Mercury Opposite Saturn: ಬುಧ ಮತ್ತು ಶನಿ ಮುಖಾಮುಖಿಯಾಗಿರುವುದರಿಂದ ಈ 4 ರಾಶಿಯವರು ಅದೃಷ್ಟವಂತರು...
ಗ್ರಹಗಳು ಸಂಚಾರದ ವೇಳೆ ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಕೆಲ ಬಾರಿ ಒಮದು ರಾಶಿಯಲ್ಲಿ ಎರಡು ಅಥವಾ ಹಲವು ಗ್ರಹಗಳ ಸಂಯೋಜನೆಯಾದರೆ, ಕೆಲ ಬಾರಿ ಗ್ರಹಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಈ ಗ್ರಹಗಳ ಬದಲಾದ ಸಂಚಾರದಿಂದ ಮಾತ್ರವಲ್ಲ ಗ್ರಹಗಳ ಸ್ಥಾನಗಳಿಂದಲೂ ಮಾನವ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು.
ಆ ರೀತಿಯಲ್ಲಿ ಬುಧ ಮತ್ತು ಶನಿ ಪರಸ್ಪರ ವಿರುದ್ಧವಾಗಿ ಸಂಚರಿಸುತ್ತವೆ. ಅಂದರೆ ಈ ಎರಡು ಗ್ರಹಗಳು 7 ನೇ ಮನೆಯಲ್ಲಿ ಪರಸ್ಪರ ವಿರುದ್ಧವಾಗಿ ಸಾಗುತ್ತಿವೆ. ಎಲ್ಲಾ ರಾಶಿಗಳ ಜೀವನದಲ್ಲಿ ಇದರ ಪ್ರಭಾವವನ್ನು ಕಾಣಬಹುದು.
ಈ ಸ್ಥಾನ ವಿಶೇಷವಾಗಿ ಕೆಲವು ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. ಇದು ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿಯನ್ನು ತರಬಹುದು ಮತ್ತು ಅನೇಕ ಯಶಸ್ಸನ್ನು ನೀಡುತ್ತದೆ. ಹಾಗಾದರೆ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯಲ್ಲಿ ಬುಧ ಮತ್ತು ಶನಿ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ರಾಶಿಚಕ್ರದವರು ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಉತ್ತಮ ಧನಲಾಭ ಇವರಿಗೆ ಸಿಗಲಿದೆ. ಈ ಅವಧಿಯಲ್ಲಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ನಿಂತು ಹೋದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲವು ಪ್ರಮುಖ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು.

ಮಿಥುನ ರಾಶಿ
ಶನಿ ಮತ್ತು ಬುಧ ಮುಖಾಮುಖಿಯಾಗಿ ಸಾಗುವುದು ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮುಖ್ಯವಾಗಿ ಶನಿಯ ಕೃಪೆಯಿಂದಾಗಿ ಹಣದ ಒಳಹರಿವು ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತಾರೆ. ಈ ಅವಧಿಯು ಬರವಣಿಗೆ ಕ್ಷೇತ್ರದವರಿಗೆ ಅದೃಷ್ಟ ತರಲಿದೆ. ವಿದೇಶದಿಂದ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.

ವೃಷಭ ರಾಶಿ
ಶನಿ ಮತ್ತು ಬುಧ ಗ್ರಹ ವೃಷಭ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಈ ಸಮಯದಲ್ಲಿ ಉತ್ತಮ ಉದ್ಯೋಗ ದೊರೆಯುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ.

ತುಲಾ ರಾಶಿ
ಶನಿ ಮತ್ತು ಬುಧ ಗ್ರಹ ತುಲಾ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಮುಖ್ಯವಾಗಿ ಈ ರಾಶಿಚಕ್ರದ ಜನರು ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ಉತ್ತಮ ಲಾಭ ಮತ್ತು ಪ್ರಗತಿಯನ್ನು ಕಾಣುತ್ತಾರೆ. ವಿಶೇಷವಾಗಿ ಈ ಅವಧಿಯಲ್ಲಿ ಈ ರಾಶಿಯವರ ದೀರ್ಘಾವಧಿಯ ಆಸೆಗಳು ಈಡೇರುತ್ತವೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications