್ತಿ. ನಿಮ್ಮ ಪ್ರೀತಿಸುವವರು ಮಾತು ಜಾಸ್ತಿ ಮೌನ ಕಡಿಮೆ ಎನ್ನುವವರು. ನೀವು ಮೋಸ, ಸುಳ್ಳು, ವಂಚನೆ ಇತ್ಯಾದಿಗಳನ್ನು ವಿರೋಧಿಸುವವರಾದರೆ, ನಿಮಗೆ ಸಿಗುವವರು ಕೆಲ ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು. ಚಿಕ್ಕ- ಪುಟ್ಟ ಮೋಸ ಪರವಾಗಿಲ್ಲ ಎನ್ನುತ್ತಾರೆ. ನೀವು ಪುಸ್ತಕದ ಬದನೆಕಾಯಿ ಆಗಿದ್ದರೆ, ಅವರು ಪ್ರಪಂಚವನ್ನು ಅರಿತವರಾಗಿರುತ್ತಾರೆ.

ಮಕರ

ಮಕರ

ನೀವು ಪ್ರೀತಿಸುವವರು ಪ್ರೀತಿಗೆ ಒಮ್ಮೆ ಸಮ್ಮತಿ ಕೊಟ್ಟರೆ, ಮತ್ತೆ ಬೇಡ ಎನ್ನಬಹುದು. ನಿಮ್ಮ ಗುಣವು ಪ್ರೀತಿಸುವವರಿಗೆ ಇಷ್ಟ ಆಗುವುದಿಲ್ಲ. ಕೆಲವೊಮ್ಮೆ ಅವರು ನಿಮಗೆ ಅರ್ಥವಾಗುವುದಿಲ್ಲ. ಅವರಿಗೆ ನಿಮ್ಮಲ್ಲಿ ಹೆಚ್ಚಿನ ಪೀತಿ ಬರಲೆಂದು ಕಾಯುತ್ತ ಕೂರಬೇಕಾದ ಸ್ಥಿತಿ ಬರುತ್ತದೆ. ಆ ಸ್ಥಿತಿ ತಿಂಗಳಿಗೊಮ್ಮೆ ಕೆಲ ದಿನ ಬರಬಹುದು. ಆ ದಿನಗಳೇ ನಿಮ್ಮ ಪಾಲಿನ ಸುಂದರ ದಿನಗಳು. ನಿಮ್ಮ ಪ್ರೀತಿಸುವವರು ನಿಮ್ಮೊಂದಿಗೆ ಬಹಳ ಜಗಳ ಆಡುತ್ತಾರೆ, ಸಿಟ್ಟು ಮಾಡುತ್ತಾರೆ ಎಂದು ನಿಮಗೆ ಅನಿಸುತ್ತ ಇರುತ್ತದೆ.

ಕುಂಭ

ಕುಂಭ

ನಿಮ್ಮ ಕುಟುಂಬದ ಬಹಳ ಮುದ್ದಿನ ಮಗ/ಮಗಳು ನೀವಾಗಿರುತ್ತೀರಿ. ಸ್ವಾಭಾವಿಕವಾಗಿಯೇ ನೀವು ಆಲಸಿ. ಆದರೆ ನಿಮ್ಮ ಪ್ರೀತಿಸುವವರು ಶಿಸ್ತಿನ ಸಿಪಾಯಿ ಆಗಿರುತ್ತಾರೆ. ನೀವು ವಹಿಸಿದ ಕೆಲಸಗಳನ್ನು ನಿಧಾನವಾಗಿ ಮಾಡುತ್ತೀರಿ. ಆದರೆ ಹೆಚ್ಚಿನ ಚುರುಕುತನವನ್ನು ನಿಮ್ಮ ಪ್ರೀತಿಸುವವರು ಬಯಸುತ್ತಾರೆ. ಪ್ರೀತಿ- ಪ್ರೇಮ ತನಕ ಸರಿ. ಆದರೆ ಪ್ರಣಯದ ವಿಚಾರದಲ್ಲಿ ನೀವು ಸ್ವಲ್ಪ ದುರದೃಷ್ಟವಂತರು. ನಿಮಗೆ ಅದು ಹೆಚ್ಚು ಸಿಗುವುದಿಲ. ಒಂದೇ ನೀವೇ ಬೇಡ ಎನ್ನುತ್ತೀರಿ, ಇಲ್ಲ ಅವರೇ ಆಗಲ್ಲ ಎಂದು ಹೇಳುತ್ತಾರೆ.

