ಕೇತುವಿನ ನಕ್ಷತ್ರದಲ್ಲಿ ಬುಧನ ಸಂಕ್ರಮಣ : ಈ ರಾಶಿಯವರಿಗೆ ಭಾರೀ ಧನ ಲಾಭ, ಪದೋನ್ನತಿ ಭಾಗ್ಯ
ಆಗಸ್ಟ್ 22 ರಂದು, ಗ್ರಹಗಳ ರಾಜಕುಮಾರ ಬುಧ, ಕೇತುವಿನ ಅಧಿಪತ್ಯದ ಮಾಘ ನಕ್ಷತ್ರಕ್ಕೆ ಕಾಲಿಟ್ಟಾಗಿದೆ. ಇನ್ನು ಕೆಲವು ಕಾಲ ಬುಧ ಇದೇ ನಕ್ಷತ್ರದಲ್ಲಿ ಸಂಚಾರ ಮಾಡ್ತಾ ಇರುವನು. ಇದೀಗ ಇದೇ ವಾರದಲ್ಲಿ ಅಂದರೆ ಆಗಸ್ಟ್ 28ಕ್ಕೆ ರಕ್ಷಾಬಂಧನ ಹಬ್ಬವೂ ಬರಲಿದೆ. ಕೇತುವಿನ ನಕ್ಷತ್ರದಲ್ಲಿ ಬುಧನ ಚಲನೆ ನಾಲ್ಕು ರಾಶಿಯವರಿಗೆ ಉತ್ತಮ ಪ್ರಯೋಜನಗಳನ್ನು ನೀಡುವುದು. ಮುಂದಿನ ಕೆಲವು ದಿನಗಳಲ್ಲಿ ಈ ಈ ರಾಶಿಯವರ ಉದ್ಯೋಗ, ವ್ಯವಹಾರ ಮತ್ತು ಆರೋಗ್ಯದಲ್ಲಿ ದೊಡ್ಡ ಮಟ್ಟದ ಪ್ರಯೋಜನಗಳನ್ನು ಕಾಣುವರು. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುವುದು. ಕೇತುವಿನ ನಕ್ಷತ್ರದಲ್ಲಿ ಬುಧನ ಈ ಆಗಮನವು ಯಾವ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ ನೋಡೊಣ.
ಮೇಷ ರಾಶಿ (Aries)
ಬುದ್ಧಿಶಕ್ತಿ ಹೆಚ್ಚಾಗುವುದು. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುವುದು. ಎಲ್ಲಾ ಪ್ರಮುಖ ವಿಚಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ಹಣಕಾಸಿನ ವಿಷಯಗಳಲ್ಲಿಯೂ ಲಾಭವಾಗುವುದು. ಹೂಡಿಕೆಗೆ ಉತ್ತಮ ಅವಕಾಶ ಇರುವುದು. ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಈ ಸಮಯ ವಿಶೇಷವಾಗಿ ಪ್ರಯೋಜನಕಾರಿಯಾಗಿರುವುದು. ನೀವು ಮಾಡುವ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು. ಗೌರವ ಮತ್ತು ಖ್ಯಾತಿಯೂ ಹೆಚ್ಚುವುದು. ನಿಮ್ಮ ಕೌಶಲ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸುವುದು ಪ್ರಯೋಜನಕಾರಿಯಾಗಿರಲಿದೆ.

ಮಿಥುನ ರಾಶಿ (Gemini)
ಧೈರ್ಯ ಮತ್ತು ಶೌರ್ಯ ಹೆಚ್ಚಾಗುವುದು. ನಿಮ್ಮ ಆಲೋಚನೆಗಳನ್ನು ಮಾತುಗಳನ್ನು ಸರಿಯಾಗಿ ಹೇಳುವುದು ಸಾಧ್ಯವಾಗಬಹುದು. ಆತ್ಮವಿಶ್ವಾಸ ಹೆಚ್ಚಾಗುವುದು. ಸಂವಹನ, ಮಾರ್ಕೆಟಿಂಗ್ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ಲಾಭವಾಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ಜನರ ಪರಿಚಯದಿಂದ ಲಾಭವಾಗುವುದು. ನೀವು ಮಾಡುವ ಕೆಲಸ ಕಾರ್ಯಗಳಿಗೆ ಸಹೋದರರಿಂದ ಬೆಂಬಲ ಸಿಗುವುದು. ಅನೇಕ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳನ್ನು ಮುನ್ನಡೆಸಲು ಸಹಾಯವಾಗುವುದು.
