• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಕುಮಾರ್ ರನ್ನು ಖೆಡ್ಡಾಕ್ಕೆ ಕೆಡವಿದ್ದು ಶನಿ, ಪರಿಹಾರವೂ ಅವನೇ...

By ಪಂಡಿತ್ ವಿಠ್ಠಲ ಭಟ್
|

ಸಚಿವ ಡಿಕೆ ಶಿವಕುಮಾರ್ ಅವರ ಇಂದಿನ ಸ್ಥಿತಿ ಗಮನಿಸಿದರೆ ಕಷ್ಟಗಳು ವ್ಯಕ್ತಿಯ ಅಧಿಕಾರ ಅಥವಾ ಐಶ್ವರ್ಯ ನೋಡಿ ಬರುವುದಿಲ್ಲ. ಅದು ಬರುವುದು ಗ್ರಹಚಾರದಿಂದ ಎಂಬುದು ಸ್ಪಷ್ಟವಾಗುತ್ತದೆ. ಅಂದಹಾಗೆ ಗ್ರಹಚಾರ ಅಂದರೆ ಗ್ರಹಗಳ ಚಲನೆ ಎಂದರ್ಥ. ಗ್ರಹಗಳ ಸಂಚಾರದ ಪ್ರತಿಫಲ ನಿತ್ಯದ ಬದುಕಿನಲ್ಲಿ ಕಾಣುತ್ತಿರುತ್ತೇವೆ.

ಗ್ರಹಚಾರ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಉತ್ತಮ ಬದುಕನ್ನು ಕಾಣುತ್ತೇವೆ. ಆದರೆ ಅದೇ ಗ್ರಹಚಾರ ಕೆಡ್ತು ಎಂದಾದರೆ ಅದೆಷ್ಟೇ ದೊಡ್ಡ ವ್ಯಕ್ತಿ ಆಗಲಿ, ಸ್ವತಃ ಡಿಕೆ ಶಿವಕುಮಾರ್ ಆಗಲಿ ಕಷ್ಟಗಳನ್ನು ಹಾಗೂ ಪರೀಕ್ಷೆಗಳನ್ನು ಎದುರಿಸಲೇಬೇಕು. ಇದು ನಂಬಿಕೆಯ ಪ್ರಶ್ನೆ ಅಲ್ಲ, ಅನುಭವದ ಪ್ರಶ್ನೆ. ಅನುಭವಿಸಿದವ ಒಪ್ಪುವ ಮಾತು ಅಷ್ಟೆ.

ಪರಿಹಾರ ಜ್ಯೋತಿಷ್ಯ: ಚೌಡೇಶ್ವರಿ ದೇವಿಗೆ ಯಾವ ಪೂಜೆ ಮಾಡಿದರೆ ಏನು ಫಲ?

ಆದರೆ, ಇಂಥ ಕಠೋರ ಪರೀಕ್ಷೆಗಳು ಎದುರಾದಾಗ ನಮ್ಮ ಸಹಾಯಕ್ಕೆ ಬರುವುದೇ ಜ್ಯೋತಿಷ್ಯ ಶಾಸ್ತ್ರ! ತಪ್ಪು ನಾವು ಮಾಡಿಕೊಳ್ಳುತ್ತೇವೆ. ಸಮಸ್ಯೆ ಬಂದ ನಂತರ ಪರಿಹಾರ ಹುಡುಕಲು ಹೊರಡುತ್ತೇವೆ. ಆದರೆ ಜ್ಯೋತಿಷ್ಯ ಶಾಸ್ತ್ರವನ್ನು ಸರಿಯಾಗಿ ಬಳಸಿಕೊಂಡಲ್ಲಿ ಅದು ಕಷ್ಟಗಳ ಮುನ್ಸೂಚನೆ ಮೊದಲೇ ಕೊಡುತ್ತದೆ.

ವೃಶ್ಚಿಕ ಪ್ರವೇಶಿಸಿರುವ ಶನಿ ಹನ್ನೆರಡು ರಾಶಿಯಲ್ಲಿ ಏನೇನು ಬದಲಾವಣೆ ತರಲಿದ್ದಾನೆ

ಸಮಸ್ಯೆಗಳೇ ಆಗದಂತೆ ಮಾಡುವುದು ಅಸಾಧ್ಯ ಎಂಬುದು ಒಪ್ಪುವಂಥ ಮಾತು. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಸತ್ಯ. ಈ ದಿನ ಸಚಿವ ಡಿಕೆ ಶಿವಕುಮಾರ್ ಅವರ ಜಾತಕ ಪರಾಮರ್ಶೆ ಮಾಡಲಾಗಿದೆ. ಅವರ ನಕ್ಷತ್ರ, ರಾಶಿ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಇದ್ದುದರಿಂದ ಅದನ್ನು ನಿವಾರಿಸಿಕೊಂಡು ಇಲ್ಲಿ ಅವರ ಭವಿಷ್ಯದ ಬಗ್ಗೆ ತಿಳಿಸಲಾಗಿದೆ.

ಕೆಲ ಮಾಧ್ಯಮಗಳಲ್ಲಿ ಅವರ ಜಾತಕವನ್ನು ವಿಶ್ಲೇಷಿಸುವಾಗ ಜಾತಕ ತಯಾರಿಸಲು ಗೂಗಲ್ ನಲ್ಲಿ ಹುಡುಕಿ, ವಿಕಿಪೀಡಿಯಾದಲ್ಲಿ ಸಿಕ್ಕ ಜನ್ಮ ದಿನಾಂಕ ಬಳಸಿ ಜ್ಯೋತಿಷ್ಯ ಹೇಳಲಾಗಿದೆ. ಆದರೆ ಅದೇ ಸರಿಯಾದ ಜನ್ಮ ವಿವರ ಎಂದು ನಾವು ಪರಿಗಣಿಸಿದರೆ ಈ ಸದ್ಯ ಅವರು ಎದುರಿಸುತ್ತಿರುವ ಪರೀಕ್ಷೆಗಳಿಗೂ ಆ ಜನ್ಮ ವಿವರದ ಮುಖಾಂತರ ಸಿಗುವ ಕುಂಡಲಿಗೂ ಹೊಂದಾಣಿಕೆ ಆಗುವುದಿಲ್ಲ!

ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?

ಅದಕ್ಕಾಗಿ ಬಹಳ ಪ್ರಯತ್ನಿಸಿ ಕೆಲ ಹೆಸರಾಂತ ಜ್ಯೋತಿಷಿ ಸ್ನೇಹಿತರಿಂದ ಡಿಕೆ ಶಿವಕುಮಾರ್ ರ ನೈಜ ಜನ್ಮ ವಿವರಗಳನ್ನು ಪಡೆದು, ಅದರ ಆಧಾರದಲ್ಲಿ ಜಾತಕ ಮಾಡಿ ನೋಡಿದಾಗ ಮಾತ್ರ ಆಶ್ಚರ್ಯ ಎಂಬಂತೆ ಅವರು ಈಗ ಎದುರಿಸುತ್ತಿರುವ ಪರೀಕ್ಷೆಗಳಿಗೂ ಅದಕ್ಕೂ ತಾಳೆ ಆಗುತ್ತಿದೆ! ಆ ಜನ್ಮ ಜಾತಕವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಲಗ್ನ ಹಾಗೂ ನಕ್ಷತ್ರದ ಪ್ರಭಾವದಿಂದ ಸಿಟ್ಟು

ಲಗ್ನ ಹಾಗೂ ನಕ್ಷತ್ರದ ಪ್ರಭಾವದಿಂದ ಸಿಟ್ಟು

ಡಿ.ಕೆ.ಶಿವಕುಮಾರ್ ಅವರದ್ದು ಜಾತಕ ಪ್ರಕಾರ ಕೃತ್ತಿಕಾ ನಕ್ಷತ್ರ ಮೂರನೇ ಪಾದ, ವೃಷಭ ರಾಶಿ ಹಾಗೂ ಮೇಷ ಲಗ್ನ. ಎಲ್ಲರಿಗೂ ತಿಳಿದಂತೆ ಶಿವಕುಮಾರ್ ಅವರದ್ದು ನೇರ ನುಡಿ ಹಾಗೂ ಸ್ವಲ್ಪ ಸಿಟ್ಟು ಜಾಸ್ತಿ. ಇದು ಅವರ ಜಾತಕದಲ್ಲಿಯೂ ಸ್ಪಷ್ಟವಾಗಿ ಗೊಚರಿಸುತ್ತಿದೆ.

ಜಾತಕದ ಪ್ರಕಾರ ಅವರದ್ದು ಮೇಷ ಲಗ್ನ ಆದುದರಿಂದ ಲಗ್ನಾಧಿಪತಿ ಕುಜ ಗ್ರಹ. ಕುಜ ಗ್ರಹವನ್ನು ಅಂಗಾರಕ ಎಂದು ಹೇಳುತ್ತಾರೆ. ಅಂಗಾರ ಎಂದರೆ ಕೆಂಡ ಎಂದರ್ಥ. ಆದುದರಿಂದ ಅವರಿಗೆ ಕೆಂಡದಂಥ ಕೋಪ. ಆ ಕೋಪದ ವ್ಯಕ್ತಿತ್ವಕ್ಕೆ ಅದೊಂದೇ ಕಾರಣ ಅಲ್ಲ. ನಕ್ಷತ್ರ ಸಹ ಕೃತ್ತಿಕಾ. ಅಂದರೆ ಅಗ್ನಿ ನಕ್ಷತ್ರ. ಒಂದು ಕಡೆ ಬೆಂಕಿಯ ನಕ್ಷತ್ರ, ಇನ್ನೊಂದೆಡೆ ಕೆಂಡದ ಲಗ್ನ. ಹೀಗಿರುವಾಗ ವ್ಯಕ್ತಿ ಮಾತ್ರ ಶಾಂತವಾಗಿ ನಗುತ್ತಾ ಇರಬೇಕು ಎಂದರೆ ಅದು ಹೇಗೆ ಸಾಧ್ಯ?

ಜಾತಕದಲ್ಲಿ ಉಚ್ಚನಾಗಿರುವ ಚಂದ್ರ

ಜಾತಕದಲ್ಲಿ ಉಚ್ಚನಾಗಿರುವ ಚಂದ್ರ

ಇನ್ನು ಚಲನಚಿತ್ರ ನಾಯಕನಂಥ ಉತ್ತಮ ದೈಹಿಕ ಬೆಳವಣಿಗೆ, ಜನರನ್ನು ಆಕರ್ಷಿಸುವ ವ್ಯಕ್ತಿತ್ವ ಹಾಗೂ ಅಲ್ಪ ಸ್ವಲ್ಪ ತಾನು ನಕ್ಕು, ಉಳಿದವರನ್ನೂ ನಗುವಂತೆ ಡಿಕೆ ಶಿವಕುಮಾರ್ ಮಾಡಿದರೆ ಅದಕ್ಕೆ ಮೂಲ ಕಾರಣ ವೃಷಭ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಚಂದ್ರ ಇರುವುದು.

ಅಂದರೆ ವೃಷಭ ರಾಶಿ ಅನ್ನೋ ಕಾರಣಕ್ಕೆ ಅವರ ಮೇಲೆ ದಾಳಿಯಾಯಿತು ಎಂದಲ್ಲ. ಆದರೂ ಅವರ ಜಾತಕದಲ್ಲಿ ಶುಕ್ರಗ್ರಹದ ಸ್ಥಿತಿ ಶ್ರೀಮಂತಿಗೆಗೆ ಹಿಡಿದ ಕನ್ನಡಿ. ಮೇಷ ಲಗ್ನ ಅವರ ಹಠ ಯಾವ ಮಟ್ಟದ್ದು ಎಂದು ತೋರಿಸುತ್ತದೆ. ಮಾಡಬೇಕು ಎಂದು ಮನಸ್ಸು ಮಾಡಿ ಹೊರಟರೆ ಯಾರೆ ಅಡ್ಡ ಬಂದರೂ ಎಷ್ಟೇ ಕಷ್ಟಗಳಾದರೂ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬರುವ ಜಾಯಮಾನ ಅಲ್ಲ ಎಂದು ತೋರಿಸುತ್ತದೆ.

ತೀರ್ಮಾನಕ್ಕೆ ಮುನ್ನ ಯೋಚಿಸಬೇಕು

ತೀರ್ಮಾನಕ್ಕೆ ಮುನ್ನ ಯೋಚಿಸಬೇಕು

ಡಿ.ಕೆ.ಶಿವಕುಮಾರ್ ಜಾತಕದ ಎರಡು ದೊಡ್ಡ ಸಮಸ್ಯೆಗಳು ಎಂದರೆ ಕುಜ ಹಾಗೂ ಗುರು ಗ್ರಹ ನೀಚ ಸ್ಥಿತಿಯಲ್ಲಿ ಇರುವುದು. ಆದರೆ ಆ ಗ್ರಹಗಳ ಮಹಾ ದಶಾ ಸಮಯವನ್ನು ಈಗಾಗಲೇ ಅವರು ಕಳೆದಿದ್ದಾರೆ ಆದುದರಿಂದ ಈಗ ಹೆಚ್ಚಿನ ಸಮಸ್ಯೆ ಇಲ್ಲ. ಆದರೂ ಜ್ಞಾನಕಾರಕ ಗುರು ಗ್ರಹ ನೀಚ ಸ್ಥಿತಿಯಲ್ಲಿ ಇದ್ದು, ಬುಧ ಷಷ್ಠಾಧಿಪತಿ ಆಗಿರುವುದರಿಂದ ಅವರು ಮಾತನಾಡುವ ಮೊದಲು, ಕೆಲ ತೀರ್ಮಾನ ತೆಗೆದುಕೊಳ್ಳುವ ಮೊದಲು ಒಂದಕ್ಕೆ ಹತ್ತು ಬಾರಿ ಚಿಂತನೆ ಮಾಡಬೇಕಾಗುತ್ತದೆ.

ಪ್ರಸಕ್ತ ಪರಿಸ್ಥಿತಿ ಹೇಗಿದೆ?

ಪ್ರಸಕ್ತ ಪರಿಸ್ಥಿತಿ ಹೇಗಿದೆ?

ಇನ್ನು ಅವರ ಸದ್ಯದ ಸ್ಥಿತಿಯನ್ನು ವಿಮರ್ಶೆ ಮಾಡಿದರೆ ಅದಕ್ಕೆ ಸ್ಪಷ್ಟ ಕಾರಣ ಶನಿ ಗ್ರಹ ಎಂದು ತೋರಿಸುತ್ತದೆ. ಈ ಕಾರಣ ಓದಿದ ಹಲವರಿಗೆ ಅಲ್ಲದಿದ್ದರೂ ಕೆಲವರಿಗಾದರೂ ಅನಿಸಬಹುದು ಇದೇನಿದು 'ಅನಿಷ್ಟಕ್ಕೆಲ್ಲಾ ಶನೈಶ್ಚರನೇ ಕಾರಣ' ಎಂದರೆ ಹೇಗೆ? ಎಂದು.

ಆದರೆ, ಪ್ರಸಕ್ತ ಶಿವಕುಮಾರ್ ಅವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಸಾಲದು ಎಂಬಂತೆ ಮಹಾ ದಶಾಕಾರಕ ಹಾಗೂ ಭುಕ್ತಿ ಕಾರಕ ಇಬ್ಬರೂ ಶನಿ! ಹಾಗೆಂದು ಶನಿ ಗ್ರಹ ಅವರಿಗೆ ಒಳಿತು ಮಾಡಿಲ್ಲ ಎಂದಲ್ಲ. ಅವರು ತಮ್ಮ ಜೀವನದಲ್ಲಿ ಬೆಳೆದ ವಿಧಾನ, ಗಳಿಸಿದ ಜಯ, ಅನುಭವಿಸಿದ ರಾಜಕೀಯ ಸ್ಥಾನ- ಮಾನಗಳು ಎಲ್ಲವೂ ಇದೇ ಶನೈಶ್ಚರ ಸ್ವಾಮಿಯ ಅನುಗ್ರಹ.

ಗೋಚಾರ ಅಷ್ಟಮಿ ಶನಿಯ ಪ್ರಭಾವ

ಗೋಚಾರ ಅಷ್ಟಮಿ ಶನಿಯ ಪ್ರಭಾವ

ಶಿವಕುಮಾರ್ ಜಾತಕದಲ್ಲಿ ಜನ್ಮ ರಾಶಿಯಿಂದ ಭಾಗ್ಯಾಧಿಪತಿ ಆಗಿ ಭಾಗ್ಯದಲ್ಲಿ ಹಾಗೂ ಜನ್ಮ ಲಗ್ನದಿಂದ ಕರ್ಮಾಧಿಪತಿ ಸ್ವರೂಪದಲ್ಲಿ ಸ್ವಸ್ಥಾನವಾದ ಮಕರದಲ್ಲಿ ಕುಂತ ಶನಿ ಒಳಿತನ್ನು ಮಾಡಿದ್ದಾನೆ. ಆದರೆ ಗೋಚಾರದಲ್ಲಿ ಮಾತ್ರ ಅವರಿಗೆ ಶನಿ ಅಷ್ಟಮ ಸ್ಥಾನ ಪ್ರವೇಶ ಮಾಡಿರುವುದರಿಂದ ಕಷ್ಟ ಹಾಗೂ ಪರೀಕ್ಷೆಗಳನ್ನು ಕೊಡುತ್ತಿದ್ದಾನೆ.

