ಈ ರಾಶಿಯವರಿಗೆ ಶುಭವಲ್ಲ ಈ ಸಮಯ: ಹಣಕಾಸು ಸಮಸ್ಯೆ, ವ್ಯವಹಾರದಲ್ಲಿ ನಷ್ಟದ ಭೀತಿ
ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜಕುಮಾರ ಬುಧನು ಶುಕ್ರನ ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಆಗಸ್ಟ್ 28ಕ್ಕೆ ಸಂಭವಿಸಲಿದೆ. ಅದರ ಮರುದಿನ ಅಂದರೆ ಆಗಸ್ಟ್ 29ರ ಮಧ್ಯಾಹ್ನ 12.58 ಕ್ಕೆ ಬುಧನು ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದಾದ ಮೇಲೆ ಸೆಪ್ಟೆಂಬರ್ 5, 2026ರವರೆಗೆ ಅಲ್ಲೇ ಬುಧನ ಸಂಚಾರ ನಡೆಯುತ್ತದೆ. ಬುಧನ ಈ ನಕ್ಷತ್ರ ಬದಲಾವಣೆಯು ಎಲ್ಲಾ ಹನ್ನೆರಡು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಾಲ್ಕು ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು.
ಬುಧ ಸಂಕ್ರಮಣದಿಂದ ಎಚ್ಚರಿಕೆಯಿಂದ ಇರಬೇಕಾದ ರಾಶಿಯವರು
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ವೃತ್ತಿಜೀವನದ ಸವಾಲುಗಳು ಹೆಚ್ಚಾಗಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ವೈಮನಸ್ಸು ಮೂಡಬಹುದು. ಮನೆ ಮಂದಿಯ ಮಧ್ಯೆ ಕೂಡಾ ಭಿನ್ನಾಭಿಪ್ರಾಯಗಳು ಏಳಬಹುದು. ಯಾರೊಂದಿಗೂ ಸುಮ್ಮನೆ ವಾದಕ್ಕೆ ಇಳಿಯಬೇಡಿ. ಮಾತಿನ ಮೇಲೆ ಆದಷ್ಟು ನಿಯಂತ್ರಣ ಇದ್ದರೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗ ಸ್ಥಳಾಂತರ ಸಂಭವವೂ ಇದೆ. ಸದ್ಯಕ್ಕೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರ ಜೀವನದ ಕಷ್ಟಕರ ಸಮಯ ಇದಾಗಿರಲಿದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಸಂಬಂಧಗಳು ಹಾಳಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರಗಳನ್ನು ತೆಗದುಕೊಳ್ಳಬೇಡಿ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ನಷ್ಟಕ್ಕೆ ಗುರಿ ಮಾಡುವುದು. ತಾಳ್ಮೆಯಿಂದ ಇರಿ. ಸಾಧ್ಯವಾದಷ್ಟು ಜಗಳವನ್ನು ತಪ್ಪಿಸಿ. ಕೆಲಸದಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ಆಯಾಸ ಹೆಚ್ಚಾಗುವುದು.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಆರ್ಥಿಕ ನಷ್ಟಗಳು ಬಗೆಹರಿಯುವುದು. ಎಲ್ಲಿಯೂ ಹಣದ ಹೂಡಿಕೆ ಮಾಡದಿರುವುದೇ ಜಾಣತನ. ಉದ್ಯಮಿಗಳು ತಮ್ಮ ಪಾಲುದಾರರೊಂದಿಗೆ ಜಾಗರೂಕರಾಗಿರಬೇಕು. ಮಾನಸಿಕ ಕಿರಿಕಿರಿ ಹೆಚ್ಚಾಗುವುದು. ಕೋಪವನ್ನು ನಿಯಂತ್ರಿಸಿ. ಮಾತಿನಲ್ಲಿ ಕಟು ಶಬ್ಧಗಳನ್ನು ಬಳಸಬೇಡಿ. ಸಂಯಮದಿಂದ ಇರಿ.
