ಎಷ್ಟನೇ ವಯಸ್ಸಿನಲ್ಲಿ ನಿಮಗೆ ಸಿಗುವುದು ಯಶಸ್ಸು? ಹುಟ್ಟಿದ ದಿನಾಂಕದ ಮೂಲಕವೇ ತಿಳಿದುಕೊಳ್ಳಿ ಭವಿಷ್ಯ

ನೀವು ನೋಡಿರಬಹುದು ಹೆಚ್ಚಿನವರ ಜೀವನದಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿ ಬಿಡುತ್ತದೆ. ಅಂದರೆ ಏನೂ ಇಲ್ಲದವರು ಕೂಡಾ ಒಮ್ಮೆಲೇ ಸಿರಿವಂತರಾಗುವ ಸಮಯ ಬರುತ್ತದೆ. ಇದನ್ನು ಜೀವನದ ಟರ್ನಿಂಗ್‌ ಪಾಯಿಂಟ್‌ ಎಂದು ಕರೆಯಲಾಗುತ್ತದೆ. ಕೆಲವರು ಎಷ್ಟೇ ಪರಿಶ್ರಮ ಪಟ್ಟರೂ ಆ ಟರ್ನಿಂಗ್‌ ಪಾಯಿಂಟ್‌ ಸಿಗುವುದಿಲ್ಲ.ಸಂಖ್ಯಾ ಶಾಸ್ತ್ರಕ್ಕೂ ನಿಮ್ಮ ಜೀವನದ ಟರ್ನಿಂಗ್‌ ಪಾಯಿಂಟ್‌ಗೂ ಸಂಬಂಧ ಇದೆಯಂತೆ. ಇದೇ ಟರ್ನಿಂಗ್‌ ಪಾಯಿಂಟ್‌ ನಿಮಗೆ ಅದೃಷ್ಟ, ಶ್ರೀಮಂತಿಕೆ, ದಾಂಪತ್ಯ ಫಲ, ಯಶಸ್ಸು ಇತ್ಯಾದಿಗಳನ್ನು ನೀಡುತ್ತದೆ ಎನ್ನುತ್ತದೆ ಸಂಖ್ಯಾಶಾಸ್ತ್ರ. ನಿಮ್ಮ ಹುಟ್ಟಿದ ದಿನಕ್ಕೂ ಸಂಖ್ಯಾಶಾಸ್ತ್ರದ ಅದೃಷ್ಟದ ಸಂಖ್ಯೆಗೂ ಲಿಂಕ್‌ ಇದೆ. ಆ ಸಂಖ್ಯೆಯನ್ನು ರಾಡಿಕ್‌ ಸಂಖ್ಯೆ ಅಥವಾ ಮೂಲಾಂಕ ಎನ್ನುತ್ತಾರೆ. ಈ ಮೂಲಾಂಕ ಆಧರಿಸಿ ನಿಮ್ಮ ಜೀವನದ ಪೀಕ್‌ ಅನ್ನುವಂತ ಯಶಸ್ಸು ಯಾವಾಗ ಸಿಗುತ್ತದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ.

ರಾಡಿಕ್‌ ಸಂಖ್ಯೆ ಅಥವಾ ಮೂಲಾಂಕ ಗುರುತಿಸುವುದು ಹೇಗೆ?

ಯಾವ ವಯಸ್ಸಿನಲ್ಲಿ ಅದೃಷ್ಟ ಬದಲಾಗುತ್ತದೆ? ಎಂಬುದು ನಿಮ್ಮ ಮೂಲಾಂಕವನ್ನು ಅವಲಂಬಿಸಿದೆ ಎನ್ನುತ್ತದೆ ಸಂಖ್ಯಾಶಾಸ್ತ್ರದ ಜ್ಯೋತಿಷ್ಯ.

Life Turning Point

1 ರಿಂದ 9 ರ ತನಕ ರಾಡಿಕ್‌ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಹಾಗಾದರೆ, ಈ ಮೂಲ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ? ಸರಳವಾಗಿ ಹೇಳುವುದಾದರೆ ನಿಮ್ಮ ಜನ್ಮ ದಿನಾಂಕದ ಮೊತ್ತವು ನಿಮ್ಮ ರಾಡಿಕ್ಸ್ ಸಂಖ್ಯೆಯಾಗಿದೆ. ಉದಾಹರಣೆಗೆ, ಯಾವುದೇ ತಿಂಗಳ 1, 10, 19, ಅಥವಾ 28 ರಂದು ಜನಿಸಿದ ಜನರು 1 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಇದರ ಲೆಕ್ಕಾಚಾರ ಹೇಗೆಂದರೆ ಉದಾಹರಣೆಗೆ ಜನ್ಮದಿನಾಂಕ 28 ಆಗಿದ್ದರೆ 2 + 8 = 10, 1 + 0 = 1. ನಿಮ್ಮ ಮೂಲಾಂಕ 1. ಅದೇ ರೀತಿ 29 ಆಗಿದ್ದರೆ 2+9=11. ಮೂಲಾಂಕ 1+1=2. ಇದು ನ್ಯೂಮಾರಲಜಿ ಹೇಳುವ ಜ್ಯೋತಿಷ್ಯದ ಪ್ರಕಾರ ಅಷ್ಟೇ.

1, 2 ಮತ್ತು 3 ಮೂಲಾಂಕಗಳ ಅದೃಷ್ಟದ ಘಳಿಗೆ ಯಾವುದು?

