Navpancham Rajyog 2025: ನವಪಂಚಮ ರಾಜಯೋಗ 2025: ಈ ರಾಶಿಗೆ ಶನಿ ದೆಸೆಯಿಂದ ಹಣದ ಹರಿವು ಹೆಚ್ಚಳ
ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕೆಟ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಶನಿ ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುವ ನ್ಯಾಯ ದೇವರು. ಪ್ರಸ್ತುತ ಶನಿ ಗ್ರಹ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಸುಮಾರು 30 ವರ್ಷಗಳ ನಂತರ ಶನಿ ಗ್ರಹ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಇದು ದ್ವಾದಶಿ ರಾಶಿಗಳ ಮೇಲೆ ಪ್ರಭಾವ ಉಂಟು ಮಾಡಲಿದೆ.
ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಸಂಚಾರ ಮಾಡಲಿದೆ. ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಶನಿ ಇತರ ಗ್ರಹಗಳೊಂದಿಗೆ ಸಂಯೋಗಗೊಳ್ಳಲಿದೆ. ಇದರಿಂದ ಕೆಲ ರಾಶಿಯವರ ಅದೃಷ್ಟ ಬೆಳಗಲಿದ್ದು ರಾಜಯೋಗಗಳು ಸೃಷ್ಟಿಯಾಗುತ್ತವೆ. ಇನ್ನೂ ಕೆಲ ರಾಶಿಯವರು ಸಮಸ್ಯೆಗಳನ್ನು ಎದುರಿಸುತ್ತಾರೆ.
ಏಪ್ರಿಲ್ 5 ರಂದು ಅಂದರೆ ಇಂದು ಶನಿ ಮತ್ತು ಮಂಗಳ ಗ್ರಹಗಳು ಒಟ್ಟಿಗೆ 120 ಡಿಗ್ರಿಯಲ್ಲಿ ಬಂದು 9 ಮತ್ತು 5 ನೇ ಮನೆಗಳಲ್ಲಿದ್ದಾಗ ನವಪಂಚ ರಾಜಯೋಗವನ್ನು ಸೃಷ್ಟಿಸುತ್ತವೆ. ಈಗ ಶನಿ ಮತ್ತು ಮಂಗಳ ಗ್ರಹಗಳಿಂದ ರೂಪುಗೊಂಡ ನವಪಂಚ ರಾಜಯೋಗದಿಂದಾಗಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ಈಗ ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ನವಪಂಚ ರಾಜಯೋಗ ವಿವಿಧ ಪ್ರಯೋಜನಗಳನ್ನು ನೀಡಲಿದೆ. ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಮತ್ತು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಅಲ್ಲದೆ ಪ್ರತಿಷ್ಠೆ ಹೆಚ್ಚಾಗುತ್ತದೆ. ಶನಿ ಮತ್ತು ಮಂಗಳ ಗ್ರಹದ ಆಶೀರ್ವಾದದಿಂದ ನಿಮಗೆ ಬಹಳಷ್ಟು ಹಣ ಗಳಿಸುವ ಅವಕಾಶ ಸಿಗುತ್ತದೆ. ಕುಟುಂಬದಲ್ಲಿ ಇಲ್ಲಿಯವರೆಗೆ ನಡೆಯುತ್ತಿದ್ದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇದು ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ನವಪಂಚ ರಾಜಯೋಗ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ದೀರ್ಘ ದಿನಗಳ ಕಠಿಣ ಪರಿಶ್ರಮದ ಫಲಗಳು ನಿಮಗೆ ಸಿಗಲಿವೆ. ಕುಟುಂಬದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ.
ಇದು ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಶನಿಯ ಆಶೀರ್ವಾದದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಕಾನೂನು ವಿಷಯಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಪ್ರೇಮ ಜೀವನ ಸಿಹಿಯಾಗಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ನವಪಂಚ ರಾಜಯೋಗ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುವಿರಿ. ಉದ್ಯಮಿಗಳು ಹೆಚ್ಚಿನ ಲಾಭ ಗಳಿಸುವರು. ಪ್ರತಿಯೊಂದು ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಶನಿ ಮತ್ತು ಮಂಗಳ ಗ್ರಹದ ಆಶೀರ್ವಾದದಿಂದಾಗಿ ಉತ್ತಮ ಭೌತಿಕ ಸುಖಗಳನ್ನು ಪಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಅದೃಷ್ಟದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications