ತಂದೆ-ಮಗ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ, ಅದಕ್ಕೆ ಪರಿಹಾರವೇನು?
ತಂದೆ-ಮಗ ಇಬ್ಬರದೂ ಒಂದೇ ನಕ್ಷತ್ರವಾದರೆ ಅದನ್ನು ಏಕನಕ್ಷತ್ರ ದೋಷ ಎಂದು ಪರಿಗಣಿಸಲಾಗುತ್ತದೆ. ಏನಿದು ಏಕನಕ್ಷತ್ರ ದೋಷ? ಅದರಿಂದ ಪರಿಣಾಮಗಳೇನು? ಪರಿಹಾರ ಏನು? ಇತ್ಯಾದಿ ವಿಚಾರಗಳ ಬಗ್ಗೆಯೇ ಇಂದಿನ ಲೇಖನ. ಈ ರೀತಿ ಏಕನಕ್ಷತ್ರ ದೋಷ ಆಗಿದೆ ಅನ್ನೋದನ್ನು ಏನೆಂದು ಪರಿಗಣಿಸಬೇಕು ಎಂಬುದನ್ನು ಸಹ ತಿಳಿಸಲಾಗುವುದು.
ಪಿತೃ ದೋಷವಿದ್ದರೆ ಅಥವಾ ಹಿರಿಯರು ಹಾಗೂ ಪೋಷಕರು ನೀವು ಮಾಡಿದ ಕೆಲವು ಕಾರ್ಯದಿಂದ ಅಸಮಾಧಾನಗೊಂಡಿದ್ದರೆ ಅದರ ಫಲಿತವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಹಿರಿಯರನ್ನು ಗೌರವಿಸಬೇಕು. ಪೋಷಕರು, ಅತ್ತೆ-ಮಾವ, ತಾತ- ಅಜ್ಜಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು.
ಒಂದು ವೇಳೆ ನಿಮ್ಮ ಕುಟುಂಬದವರು ತೀರಿಹೋದ ಹಿರಿಯರ ವರ್ಷಾವರ್ಷ ಶ್ರಾದ್ಧ ಮಾಡುವುದನ್ನು ನಿಲ್ಲಿಸಿದ್ದರೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿ ವರ್ಷ ಸಾಂವತ್ಸರಿಕ ಶ್ರಾದ್ಧವನ್ನು ಕಡ್ಡಾಯವಾಗಿ ಮಾಡಲೇಬೇಕು. ಇನ್ನು ಏಕನಕ್ಷತ್ರ ದೋಷ ಎಂಬುದು ಅನ್ವಯಿಸುವುದು ತಂದೆ-ಮಗನಿಗೆ ಮಾತ್ರ. ತಂದೆ-ಮಗಳು, ತಾಯಿ-ಮಗಳಿಗೆ ಅನ್ವಯಿಸುವುದಿಲ್ಲ.

ಈ ದೋಷವಿದೆ ಎಂದು ಗೊತ್ತಾದ ಮೇಲೆ ಅದರ ನಿವಾರಣೆಗಾಗಿ ಏಕನಕ್ಷತ್ರ ಶಾಂತಿ ಪೂಜೆಯನ್ನು ಮಾಡಿಸಬೇಕು. ತಂದೆ ಹಾಗೂ ಮಗನದು ಒಂದೇ ನಕ್ಷತ್ರವಾದರೆ ಈ ದೋಷ ಬರುತ್ತದೆ. ಪಾದ ಒಂದೇ ಇರಲಿ ಅಥವಾ ಬೇರೆ ಇರಲಿ ಅದು ವಿಷಯವಲ್ಲ. ನಕ್ಷತ್ರ ಒಂದೇ ಆದರೆ ಮಾತ್ರ ಖಚಿತವಾಗಿಯೂ ದೋಷವಾಗುತ್ತದೆ.
ಯಾವಾಗ ಮಗನು ತಂದೆಯಿಂದ ಬೇರೆಯಾಗಿ ಜೀವನ ನಡೆಸಲು ಆರಂಭಿಸಿದಾಗ ಸಮಸ್ಯೆಗಳು ಉದ್ಭವವಾಗುತ್ತವೆ. ಅದು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆಗಳಾಗಿರುತ್ತವೆ. ಈ ದೋಷದ ಕಾರಣಕ್ಕೆ ಮಗನ ಮದುವೆ ವಿಳಂಬ ಆಗುವ ಸಾಧ್ಯತೆಗಳಿರುತ್ತವೆ. ಮದುವೆ ಆದ ನಂತರ ಸಂತಾನ ಆಗುವುದು ತಡವಾಗುತ್ತದೆ. ಇನ್ನೂ ಒಂದು ಸಲ ನೆನಪಿಸುತ್ತಿದ್ದೇನೆ: ಈ ದೋಷ ಮಗಳಿಗೆ ಅನ್ವಯ ಆಗುವುದಿಲ್ಲ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications