Shiva's favorite zodiac signs: ಈ ರಾಶಿಯವರೆಂದರೆ ಶಿವನಿಗೆ ತುಂಬಾ ಅಚ್ಚುಮೆಚ್ಚು: ನಿಮ್ಮ ರಾಶಿ ಇದೆಯಾ?

ಹಿಂದೂ ಧರ್ಮದಲ್ಲಿ ಶಿವನನ್ನು ಸೃಷ್ಟಿಕರ್ತ ದೇವರು ಎಂದು ಪರಿಗಣಿಸಲಾಗುತ್ತದೆ. ಮಹಾ ಶಿವರಾತ್ರಿಯು ಶಿವ ದೇವನಿಗೆ ಸಮರ್ಪಿತವಾದ ಅತ್ಯಂತ ವಿಶೇಷ ದಿನವಾಗಿದೆ. ಈ ಮಹಾ ಶಿವರಾತ್ರಿಯವನ್ನು ಈ ವರ್ಷ ಮಾರ್ಚ್ 08 ರಂದು ಆಚರಿಸಲಾಗುತ್ತದೆ. ಈ ದಿನ ಶಿವನ ಭಕ್ತರು ಉಪವಾಸವನ್ನು ಮಾಡುತ್ತಾರೆ. ಜೊತೆಗೆ ಶಿವನನ್ನು ಪೂಜಿಸಲು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎಲ್ಲಾ ರಾಶಿಗಳು ವಿವಿಧ ದೇವತೆಗಳೊಂದಿಗೆ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದರೂ ಕೆಲವು ರಾಶಿಯವರು ಶಿವನಲ್ಲಿ ಬಲವಾದ ಭಕ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ ಶಿವನು ಆ ರಾಶಿಚಕ್ರದ ಚಿಹ್ನೆಗಳೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾನೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಆ ರಾಶಿಗಳು ಶಿವನ ನೆಚ್ಚಿನ ರಾಶಿಗಳಾಗಿರುತ್ತವೆ. ಅಲ್ಲದೆ ಹುಟ್ಟಿನಿಂದಲೇ ಶಿವನಿಂದ ಆಶೀರ್ವದಿಸಲ್ಪಡುತ್ತವೆ. ಹಾಗಾದರೆ ಈಗ ಯಾವ ರಾಶಿಗಳು ಶಿವನ ನೆಚ್ಚಿನ ರಾಶಿಗಳು ಎಂದು ನೋಡೋಣ.

 maha shivratri 2024 these 7 zodiac signs are lord shivas favourites in kannada

ಮೇಷ ರಾಶಿ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಈ ಮಂಗಳವು ಶಕ್ತಿ ಮತ್ತು ಧೈರ್ಯದ ಗ್ರಹವಾಗಿದೆ. ಈ ಮೇಷ ರಾಶಿಯ ಜನರು ಸಾಮಾನ್ಯವಾಗಿ ಶಕ್ತಿಯುತ ಮತ್ತು ಧೈರ್ಯಶಾಲಿಗಳಾಗಿರುತ್ತಾರೆ. ಈ ರಾಶಿಯವರಿಗೆ ಧೈರ್ಯ ಮತ್ತು ಅಪಾರ ಬುದ್ಧಿವಂತಿಕೆ ಇರಲು ಕಾರಣವೆಂದರೆ ಅವರಿಗೆ ಭಗವಾನ್ ಶಿವನ ಪರಿಪೂರ್ಣ ಆಶೀರ್ವಾದವಿರುವುದಾಗಿದೆ.

 maha shivratri 2024 these 7 zodiac signs are lord shivas favourites in kannada

ವೃಷಭ ರಾಶಿ

ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ಶುಕ್ರನನ್ನು ಪ್ರೀತಿ ಮತ್ತು ಸೌಂದರ್ಯದ ಗ್ರಹವೆಂದು ಪರಿಗಣಿಸಲಾಗಿದೆ. ಈ ವೃಷಭ ರಾಶಿಯ ಜನರು ಸದಾ ವಿಶ್ವಾಸಾರ್ಹರಾಗಿರುತ್ತಾರೆ. ಜೊತೆಗೆ ಇದು ಶಿವನಿಗೆ ಅತ್ಯಂತ ಪ್ರಿಯವಾದ ರಾಶಿಯಾಗಿದೆ. ಹೀಗಾಗಿ ಈ ರಾಶಿಯವರಿಗೆ ಸಹಜವಾಗಿಯೇ ಶಿವನ ಮೇಲೆ ಅಚಲವಾದ ಭಕ್ತಿ ಇರುತ್ತದೆ.

