Guru Uday 2024: ವೃಷಭ ರಾಶಿಯಲ್ಲಿ ಗುರು ಉದಯ: ಜೂನ್ ತಿಂಗಳಿನಿಂದ ಈ 3 ರಾಶಿಯವರ ಸಂಬಳ ಹೆಚ್ಚಳ...
ಸೌರವ್ಯೂಹದಲ್ಲಿ ಗ್ರಹಗಳು ಸಂಚಾರ ಮಾಡುವಾಗ ರಾಶಿಯನ್ನು ಬದಲಾಯಿಸುವುದರೊಂದಿಗೆ ಕೆಲವೊಮ್ಮೆ ಉದಯಿಸುತ್ತವೆ. ಇದರ ಪರಿಣಾಮ ಎಲ್ಲಾ ದ್ವಾದಶಿ ರಾಶಿಗಳ ಮೇಲೆ ಕಂಡು ಬರಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ. ಅಲ್ಲದೆ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಉದಯಿಸುತ್ತವೆ. ಗ್ರಹಗಳ ಸ್ಥಾನಗಳಲ್ಲಿನ ಇಂತಹ ಬದಲಾವಣೆಗಳು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಆ ಮೂಲಕ ಮೇ 1ರಂದು ದೇವರ ಗುರುವಾದ ಗುರು ಗ್ರಹ ವೃಷಭ ರಾಶಿಗೆ ಪ್ರವೇಶಿಸಿದೆ. ವೃಷಭರಾಶಿಗೆ ಪ್ರವೇಶಿಸಿದ 2 ದಿನಗಳಲ್ಲೇ ಗುರು ದಹನವಾಯಿತು. ಇದರಿಂದ ಗುರುವಿನಿಂದ ಆಗಬೇಕಾಗಿದ್ದ ಲಾಭಗಳಿಗೆ ತೊಡಕಾಯಿತು. ಆದರೆ ಜೂನ್ ತಿಂಗಳ ಆರಂಭದಲ್ಲಿ ಗುರು ವೃಷಭ ರಾಶಿಯಲ್ಲಿ ಉದಯಿಸುತ್ತದೆ.
ವೃಷಭ ರಾಶಿಯಲ್ಲಿ ಮೂಡುವ ಗುರುವಿನ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಯವರಿಗೆ ಅದೃಷ್ಟ ಬೆಳಗಲಿದೆ. ಹಾಗಾದರೆ ಈಗ ವೃಷಭ ರಾಶಿಯಲ್ಲಿ ಮೂಡುವ ಗುರುಗ್ರಹದಿಂದ ಆಶೀರ್ವಾದ ಪಡೆಯುವ ರಾಶಿಚಕ್ರದವರು ಯಾರೆಂದು ನೋಡೋಣ.

ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯಲ್ಲಿ ಗುರು ಉದಯಿಸುತ್ತಾನೆ. ಹೀಗಾಗಿ ಈ ರಾಶಿಯವರ ಯೋಜಿತ ಕೆಲಸ ಜೂನ್ ತಿಂಗಳಿನಿಂದ ಯಶಸ್ವಿಯಾಗುತ್ತದೆ. ಅಲ್ಲದೆ ಈ ಅವಧಿಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗಲಿದೆ.
ಅದರೊಂದಿಗೆ ಹೊಸ ಆದಾಯದ ಮೂಲಗಳೂ ಸೃಷ್ಟಿಯಾಗಲಿವೆ. ಕೆಲಸದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ಕಠಿಣ ಪರಿಶ್ರಮ ಯಶಸ್ಸನ್ನು ತರುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಜಂಟಿ ಉದ್ಯಮಗಳನ್ನು ಮಾಡುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ.

ಕರ್ಕಾಟಕ ರಾಶಿ
ಕರ್ಕಾಟಕದ 11ನೇ ಮನೆಯಲ್ಲಿ ಗುರು ಉದಯಿಸುತ್ತಾನೆ. ಹೀಗಾಗಿ ಜೂನ್ ತಿಂಗಳಿನಿಂದ ಈ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುವುದು. ಗುರು ಕರ್ಕಾಟಕ ರಾಶಿಯವರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.
ನೀವು ಸಾಮಾನ್ಯರಿಗಿಂತ ಹೆಚ್ಚು ಸಕ್ರಿಯರಾಗಿರುತ್ತೀರಿ. ಇದು ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಶುಭ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರಲಿದೆ.

ಸಿಂಹ ರಾಶಿ
ಸಿಂಹ ರಾಶಿಯ 10ನೇ ಮನೆಯಲ್ಲಿ ಗುರು ಉದಯಿಸುತ್ತಾನೆ. ಹೀಗಾಗಿ ಈ ರಾಶಿಚಕ್ರದವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಂಬಳ ಹೆಚ್ಚಾಗಬಹುದು. ಹೊಸ ಜವಬ್ದಾರಿಗಳನ್ನು ಪಡೆಯಬಹುದು.
ಉದ್ಯೋಗ ಬದಲಾಯಿಸಲು ಬಯಸುವವರ ಆಸೆ ಜೂನ್ ನಂತರ ಈಡೇರಲಿದೆ. ಓದು ಮುಗಿಸಿ ಕೆಲಸ ಹುಡುಕುತ್ತಿದ್ದರೆ ಜೂನ್ ನಂತರ ಒಳ್ಳೆಯ ಕೆಲಸ ಸಿಗುತ್ತದೆ. ವ್ಯಾಪಾರಸ್ಥರಿಗೆ ಅಧಿಕ ಲಾಭ ದೊರೆಯಲಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಆರ್ಥಿಕವಾಗಿ ಹೆಚ್ಚು ಉತ್ತಮವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications