ಕೋಟ್ಯಾಧಿಪತಿಯಾಗುವ ಭಾಗ್ಯ ಯಾರಿಗೆ? ಮಾಳವ್ಯ ರಾಜಯೋಗದಿಂದ ಈ 4 ರಾಶಿಗಳಿಗೆ ಶುಭಕಾಲ!
ಮುಂದಿನ ತಿಂಗಳು ಅಕ್ಟೋಬರ್ 20 ಬಹಳ ವಿಶೇಷ ದಿನ. ಈ ದಿನ ಶುಕ್ರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಯ ಅಧಿಪತಿ ಶುಕ್ರನೇ. ತನ್ನದೇ ಆದ ರಾಶಿಗೆ ಶುಕ್ರನ ಪ್ರವೇಶ ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡುವುದರ ಜೊತೆಗೆ ಅದೇ ರಾಶಿಯಲ್ಲಿರುವ ಬುಧನೊಂದಿಗೆ ಸಂಯೋಗವಾಗುತ್ತದೆ. ಇದರಿಂದ ಮೊದಲು ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗುವುದು.
ಶುಕ್ರ ತನ್ನದೇ ಆದ ರಾಶಿಯಲ್ಲಿದ್ದು, ಉಚ್ಛಸ್ಥಾನದಲ್ಲಿರುವ ಕಾರಣ ಈ ರಾಶಿಯಲ್ಲಿ ಮಾಳವ್ಯ ರಾಜಯೋಗ ರೂಪಿಸುತ್ತಿದ್ದಾನೆ. ಶುಕ್ರನು ತನ್ನ ರಾಶಿ ಅಥವಾ ಉಚ್ಛಸ್ಥಾನದಲ್ಲಿ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದಾಗ ಮಾಳವ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದು ಕೆಲವು ರಾಶಿಯವರ ಸಂತೋಷ, ಸಂಪತ್ತು, ನೆಮ್ಮದಿ ಮತ್ತು ಗೌರವ ಹೆಚ್ಚಿಸುವುದು. ಹಣದ ಸಮಸ್ಯೆ ನಿವಾರಣೆಯಾಗುವುದು.

Malavya Rajayoga: ಈ ರಾಶಿಯವರ ಭಾಗ್ಯ
ಕರ್ಕಾಟಕ ರಾಶಿ (Cancer)
ಮಾಳವ್ಯ ರಾಜಯೋಗದಿಂದ ಕರ್ಕಾಟಕ ರಾಶಿಯವರಿಗೆ ಹೆಚ್ಚಿನ ಪ್ರಯೋಜನವಾಗುವುದು. ಇಡುವ ಪ್ರತೀ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಹೊಸ ಕೆಲಸ ಶುರು ಮಾಡಬಹುದು. ಹೊಸ ಜವಾಬ್ದಾರಿ ಸಿಗುವುದು. ಉನ್ನತ ಸ್ಥಾನಕ್ಕೆ ಏರುವ ಅವಕಾಶ ಸಿಗುವುದು. ಹೊಸ ಕೆಲಸಕ್ಕೂ ಪ್ರಯತ್ನಿಸಬಹುದು. ಹೂಡಿಕೆ ಮಾಡುವುದಕ್ಕೆ ಸೂಕ್ತ ಸಮಯ. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.
ಸಿಂಹ ರಾಶಿ (Leo)
ಮಾಳವ್ಯ ರಾಜಯೋಗ ಸಿಂಹ ರಾಶಿಯವರಿಗೆ ಹೆಚ್ಚೇ ಶುಭ ಫಲ ನೀಡುವುದು. ಇಲ್ಲಿವರೆಗಿನ ಸೋಲು ಗೆಲುವಾಗಿ ಬದಲಾಗುವುದು. ವ್ಯವಹಾರ ಲಾಭದಿಂದಲೇ ಮುಂದುವರಿಯುವುದು. ಹಣ ಒಲಿದು ಬರುವುದು. ಗೌರವ ಹೆಚ್ಚಾಗುವುದು. ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಸುಲಭವಾಗಿ ನೆರವೇರುವುದು. ದೊಡ್ಡ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ವಿದ್ಯಾರ್ಥಿಗಳಿಗೆ ಈ ಅವಧಿ ಹೆಚ್ಚು ಅನುಕೂಲಕರವಾಗಿರುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಇದು ನಿಮಗೆ ಉತ್ತಮ ಸಮಯವಾಗುತ್ತಿದೆ. ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುವುದು.
