ದೀಪಾವಳಿಗೂ ಮುನ್ನ ರಾಜಯೋಗದಿಂದ ಈ ರಾಶಿಯವರ ಮೇಲೆ ಲಕ್ಷ್ಮೀ ಕಟಾಕ್ಷ : ಮುಟ್ಟಿದ್ದೆಲ್ಲಾ ಚಿನ್ನ
Malavya Rajayoga: ಜ್ಯೋತಿಷ್ಯದ ಪ್ರಕಾರ, ಸಂಪತ್ತು, ಸಮೃದ್ಧಿ, ಪ್ರೀತಿ ಮತ್ತು ಸಂತೋಷಕ್ಕೆ ಕಾರಣವಾದ ಗ್ರಹ ಶುಕ್ರ. ಶುಕ್ರ ಅಕ್ಟೋಬರ್ 20ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ಶುಕ್ರನ ಅಧಿಪತ್ಯದ ರಾಶಿ. ಹಾಗಾಗಿ ತುಲಾ ರಾಶಿಗೆ ಶುಕ್ರನ ಪ್ರವೇಶ ಆಗ್ತಾ ಇದ್ದ ಹಾಗೆ ಮಾಳವ್ಯ ರಾಜಯೋಗ ರೂಪುಗೊಳ್ಳುತ್ತದೆ. ಮಾಳವ್ಯ ರಾಜಯೋಗ ಪಂಚ ಮಹಾಪುರುಷ ಯೋಗಗಳಲ್ಲಿ ಒಂದು. ಈ ಯೋಗ ಯಾರ ಜಾತಕದಲ್ಲಿ ಇರುವುದೋ ಅ ರಾಶಿಯವರು ಸಮೃದ್ದಿ ಜೀವನ ನಡೆಸುವರು. ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನ ಅನುಕೂಲಕರವಾಗಿಯೇ ಇರುವುದು.

Malavya Rajayoga: ಯಾವ ರಾಶಿಗೆ ಏನು ಲಾಭ?
ಶುಕ್ರ ಹಣ, ಐಷಾರಾಮಿ ಜೀವನ, ಪ್ರೀತಿ, ಸೌಂದರ್ಯ, ಸೌಕರ್ಯಗಳು ಮತ್ತು ಕಲೆಯ ಅಂಶ. ಶುಕ್ರ ಯಾವಾಗ ತನ್ನದೇ ಆದ ರಾಶಿ ಅಥವಾ ಉಚ್ಚ ರಾಶಿಯಲ್ಲಿದ್ದಾಗ ಮತ್ತು ಜಾತಕದ ಕೇಂದ್ರ ಸ್ಥಾನದಲ್ಲಿದ್ದಾಗ, ಮಾಳವ್ಯ ಯೋಗ ರೂಪುಗೊಳ್ಳುತ್ತದೆ. ಆದರೆ ಈ ಯೋಗದ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಒಂದೇ ರೀತಿ ಆಗಿರುವುದಿಲ್ಲ. ಜಾತಕದಲ್ಲಿ ಶುಕ್ರನ ಸ್ಥಾನ ಮತ್ತು ಇತರ ಗ್ರಹಗಳ ಪ್ರಭಾವದಂತಹ ಅಂಶದ ಆಧಾರದ ಮೇಲೆ ಫಲಿತಾಂಶ ಬದಲಾಗುವುದು.
ಮಾಳವ್ಯ ಯೋಗದಿಂದ ಲಾಭ ಪಡೆಯುವ ರಾಶಿಗಳು :
ಕರ್ಕಾಟಕ ರಾಶಿ (Cancer):
ಈ ಮಾಳವ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ವೃತ್ತಿಜೀವನದ (career) ದೃಷ್ಟಿಯಿಂದ ಅನುಕೂಲಕರವಾಗಿದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ತುಂಬಾ ಸಮಯದಿಂದ ಕಾಯ್ತಾ ಇದ್ದ ಬಡ್ತಿ ಈ ಅವಧಿಯಲ್ಲಿ ಸಿಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತ್ಮವಿಶ್ವಾಸದಿಂದ ಇರುವಿರಿ. ಮಾಡುವ ಎಲ್ಲಾ ಕೆಲಸ ಶುಭಫಲವನ್ನೇ ಕೊಡುವುದು. ನಿಮ್ಮ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹೇಳಬೇಕು. ಆಗ ಮಾತ್ರ ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಸಂಬಳ ಹೆಚ್ಚಳಕ್ಕೆ ಅವಕಾಶ ಇದೆ.
