Death Horoscope: ನಿಮ್ಮ ಡೆತ್ ಹೇಗಿರುತ್ತೆ ಗೊತ್ತಾ? ಈಗಲೇ ತಿಳಿದುಕೊಳ್ಳಿ....
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಖಚಿತ. ಇದನ್ನು ಯಾರಿಂದಲೂ ಬದಲಾಯಿಸಲು ಆಗುವುದಿಲ್ಲ. ಪ್ರತಿಯೊಬ್ಬ ಜೀವನ ಸಾವಿನಿಂದ ಕೊನೆಗೊಳ್ಳುತ್ತದೆ. ಈ ಸಾವು ಹೇಗಿರುತ್ತೆ? ಯಾವಾಗ ಬರುತ್ತೆ ಎಂದು ಯಾರೂ ಕೂಡ ಈವರೆಗೂ ಊಹಿಸಿಲ್ಲ. ಆದರೆ ಸಾವು ಅನ್ನೋದು ಕರ್ಮಫಲಗಳ ಮೇಲೆ ಅವಲಂಬಿತವಾಗಿದೆ.
ನಾವು ನಮ್ಮ ಕೆಟ್ಟ ಹಾಗೂ ಒಳ್ಳೆಯ ಗುಣಗಳ ಆಧಾರದ ಮೇಲೆ ನಮ್ಮ ಸಾವು ಹೀಗಿರುತ್ತದೆ ಎಂದು ಯೋಚಿಸುತ್ತೇವೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ರಾಶಿಯ ಆಧಾರದ ಮೇಲೆ ನಮ್ಮ ಸಾವು ಹೇಗೆ ಸಂಭವಿಸುತ್ತದೆ ಎಂಬುದರ ಕುರಿತು ನಾವು ಸ್ವಲ್ಪ ತಿಳಿದುಕೊಳ್ಳಬಹುದು. ಹಾಗಾದರೆ ನಿಮ್ಮ ರಾಶಿಯ ಪ್ರಕಾರ ನಿಮ್ಮ ಸಾವು ಹೇಗೆ ಸಂಭವಿಸುತ್ತದೆ ಎಂಬುದನ್ನು ಈಗ ತಿಳಿಯೋಣ.

ಮೇಷ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯವರ ಸಾವು ಹೇಗಿರುತ್ತದೆ ಎಂದು ಊಹಿಸಬಹುದು. ಮೇಷ ರಾಶಿಯವರು ಅಪಘಾತದಿಂದ ದುರಂತ ಮರಣವನ್ನು ಅನುಭವಿಸುವ ಸಾಧ್ಯತೆಯಿದೆ. ಮೇಷ ರಾಶಿಯವರಿಗೆ ಮೊಂಡುತನ ಮತ್ತು ಬೇಜವಬ್ದಾರಿ ಇರುವವರು ಎಂದು ಕರೆಯಲಾಗುತ್ತದೆ.
ಮೇಷ ರಾಶಿಯವರು ಶಕ್ತಿಶಾಲಿಗಳು. ಅಲ್ಲದೆ ಬುದ್ಧವಂತರಾಗಿರುತ್ತಾರೆ. ಆದರೆ ಕೆಲವೊಮ್ಮೆ ಸಂದರ್ಭಗಳು ಅವರ ವಿರುದ್ಧ ತಿರುಗಬಹುದು. ಹೊಸದನ್ನು ಪ್ರಯತ್ನಿಸಲು ಹಿಂಜರಿಯುವುದಿಲ್ಲ. ಯಾವುದೇ ಕಷ್ಟಕರ ಕೆಲಸಗಳಿಗೆ ಕೈ ಹಾಕಲು ಮೇಷ ರಾಶಿಯವರು ಹಿಂಜರಿಯುವುದಿಲ್ಲ. ಹೀಗಾಗಿ ಮೇಷ ರಾಶಿಯವರು ಪರ್ವತಗಳನ್ನು ಹತ್ತುವುದು, ವೇಗವಾಗಿ ಓಡಿಸುವುದು, ಬೆಂಕಿಯೊಂದಿಗೆ ಆಟವಾಡುವುದು ಮುಂತಾದ ಸಾಹಸಗಳನ್ನು ಮಾಡುವಾಗ ಅಪಘಾತಗಳಿಂದ ಸಾಯಬಹುದು.

ವೃಷಭ ರಾಶಿ
ವೃಷಭ ರಾಶಿಯವರು ತುಂಬಾ ಮೃದು ಸ್ವಭಾವದವರು. ಸರಳ ಜೀವನ ಮಾಡುವ ವೃಷಭ ರಾಶಿಯವರು ಯೋಗಕ್ಷೇಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರು ಯಾರಿಗಾಗಿ ಮತ್ತು ಯಾವುದಕ್ಕೂ ತಮ್ಮ ವಸ್ತುಗಳನ್ನು ಬಿಟ್ಟುಕೊಡುವುದಿಲ್ಲ ಮತ್ತು ಈ ಮನೋಭಾವವು ಅವರ ವಿರುದ್ಧ ತಿರುಗಬಹುದು. ಅವರ ಸ್ವಾರ್ಥ ನಡವಳಿಕೆಯನ್ನು ಇಷ್ಟಪಡದವರಿಂದ ಅವರು ಸಾಯುವ ಸಾಧ್ಯತೆ ಹೆಚ್ಚಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ನೇರವಾಗಿರುತ್ತಾರೆ. ಅವರ ಮಾತಿಗೆ ಕಡಿವಾಣ ಇರುವುದಿಲ್ಲ. ತಮಗೆ ಅನಿಸಿದ್ದನ್ನು ಹಿಂಜರಿಕೆಯಿಲ್ಲದೇ ಸಂದರ್ಭ ನೋಡದೆ ಹೇಳಿ ಬಿಡುತ್ತಾರೆ. ಬಹಿರಂಗವಾಗಿ ಇತರರ ಬಗ್ಗೆ ತಮಾಷೆ ಮಾಡುತ್ತಾರೆ. ಕೆಲವೊಮ್ಮೆ ಅವರು ಇತರ ವ್ಯಕ್ತಿಯ ಭಾವನೆಗಳನ್ನು ನೋಯಿಸುವ ಕೆಲವು ಕೆಲಸಗಳನ್ನು ಮಾಡುತ್ತಾರೆ. ಅದು ಅವರಿಗೆ ನಕಾರಾತ್ಮಕವಾಗಿ ಪರಿಣಮಿಸಬಹುದು.
ಕೋಪದ ವ್ಯಕ್ತಿಯ ಮುಂದೆ ಅನಗತ್ಯ ಮಾತುಗಳನ್ನು ಆಡುವುದು ಮಿಥುನ ರಾಶಿಯವರಿಗೆ ಒಳ್ಳೆಯದಲ್ಲ. ಇದು ಅವರನ್ನು ಜೀವಂತ ಸಮಾಧಿ ಮಾಡಬಹುದು. ಹೀಗಾಗಿ ತಮಾಷೆ ಮತ್ತೊಬ್ಬರನ್ನು ನೋಯಿಸುವಂತಿರಬಾರದು.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಸ್ನೇಹ ಜೀವಿಗಳು. ಅವರು ತಮ್ಮವರನ್ನು ಹಾಗೂ ಸ್ನೇಹಿತರನ್ನು ಹೆಚ್ಚು ಪ್ರೀತಿಸುತ್ತಾರೆ. ಆದರೆ ಅವರಿಂದ ಮೋಸ ಹೋಗುವುದನ್ನು ಮಾತ್ರ ಅವರು ಸಹಿಸುವುದಿಲ್ಲ. ಹೀಗಾಗಿ ಕರ್ಕಾಟಕ ರಾಶಿಯವರು ಸ್ನೇಹಿತರನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು.
ಅಲ್ಲದೆ ನಿರ್ಧಾರ ತೆಗೆದುಕೊಳ್ಳುವಾಗ ಅನೇಕ ಜನರ ಸಲಹೆಯನ್ನು ವಿಶೇಷವಾಗಿ ನಿಮ್ಮ ಆಪ್ತ ಸ್ನೇಹಿತರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಅವರಿಂದ ಕೆಲವೊಂದು ಸಲಹೆ ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಅಂದರೆ ಸ್ನೇಹಿತರಿಂದಲೇ ನಿಮಗೆ ಕಂಟಕವಿದೆ.

