Modern Vastu: 2026ರಲ್ಲಿ ಟ್ರೆಂಡ್ ಆಗುತ್ತಿರುವ ಹೊಸ ವಾಸ್ತು ನಿಯಮಗಳು ಇವು!

ಇಂದಿನ ಆಧುನಿಕ ಜೀವನಶೈಲಿಗೆ ತಕ್ಕಂತೆ ವಾಸ್ತು ಶಾಸ್ತ್ರವೂ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಪುರಾತನ ವಾಸ್ತು ನಿಯಮಗಳಿಗೆ ಮಾತ್ರ ಸೀಮಿತವಾಗದೇ, ಪರಿಸರ ಸ್ನೇಹಿ ಮನೆಗಳು, ಡಿಜಿಟಲ್ ಜೀವನಶೈಲಿ ಮತ್ತು ಸಣ್ಣ ಅಪಾರ್ಟ್‌ಮೆಂಟ್‌ಗಳಿಗೆ ಹೊಂದುವಂತೆ 2026ರ ಹೊಸ ವಾಸ್ತು ಟ್ರೆಂಡ್‌ಗಳು ಗಮನ ಸೆಳೆಯುತ್ತಿವೆ.

ಗ್ರೀನ್ ವಾಸ್ತು ಟ್ರೆಂಡ್‌ಗೆ ಹೆಚ್ಚಿದ ಬೇಡಿಕೆ

ಆಧುನಿಕ ವಾಸ್ತುವಿನಲ್ಲಿ ಪರಿಸರ ಸ್ನೇಹಿ ಅಂಶಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಆಗ್ನೇಯ ದಿಕ್ಕಿನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸುವುದು ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎನ್ನಲಾಗಿದೆ. ಮಣ್ಣು, ಬಿದಿರು, ಸುಣ್ಣದಂತಹ ನೈಸರ್ಗಿಕ ವಸ್ತುಗಳ ಬಳಕೆ ಮನೆಯ ಒಳಗಿನ ಗಾಳಿಯನ್ನು ಶುದ್ಧವಾಗಿಡಲು ಸಹಕಾರಿ ಎಂದು ತಜ್ಞರು ಹೇಳುತ್ತಾರೆ.

Modern Vastu

ವರ್ಕ್ ಫ್ರಮ್ ಹೋಮ್‌ಗೆ ವಿಶೇಷ ವಾಸ್ತು

ಇತ್ತೀಚೆಗೆ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ವಾಸ್ತು ಪ್ರಕಾರ, ಕೆಲಸದ ಮೇಜನ್ನು ನೈಋತ್ಯ ದಿಕ್ಕಿನಲ್ಲಿ ಇಟ್ಟು ಪೂರ್ವ ಅಥವಾ ಉತ್ತರದತ್ತ ಮುಖ ಮಾಡಿ ಕೆಲಸ ಮಾಡಿದರೆ ಏಕಾಗ್ರತೆ ಮತ್ತು ನಾಯಕತ್ವ ಗುಣಗಳು ಹೆಚ್ಚುತ್ತವೆ ಎನ್ನಲಾಗುತ್ತಿದೆ.

ಎಲೆಕ್ಟ್ರಾನಿಕ್ ಸಾಧನಗಳಿಂದ ನಕಾರಾತ್ಮಕ ಶಕ್ತಿ?

ಮನೆಗಳಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಾನಿಕ್ ಉಪಕರಣಗಳಿಂದ ಉಂಟಾಗುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಈಶಾನ್ಯ ಭಾಗವನ್ನು ಖಾಲಿ ಇಡುವಂತೆ ಸಲಹೆಯನ್ನು ನೀಡಲಾಗುತ್ತಿದೆ. ಬೆಳಿಗ್ಗೆ ತಂಪಾದ ಬೆಳಕು ಮತ್ತು ಸಂಜೆ ಬೆಚ್ಚಗಿನ ಲೈಟ್‌ಗಳನ್ನು ಬಳಸುವುದು ದೇಹದ ಸಹಕಾರಿ ಆಗುತ್ತದೆ ಎಂದು ವಾಸ್ತು ಶಾಸ್ತ್ರದ ಅಧ್ಯಯನಗಳು ಹೇಳುತ್ತಿವೆ.

ಅಪಾರ್ಟ್‌ಮೆಂಟ್‌ಗಳಿಗೆ ವಾಸ್ತು ಪರಿಹಾರ

ನಗರ ಪ್ರದೇಶದ ಸಣ್ಣ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತು ದೋಷಗಳನ್ನು ಹೋಗಲಾಡಿಸಲು 'ರೆಮೆಡಿಯಲ್ ವಾಸ್ತು' ಕ್ರಮಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿವೆ. ಮನೆಯ ಮಧ್ಯಭಾಗವನ್ನು (ಬ್ರಹ್ಮಸ್ಥಾನ) ಯಾವುದೇ ಭಾರವಾದ ವಸ್ತುಗಳಿಲ್ಲದೆ ಮುಕ್ತವಾಗಿಡುವುದು ಮತ್ತು ದಿಕ್ಕುಗಳ ದೋಷವನ್ನು ಸರಿಪಡಿಸಲು ಆಯಾ ದಿಕ್ಕಿಗೆ ಅನುಗುಣವಾದ ಬಣ್ಣಗಳನ್ನು ಬಳಸುವುದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಡಿಜಿಟಲ್ ವಾಸ್ತು ಹೊಸ ಟ್ರೆಂಡ್

ಮನೆಯ ಸ್ವಚ್ಛತೆಯ ಜೊತೆಗೆ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿರುವ ಅನಗತ್ಯ ಡೇಟಾ ಡಿಲೀಟ್ ಮಾಡುವುದನ್ನು 'ಡಿಜಿಟಲ್ ವಾಸ್ತು' ಎಂದು ಕರೆಯಲಾಗುತ್ತಿದೆ. ಹಳೆಯ ವಸ್ತುಗಳು ಮತ್ತು ಡಿಜಿಟಲ್ ಕಸದ ನಿವಾರಣೆ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+