ಇದನ್ನು ಅವರು ಒಪ್ಪಲಿ, ಬಿಡಲಿ 2020ರ ಜನವರಿ ತನಕ ಸ್ವಲ್ಪ ಪರೀಕ್ಷಾ ಕಾಲವೇ. ಸ್ವಜನರಿಂದಲೇ ಮೋಸ ಅಥವಾ ಕಷ್ಟಕಾಲದಲ್ಲಿ ಸಹಾಯ ಲಭಿಸದಿರುವುದು ಹಾಗೂ ಆರೋಗ್ಯ ಬಾಧೆ ಇವೆಲ್ಲ ಈ ಸಮಯದಲ್ಲಿ ಸಾಮಾನ್ಯ. ಇದೇ ತರಹ ಕಷ್ಟದ ಪರಿಸ್ಥಿತಿ ಈಗ ಸರಿಯಾಗಿ ಮೂವತ್ತು ವರುಷಗಳ ಹಿಂದೆ ಅವರಿಗೆ ಬಂದಿರುತ್ತದೆ. ಬಹುಶಃ ಅವರು ಅದನ್ನು ಮರೆಯುವುದಿಲ್ಲ. ಕಾರಣ ಅಷ್ಟಮ ಶನಿ ಸಮಯದಲ್ಲಿ ಮನುಷ್ಯನಿಗೆ ಬರುವ ಕಷ್ಟಗಳು ಮರೆಯದಂಥದ್ದು ಆಗಿರುತ್ತದೆ.

ಆರೋಗ್ಯ ಸಮಸ್ಯೆ ಕಾಡುತ್ತದೆ

ಆರೋಗ್ಯ ಸಮಸ್ಯೆ ಕಾಡುತ್ತದೆ

ಈಗ ಆರೋಗ್ಯ ಬಾಧೆ ಎಂದರೆ ಬೆನ್ನು, ಸೊಂಟ ಹಾಗು ಮೊಣಕಾಲು ನೋವು ಹೆಚ್ಚಾಗುತ್ತದೆ. ಇನ್ನು ಅವರ ಜಾತಕದಲ್ಲಿ ಗುರು ಹಾಗು ಕುಜ ಗ್ರಹ ನೀಚ ಸ್ಥಿತಿಯಲ್ಲಿ ಇರುವುದರಿಂದ ಈ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆ, ಅಧಿಕ-ಕಡಿಮೆ ರಕ್ತದೊತ್ತಡ ಆಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನ ಆವಶ್ಯ ಇರುತ್ತದೆ.

ಮುಂದೆ ಹೇಗಿರುತ್ತಾರೆ?

ಮುಂದೆ ಹೇಗಿರುತ್ತಾರೆ?

ಇನ್ನು ಮುಂದೆ ಶಿವಕುಮಾರ್ ಅವರಿಗೆ ಏನಾಗುತ್ತದೆ ಎಂಬ ಬಗ್ಗೆ ಕುತೂಹಲವಿದೆ. ಸೆಪ್ಟೆಂಬರ್ ಹನ್ನೊಂದರ ತನಕ ಅವರಿಗೆ ಪೂರ್ಣ ಗುರುಬಲ ಇರುವುದರಿಂದ ಹಾಗೂ ಅಕ್ಟೋಬರ್ ಇಪ್ಪತ್ತೈದರ ತನಕ ಶನಿ ವಕ್ರಿಯಾಗಿ ವೃಶ್ಚಿಕ ರಾಶಿಯಲ್ಲಿ ಇರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.

ಒಂದು ಪಕ್ಷ ಸಮಸ್ಯೆ ಆದರೂ ರಕ್ಷಣೆ ಲಭಿಸುತ್ತದೆ. ಆದರೆ ಆ ತಾರೀಕಿನ ನಂತರ ಗುರುಬಲ ಇರದೆ ಕೇವಲ ಅಷ್ಟಮ ಶನಿ ಪ್ರಭಾವ ಮಾತ್ರ ಇದ್ದು, 18-1-2018ರ ತನಕ ಅವರ ಜಾತಕ ಪ್ರಕಾರ ಶನಿ ಮಹಾ ದಶಾ ಹಾಗೂ ಶನಿ ಭುಕ್ತಿ ನಡೆಯುತ್ತದೆ. ಆದುದರಿಂದ ಉತ್ತಮ ಸಮಯ ಕಾಣಿಸುತ್ತಿಲ್ಲ.