ಸಿಂಹ ರಾಶಿ (Leo):
ಅಕ್ಟೋಬರ್ 20 ರ ನಂತರ ಕೆಲಸವನ್ನು ಬದಲಿಸುವ ಉತ್ತಮ ಅವಕಾಶ ಸಿಗುವುದು. ನಿಂತು ಹೋಗಿದ್ದ ಹಳೆಯ ಯೋಜನೆ ಮತ್ತೆ ಶುರುವಾಗುವುದು. ವ್ಯವಹಾರ ವಿಸ್ತರಣೆಯ ಯೋಚನೆ ಇದ್ದರೆ ಇದುವೇ ಸರಿಯಾದ ಸಮಯ. ಹೊಸ ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು. ಹೂಡಿಕೆ ಮಾಡಲು ಅವಕಾಶ ಸಿಗಬಹುದು. ವಿದ್ಯಾರ್ಥಿಗಳಿಗೆ ಈ ಅವಧಿ ಹೆಚ್ಚು ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಸಕ್ಸಸ್ ಆಗುವರು.
ತುಲಾ ರಾಶಿ (Libra) :
ತುಲಾ ಶುಕ್ರನ ಸ್ವಂತ ರಾಶಿ. ಅಲ್ಲದೆ, ಈಗ ಇದೇ ರಾಶಿಗೆ ಶುಕ್ರನ ಪ್ರವೇಶ ಆಗ್ತಾ ಇದೆ. ಹಾಗಾಗಿ ಈ ಅವಧಿ ನಿಮಗೆ ಹೆಚ್ಚು ಅನುಕೂಲಕರವಾಗಿರುವುದು. ವ್ಯಾಪಾರ ಮಾಡುತ್ತಿರುವವರಿಗೆ ಹೊಸ ಅವಕಾಶ ಸಿಗಬಹುದು. ಅನಿರೀಕ್ಷಿತವಾಗಿ ಹಣದ ಲಾಭವಾಗುವುದು. ಆದಾಯದ ಹೊಸ ಮೂಲ, ಮಾರ್ಗ ತೆರೆದುಕೊಳ್ಳುವುದು. ವ್ಯವಹಾರ ವಿಸ್ತರಿಸಲು, ಹೂಡಿಕೆ ಮಾಡಲು ಸರಿಯಾದ ಸಮಯ. ಹಣದ ಸ್ಥಿತಿ ಅನುಕೂಲಕರವಾಗಿರುವುದು. ಜೀವನ ಸಂತೋಷ ಹೆಚ್ಚಾಗುವುದು. ಐಷಾರಾಮಿ ವಸ್ತು ಖರೀದಿಸುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯವರಿಗೆ ಅನಿರೀಕ್ಷಿತವಾಗಿ ಹಣದ ಲಾಭವಾಗುವುದು. ಹಿಂದೆ ಮಾಡಿದ ಹೂಡಿಕೆ ಲಾಭ ತರುವುದು. ಬಾಕಿ ಇರುವ ಹಣ ಕೈ ಸೇರುವುದು. ಎಲ್ಲಾ ಹಂತದಲ್ಲೂ ಲಾಭವಾಗುವುದು. ಆದಾಯ ಹೆಚ್ಚಳದ ಜೊತೆಗೆ, ಉಳಿತಾಯ ಮಾಡುವ ಅವಕಾಶಗಳೂ ಇರಬಹುದು. ಆದರೂ ಆತುರಕ್ಕೆ ಬಿದ್ದು, ಹಣಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ.
ದೀಪಾವಳಿಗೆ (deepavali festival) ಮೊದಲು ರೂಪುಗೊಳ್ಳುವ ಈ ಮಾಳವ್ಯ ರಾಜಯೋಗ ಕರ್ಕ, ಸಿಂಹ, ತುಲಾ ಮತ್ತು ವೃಶ್ಚಿಕ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು. ಆದರೂ ಇವೆಲ್ಲವೂ ಜ್ಯೋತಿಷ್ಯ ನಂಬಿಕೆಗಳ ಆಧಾರದ ಮೇಲೆ ಹೇಳುವ ಸಾಮಾನ್ಯ ಭವಿಷ್ಯವಾಣಿ ಎನ್ನುವುದು ನೆನಪಿರಲಿ. ವೈಯಕ್ತಿಕ ಜಾತಕಕ್ಕೆ ಅನುಸಾರವಾಗಿ ಫಲ ಬದಲಾಗಬಹುದು.


Click it and Unblock the Notifications
