Aries December Horoscope 2024: ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿಯವರ ಭವಿಷ್ಯ ಹೇಗಿರಲಿದೆ?
ವರ್ಷಗಳು ತುಂಬಾ ವೇಗವಾಗಿ ಮುಗಿದು ಹೋಗುತ್ತವೆ. ಇನ್ನೇನು ಒಂದೇ ಒಂದು ತಿಂಗಳು ಕಳೆದರೆ 2024 ಪೂರ್ಣಗೊಂಡು 2025 ಆರಂಭವಾಗುತ್ತದೆ. ವರ್ಷದ ಕೊನೆಯ ತಿಂಗಳು ಯಾವ ರಾಶಿಯವರ ಜೀವನದಲ್ಲಿ ಯಾವ ಬದಲಾವಣೆಗೆ ನಾಂದಿ ಹಾಡಲಿದೆ. ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾದರೆ ಜ್ಯೋತಿಷಿಗಳ ಪ್ರಕಾರ ಡಿಸೆಂಬರ್ ತಿಂಗಳು ಯಾವ ರಾಶಿಯವರಿಗೆ ಯಾವ ಫಲ ನೀಡಲಿದೆ ಎಂದು ತಿಳಿಯೋಣ.
ಡಿಸೆಂಬರ್‌ನಲ್ಲಿ ಗ್ರಹಗಳ ಬದಲಾವಣೆ
ಡಿಸೆಂಬರ್‌ನಲ್ಲಿ ಹಲವಾರು ಗ್ರಹಗಳ ರಾಶಿಗಳನ್ನು ಬದಲಾಯಿಸಲಿವೆ. ಡಿಸೆಂಬರ್ 2ರಂದು ಮಕರ ರಾಶಿಗೆ ಶುಕ್ರ ಪ್ರವೇಶ ಮಾಡುತ್ತಾನೆ. ಡಿಸೆಂಬರ್ 16ರಂದು ಧನು ರಾಶಿಗೆ ಸೂರ್ಯ ಗ್ರಹ ಪ್ರವೇಶಿಸಲಿದೆ. ಇಲ್ಲಿಂದ ಧನುರ್ಮಾಸ ಆರಂಭವಾಗುತ್ತದೆ. ನಂತರ ಡಿಸೆಂಬರ್ 28ರಂದು ಶುಕ್ರ ಗ್ರಹ ಮತ್ತೊಮ್ಮೆ ತನ್ನ ಸ್ಥಾನವನ್ನು ಬದಲಾವಣೆ ಮಾಡಲಿದ್ದು, ಮಕರದಿಂದ ಕುಂಭ ರಾಶಿಗೆ ಸಾಗಲಿದೆ. ಇವು ಡಿಸೆಂಬರ್ ತಿಂಗಳ ಗ್ರಹಗಳ ಸ್ಥಾನ ಪರಿವರ್ತನೆಯಾಗಿದೆ.

ಹಾಗಾದರೆ ಡಿಸೆಂಬರ್ ತಿಂಗಳಲ್ಲಿ 12 ರಾಶಿಗಳ ಜಾತಕ ಹೇಗಿದೆ ಎಂದು ಒಂದೊಂದಾಗಿ ತಿಳಿದುಕೊಳ್ಳೋಣ. ಮೊದಲಿಗೆ ಮೇಷ ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ನೋಡೋಣ.
ಮೇಷ ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ
ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಶುಭ ಹಾಗೂ ಲಾಭಗಳು ಅಧಿಕವಾಗಿವೆ. ಕೈಗೊಂಡ ಕೆಲಸ ಕಾರ್ಯಗಳು ತುಂಬಾ ಸುಲಲಿತವಾಗಿ ಕೈಗೂಡುತ್ತವೆ. ಹೀಗಾಗಿ ಡಿಸೆಂಬರ್ ಮೇಷ ರಾಶಿಯವರಿಗೆ ಅದೃಷ್ಟದ ತಿಂಗಳು ಎಂದು ಹೇಳಬಹುದು. ಹೊಸದಾದ ವ್ಯಾಪಾರ ವ್ಯವಹಾರ ಆರಂಭಿಸಲು ಇದು ತುಂಬಾ ಉತ್ತಮವಾದ ತಿಂಗಳಾಗಿದೆ.