ಈ ಜಾತಕರಿಗೆ ಪರಿಹಾರ ಏನು?

ಈ ಜಾತಕರಿಗೆ ಪರಿಹಾರ ಏನು?

ಇನ್ನು ಪರಿಹಾರದ ವಿಚಾರಕ್ಕೆ ಬಂದರೆ ಶನೈಶ್ಚರ ಆರಾಧನೆ ಮಾತ್ರ ಶಿವಕುಮಾರ್ ರನ್ನು ಈ ಸಂದಿಗ್ಧತ ಪರಿಸ್ಥಿತಿಗಳಿಂದ ಮುಕ್ತಿ ಸಿಗುವಂತೆ ಮಾಡುತ್ತದೆ. ಇಲ್ಲಿ ಶನಿ ಆರಾಧನೆ ಎಂದಾಕ್ಷಣ ಕೇವಲ ಒಂದು ಶನಿ ದೇಗುಲಕ್ಕೆ ಹೋಗಿ ಬಂದರೆ ಸಾಲದು. ಅವರ ಶಕ್ತಿಗೆ ಅನುಸಾರ ಕನಿಷ್ಠ ಮೂರು ಲಕ್ಷ ಸಂಖ್ಯೆ ಶನಿ ಗ್ರಹದ ವೇದೋಕ್ತ ಮಂತ್ರ ಜಪ ಹಾಗೂ ಆ ಸಂಖ್ಯೆಯ ದಶಾಂಶ (ಹತ್ತನೇ ಒಂದು ಭಾಗದಷ್ಟು) ಪ್ರಮಾಣದಲ್ಲಿ ತರ್ಪಣ ಹಾಗು ಹವನ ಮಾಡಿಸಬೇಕು.

ಕಬ್ಬಿಣ ಹಾಗೂ ಪರಿಶುದ್ಧ ಎಳ್ಳೆಣ್ಣೆ ದಾನ ಆಗಬೇಕು. ಶನೈಶ್ಚರ ಸ್ವಾಮಿ ಸ್ವತಃ ಉದ್ಭವ ಆದ ಶಕ್ತಿಯುತ ಕ್ಷೇತ್ರಗಳನ್ನು ಶನಿವಾರಗಳಲ್ಲಿ ದರ್ಶನ ಮಾಡಬೇಕು. ಇವರ ಕೈಯಲ್ಲಿ ಅಕಸ್ಮಾತ್ ನೀಲ, ಪುಷ್ಯ ರಾಗ ಇದ್ದಲ್ಲಿ ಅದು ಬೆಳ್ಳಿ ಅಥವಾ ಬಂಗಾರ ಯಾವುದರಲ್ಲಿಯೇ ಕಟ್ಟಿಸಿರಲಿ ಮೊದಲು ಅದನ್ನು ತೆಗೆದಿಡಬೇಕು.

ಹವಳ, ಕನಕ ಪುಷ್ಯರಾಗ, ನೀಲ ಇದ್ಯಾವ ರತ್ನವನ್ನೂ ಧರಿಸುವಂತೆ ಇಲ್ಲ. ನಿತ್ಯ ಶನಿ ಗ್ರಹದ ಅಷ್ಟೋತ್ತರ ಪಠಿಸಿ, ದಿನ ಪ್ರಾರಂಭಿಸಬೇಕು. ಶನಿ ಹೊರತಾಗಿ ಇನ್ನಾವುದೇ ದೇವರ ಆರಾಧನೆ ಶೀಘ್ರ ಪರಿಹಾರ ನೀಡುವುದಿಲ್ಲ.

ಆಚಾರ್ಯ ವಿಠ್ಠಲ ಭಟ್ಟ ಕೆಕ್ಕಾರು, ಮೊಬೈಲ್ ಸಂಖ್ಯೆ 9845682380.

English summary
IT raid on power minister of Karnataka DK Shivakumar is an ill effect of gochara ashtama Saturn according vedic astrology. His dasha and bhukti of Saturn also contributing to problem. Here well known astrologer pandit Vittal Bhat Explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X