ತುಲಾ ರಾಶಿ (Libra)
ತುಲಾ ರಾಶಿಯ ರಾಶಿಯ ಅಧಿಪತಿ ಶುಕ್ರ. ಅಲ್ಲದೆ ಶುಕ್ರನ ಸ್ಥಾನದಿಂದಾಗಿ ಇದೇ ರಾಶಿಯಲ್ಲಿ ಮಾಳವ್ಯ ರಾಜಯೋಗ ರೂಪುಗೊಳ್ತಾ ಇದೆ. ಇದರಿಂದ ಪ್ರತೀ ಹಂತದಲ್ಲಿಯೂ ಲಾಭವಾಗುವುದು. ವ್ಯವಹಾರ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಸಮೃದ್ಧಿ ಹೆಚ್ಚಾಗುವುದು. ಹಣದ ಹರಿವು ಹೆಚ್ಚಾಗುವುದು. ಆದಾಯದ ಮೂಲಗಳು ಹೆಚ್ಚಾಗುವುದು. ಸಾಲದಿಂದ ಮುಕ್ತಿ ಸಿಗುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಸಮಯ ಅನುಕೂಲಕರವಾಗಿರುವುದು.
ವೃಶ್ಚಿಕ ರಾಶಿ (Scorpio)
ಹಣಕಾಸಿನ ವಿಚಾರದಲ್ಲಿ ಅವಧಿ ನಿಮಗೆ ಅನುಕೂಲಕರವಾಗಿರುವುದು. ಆದಾಯದ ಮೂಲ ಹೆಚ್ಚಾಗುವುದು. ಹಣ ಗಳಿಸುವ ಅವಕಾಶ ಸಿಗುವುದು. ಬಡ್ತಿಯ ಅವಕಾಶವಿದೆ. ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುವುದು. ಆಸ್ತಿ ಖರೀದಿ ಮಾಡಬಹುದು. ವಾಹನ ಖರೀದಿ ಯೋಗವೂ ಇದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು.
ಜಾತಕದಲ್ಲಿ ಶುಕ್ರನ ಸ್ಥಾನ ಬಲಪಡಿಸಲು ಏನು ಮಾಡಬೇಕು ?
ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸಲು ಸಣ್ಣ ಕ್ರಮ ಅನುಸರಿಸಬೇಕು. ಇದಕ್ಕಾಗಿ ಹಾಲು, ಮೊಸರು ಅನ್ನವನ್ನು ದಾನ ಮಾಡಬೇಕು. ಬಿಳಿ ಬಟ್ಟೆಗಳನ್ನು ಕೂಡಾ ದಾನ ಮಾಡಬಹುದು. ಇಷ್ಟು ಮಾಡಿದರೆ ಶುಕ್ರನನ್ನು ಬಲಪಡಿಸಬಹುದು. ಶುಕ್ರವಾರ ಬಿಳಿ ಬಟ್ಟೆಗಳನ್ನು ಧರಿಸಿ ಮಹಿಳೆಗೆ ಮುತ್ತೈದೆ ಶೃಂಗಾರದ ವಸ್ತುಗಳನ್ನು ದಾನ ಮಾಡಬೇಕು. ಸುಗಂಧ ದ್ರವ್ಯವನ್ನು ದಾನ ಮಾಡಬೇಕು.


Click it and Unblock the Notifications
