Channapattana By Election: ಚನ್ನಪಟ್ಟಣದಲ್ಲಿ ಯಾರಿಗೆ ಗೆಲುವು? ಜಯಶ್ರೀನಿವಾಸನ್ ಗುರೂಜಿ ಭವಿಷ್ಯ
ರಾಮನಗರ ಚನ್ನಪಟ್ಟಣ ಉಪಚುನಾವಣೆ ಮತದಾನ ಪೂರ್ಣಗೊಂಡಿದ್ದು ಇನ್ನೇನು ಫಲಿತಾಂಶ ಬರುವುದು ಮಾತ್ರ ಬಾಕಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಗೊಂಬೆನಾಡಿನಲ್ಲಿ ಯಾರು ಗೆಲ್ತಾರೆ ಅನ್ನೋದರ ಕೂತೂಹಲ ಹೆಚ್ಚಾಗಿದೆ. ಈ ಬಗ್ಗೆ ಜಯಶ್ರೀನಿವಾಸನ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಜಯಶ್ರೀನಿವಾಸನ್ ಗುರೂಜಿ ಭವಿಷ್ಯವಾಣಿ ಪ್ರಕಾರ ಗೊಂಬೆನಾಡಿನಲ್ಲಿ ಗೆಲ್ಲುವ ಅಭ್ಯರ್ಥಿ ಯಾರು?
ಚನ್ನಪಟ್ಟಣ ಕ್ಷೇತ್ರ
ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಮುಂಚಿತವಾಗಿ ಚನ್ನಪಟ್ಟಣದ ಬಗ್ಗೆ ಗುರೂಜಿ ಹೇಳಿರುವುದೇನು ಎಂದು ತಿಳಿಯೋಣ. ಚನ್ನಪಟ್ಟಣ (channapattana) 'c' ಅಕ್ಷರದಿಂದ ಆರಂಭವಾಗುತ್ತದೆ. ಕಾಂಗ್ರೆಸ್ (congress) ಕೂಡ 'c' ಅಕ್ಷರದಿಂದ ಆರಂಭವಾಗುತ್ತದೆ. 'c' ಅನ್ನೋದು (a,b,c) ಮೂರನೇ ಅಕ್ಷರ. 'c' ಅನ್ನು ಆಳುವುದು ಗುರು ಗ್ರಹವಾಗಿದೆ.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ (CP Yogeshwar). Y ಅಂದರೆ ಸೂರ್ಯ. ಸೂರ್ಯನಿಗೆ ಗುರು ಮಿತ್ರ ಗ್ರಹವಾಗಿದೆ. ಆದ್ದರಿಂದ ಇವರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ಹೋದ ತಕ್ಷಣ ಕಾಂಗ್ರೆಸ್ ಅವರು ಬೇಗ ಟಿಕೆಟ್ ಕೊಟ್ಟುಬಿಟ್ಟರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲ್ಲುವ ಸಾಧ್ಯತೆ ಕೊಂಚ ಹೆಚ್ಚಾಗಿದೆ ಎಂದು ಜಯಶ್ರೀನಿವಾಸನ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಆದರೆ ನಿಖಿಲ್ ಕುಮಾರಸ್ವಾಮಿಯವರು ಸಿಪಿ ಯೋಗೇಶ್ವರ್ ಅವರಿಗಿಂತ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಜಾತಕ
ಸಿಪಿ ಯೋಗೇಶ್ವರ್ ಅವರು ಹುಟ್ಟಿದ ದಿನಾಂಕ 29-8-1963. ಇವರ ಜನ್ಮ ಸಂಖ್ಯೆ ಎರಡು, ಇವರ ಭವಿಷ್ಯ ಸಂಖ್ಯೆ ಕೂಡ ಎರಡು ಇದೆ. ಈ ಎರಡನೇ ಸಂಖ್ಯೆಗೆ ಮೂರನೇ ಸಂಖ್ಯೆ ಅಷ್ಟೊಂದು ಸಹಕಾರ ಮಾಡುವುದಿಲ್ಲ. ಆದ್ದರಿಂದ ಇಲ್ಲಿ ಕೊಂಚ ಗೆಲ್ಲುವ ಸಾಧ್ಯತೆ ಕಡಿಮೆ ಇದೆ.

ಸಿಪಿ ಯೋಗೇಶ್ವರ್ ಗ್ರಹಗತಿಗಳು
ಇನ್ನೂ ಸಿಪಿ ಯೋಗೇಶ್ವರ್ ಅವರ ಸ್ವಂತ ಮನೆಯಲ್ಲಿ ಸೂರ್ಯನಿದ್ದಾನೆ. ಆದರೆ ಆ ಮನೆಯನ್ನು ಗುರು ನೋಡ್ತಾಯಿಲ್ಲ. ಮೀನ ರಾಶಿಯಲ್ಲಿರುವ ಗುರು ಸೂರ್ಯನನ್ನು ನೋಡ್ತಾಯಿಲ್ಲ. ಸೂರ್ಯ ಗ್ರಹ ಗಟ್ಟಿಯಾಗಿರುವುದಕ್ಕೆ ಸಿಪಿವೈ ಸರ್ಕಾರದಲ್ಲಿ, ರಾಜಕೀಯದಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ. ಆದರೆ ಎಲ್ಲೂ ಕೂಡ ಅವರು ನಿಲ್ಲುತ್ತಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಂಪ್ ಆಗುತ್ತಲೇ ಇದ್ದಾರೆ. ಇದಕ್ಕೆ ಕಾರಣ ಗುರು ಸೂರ್ಯನನ್ನು ನೋಡದೇ ಇರುವುದಾಗಿದೆ. ಸೂರ್ಯನಿಗೆ ಎಂಟನೆ ಮನೆ ಶನಿ, ಶನಿಗೆ ಎಂಟನೆ ಮನೆ ಸೂರ್ಯ ಇದೆ. ಹೀಗಿದ್ದಾಗ ಸ್ವಲ್ಪವೂ ಯಶಸ್ವಿಯಾಗಲು ಬಿಡುವುದಿಲ್ಲ. ಇದು ಬಿಟ್ಟರೆ ಅದು ಹಗರಣ. ಅದು ಬಿಟ್ಟರೆ ಇದು ಹಗರಣ ಇವರ ವಿರುದ್ಧ ಹೆಚ್ಚಾಗುತ್ತಲೇ ಇರುತ್ತವೆ.
ಎನ್‌ಡಿಎ
ಚನ್ನಪಟ್ಟಣಕ್ಕೆ ಚನ್ನಪಟ್ಟಣ ಅನ್ನೋ ಹೆಸರಿದೆ ಆದರೆ ಇದಕ್ಕೆ ಗೊಂಬೆ ನಾಡು ಅಂತ ಕರೆಯೋದೇ ಜಾಸ್ತಿ. ಬೊಂಬೆನಾಡು ಅನ್ನೋದು (bombenadu) 'b' ಎನ್ನುವ ಅಕ್ಷರದಿಂದ ಆರಂಭವಾಗುತ್ತದೆ ಮತ್ತು ಬಿಜೆಪಿ ಕೂಡ 'b' ಎಂಬ ಅಕ್ಷರದಿಂದ ಆರಂಭವಾಗುತ್ತದೆ. ಎರಡೂ ಒಂದೇ ಆಗಿರುವುದರಿಂದಲೂ ಸ್ವಲ್ಪ ಗೆಲುವಿನ ಸಾಧ್ಯತೆ ಇದೆ. ಅಲ್ಲದೆ ನಿಖಿಲ್ ಕುಮಾರ್ ಸ್ವಾಮಿ (Nikhil kumarswamy) ಹೆಸರು 'n' ಎನ್ನುವ ಅಕ್ಷರದಿಂದ ಆರಂಭವಾಗುತ್ತದೆ. ಎನ್‌ಡಿಎ (NDA) ಕೂಡ 'n' ಅಕ್ಷರದಿಂದ ಆರಂಭವಾಗುತ್ತದೆ. ಇಲ್ಲೂ ಕೂಡ 'N' ಅನ್ನೋದು ಮೊದಲ ಅಕ್ಷರವಾಗಿದೆ.
ಅಕ್ಷರಗಳು ಅಂಕಿಗಳು ಮನುಷ್ಯನ ಎರಡು ಕಣ್ಣುಗಳು ಇದ್ದಂತೆ. ಇವು ಮ್ಯಾಚ್ ಆದರೆ ಲೈಫ್ ಅಲ್ಲಿ ಸಕ್ಸಸ್ ಆದಂತೆ. ನೀವೇನೇ ಮಾತನಾಡಿದರು ಅಂಕಿ ಅಂಶಗಳು ಬೇಕು. ಇಲ್ಲದೇ ಇದ್ದರೆ ನೀವು ಏನೇ ಮಾತನಾಡಿದರೂ ಅದು ಉಡಾಫೆ ಮಾತು ಆಗುತ್ತದೆ. ನೀರಿನಲ್ಲಿ ಹೋಮ ಮಾಡುತ್ತದೆ.
ನಿಖಿಲ್ ಕುಮಾರಸ್ವಾಮಿ ಜಾತಕ
ಸಿಪಿ ಯೋಗೇಶ್ವರ್ ಬರ್ತ್ ನಂಬರ್ 2ರಿಂದ ಆರಂಭವಾಗುತ್ತದೆ. ಅವರ ಭವಿಷ್ಯ ನಂಬರ್ ಕೂಡ 2 ಆಗಿದೆ. ಅಲ್ಲದೆ ನಿಖಿಲ್ ಕುಮಾರಸ್ವಾಮಿ ಅವರ ಡೇಟ್ ಆಫ್ ಬರ್ತ್ 22 ಆಗಿದೆ. 2+2= 4, 4ನಂಬರ್‌ಗೆ 2 ನಂಬರ್ ವಿರುದ್ಧವಾದ ನಂಬರ್ ಆಗಿದೆ. ಈ ಎರಡು ನಂಬರ್‌ಗಳು ಹಾವು ಮುಂಗಸಿಯಂತೆ. ಇವೆರೆಡು ನಂಬರ್‌ಗಳನ್ನು ಹಾಲು ಜೇನು ಮಾಡಲು ಆಗುವುದಿಲ್ಲ.
ನಿಖಿಲ್ ಕುಮಾರಸ್ವಾಮಿ ಅವರು ಹುಟ್ಟಿರುವುದು 1988. ಇಬ್ಬರಿಗೂ ಕೂಡ ಗುರು ಗ್ರಹ ಮೀನ ರಾಶಿಯಲ್ಲಿ ಇದೆ. ಇಬ್ಬರೂ ಕೂಡ ದೈವ ಭಕ್ತರು. ಹೀಗಾಗಿ ಇವರಿಬ್ಬರೂ ಕೂಡ ಸ್ಟ್ರಾಂಗ್ ಆದ ಅಭ್ಯರ್ಥಿಗಳಾಗುತ್ತಾರೆ. ನಾನು ನಾನು ಅನ್ನೋದು ಇಬ್ಬರಿಗೂ ಇರುತ್ತದೆ. ಇವರಿಬ್ಬರಲ್ಲಿ ಗೆದ್ದವರು ಮಹಾರಾಜ ಆಗುತ್ತಾರೆ. ಹೀಗಾಗಿ ಇವರಿಬ್ಬರಲ್ಲಿ ಹೊಡೆದಾಟ ತೀವ್ರವಾಗಿರುತ್ತದೆ. ಅಂದರೆ ಕಠಿಣ ಸ್ಪರ್ಧೆಯನ್ನು ಇವರಿಬ್ಬರೂ ನೀಡುತ್ತಾರೆ.
