ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಗುರು ಗ್ರಹ ಜೂನ್ ೨, ೨೦೨೬ ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗುರು ಕರ್ಕಾಟಕ ರಾಶಿಯಲ್ಲಿ ಸಂಕ್ರಮಣವಾದಾಗ ಹಂಸ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ. ಈ ಹಂಸ ಮಹಾಪುರುಷ ರಾಜಯೋಗದಿಂದ ನಾಲ್ಕು ರಾಶಿಯವರಿಗೆ ವಿಶೇಷ ಪ್ರಯೋಜನವಾಗುವುದು. ಇವರ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುವುದು.

ಕರ್ಕಾಟಕ ರಾಶಿ:

ಕರ್ಕಾಟಕ ಗುರುವಿನ ಉತ್ತುಂಗ ರಾಶಿ. ಹಾಗಾಗಿ ಗುರು ಈ ರಾಶಿಯನ್ನು ಪ್ರವೇಶಿಸಿದಾಗ ಹಂಸ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ. ಈ ಸಮಯವು ಕರ್ಕಾಟಕ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಉಳಿತಾಯ ಹೆಚ್ಚಾಗುತ್ತದೆ. ಆದಾಯದ ಬಹು ಮೂಲಗಳು ಹುಟ್ಟಿಕೊಳ್ಳುತ್ತದೆ.ಈ ಸಮಯದಲ್ಲಿ ಪ್ರಾರಂಭಿಸುವ ಯಾವುದೇ ಹೊಸ ಉದ್ಯಮಕ್ಕೆ ಯಶಸ್ಸು ಸಿಗುವುದು. ಪ್ರತಿ ಹಂತದಲ್ಲಿಯೂ ಅದೃಷ್ಟ ನಿಮ್ಮ ಪರವಾಗಿ ಇರುವುದು. ಉದ್ಯಮಿಗಳಿಗೆ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗುವುದು.

Guru Transit 2026

ತುಲಾ ರಾಶಿ:

ತುಲಾ ರಾಶಿಯವರ ಹತ್ತನೇ ಮನೆಯಲ್ಲಿ ಗುರು ಸಾಗುತ್ತಾನೆ. ಈ ಸಂಚಾರವು ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ. ನೀವು ಮಾಡುವ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು. ಹಿರಿಯ ಅಧಿಕಾರಿಗಳಿಂದ ಬೆಂಬಲ, ಪ್ರಶಂಸೆ ಪಡೆಯುವಿರಿ. ಉದ್ಯಮಿಗಳ ಲಾಭವು ಗಮನಾರ್ಹವಾಗಿ ಹೆಚ್ಚಾಗುವುದು. ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಸಿಗುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ:

ಗುರುವಿನ ಸಂಕ್ರಮಣವು ವೃಶ್ಚಿಕ ರಾಶಿಯವರ ಅದೃಷ್ಟ್ವನ್ನು ಬಡಿದೆಬ್ಬಿಸುವುದು. ಅದೃಷ್ಟದ ಬಾಗಿಲು ತೆರೆಯುವುದು.ಗುಪ್ತ ನಿಧಿ ಅಥವಾ ಪೂರ್ವಜರ ಆಸ್ತಿಯಿಂದ ಅನಿರೀಕ್ಷಿತ ಲಾಭವಾಗುವುದು. ಹಳೆಯ ಹೂಡಿಕೆಗಳಿಂದಲೂ ಲಾಭವಾಗುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ಹೊಸ ವಾಹನ, ಮನೆ ಖರೀದಿಸುವ ಯೋಗವಿದೆ.ಬಹಳ ದಿನಗಳಿಂದ ಕಾಣುತ್ತಿದ್ದ ಕನಸು ನನಸಾಗುವ ಸಮಯ ಇದು. ದೀರ್ಘಕಾಲದ ಸಾಲದಿಂದ ಮುಕ್ತಿ ಸಿಗುವುದು.

ಮೀನ ರಾಶಿ:

ಮೀನ ರಾಶಿಯ ಅಧಿಪತಿ ಗುರುವೇ ಆಗಿರುವುದರಿಂದ ಕರ್ಕಾಟಕ ರಾಶಿಯಲ್ಲಿನ ಗುರು ಸಂಕ್ರಮಣ ಸುವರ್ಣ ಅವಕಾಶಗಳನ್ನು ತರುತ್ತದೆ. ಉದ್ಯೋಗ ಬದಲಾವಣೆ ಮಾಡಲು ಇದು ಸರಿಯಾದ ಕಾಲ. ವಿದೇಶದಲ್ಲಿ ವೃತ್ತಿಜೀವನವನ್ನು ಆರಂಭಿಸಬೇಕು ಅಂದುಕೊಂಡವರಿಗೂ ಇದು ಅನುಕೂಲಕರ ಸಮಯ. ಹೂಡಿಕೆ ಬಗ್ಗೆಯೂ ಪ್ರಯತ್ನಿಸಬಹುದು. ಹಳೆಯ ಹೂಡಿಕೆ ಲಾಭವನ್ನು ತರುವುದು. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+