ಜ್ಯೋತಿಷ್ಯ: ಗುರುಬಲದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದ ನರೇಂದ್ರ ಮೋದಿ

By: ನಾಗನೂರಮಠ ಎಸ್.ಎಸ್
Subscribe to Oneindia Kannada

ನೋಟು ನಿಷೇಧದ ನಂತರ ಬಂದ ಪ್ರಮುಖ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಗೆ ಕೆಲಸ ಮಾಡುತ್ತದೆ? 2017ರಲ್ಲಿ ಮೋದಿ ಭವಿಷ್ಯ ಹೇಗಿರುತ್ತದೆ ಎಂಬ ಬಗ್ಗೆ ಒನ್ ಇಂಡಿಯಾ ಕನ್ನಡದಲ್ಲಿ ಲೇಖನ ಪ್ರಕಟವಾಗಿತ್ತು. ಅದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ನೀವೂ ಒಮ್ಮೆ ನೆನಪಿಸಿಕೊಳ್ಳಿ.

ನರೇಂದ್ರ ಮೋದಿ ಅವರದು ಅನೂರಾಧಾ ನಕ್ಷತ್ರ ಎರಡನೇ ಪಾದ ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನ. ಈಗಾಗಲೇ ಪಕ್ಷದಲ್ಲಿ ಮತ್ತು ಅಧಿಕಾರದಲ್ಲಿ ರಾಜಕೀಯ ಉತ್ತುಂಗದಲ್ಲಿರುವ ಮೋದಿಯವರು ಇದೇ ರೀತಿ ಮುಂದಿನ ವರ್ಷವೂ ಮುಂದುವರೆಸಿಕೊಂಡು ಹೋಗುತ್ತಾರೆ. ಗುರು ಈಗ ಲಾಭ ಸ್ಥಾನದಲ್ಲಿದ್ದಾನೆ ಎನ್ನಲಾಗಿತ್ತು.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

Jupiter helps Narendra Modi in assembly election

ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ನರೇಂದ್ರ ಮೋದಿಯವರು ಮತ್ತೆ ಪವಾಡ ಮಾಡಲಿದ್ದಾರೆ. ಐದು ರಾಜ್ಯಗಳ ಚುನಾವಣೆಯಲ್ಲಿ ಕನಿಷ್ಠ ನಾಲ್ಕರಲ್ಲಾದರೂ ಮೋದಿ ಮೋಡಿ ಕೆಲಸ ಮಾಡುತ್ತದೆ ಎಂದು ಭವಿಷ್ಯ ನುಡಿಯಲಾಗಿತ್ತು. ಈಗಿನ ಫಲಿತಾಂಶವನ್ನು ನೋಡಿ ನೀವೇ ನಿರ್ಧರಿಸಿ: ಭವಿಷ್ಯ ನುಡಿದಿದ್ದರಲ್ಲಿ ಎಷ್ಟು ನಿಜವಾಗಿದೆ?

ವೃಶ್ಚಿಕ ರಾಶಿಯವರಿಗೆ ಇದು ಉತ್ತಮ ವರ್ಷವಾಗಿ ಪರಿವರ್ತನೆ ಆಗುವುದರಲ್ಲಿ ಸಂಶಯವಿಲ್ಲ. ಬಹಳ ದಿನದ ಅವರ ಕನಸುಗಳು ಈ ವರ್ಷ ಈಡೇರುವ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ ಎಂದು ವೃಶ್ಚಿಕ ರಾಶಿಯ ವರ್ಷ ಭವಿಷ್ಯದಲ್ಲಿ ನುಡಿದಿದ್ದರು ಪಂಡಿತ್ ವಿಠ್ಠಲ ಭಟ್. ಹೌದಲ್ಲವೆ? ಉತ್ತರಪ್ರದೇಶದಲ್ಲಿ ಬಿಜೆಪಿ ಜಯ ಗಳಿಸಬೇಕು ಎಂಬ ಕನಸು ಈಡೇರುತ್ತಿದೆ.[ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?]

ಇನ್ನು ಕನ್ಯಾ ರಾಶಿಗೆ ಗುರು ಪ್ರವೇಶವಾದ ನಂತರ ಗುರುವು ಲಾಭ ತಂದುಕೊಡುತ್ತದೆ. ಗೆಳೆಯರ ಸಂಖ್ಯೆ ಹೆಚ್ಚಲಿದೆ. ಈ ವರ್ಷ ಆರ್ಥಿಕವಾಗಿ ಉತ್ತಮ ಫಲಗಳು ಕಂಡುಬರುತ್ತವೆ. ಎಲ್ಲ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ ಎಂಬ ಭವಿಷ್ಯ ಕೂಡ ನಿಜವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime minister Narendra Modi gets astrological support. Jupiter blessing helps him to get more seats in Uttar Padesh and Uttarakhand. Good performance in Manipur, Goa.
Please Wait while comments are loading...