ರಾಡಿಕ್‌ ಸಂಖ್ಯೆ 1 ಆಗಿದ್ದರೆ, ನಿಮ್ಮ ವೃತ್ತಿರಂಗದ ಟರ್ನಿಂಗ್‌ ಪಾಯಿಂಟ್‌ ಸಾಮಾನ್ಯವಾಗಿ 22 ರಿಂದ 28 ವಯಸ್ಸಿನ ನಡುವೆ ಇರುತ್ತದೆ. ಈ ಅವಧಿಯಲ್ಲಿ ನೀವು ಲೀಡರ್‌ ಆಗುತ್ತೀರಿ. ರಾಡಿಕ್‌ ನಂಬರ್‌ 2 ಇದ್ದರೆ, ಸಾಮಾನ್ಯವಾಗಿ 28 ರಿಂದ 30 ವರ್ಷಗಳ ನಡುವೆ ನಿಮ್ಮ ಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌ ಸಿಗುತ್ತದೆ. ರಾಡಿಕ್‌ ಸಂಖ್ಯೆ 3 ಆಗಿದ್ದರೆ 27 ರಿಂದ 32 ವರ್ಷಗಳ ನಡುವೆ ಅದೃಷ್ಟ ನಿಮ್ಮ ಪದತಲದಲ್ಲಿರುತ್ತದೆ. ಮತ್ತು ಅದು ಶಾಶ್ವತವಾಗಿರುತ್ತದೆ.

4, 5 ಮತ್ತು 6 ಮೂಲಾಂಕಗಳ ಬದಲಾವಣೆ ಯಾವಾಗ?

ಮೂಲಾಂಕ 4 ಆಗಿದ್ದರೆ 30 ವರ್ಷಗಳ ಬಳಿಕವೇ ಯಶಸ್ಸು ಸಿಗುತ್ತದೆಯಂತೆ. 30-36 ವರ್ಷಗಳ ನಡುವೆ ನಿಮ್ಮ ಬದುಕು ಬಂಗಾರವಾಗುತ್ತದೆ. ರಾಡಿಕ್‌ ನಂಬರ್‌ 5 ಹೊಂದಿರುವವರು ಹುಟ್ಟು ಅದೃಷ್ಟವಂತರು. ಚಿಕ್ಕವಯಸ್ಸಿನಲ್ಲೇ ಗಮನಾರ್ಹ ಸಾಧನೆಗಳನ್ನು ಮಾಡುತ್ತಾರೆ. ಅವಕಾಶಗಳು ಧಾರಾಳವಾಗಿ ಸಿಗುತ್ತದೆ. 21-27 ವರ್ಷಗಳಲ್ಲೇ ಸಿರಿವಂತಿಕೆಯಿಂದ ಮೆರೆಯುತ್ತಾರೆ. ಮೂಲಾಂಕ 6 ಬಂದರೆ 25ರಿಂದ 31ನೇ ವರ್ಷದ ನಡುವೆ ನಿಮ್ಮ ಜೀವನ ಬದಲಾಗುತ್ತದೆ.ಅದು ಯಶಸ್ಸಿನ ಘಳಿಗೆ. ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಭದ್ರ ಭವಿಷ್ಯಕ್ಕೆ ಬುನಾದಿ ಹಾಕುತ್ತೀರಿ 30ನೇ ವರ್ಷಕ್ಕೆ ಸಿರಿವಂತರಾಗುತ್ತೀರಿ.

7.8.9 ರಾಡಿಕ್‌ ಸಂಖ್ಯೆಯ ಬದುಕು ಬಂಗಾರ ಆಗುತ್ತಾ?

7ನೇ ರಾಡಿಕ್‌ ನಂಬರ್‌ಗೆ ಕಿರಿವಯಸ್ಸಿನಲ್ಲೇ ಯಶಸ್ಸು ಸಿಗಲಿದೆ. ವೃತ್ತಿರಂಗದ ಟರ್ನಿಂಗ್‌ ಪಾಯಿಂಟ್‌ ಅತಿ ಬೇಗ ಸಿಗುತ್ತದೆ. ಜೀವನದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆಯಲಿವೆ. 28-34 ವರ್ಷಗಳಲ್ಲೇ ನೀವು ಕುಬೇರರ ಸಾಲಿಗೆ ಸೇರುತ್ತೀರಿ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಲಿದೆ.

ಈ ರಾಶಿಯವರಿಗೆ ಮಾತೇ ಮುಳ್ಳಾಗಬಹುದು!ತಾಳ್ಮೆಯಿಂದ ಇದ್ದರೆ ಮಾತ್ರ ಯಶಸ್ಸು
ಈ ರಾಶಿಯವರಿಗೆ ಮಾತೇ ಮುಳ್ಳಾಗಬಹುದು!ತಾಳ್ಮೆಯಿಂದ ಇದ್ದರೆ ಮಾತ್ರ ಯಶಸ್ಸು

ಇನ್ನು 8 ಮೂಲಾಂಕವನ್ನು ನೋಡೋಣ. 8 ಮೂಲಾಂಕದವರಿಗೆ ಯಶಸ್ಸು ಸ್ವಲ್ಪ ವಿಳಂಬವಾಗಲಿದೆ. 32 ರಿಂದ 40ನೇ ವರ್ಷಕ್ಕೆ ಯಶ ಸಿಗಬಹುದು. ಜೀವನದಲ್ಲಿ ಗಣನೀಯ ಹೋರಾಟ ಮಾಡಬೇಕಾಗುತ್ತದೆ.

9ನೇ ಮೂಲಾಂಕದವರಿಗೂ ಬೇಗನೇ ಆರ್ಥಿಕ ಲಾಭ ಸಿಗುತ್ತದೆ. 26-33 ವರ್ಷಗಳ ನಡುವೆಯೇ ಜೀವನದ ಟರ್ನಿಂಗ್‌ ಪಾಯಿಂಟ್‌ ಸಿಗುತ್ತದೆ. ವೃತ್ತಿ ಜೀವನ ಏರುಗತಿಗೆ ಸಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+