ಮಕರ ರಾಶಿ (Capricorn)
ಮಕರ ರಾಶಿಯವರು ಭಾವನಾತ್ಮಕ ಏರಿಳಿತಗಳನ್ನು ಅನುಭವಿಸಬಹುದು. ಆರೋಗ್ಯ ಸಮಸ್ಯೆಗಳು ಕಾಡಬಹುದು. ಮನಸ್ಸಿನಲ್ಲಿ ಗೊಂದಲ ಚಡಪಡಿಕೆ ಹೆಚ್ಚಾಗುವುದು. ಆವಸರಕ್ಕೆ ಬಿದ್ದು ಯಾವ ಕೆಲಸವನ್ನೂ ಮಾಡಬೇಡಿ. ನಷ್ಟಕ್ಕೆ ಕಾರಣವಾಗಬಹುದು. ಕೆಲಸದಲ್ಲಿ ತೋರುವ ನಿರ್ಲಕ್ಷ್ಯ ದೊಡ್ಡ ನಷ್ಟಕ್ಕೆ ನೂಕಬಹುದು.
ಹಾಗಂತ ಬುಧನ ನಕ್ಷತ್ರ ಬದಲಾವಣೆಯಿಂದ ಕಷ್ಟಗಳು ಮಾತ್ರ ಮನೆ ಮಾಡುವುದಲ್ಲ. ಕೆಲವು ರಾಶಿಯವರು ಬುಧ ಸಂಕ್ರಮಣದ ಕಾರಣದಿಂದಲೇ ಅದೃಷ್ಟ ಪಡೆಯುತ್ತಾರೆ. ಅವರ ಸುಖ ಸಮೃದ್ಧಿಗೆ ಬುಧನ ಸಂಕ್ರಮಣವೇ ಕಾರಣವಾಗುವುದು. ಈ ರಾಶಿಯವರು ಉದ್ಯೋಗ, ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಅಭ ಪಡೆಯುವರು. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುವುದು.
ಮೇಷ, ಮಿಥುನ, ತುಲಾ, ಧನು ರಾಶಿಯವರಿಗೆ ಅತ್ಯಂತ ಶುಭವಾಗಿರುವುದು. ಇವರಿಗೆ ಕೆಲಸದಲ್ಲಿ ಮುನ್ನಡೆಯಲು ಹೊಸ ಅವಕಾಶಗಳು ಸಿಗುವುದು. ಇವರ ಕಷ್ಟಗಳಿಗೆ ತೆರೆ ಬೀಳುವುದು. ಕೆಲಸಗಳಿಗೆ ಎದುರಾಗಿದ್ದ ಅಟೆತಡೆಗಳು ನಿವಾರಣೆಯಾಗುವುದು. ಆದಾಯದ ಹಿಸ ಮೂಲಗಳು ತೆರೆದುಕೊಳ್ಳುವುದು. ವ್ಯಾಪಾರ ಯೋಜನೆಗಳನ್ನು ಮುನ್ನಡೆಸಲು ಹೊಸ ಅವಕಾಶಗಳು ಸಿಗುವುದು.
ಮತ್ತೊಂದು ಕಡೆ, ಸಿಂಹ ರಾಶಿಯಲ್ಲಿ ಬುಧ ಮತ್ತು ಸೂರ್ಯನು ಒಟ್ಟಿಗೆ ಬರುವುದರಿಂದ ಬುಧಾದಿತ್ಯ ರಾಜಯೋಗ ಕೂಡಾ ರೂಪುಗೊಳ್ಳುತ್ತಾ ಇದೆ. ಈ ಶುಭ ಯೋಗವು ಸೆಪ್ಟೆಂಬರ್ ಏಳರವರೆಗೆ ಇರುವುದು. ಈ ಬುಧಾದಿತ್ಯ ರಾಜಯೋಗವು ಮಿಥುನ, ಸಿಂಹ, ಕನ್ಯಾ, ತುಲಾ, ಧನು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ.


Click it and Unblock the Notifications
