ಜ್ಯೇಷ್ಠ ಮಾಸದ ವಾರದ ಪಂಚಾಂಗ : ಮೇ 24ರಿಂದ 30
ಜ್ಯೇಷ್ಠ ಮಾಸದ ಮೇ 24ರಿಂದ 30ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಮೇ.24. ರವಿವಾರ : ಆಶ್ಲೇಷಾ ನಕ್ಷತ್ರ. ದೂರ ಪ್ರಯಾಣಕ್ಕೆ ಸೂಕ್ತವಲ್ಲ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಮೇ.25. ಸೋಮವಾರ : ಮಘಾ. ರೋಹಿಣಿ ಮಳೆ ಆರಂಭದ ದಿನ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಮೇ.26. ಮಂಗಳವಾರ : ಪೂರ್ವಾಫಾಲ್ಗುಣಿ. ದೂರ ಪ್ರಯಾಣದಿಂದ ನಷ್ಟ. [ಸೋಂಬೇರಿಗಳು ಪೂರ್ವಾಫಾಲ್ಗುಣಿ ನಕ್ಷತ್ರದವರು]
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಮೇ.27. ಬುಧವಾರ : ಪೂರ್ವಾಫಾಲ್ಗುಣಿ. ದೂರ ಪ್ರಯಾಣದಿಂದ ಲಾಭ. ಎನ್ಸಿಸಿ ದಿನಾಚರಣೆ. ಕಚೇರಿಯ ಮುಖ್ಯಸ್ಥರೊಂದಿಗೆ ಪ್ರಮುಖವಾದ ವಿಷಯ ಚರ್ಚಿಸಲು ಸೂಕ್ತ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಮೇ.28. ಗುರುವಾರ : ಉತ್ತರಾಫಾಲ್ಗುಣಿ. ದೂರ ಪ್ರಯಾಣದಿಂದ ಸೌಖ್ಯ. ಉನ್ನತ ವ್ಯಾಸಂಗ ಆರಂಭಕ್ಕೆ ಸೂಕ್ತ. ಮನೆಯ ತಾರಸಿ ಕೆಲಸಕ್ಕೆ ಉತ್ತಮ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಮೇ.29. ಶುಕ್ರವಾರ : ಹಸ್ತಾ. ದೂರ ಪ್ರಯಾಣದಿಂದ ಆನಂದ. ಏಕಾದಶಿ. ಹೊಸ ಫ್ಯಾಕ್ಟರಿ ಮತ್ತು ಕೃಷಿಗೆ ಸಂಬಂಧಪಟ್ಟ ಕೆಲಸ ಕಾರ್ಯ ಆರಂಭಿಸಲು ಉತ್ತಮ. ['ಅಭಯಹಸ್ತ' ನೀಡುವ ಹಸ್ತಾ ನಕ್ಷತ್ರದವರು]
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಮೇ.30. ಶನಿವಾರ : ಚಿತ್ತಾ. ದೂರ ಪ್ರಯಾಣದಿಂದ ನಷ್ಟ. ಕಚೇರಿಯ ಮುಖ್ಯಸ್ಥರೊಂದಿಗೆ ಪ್ರಮುಖ ವಿಷಯ ಚರ್ಚಿಸಲು ಸೂಕ್ತ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ತಾರಸಿ ಕೆಲಸ ಬಿಟ್ಟು ಬೇರೆ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.
ಈ ವಾರದ ಗ್ರಹಗತಿ : ವೃಷಭ: ರವಿ+ಬುಧ+ಮಂಗಳ. ಮಿಥುನ: ಶುಕ್ರ. ಕರ್ಕ: ಗುರು+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.












Click it and Unblock the Notifications