ಮೀನ

ಮೀನ

ನಿಮ್ಮ ಜೋಡಿ ವಿಚಿತ್ರ ಹಾಗೂ ವಿಶೇಷವಾಗಿ ಇರುತ್ತದೆ. ನಿಮ್ಮ ಜೋಡಿಯಲ್ಲಿ ಯಾರು ತಪ್ಪು ಮಾಡಿದವರು ಎಂದು ವಾದ ನಡೆಯುತ್ತಲೇ ಇರುತ್ತದೆ. ಬುದ್ಧಿವಂತಿಕೆಯ ಪರೀಕ್ಷೆ ನಿತ್ಯದ ದಿನಚರಿ ಮಾಡಿಕೊಂಡಿರುತ್ತೀರಿ. ನಿಮ್ಮಿಬ್ಬರನ್ನೂ ಹೊಗಳಿ ಅಟ್ಟಕ್ಕೆ ಏರಿಸಿದರೆ ನೀವು ಮಾಡಿಕೊಡದ ಕೆಲಸಗಳಿಲ್ಲ. ನಿಮ್ಮ ಹಾಗೂ ನಿಮ್ಮ ಪ್ರೀತಿಸುವವರಲ್ಲಿ ಹೆಚ್ಚಿನ ಸಾಮ್ಯತೆ ಇರುತ್ತದೆ. ವಿದ್ಯೆ ವಿಚಾರದಲ್ಲಿ ಜ್ನಾನದ ವಿಚಾರದಲ್ಲಿ ಮಾತ್ರ ನೀವು ಸ್ವಲ್ಪ ಹೆಚ್ಚಿಗೆ ತಿಳಿದಿಕೊಂಡಿರುವ ಸಾಧ್ಯತೆಗಳು ಇರುತ್ತವೆ. ಏನೇ ಇರಲಿ, ನೀವೇ ಹೆಚ್ಚು ಸತ್ಯವಂತರು.

ಯಾವ ಎರಡು ರಾಶಿಗಳವರು ಪರಸ್ಪರರು ಮದುವೆ ಆಗಬಾರದು?

ಯಾವ ಎರಡು ರಾಶಿಗಳವರು ಪರಸ್ಪರರು ಮದುವೆ ಆಗಬಾರದು?

ಮೇಷ- ಕನ್ಯಾರಾಶಿ

ವೃಷಭ- ಧನು ರಾಶಿ

ಮಿಥುನ- ವೃಶ್ಚಿಕ, ಮಕರ ರಾಶಿ

ಸಿಂಹ- ಮಕರ, ಮೀನ ರಾಶಿ

ಕನ್ಯಾ- ಕುಂಭ, ಮೇಷ ರಾಶಿ

ತುಲಾ- ಮೀನ, ವೃಷಭ ರಾಶಿ

ವೃಶ್ಚಿಕ- ಮಿಥುನ ರಾಶಿ

ಧನು- ವೃಷಭ ರಾಶಿ

ಮಕರ- ಮಿಥುನ, ಸಿಂಹ ರಾಶಿ

ಕುಂಭ- ಕರ್ಕಾಟಕ, ಕನ್ಯಾ ರಾಶಿ

ಮೀನ- ಸಿಂಹ, ತುಲಾ ರಾಶಿಯವರನ್ನು ಪ್ರೀತಿಸಿ ಮದುವೆ ಆಗುವುದು ಸರಿ ಅಲ್ಲ.

ಆ ದಾಂಪತ್ಯ ಅಷ್ಟು ಸುಂದರವಾಗಿ ಮೂಡಿ ಬರುವುದಿಲ್ಲ. ಇನ್ನು ಅನಿವಾರ್ಯ ಆದರೆ ಶಾಂತಿ- ಹವನ, ಪೂಜೆ ಇತ್ಯಾದಿಗಳಿಂದ ದೋಷ ಪರಿಹಾರ ಮಾಡಿಸಿಕೊಳ್ಳಬೇಕಾಗುತ್ತದೆ.

ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+