ನಿಖಿಲ್ ಕುಮಾರಸ್ವಾಮಿ ಗ್ರಹಗತಿಗಳು
ಗುರು ಗ್ರಹಕ್ಕೆ ಅನ್ನೊಂದನೆ ಮನೆಯಲ್ಲಿ ಸೂರ್ಯ ಇದೆ. ಸೂರ್ಯನ ಜೊತೆ ಬುಧ ಕೂಡ ಇದೆ. ಇದರಿಂದ ಬುಧಾದಿತ್ಯ ಯೋಗ ಕೂಡ ನಿಖಿಲ್ ಕುಮಾರಸ್ವಾಮಿ ಅವರಿಗಿದೆ. ಇಷ್ಟಿದ್ದರೂ ಕೂಡ ಅವರು ಮಂಡ್ಯದಲ್ಲಿ ಸೋತರು. ರಾಮನಗರದಲ್ಲಿ ಸೋತರು. ಆದರೆ ಚನ್ನಪಟ್ಟಣ ಅಂದರೆ 'c' ಜೆಡಿಎಸ್ 'j' ಅಂದರೆ ಸೂರ್ಯ, ಇವರು ಹುಟ್ಟಿರುವುದು 22 ರಾಹು. ಸೂರ್ಯನ ನೆರಳಿನ ಗ್ರಹ ಇವರಿಗೆ ಸಹಕಾರ ಮಾಡುತ್ತದೆ. ಆಮೇಲೆ ಅವರು ತಂದೆ ಹುಟ್ಟಿರೋದು ಕೇತು ಗ್ರಹ. ನಿಖಿಲ್ ಹುಟ್ಟಿರುವುದು ರಾಹು ಗ್ರಹ. ರಾಹು ಕೇತು ಸೇರಿದರೆ ರುಂಡ ಮುಂಡ ಸೇರುತ್ತೆ. ಆಗ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಗೆಲುವು ಬಲವಾಗಿ ಎದ್ದು ಕಾಣಿಸುತ್ತಿದೆ.
ಅಂಕಿಗಳು ಅಕ್ಷರಗಳು ನಮಗೆ ಗ್ರಹಗಳ ಜೊತೆಗೆ ಸೇರಿಸಿದಾಗ ಮಾತ್ರ ಜಾತಕ ಹೇಳಲು ಸಾಧ್ಯ. ಪಾರ್ಲಿಮೆಂಟ್ ಅಲ್ಲೂ ನಂಬರ್‌ಗಳು ಬೇಕಾಗುತ್ತವೆ.
ನವೆಂಬರ್ 13ಕ್ಕೆ ಚನ್ನಪಟ್ಟಣ ಉಪಚುನಾವಣೆ ನಡೆದಿದೆ. ದಿನಾಂಕ 22ಕ್ಕೆ ನಿಖಿಲ್ ಹುಟ್ಟಿದ್ದಾರೆ. 1+3=4, 2+2=4 ಎರಡೂ ಕೂಡ ಮ್ಯಾಚ್ ಆಗಿದೆ. ಇದು ನಿಖಿಲ್ ಗೆಲ್ಲವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ. ಇನ್ನೂ 23ಕ್ಕೆ ಫಲಿತಾಂಶವಿದೆ. 2+3=5, 5 ಎನ್ನುವುದು ಬುಧ ಗ್ರಹ. ಎನ್‌ಡಿಎ ನಿಖಿಲ್ ಅಭ್ಯರ್ಥಿ 5. N ಅಂದರೆ 5. ಫಲಿತಾಂಶ ಕೂಡ 5ರಂದೇ ಬರುವುದರಿಂದ ನಿಖಿಲ್ ಗೆಲ್ಲುವ ಸಾಧ್ಯತೆ ತುಂಬಾ ಇದೆ.
ಆದ್ದರಿಂದ ನಿಖಿಲ್ ಕುಮಾರಸ್ವಾಮಿ ಅವರು ಸಿಪಿ ಯೋಗೇಶ್ವರ್ ಅವರಿಗೆ ಹೋಲಿಸಿದರೆ ಗೆಲ್ಲಲು ಒಂದು ಕೈ ಮೇಲಿದ್ದಾರೆ ಅಂತಲೇ ಹೇಳಬಹುದು. ಬಿಗ್ ಫೈಟ್ ಇದಾಗಿದೆ ಎಂದು ಅಸ್ಟ್ರೋ ನ್ಯೂಮೊರಾಲಜಿ ಹೇಳುತ್ತದೆ ಎಂದು ಜಯಶ್ರೀನಿವಾಸನ್ ಗುರೂಜಿ ಹೇಳಿದ್ದಾರೆ. ನಂಬರ್ ಅಲ್ಲದೆ ಗ್ರಹಗತಿಗಳ ಸ್ಥಾನಗಳೂ ತುಂಬಾ ಮುಖ್ಯವಾಗುತ್ತವೆ. ಆದ್ದರಿಂದ ಈ ಬಾರಿ ಗೊಂಬೆನಾಡಿನಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು ಎಂದು ಜಯಶ್ರೀನಿವಾಸನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.












Click it and Unblock the Notifications