ವೃತ್ತಿ ಮತ್ತು ಆರೋಗ್ಯ (ಮೇಷ ರಾಶಿಯ ಡಿಸೆಂಬರ್ ಭವಿಷ್ಯ)
ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳು ವೃತ್ತಿಯಲ್ಲಿ ಉತ್ತಮ ಫಲ ನೀಡಲಿದೆ. ಈ ತಿಂಗಳ ಧನುರ್ಮಾಸದಲ್ಲಿ ಹೊಸ ವ್ಯವಹಾರಗಳನ್ನು ಶುರು ಮಾಡಬಹುದು. ಇದು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಆದರೆ ನಿಮ್ಮ ಜಾತಕದಲ್ಲೂ ಉತ್ತಮವಾದ ದಶಾಯುಕ್ತಿಗಳು ನಡೆಯುವುದು ಮುಖ್ಯವಾಗಿದೆ. ವೃತ್ತಿಗೆ ಸಂಬಂಧಿಸಿದಂತೆ ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾದ ವಾತಾವರಣ ಮೇಷ ರಾಶಿಯವರಿಗಿದೆ.
ಆದರೆ ಎಚ್ಚರಿಕೆ ವಹಿಸಬೇಕಾದ ವಿಷಯವೇನೆಂದರೆ ದೈಹಿಕ ಆರೋಗ್ಯದ ಬಗ್ಗೆ. ಡಿಸೆಂಬರ್‌ನಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದನ್ನು ತಪ್ಪಿಸಿ. ಆರೋಗ್ಯದ ಒಂದು ವಿಚಾರ ಬಿಟ್ಟರೆ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ವಿಷಯದಲ್ಲೂ ಮೇಷ ರಾಶಿಯವರು ತುಂಬಾ ಲಕ್ಕಿಯಾಗಿದ್ದಾರೆ.
ಆರ್ಥಿಕ ಸ್ಥಿತಿ (ಮೇಷ ರಾಶಿಯ ಡಿಸೆಂಬರ್ ಭವಿಷ್ಯ)
ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಹೊಸ ವಾಹನಗಳನ್ನು ಕೊಂಡುಕೊಳ್ಳಲು, ನೂತನ ಗೃಹ ನಿರ್ಮಾಣ ಮಾಡಲು ಉತ್ತಮ ಸಮಯ ಇದಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ಅದೃಷ್ಟದ ದಿನಗಳು ಈ ತಿಂಗಳಲ್ಲಿ ಕಾಣಬಹುದು.
ಸರ್ಕಾರಿ ನೌಕರರಿಗೆ ವರ್ಗಾವಣೆ ಯೋಗಗಳು ಇವೆ. ಸೈನ್ಯದಲ್ಲಿರುವವರಿಗೆ ಬಡ್ತಿ, ಪ್ರಮೋಷನ್ ಸಿಗಲಿದೆ. ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಬಡ್ತಿ ಸಿಗಲಿದೆ. ವಿಜ್ಞಾನ ವಿಚಾರದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಗತಿಗಳು ಉಂಟಾಗುತ್ತವೆ. ವಕೀಲರಾಗಿ ಕೆಲಸ ಮಾಡುವ ಮೇಷ ರಾಶಿಯವರಿಗೆ ಹೆಚ್ಚಿನ ಆದಾಯಗಳು ಬರಲಿದೆ. ಅಲ್ಲದೆ ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಅನಿರೀಕ್ಷಿತ ಹಣದ ಲಾಭವಾಗುತ್ತದೆ.
ಕುಟುಂಬ ಜೀವನ (ಮೇಷ ರಾಶಿಯ ಡಿಸೆಂಬರ್ ಭವಿಷ್ಯ)
ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಮೇಷ ರಾಶಿಯವರ ಕುಟುಂಬ ಜೀವನ ಅದ್ಭುತವಾಗಿರುತ್ತದೆ. ಯಾವುದೇ ಅಹಿತಕರ ವಾತಾವರಣ ಕುಟುಂಬದಲ್ಲಿ ಇರುವುದಿಲ್ಲ.ಆದರೆ ಎಲೆಕ್ಟ್ರಿಕ್ ವಸ್ತುಗಳಿಂದ, ಹರಿತವಾದ ವಸ್ತುಗಳಿಂದ ಜಾಗೃತರಾಗಿರಿ. ಕರೆಂಟ್ ಶಾಕ್, ಚೂಪಾದ ವಸ್ತುಗಳಿಂದ ದೇಹಕ್ಕೆ ಗಾಸಿಯಾಗಬಹುದು. ಇವು ವಾಸಿಯಾಗದೇ ಹಿಂಸೆ ಕೊಡುವ ಮಟ್ಟಕ್ಕೆ ಹೋಗಬಹುದು. ಹೀಗಾಗಿ ಜಾಗೃತರಾಗಿರಿ.
ಡಿಸೆಂಬರ್ ತಿಂಗಳು ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿರುತ್ತವೆ. ಶತ್ರುಗಳ ಕಾಟದಿಂದ ಹಾಗೂ ವಿರೋಧಿಗಳಿಂದ ದೂರವಾಗುವಿರಿ. ಒಟ್ಟಾರೆ ಡಿಸೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಬಹಳ ಅದೃಷ್ಟದಾಯಕವಾಗಿರುವ ದಿನಮಾನಗಳನ್ನು ನೋಡುವುದಿದೆ. ಶುಭವಾದ ವಾತಾವರಣವಿದೆ.












Click it and Unblock the Notifications