ಗಜಕೇಸರಿ ಮತ್ತು ತ್ರಿಕೋನ ರಾಜಯೋಗದಿಂದ ಈ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಯಶಸ್ಸು, ಕೀರ್ತಿ...

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಮತ್ತು ಸಂಯೋಜನೆಯು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರತಿ ಗ್ರಹವು ರಾಶಿಯನ್ನು ಬದಲಾಯಿಸುವಾಗ ಅದು ಕೆಲವೊಮ್ಮೆ ಶುಭ ಅಥವಾ ಅಶುಭ ಯೋಗಗಳನ್ನು ರೂಪಿಸಬಹುದು.

ಹೀಗೆ ಆಗಸ್ಟ್‌ನಲ್ಲಿ ಎರಡು ಪ್ರಮುಖ ಶುಭ ಯೋಗಗಳು ರೂಪುಗೊಳ್ಳುತ್ತವೆ. ಅವುಗಳೆಂದರೆ ಗಜಕೇಸರಿ ಯೋಗ ಮತ್ತು ತ್ರಿಕೋನ ರಾಜಯೋಗ. ಈ ಎರಡು ಯೋಗಗಳು ಶುಭ ಯೋಗಗಳಾಗಿರುವುದರಿಂದ ಕೆಲವು ರಾಶಿಯವರಿಗೆ ತಮ್ಮ ಬಾಕಿಯಿರುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಅನುವು ಮಾಡಿಕೊಡುತ್ತವೆ.

Gajakesari trikona raja yoga in august 2023 will be lucky for these zodiac signs in kannada

ಇದಲ್ಲದೆ ಇವು ಅನೇಕ ಅದ್ಭುತ ಪ್ರಯೋಜನಗಳನ್ನು ಸಹ ನೀಡುತ್ತವೆ. ಈಗ ಆಗಸ್ಟ್ ತಿಂಗಳಲ್ಲಿ ರೂಪುಗೊಂಡ ಈ ಯೋಗಗಳಿಂದ ಯಾವ ರಾಶಿಯವರಿಗೆ ಅದೃಷ್ಟ ಬರುತ್ತದೆ ಎಂದು ನೋಡೋಣ.

ಗಜಗೇಸರಿ ರಾಜಯೋಗ

ಗಜಕೇಸರಿ ರಾಜಯೋಗವು ಜ್ಯೋತಿಷ್ಯಶಾಸ್ತ್ರದಲ್ಲಿ ಅತ್ಯಂತ ಮಂಗಳಕರವಾದ ಯೋಗಗಳಲ್ಲಿ ಒಂದಾಗಿದೆ. ಈ ಯೋಗವು ಗುರು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಂಡಿದೆ. ಈ ಯೋಗದಿಂದ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಈ ಯೋಗದ ಅವಧಿಯಲ್ಲಿ ಧೈರ್ಯವು ಹೇರಳವಾಗಿರುತ್ತದೆ ಮತ್ತು ಯಾವುದೇ ಕಾರ್ಯದಲ್ಲಿ ಯಶಸ್ಸು ಖಚಿತವಾಗಿರುತ್ತದೆ.

ತ್ರಿಕೋನ ರಾಜಯೋಗ

ತ್ರಿಕೋನ ರಾಜಯೋಗ ಮತ್ತೊಂದು ಮಂಗಳಕರ ಯೋಗವಾಗಿದೆ. ಈ ಯೋಗ ಯಶಸ್ಸು, ಕೀರ್ತಿ, ಸಂತೋಷ, ಸಂಪತ್ತು ಮತ್ತು ಶಾಂತಿಯನ್ನು ನೀಡುತ್ತದೆ. ಈ ಯೋಗ ಜಾತಕದಲ್ಲಿದ್ದರೆ ಅಂತಹ ವ್ಯಕ್ತಿಯು ಉತ್ತಮ ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಈ ಯೋಗ ಸಾಮಾನ್ಯವಾಗಿ 1, 5 ಮತ್ತು 9ನೇ ಮನೆಗಳಲ್ಲಿ ರೂಪುಗೊಳ್ಳುತ್ತದೆ. ವ್ಯಾಪಾರದಲ್ಲಿ ಉತ್ತಮ ಯಶಸ್ಸನ್ನು ಕಾಣಲು ತ್ರಿಕೋನ ರಾಜಯೋಗ ಸಹಾಯ ಮಾಡುತ್ತದೆ.

Gajakesari trikona raja yoga in august 2023 will be lucky for these zodiac signs in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಗಜಕೇಸರಿ ಮತ್ತು ತ್ರಿಕೋಣ ರಾಜಯೋಗ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಮುಖ್ಯವಾಗಿ ಸಂಪತ್ತಿನ ಬುದ್ಧಿವಂತಿಕೆಯನ್ನು ನೀಡುತ್ತದೆ. ಈ ಸಮಯದಲ್ಲಿ ಯಶಸ್ಸಿನ ಸಾಧ್ಯತೆಗಳು ಹೆಚ್ಚು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ತಿಂಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಈ ಎರಡು ಯೋಗಗಳ ಕಾರಣದಿಂದಾಗಿ, ಆಗಸ್ಟ್ ತಿಂಗಳು ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಈ ಅವಧಿಯಲ್ಲಿ ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ, ಅಧಿಕ ಲಾಭವನ್ನು ಪಡೆಯುತ್ತೀರಿ. ಅವಿವಾಹಿತರಿಗೆ ಒಳ್ಳೆಯ ಸಂಗಾತಿ ಸಿಕ್ಕು ವಿವಾಹವಾಗುವರು. ಈ ಎರಡೂ ಯೋಗಗಳು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ತರುತ್ತವೆ.

Gajakesari trikona raja yoga in august 2023 will be lucky for these zodiac signs in kannada

ಕರ್ಕಾಟಕ

ಕರ್ಕಾಟಕ ರಾಶಿಯವರಿಗೆ ಗಜಕೇಸರಿ ಮತ್ತು ತ್ರಿಕೋನ ರಾಜಯೋಗದ ಕಾರಣ, ಆಗಸ್ಟ್‌ನಲ್ಲಿ ಕನಸುಗಳು ನನಸಾಗುತ್ತವೆ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಎರಡೂ ಯೋಗಗಳಿಂದ ಕರ್ಕಾಟಕ ರಾಶಿಯವರು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುವರು. ನೀವು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುತ್ತೀರಿ ಮತ್ತು ಯಶಸ್ಸನ್ನು ಕಾಣುತ್ತೀರಿ.

ನೀವು ಯೋಜನೆ ಮತ್ತು ಕೆಲಸ ಮಾಡಿದರೆ ನಿಮ್ಮ ಗುರಿಗಳನ್ನು ನೀವು ಸುಲಭವಾಗಿ ಸಾಧಿಸಬಹುದು. ಸಂಪತ್ತು ವಿಸ್ತರಿಸಲು ಅವಕಾಶವಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಕಠಿಣ ಪರಿಶ್ರಮಕ್ಕೆ ಈ ತಿಂಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+