ತುಲಾ ರಾಶಿ (Libra)
ಹೊಸ ಮತ್ತು ಶಾಶ್ವತ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆಯಿದೆ. ಬಹಳ ಸಮಯದಿಂದ ಹೊರಗೆ ಉಳಿದಿರುವ ಹಣ ಈ ಅವಧಿಯಲ್ಲಿ ವಾಪಸ್ ಬರುವುದು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಈ ಸಮಯ ಉದ್ಯಮಿಗಳಿಗೆ ಕೂಡಾ ಸಕಾರಾತ್ಮಕವಾಗಿರುವುದು. ವ್ಯಾಪಾರ ಯೋಜನೆಗಳನ್ನು ಮುನ್ನಡೆಸಲು ಮತ್ತು ಅವುಗಳನ್ನು ಯಶಸ್ವಿಗೊಳಿಸಲು ಅವಕಾಶಗಳು ಸಿಗುವುದು. ಸರಿಯಾದ ಯೋಜನೆಯನ್ನು ಹಾಕಿಕೊಂಡು ಮುನ್ನಡೆದರೆ ಲಾಭವಾಗುವುದು.
ಧನು ರಾಶಿ (Sagitarius)
ತುಂಬಾ ಸಮಯದಿಂದ ಬಾಕಿ ಇರುವ ಕೆಲಸಗಳು ಪೂರ್ತಿಯಾಗುವುದು. ಹಣ ಗಳಿಸುವುದಕ್ಕೆ ಅವಕಾಶ ಸಿಗುವುದು. ಪ್ರಮುಖ ಕೆಲಸಗಳಿಗೆ ಎದುರಾಗಿರುವ ಅಡೆತಡೆಗಳು ಬಗೆಹರಿಯುವುದು. ಈ ಅವಧಿಯು ಶಿಕ್ಷಣ, ಬರವಣಿಗೆ ಮತ್ತು ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿರುವುದು. ಹೊಸ ವಿಷಯಗಳನ್ನು ಕಲಿಯಲು, ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವುದು. ಕೆಲಸದಲ್ಲಿ ಮುನ್ನಡೆಯಲು ಹೊಸ ಅವಕಾಶಗಳು ಸಿಗುವುದು.
ಮತ್ತೊಂದು ಕಡೆ ಸಿಂಹ ರಾಶಿಯಲ್ಲಿ ಬುಧ ಮತ್ತು ಸೂರ್ಯನು ಒಟ್ಟಿಗೆ ಬರುವುದರಿಂದ ಬುಧಾದಿತ್ಯ ರಾಜಯೋಗ ಕೂಡಾ ನಿರ್ಮಾಣವಾಗುತ್ತಿದೆ. ಸಿಂಹ ರಾಶಿಯಲ್ಲಿ ರೂಪುಗೊಳ್ಳುವ ಬುಧಾದಿತ್ಯ ರಾಜಯೋಗವು ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆದರಲ್ಲಿ ಯಶಸ್ವಿಯಾಗುವರು. ಈ ಶುಭ ಯೋಗವು ಸೆಪ್ಟೆಂಬರ್ ಏಳರವರೆಗೆ ಇರುವುದು. ಅಂದರೆ ಸರಿಸುಮಾರು ಎರಡು ವಾರಗಳ ಕಾಲ, ಮಿಥುನ, ಸಿಂಹ, ಕನ್ಯಾ, ತುಲಾ, ಧನು ರಾಶಿಯವರು ಆರ್ಥಿಕ ಪ್ರಯೋಜನಗಳನ್ನು ಪಡೆಯುವರು. ಕುಟುಂಬದಲ್ಲಿ ನೆಮ್ಮದಿ ಇರುವುದು. ಆರೋಗ್ಯ ಕೂಡಾ ಉತ್ತಮವಾಗಿರುವುದು.


Click it and Unblock the Notifications