ಸಿಂಹ ರಾಶಿ
ಸಿಂಹ ರಾಶಿಯವರು ಯಾರೊಂದಿಗೂ ಬೆರೆಯುವುದಿಲ್ಲ. ತುಂಬಾ ಧೈರ್ಯಶಾಲಿಗಳಾಗುತ್ತಾರೆ. ಹಾಗೇ ಹೆಚ್ಚೆಚ್ಚು ಯೋಚನೆ ಮಾಡುತ್ತಾರೆ. ಯಾವುದೇ ವಿಷಯದ ಬಗ್ಗೆ ಆಳವಾಗಿ ಚಿಂತಿಸುತ್ತಾರೆ.
ಆದರೆ ಕೆಲವೊಮ್ಮೆ ಕೆಲವು ಆಲೋಚನೆಗಳು ಸಿಂಹ ರಾಶಿ ಅವರನ್ನು ಹಿಂಸಿಸಬಹುದು. ಖಿನ್ನತೆ, ಹತಾಶೆ, ನಿದ್ರಾಹೀನತೆ, ಆತ್ಮಹತ್ಯೆ ಪ್ರವೃತ್ತಿಗಳು ಇತ್ಯಾದಿಗಳಿಗೆ ಕಾರಣವಾಗಬಹುದು. ಅಲ್ಲದೆ, ಈ ಆಲೋಚನೆಗಳು ಅವರ ಮನಸ್ಸಿನಲ್ಲಿ ಕಾಣಿಸಿಕೊಳ್ಳುವುದರಿಂದ ಅವರು ಸಾವನ್ನು ಎದುರಿಸುವ ಸಾಧ್ಯತೆಯಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಬುದ್ಧಿವಂತರು. ಆದರೆ ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೆಚ್ಚು ಆಯಾಸಗೊಳ್ಳುತ್ತಾರೆ. ಅಲ್ಲದೇ ಅವರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ. ತಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಕೆಲವೊಮ್ಮೆ ಕೆಲ ವಿಷಯಗಳಿಂದ ಅವರು ಗೊಂದಲಗೊಳ್ಳಬಹುದು. ಅದು ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ಶಾಂತ ಸ್ವಾಭಾವದವರು. ಯಾವುದೇ ವಿಷಯವನ್ನು ತಾಳ್ಮೆಯಿಂದ ಯೋಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ತುಲಾ ರಾಶಿಯವರು ಯಾವುದೇ ಅಪಾಯಕಾರಿ ಕೆಲಸಗಳನ್ನು ಮಾಡಲು ಹಿಂಜರಿಯುವುದಿಲ್ಲ. ಕೆಲವೊಮ್ಮೆ ಕೆಲವು ಕಾನೂನುಬಾಹಿರ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ. ಇದರಿಂದ ಅವರು ಕಠಿಣ ಶಿಕ್ಷೆಗೆ ಒಳಗಾಗಬಹುದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ನಿಗೂಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಯಾವುದೇ ವಿಷಯವನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಲು ಒಪ್ಪದೇ ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು. ತಮ್ಮವರ ಸಮಸ್ಯೆಗಳನ್ನು ತಾವು ಹೋರುತ್ತಾರೆ. ಅವರಿಗೆ ಹತ್ತಿರವಿರುವ ಯಾರೊಬ್ಬರ ಅಗಲಿಕೆ ಅಥವಾ ಸಾವು ಅವರ ಹೃದಯವನ್ನು ಒಡೆಯಬಹುದು. ಇದು ವೃಶ್ಚಿಕ ರಾಶಿಯವರ ಸಾವಿಗೆ ಕಾರಣವಾಗಬಹುದು.

ಧನು ರಾಶಿ
ಧನು ರಾಶಿಯವರು ಶಕ್ತಿಯುತರು. ಆದರೆ ಕೆಲವೊಮ್ಮೆ ತಮ್ಮ ಶಕ್ತಿ ಮೀರಿ ಮಾದಕ ವ್ಯಸನಕಾರಿಯಾಗಿರುತ್ತಾರೆ. ಈ ರಾಶಿಯವರು ಹೆಚ್ಚು ತಂತ್ರಜ್ಞಾನ ಮತ್ತು ಆಲನ್‌ಲೈನ್ ಆಟಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ. ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ. ಇದು ಅವರ ಸಾವಿಗೆ ಕಾರಣವಾಗಬಹುದು.

ಮಕರ ರಾಶಿ
ಮಕರ ರಾಶಿಯವರಿಗೆ ಸಾವು ಹೇಗೆ ಸಂಭವಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರದಿಂದ ತಿಳಿಯಬಹುದು. ಮಕರ ರಾಶಿಯವರು ಸೋಮಾರಿಗಳಾಗಿರುತ್ತಾರೆ. ಕೆಲವೊಮ್ಮೆ ಸ್ವಲ್ಪ ಅಸಡ್ಡೆ ಹೊಂದಿರುತ್ತಾರೆ. ಈ ರಾಶಿಯವರು ಮನೆಯಲ್ಲಿಯೇ ಇರಲು ಮತ್ತು ಇಡೀ ದಿನ ಏನನ್ನೂ ಮಾಡದೆ ಇರಲು ಇಷ್ಟಪಡುತ್ತಾರೆ. ನಿದ್ದೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಅತಿಯಾದ ನಿದ್ರೆ ಅವರ ಸಾವಿಗೆ ಪ್ರಮುಖ ಕಾರಣವಾಗಬಹುದು.

ಕುಂಭ ರಾಶಿ
ಕುಂಭ ರಾಶಿಯವರು ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಆದರೆ ಹಣದ ವಿಚಾರದಲ್ಲಿ ದುರಾಸೆ ಹೊಂದಿರುತ್ತಾರೆ. ಹೀಗಾಗಿ ವಂಚನೆಯ ಮೂಲಕ ಲಾಭ ಗಳಿಸುವ ಯೋಚನೆ ಮಾಡುತ್ತಾರೆ. ಕುಂಭ ರಾಶಿಯವರು ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಮತ್ತು ಅದು ಸಂಭವಿಸದಿದ್ದರೆ ನಿರಾಶೆಗೊಳ್ಳುತ್ತಾರೆ. ಅವರ ಆರ್ಥಿಕ ನಷ್ಟವು ಅವರ ಸಾವಿಗೆ ಕಾರಣವಾಗುತ್ತದೆ.

ಮೀನ ರಾಶಿ
ಮೀನ ರಾಶಿಯವರು ಬುದ್ಧವಂತರು. ಕುತಂತ್ರಿಗಳಾಗಿರುತ್ತಾರೆ. ಯಾವಾಗಲೂ ಧನಾತ್ಮಕ ವಿಷಯಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಕೆಲವೊಮ್ಮೆ ಅವರು ಯಾವುದೇ ಕಾರಣವಿಲ್ಲದೆ ತಿಳಿದೋ ಅಥವಾ ತಿಳಿಯದೆಯೋ ತಮ್ಮನ್ನು ತಾವು ನೋಯಿಸಿಕೊಳ್ಳುತ್ತಾರೆ. ಅವರು ಅಘಾತದಿಂದ ಸಾಯುವ ಸಾಧ್ಯತೆ ಹೆಚ್ಚು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications