• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!

By ಪಂಡಿತ್ ವಿಠ್ಠಲ ಭಟ್
|
ನವಗ್ರಹಗಳಲ್ಲಿ ಎಂಟನೆ ಗ್ರಹವಾದ ರಾಹು ಗ್ರಹದ ಉತ್ಪತ್ತಿಯ ಪುರಾಣೋಕ್ತ ಹಿನ್ನೆಲೆ ಎಲ್ಲರಿಗೂ ತಿಳಿದಿದ್ದೆ ಆದರೂ ಆ ಗ್ರಹದ ಪ್ರಭಾವ ಮನುಷ್ಯನ ಮೇಲೆ ಹೇಗೆ ಇರುತ್ತದೆ ಎಂದು ತಿಳಿಯಲು ಜ್ಯೋತಿಷ್ಯ ಶಾಸ್ತ್ರ ಬಹಳ ಸಹಕಾರಿ.

ರಾಹು ಗ್ರಹದ ಅಸ್ತಿತ್ವ ಹಾಗೂ ಅದರ ಬಗ್ಗೆ ಪುರಾತನ ಗ್ರಂಥಗಳಲ್ಲಿನ ಉಲ್ಲೇಖ ಈ ಎರಡನ್ನೂ ಸಹ ಕೇವಲ ತಾರ್ಕಿಕ ಮನೋಭಾವದಿಂದ ಅಧ್ಯಯನ ಮಾಡದೇ ಫಲ ಜ್ಯೋತಿಷ್ಯ ಪ್ರಕಾರವಾಗಿ ಪ್ರಸ್ತುತ ಜನರು ಅನುಭವಿಸುತ್ತಿರುವ ನಾನಾ ಕಷ್ಟಗಳಲ್ಲಿ ರಾಹುವಿನ ಪ್ರಭಾವ ಗಮನಿಸಿದಾಗ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ.[ಜ್ಯೋತಿಷ್ಯ: ವ್ಯಾಪಾರದ ಲಾಭ-ನಷ್ಟಕ್ಕೆ ಕಾರಣ ಮತ್ತು ಪರಿಹಾರ]

ಅಷ್ಟಮ ವ್ಯಯೇ ರಾಹುಪಾಪಯುಕ್ತೆ ತಿಥಿ ವಿಕ್ಷೀತೆ |

ಚರಾದಿವ್ರಣ ಪೀಡಾಚ ಸರ್ವತ್ರ್ಯೆವಪುಜಾಯತೆ ||

ರಾಜದ್ವಾರ ಜನದ್ವೇಷ ಇಷ್ಟ ಬಂಧು ವಿನಾಶನಮ್ |

ದಾರಪುತ್ರಾದಿ ಜಾಪೀಡಾ ಜಾಯತೆ ನಾತ್ರ ಸಂಶಯಃ ||

ಎಂದು ಪರಾಶರ ಮಹರ್ಷಿಗಳು ತಮ್ಮ ಹೋರಾ ಗ್ರಂಥದಲ್ಲಿ ಹೇಳಿದಂತೆ ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ರಾಹು ಪಾಪಗ್ರಹ ದೃಷ್ಟನಾದರೆ ತನ್ನ ಮಹಾದಶೆ ಅಥವಾ ಅಂತರ ದೆಶೆಯಲ್ಲಿ ಕಳ್ಳತನ ಆಗಿ ನಷ್ಟ, ವೃಣಾದಿ ಆರೋಗ್ಯ ಹಾನಿ ಹಾಗೂ ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳಿಂದ ವೈರತ್ವ, ನೆಂಟರಿಷ್ಟರು ಹಾಗೂ ಬಂಧುಗಳಿಂದ ಜಗಳ, ಹೆಂಡತಿಯೊಂದಿಗೆ ವಿರಸ ಮಕ್ಕಳೊಂದಿಗೆ ಮನಸ್ತಾಪ ಇತ್ಯಾದಿ ತೊಂದರೆಗಳನ್ನು ನೀಡುತ್ತಾನೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ನ್ಯಾಯಾಲಯಕ್ಕೆ ಅಲೆದಾಟ

ನ್ಯಾಯಾಲಯಕ್ಕೆ ಅಲೆದಾಟ

ಇಲ್ಲಿ ಅನುಭವೊಕ್ತಿಯಂತೆ ಗಮನಿಸಲೇ ಬೇಕಾದ ಅಂಶ ಎಂದರೆ ರಾಹು ಜಾತಕದಲ್ಲಿ ದೋಷಪ್ರದನಾಗಿದ್ದರೆ ರಾಹು ದಶೆಯಲ್ಲಿ ನ್ಯಾಯಲಯಗಳಿಗೆ ಅಲೆದಾಟವನ್ನೂ ಉಂಟುಮಾಡುತ್ತಾನೆ. ಇದೇ ರಾಹು ಪ್ರಯಾಣ ಕಾರಕನೂ ಆಗಿರುವುದರಿಂದ ಜಾತಕದಲ್ಲಿ ಹತ್ತನೆ ಮನೆಯಲ್ಲಿ ಇದ್ದರೆ ಉದ್ಯೋಗ ನಿಮಿತ್ತ ಹತ್ತಾರು ಸ್ಥಳಗಳಿಗೆ ಪ್ರಯಾಣವನ್ನು ನೀಡುತ್ತಾನೆ. ವಿದೇಶ ಪ್ರಯಾಣ ಯೋಗದಲ್ಲಿ ರಾಹು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾನೆ.

ವಿದೇಶದಲ್ಲಿ ಉದ್ಯೋಗ

ವಿದೇಶದಲ್ಲಿ ಉದ್ಯೋಗ

ಆದ್ದರಿಂದಲೇ ವಿದೇಶದಲ್ಲಿ ಉದ್ಯೋಗ ಮಾಡುವ ಉತ್ತಮ ವಿದ್ಯಾ ಅರ್ಹತೆ ಅನುಭವ ಎರಡೂ ಇದ್ದರೂ ಜಾತಕದಲ್ಲಿ ರಾಹುವಿನ ಬಲದ ಕೊರತೆಯಿಂದಾಗಿ ಎಷ್ಟೋ ಜನ ವಿದೇಶಕ್ಕೆ ಹೊಗಲಾಗದೇ ಇಲ್ಲೇ ಸಿಕ್ಕ ಚಿಕ್ಕ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ತೃಪ್ತಿ ಪಡ ಬೇಕಾಗಿದೆ.

ಭೂಮಿಯಲ್ಲಿ ರಾಹು ನಡೆ

ಭೂಮಿಯಲ್ಲಿ ರಾಹು ನಡೆ

ಇನ್ನು ಭೂ ವ್ಯವಹಾರ ಮಾಡುವ ಜನ ಗಮನಿಸಲೇಬೇಕಾದ ಅಂಶ ಎಂದರೆ ಭೂಮಿಯಲ್ಲಿ ರಾಹುನಡೆ! ಯಾವ ಜಾಗದಲ್ಲಿ ರಾಹು ನಡೆ ಇರುತ್ತದೆಯೋ ಅಂಥ ಸ್ಥಳ ವಾಸಕ್ಕೆ ಯೋಗ್ಯ ಇರುವುದಿಲ್ಲ. ಅಷ್ಟೇ ಅಲ್ಲ ಅದನ್ನು ಖರಿದಿಸಿದವರಿಗೆ ಆ ಜಾಗದಲ್ಲಿ ಮನೆ ಕಟ್ಟಲೂ ಆಗುವುದಿಲ್ಲ ಅಥವಾ ಅದನ್ನು ಮಾರುವುದಕ್ಕೂ ಆಗುವುದಿಲ್ಲ.

ಸಂಧಿ ದೋಷದ ಶಾಂತಿ

ಸಂಧಿ ದೋಷದ ಶಾಂತಿ

ಅದೇ ರಾಹು ನಡೆ ದೋಷ ಹೆಚ್ಚು ಇದ್ದರೆ ಆ ಜಾಗ ವ್ಯಾಜ್ಯದಲ್ಲಿ ಸಿಕ್ಕಿ ಅದನ್ನು ಪಡೆಯಲು ನ್ಯಾಯಾಲಯದ ಕದ ತಟ್ಟುವಂತೆ ಮಾಡುತ್ತದೆ, ಇನ್ನು ರಾಹು ದಶೆ ಮನುಷ್ಯನಿಗೆ ಬರಬೇಕಾದರೆ ಕುಜದೆಶೆ ಮುಗಿದ ನಂತರವೇ ಆದ್ದರಿಂದ ಅಲ್ಲಿ ಕುಜ-ರಾಹು ಸಂಧಿ ದೋಷ ಉಂಟಾಗುತ್ತದೆ. ಮೊದಲೇ ತಿಳಿದು ಶಾಂತಿ ಹವನ ಕರ್ಮಗಳನ್ನು ಮಾಡಿಸದೇ ಇದ್ದ ಪಕ್ಷದಲ್ಲಿ ರಾಹು ದಶೆಯ ಪ್ರಾರಂಭದಲ್ಲಿಯೇ ರಸ್ತೆ ಅಪಘಾತ ಅಥವಾ ಅಗ್ನಿ ಅನಾಹುತ ಆಗುವ ಸಂಭವ ಇರುತ್ತದೆ.

ವೃಥಾ ಪ್ರಯಾಣ, ಅನಗತ್ಯ ಖರ್ಚು

ವೃಥಾ ಪ್ರಯಾಣ, ಅನಗತ್ಯ ಖರ್ಚು

ತನ್ನ ದಶಾಕಾಲ ಪ್ರಾರಂಭವಾದ ನಂತರ ಹದಿನೆಂಟು ವರ್ಷ ಇರುವ ರಾಹು ತನ್ನ ದಶಾಕಾಲದ ಆರಂಭದಲ್ಲಿ ನೋಡಲು ತೆಳ್ಳಗೆ ಸಣ್ಣಗೆ ಇರುವವರನ್ನು ಕೇವಲ ಎರಡು ಮೂರು ವರುಷಗಳಲ್ಲಿ ದಪ್ಪಗಾಗಿಸಿ ಬಿಡುತ್ತಾನೆ. ನಂತರ ತನ್ನ ದಶಾ ಕಾಲದಲ್ಲಿ ಅತ್ಯಂತ ಹೆಚ್ಚು ಹಣ ಖರ್ಚನ್ನು ಮಾಡಿಸುವ ರಾಹು ವೃಥಾ ಪ್ರಯಾಣವನ್ನು ಹೆಚ್ಚುಸುತ್ತಾನೆ. ಇದರಿಂದಾಗಿ ಒಂದೇ ಓಡಾಟದಲ್ಲಿ ಸ್ವಲ್ಪವೇ ಖರ್ಚಿನಲ್ಲಿ ಮುಗಿಯ ಬೇಕಾದ ಕೆಲಸಗಳು ರಾಹು ದಶೆಯಲ್ಲಿ ಇರುವವರು ಮಾಡಲು ಕೈ ಹಾಕಿದರೆ ಹತ್ತಾರು ಓಡಾಟಗಳು ಸಾವಿರಾರು ಅಥವಾ ಲಕ್ಷಾಂತರ ರೂಪಾಯಿಗಳು ಖರ್ಚಾದ ನಂತರವು ಕೆಲಸ ಆಗದೇ ಚಿಂತಾಕ್ರಾಂತರಾಗಿರುತ್ತಾರೆ.

ರಾಹು ದೋಷಕ್ಕೆ ಪರಿಹಾರಗಳು

ರಾಹು ದೋಷಕ್ಕೆ ಪರಿಹಾರಗಳು

ಇಂಥ ಯಾವುದೇ ರಾಹು ಗ್ರಹದ ದೋಷದಿಂದಾಗಿ ಕಷ್ಟ ಪಡುವವರು ಪರಿಹಾರಕ್ಕೆ ರಾಹು ಮಂತ್ರ ಜಪ ತರ್ಪಣ ಹಾಗೂ ಶಾಂತಿ ಹವನ ಮಾಡಿಸಬಹುದು. ಜಾತಕದಲ್ಲಿ ರಾಹು ಉತ್ತಮ ಸ್ಥಿತಿಯಲ್ಲಿ ಇದ್ದು, ರಾಹು ದಶೆ ನೆಡೆಯುತ್ತಾ ಇದ್ದರೆ ಉತ್ತಮ ಗುಣಮಟ್ಟದ ಗೋಮೇಧಕ ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ, ಕ್ರಮವಾಗಿ ಅದನ್ನು ಬುಧವಾರ ಜಲ, ಗುರುವಾರ ಹಾಲು ಹಾಗೂ ಶುಕ್ರವಾರ ಉದ್ದಿನ ಬೇಳೆಯಲ್ಲಿ ಇರಿಸಿ ಸಂಸ್ಕಾರ ಅದ ನಂತರ ಶನಿವಾರದಂದು ಸೂರ್ಯೋದಯಕ್ಕೆ ಸರಿಯಾಗಿ ಅದನ್ನು ಪೂಜಿಸಿ ಧರಿಸುವುದು ಅಥವಾ ಸಂಪುಟಿ ದುರ್ಗಾ ಸಪ್ತಶತೀ ಪಾರಾಯಣ, ಉದ್ದಿನ ಬೇಳೆ ದಾನ, ರಾಹು ಕಾಲದಲ್ಲಿ ದುರ್ಗಾದೇವಿಗೆ ನಿಂಬೆ ದೀಪ ಹಚ್ಚುವುದು ಮಾಡಬಹುದು, ಇನ್ನು ಮಠಗಳಲ್ಲಿ ವೇದ ವ್ಯಾಸಂಗ ಮಾಡುತ್ತಿರುವ ಬ್ರಹ್ಮಚಾರಿಗಳ ಆರಾಧನೆ, ಅರಿಶಿನದಿಂದ ನಾಗನಿಗೆ ಅರ್ಚನೆ, ನಾಗಪ್ರತಿಷ್ಠೆ ಇತ್ಯಾದಿಗಳಿಂದಲ್ಲೂ ನಾವು ತಕ್ಕ ಮಟ್ಟಿಗೆ ರಾಹು ದೋಷದಿಂದ ಮುಕ್ತವಾಗಬಹುದು. ಆದರೆ ಒದಗಿ ಬಂದಿರುವ ಸಮಸ್ಯೆಗೆ ಸರಿಯಾದ ಪರಿಹಾರ ತಿಳಿಯಲು ಜಾತಕದ ಪರಿಶೀಲನೆ ಅಥವಾ ಸ್ಥಳದಲ್ಲಿ ರಾಹು ನಡೆ ಇದ್ದಾಗ ಸ್ಥಳ ಪರೀಕ್ಷೆ ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ

ಪಂ.ಶ್ರೀ ಪ್ರಸನ್ನ ವಿಠ್ಠಲ ಭಟ್ಟರು, ಮೊಬೈಲ್ : 9845682380 ಸಂಪರ್ಕಿಸಿ

English summary
Good and bad effects of Rahu on the basis of placement in horoscope according to vedic astrology, explains astrologer Vittala Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X