 maha shivratri 2024 these 7 zodiac signs are lord shivas favourites in kannada

ಕರ್ಕಟಕ ರಾಶಿ

ಚಂದ್ರನು ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ಈ ಚಂದ್ರನನ್ನು ಭಾವನೆಗಳು ಮತ್ತು ಅಂತಃಪ್ರಜ್ಞೆಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಕರ್ಕಟಕ ರಾಶಿಯವರು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತಾರೆ. ಈ ರಾಶಿಯವರೆಂದರೆ ಶಿವನಿಗೂ ತುಂಬಾ ಇಷ್ಟ.

 maha shivratri 2024 these 7 zodiac signs are lord shivas favourites in kannada

ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದಾನೆ. ಈ ಸೂರ್ಯನನ್ನು ನಾಯಕತ್ವದ ಗ್ರಹವೆಂದು ಪರಿಗಣಿಸಲಾಗಿದೆ. ಈ ಸಿಂಹ ರಾಶಿಯ ಜನರು ಯಾವಾಗಲೂ ಆತ್ಮವಿಶ್ವಾಸಿಗಳು ಮತ್ತು ಉದಾರವಾಗಿರುತ್ತಾರೆ. ಈ ಸಿಂಹ ರಾಶಿಯವರು ಸ್ವಾಭಾವಿಕವಾಗಿ ಭಗವಾನ್ ಶಿವನಿಗೆ ಬಹಳ ಭಕ್ತಿಯುಳ್ಳವರು. ಏಕೆಂದರೆ ಸಿಂಹ ರಾಶಿಯು ಶಿವನ ನೆಚ್ಚಿನ ರಾಶಿಚಕ್ರಗಳಲ್ಲಿ ಒಂದಾಗಿದೆ.

 maha shivratri 2024 these 7 zodiac signs are lord shivas favourites in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ಮಂಗಳವನ್ನು ಧೈರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ವೃಶ್ಚಿಕ ರಾಶಿಯವರಿಗೆ ಸೇರಿದ ಜನರು ಸ್ವಲ್ಪ ನಿಗೂಢವಾಗಿರುತ್ತಾರೆ. ಈ ರಾಶಿಯವರನ್ನೂ ಕೂಡ ಶಿವನು ಇಷ್ಟಪಡುತ್ತಾನೆ. ಈ ರಾಶಿಚಕ್ರದವರು ಹುಟ್ಟಿನಿಂದಲೇ ಶಿವನಿಂದ ಆಶೀರ್ವಾದ ಪಡೆದಿದ್ದಾರೆ.

 maha shivratri 2024 these 7 zodiac signs are lord shivas favourites in kannada

ಧನು ರಾಶಿ

ಧನು ರಾಶಿಯ ಅಧಿಪತಿ ಗುರು ಗ್ರಹವಾಗಿದೆ. ಈ ಗುರುವನ್ನು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಲಾಗಿದೆ. ಈ ಧನು ರಾಶಿ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಸಾಹಸಮಯರು, ಆಶಾವಾದಿಗಳಾಗಿರುತ್ತಾರೆ. ಶಿವನು ಧನು ರಾಶಿಯವರ ಆಧ್ಯಾತ್ಮಿಕ ಸ್ವಭಾವ ಮತ್ತು ಜ್ಞಾನಕ್ಕಾಗಿ ಒಲವು ತೋರುತ್ತಾನೆ ಎಂದು ನಂಬಲಾಗಿದೆ.

 maha shivratri 2024 these 7 zodiac signs are lord shivas favourites in kannada

ಮೀನ ರಾಶಿ

ಮೀನ ರಾಶಿಯ ಅಧಿಪತಿಯೂ ಗುರು ಆಗಿದೆ. ಈ ಮೀನ ರಾಶಿಯವರು ಸಾಮಾನ್ಯವಾಗಿ ಸಹಾನುಭೂತಿಯುಳ್ಳವರಾಗಿದ್ದಾರೆ. ಬಲವಾದ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಕಲಾತ್ಮಕರಾಗಿದ್ದಾರೆ. ಈ ಮೀನ ರಾಶಿಯವರಿಗೆ ಹುಟ್ಟಿನಿಂದಲೇ ಶಿವನ ಆಶೀರ್ವಾದ ಇದೆ. ಇದರಿಂದಾಗಿ ಈ ರಾಶಿಯವರಿಗೆ ಇತರ ರಾಶಿಗಳಿಗಿಂತ ಹೆಚ್ಚು ಶಿವಭಕ್ತಿ ಇರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+