Mars Transit 2024: ಮಂಗಳ ಗೋಚರ: ಈ ರಾಶಿಗೆ ಟೆನ್ಷನ್ ಶುರು
ಗ್ರಹಗಳ ಅಧಿಪತಿಯಾದ ಮಂಗಳನು ವೃಶ್ಚಿಕ ಮತ್ತು ಮೇಷ ರಾಶಿಯ ಅಧಿಪತಿಯಾಗಿದೆ. 2024ರ ಮಂಗಳನ ಕೊನೆಯ ಸಾಗಣೆ ಶೀಘ್ರದಲ್ಲೇ ನಡೆಯಲಿದೆ. ಮಂಗಳ ಯಾವುದೇ ಒಂದು ರಾಶಿಯಲ್ಲಿ 45ರಿಂದ 50 ದಿನಗಳವರೆಗೆ ಇರುತ್ತದೆ. ಮಂಗಳವನ್ನು ವ್ಯಕ್ತಿಯ ಶೌರ್ಯ, ಧೈರ್ಯ, ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಮಂಗಳ ಗ್ರಹ ಈ ವರ್ಷ ಯಾವ ದಿನಾಂಕದಂದು ರಾಶಿ ಬದಲಾವಣೆ ಮಾಡಲಿದೆ, ಇದರಿಂದಾಗುವ ಪರಿಣಾಮಗಳೇನು ಎಂದು ತಿಳಿಯೋಣ.
ಮಂಗಳ ಸಂಚಾರ ಯಾವಾಗ?
ಮಂಗಳ ಗ್ರಹ ಶೀಘ್ರದಲ್ಲೇ ಮಿಥುನ ರಾಶಿಯಿಂದ ಹೊರಬರುತ್ತದೆ. ಭಾನುವಾರ, ಅಕ್ಟೋಬರ್ 20, 2024 ರಂದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಈ ಮಂಗಳ ಸಂಕ್ರಮಣ ಅಕ್ಟೋಬರ್ 20ರಂದು ಮಧ್ಯಾಹ್ನ 2.26ಕ್ಕೆ ನಡೆಯಲಿದೆ. ಮಂಗಳ ಗ್ರಹ ಕರ್ಕಾಟಕಕ್ಕೆ ಪ್ರವೇಶಿಸುವುದರಿಂದ ಈ ರಾಶಿಚಕ್ರದವರಿಗೆ ತೊಂದರೆಗಳು ಹೆಚ್ಚಾಗಲಿವೆ. ಈ ಸಮಯದಲ್ಲಿ ಅದರ ನಕಾರಾತ್ಮಕ ಪರಿಣಾಮ ದೇಶ ಮತ್ತು ಪ್ರಪಂಚದ ಮೇಲೆ ಕಂಡುಬರುತ್ತದೆ. ಹಾಗಾದರೆ ಅಕ್ಟೋಬರ್ 20 ರಿಂದ ಹೆಚ್ಚು ಟೆನ್ಷನ್ ಮಾಡಿಕೊಳ್ಳುವ ರಾಶಿಗಳು ಯಾವುವು ಎಂದು ತಿಳಿಯೋಣ.

ವೃಷಭ ರಾಶಿ:
ವೃಷಭ ರಾಶಿಯ ಜನರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಯಾಕೆಂದರೆ ನಿಮ್ಮ ಕೆಲಸ ಅಪಾಯದಲ್ಲಿದೆ. ನೀವು ಎಲ್ಲೋ ಬೇರೆಡೆ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದರೆ, ಅದಕ್ಕಾಗಿ ನೀವು ಹೆಚ್ಚು ಸಮಯ ಕಾಯಬೇಕಾಗಬಹುದು. ಇದರಿಂದಾಗಿ ನೀವು ಚಿಂತಿತರಾಗಬಹುದು.
ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರ ಇರುವುದಿಲ್ಲ. ನಿಮ್ಮನ್ನು ಕೆಲಸದಲ್ಲಿ ಕೀಳಾಗಿ ಕಾಣಬಹುದು. ನಿಮ್ಮ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮಲ್ಲಿ ಮನಸ್ತಾಪಗಳಿಗೆ ಪ್ರಚೋದನೆ ಸಿಗಲಿದೆ. ಕೆಲಸಲದಲ್ಲಿ ನಿಧಾನವಾಗಲಿದೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಮಾತು ಅರ್ಥ ಮಾಡಿಕೊಳ್ಳುವವರು ಕಡಿಮೆ ಜನ. ಹೀಗಾಗಿ ನಿಮಗೆ ಟೆನ್ಷನ್ ಹೆಚ್ಚಾಗಬಹುದು. ಹೀಗಾಗಿ ಯಾವುದೇ ಸಮಯ ಬಂದರೂ ತಾಳ್ಮೆಯಿಂದಿರಿ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರು ಮಂಗಳ ಸಂಚಾರದ ನಂತರ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಪ್ರಗತಿ ನಿಲ್ಲಬಹುದು. ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಕುಟುಂಬದಲ್ಲಿ ತೊಂದರೆಗಳನ್ನು ಅನುಭವಿಸುವ ಸಮಯವಿದು. ಪ್ರೇಮ ಸಂಬಂಧಗಳು ಮುರಿಯಬಹುದು. ಅನಗತ್ಯ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ.
ಕರ್ಕಾಟಕ ರಾಶಿಯವರಿಗೆ ಈ ಸಮಯದಲ್ಲಿ ಆದಾಯ ಕುಂಟಿತವಾಗಲಿದೆ. ಅಂದುಕೊಂಡ ಕಾರ್ಯಗಳು ನಿಧಾನವಾಗಲಿವೆ. ಕೆಲಸದಲ್ಲಿ ನಿರುತ್ಸಾಹ ಕಂಡುಬರಲಿದೆ. ಕೋಪ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೂ ಜಗಳವಾಡಬಹುದು. ನಿಮ್ಮ ಮನೆಯಲ್ಲಿ ಸಂಬಂಧಿಕರ ನಡುವೆ ಮನಸ್ತಾಪಗಳು ಹೆಚ್ಚಾಗಬಹುದು. ಸಂಸಾರದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ.

ಧನು ರಾಶಿ:
ಧನು ರಾಶಿಯವರಿಗೆ ಮಂಗಳ ಗ್ರಹದ ಸಂಚಾರ ತೊಂದರೆಯನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ಕಷ್ಟಕರವಾಗಿರುತ್ತದೆ. ನೀವು ದೊಡ್ಡ ಪರೀಕ್ಷೆಯಲ್ಲಿ ವಿಫಲರಾಗಬಹುದು. ಆದರೆ ಕಷ್ಟಪಟ್ಟು ಕೆಲಸ ಮಾಡುತ್ತಿರಿ. ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಯಶಸ್ಸು ಬೇಗನೆ ಕೈತಪ್ಪಿ ಹೋಗಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಎಚ್ಚರಕೆಯಿಂದಿರಲು ಸೂಚಿಸಲಾಗುತ್ತದೆ.
ಧನು ರಾಶಿಯವರಿಗೆ ಈ ಸಮಯ ಅತ್ಯಂತ ಅಶುಭವಾಗಿದೆ. ಹೀಗಾಗಿ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಯಾರೊಂದಿಗೆ ವಿನಾಕಾರಣ ವಾದವನ್ನು ತಪ್ಪಿಸಿ. ಮನೆಯಲ್ಲಿ ಶಾಂತಿ ನೆಲೆಸಲು ತಾಳ್ಮೆಯಿಮದಿರಿ.












Click it and Unblock the Notifications