ಶನಿ-ಕುಜ ಯೋಗ, ಯುದ್ಧ ಮುಂದೂಡಿದ ನೋಟಿನ 'ಯಾಗ'

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಒಂದು ವೇಳೆ ನವೆಂಬರ್ 8ರಂದು 500, 1000 ರುಪಾಯಿ ನೋಟಿನ ರದ್ದು ಮಾಡದಿದ್ದರೆ ಏನಾಗುತ್ತಿತ್ತು ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್ ಅವರು ತಿಳಿಸಿದ್ದಾರೆ. ಗ್ರಹಸ್ಥಿತಿ ಆಧಾರದಲ್ಲಿ ಅವರು ತಿಳಿಸಿರುವ ಭವಿಷ್ಯ ತುಂಬ ಕುತೂಹಲಕಾರಿಯಾಗಿದೆ.

ಈಗ ಶನಿ-ಕುಜ ಪರಿವರ್ತನೆ ಯೋಗ ನಡೆಯುತ್ತಿದೆ. ಹಾಗೆಂದರೆ ಶನಿಯ ಆಧಿಪತ್ಯ ಇರುವ ಮಕರ ರಾಶಿಯಲ್ಲಿ ಕುಜ ಗ್ರಹವಿದ್ದರೆ, ಕುಜನು ಅಧಿಪತಿಯಾದ ವೃಶ್ಚಿಕ ರಾಶಿಯಲ್ಲಿ ಶನಿ ಗ್ರಹ ಇದೆ. ಇದನ್ನೇ ಜ್ಯೋತಿಷ್ಯದಲ್ಲಿ ಶನಿ-ಕುಜ ಪರಿವರ್ತನೆ ಯೋಗ ಅನ್ನುವುದು. ಒಂದು ವೇಳೆ ನೋಟು ರದ್ದು ಘೋಷಣೆ ಆಗದಿದ್ದರೆ ಭಾರತ-ಪಾಕ್ ಯುದ್ಧ ಸಾಧ್ಯತೆ ಬಹಳ ದಟ್ಟವಾಗಿತ್ತು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಇಲ್ಲಿ ಇನ್ನೊಂದು ಅಂಶ ಗಮನಿಸಬೇಕು. ನೋಟು ರದ್ದು ಘೋಷಣೆಯಾದದ್ದು ಮಂಗಳವಾರ. ಅಂದರೆ ಕುಜ ಗ್ರಹದ ಪ್ರಭಾವ ಹೆಚ್ಚಿರುವ ದಿನ. ಕುಜ ಅಂದರೆ ಸೇನೆಯನ್ನು ಕೂಡ ಪ್ರತಿನಿಧಿಸುವಂಥದ್ದು. ನೋಟು ರದ್ದು ಆಗಿರುವುದರಿಂದ ಚಿನ್ನ, ರಿಯಲ್ ಎಸ್ಟೇಟ್ ತುಂಬ ಚೆನ್ನಾಗಿ ಆಗುತ್ತದೆ, ಬೆಲೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಜನರಿದ್ದಾರೆ. ಅದರೆ ಇವೆರಡರಲ್ಲೂ ಸದ್ಯದಲ್ಲೇ ಕುಸಿತ ಕಾಣುತ್ತದೆ. ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 9845682380.

ಚಿನ್ನ, ರಿಯಲ್ ಎಸ್ಟೇಟ್ ಕುಸಿಯತ್ತೆ

ಚಿನ್ನ, ರಿಯಲ್ ಎಸ್ಟೇಟ್ ಕುಸಿಯತ್ತೆ

ಸದ್ಯಕ್ಕೆ ತಮ್ಮ ಕಪ್ಪು ಹಣ ಬದಲಿಸಿಕೊಳ್ಳುವ ಯತ್ನದಲ್ಲಿರುವವರು ಚಿನ್ನಕ್ಕೆ ಒಂದಕ್ಕೆ ಎರಡರಂತೆ ಬೆಲೆ ಕೊಟ್ಟು ಖರೀದಿಸುತ್ತಿರುವುದು ಮಾಧ್ಯಮದ ವರದಿಗಳಲ್ಲೇ ನಾವು ಓದುತ್ತಿದ್ದೇವೆ, ನೋಡುತ್ತಿದ್ದೇವೆ. ಆದರೆ ಚಿನ್ನ-ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶೀಘ್ರವೇ ಕುಸಿತ ಕಣ್ಣೆದುರಿಗೆ ಇದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ.

ಕೆಳಮಟ್ಟದ ರಾಜಕಾರಣ

ಕೆಳಮಟ್ಟದ ರಾಜಕಾರಣ

ಇನ್ನು ಶನಿಯು ಸದ್ಯದ ಸ್ಥಿತಿಯಲ್ಲಿ ದೇಶಾದ್ಯಂತ ತೀರಾ ಕೆಳ ಮಟ್ಟದ ರಾಜಕಾರಣ ನಡೆಯುತ್ತದೆ. ಜನರು ಕ್ಷುಲ್ಲಕ ರಾಜಕಾರಣವನ್ನು ಕಣ್ಣೆದುರೇ ನೋಡುತ್ತಾರೆ. ಇವೆಲ್ಲ ಗ್ರಹಸ್ಥಿತಿಯು ಸೂಚಿಸುತ್ತಿರುವ ಭವಿಷ್ಯ. ಮುಂದಾಗುವುದರ ಬಗ್ಗೆ ಒಂದಿಷ್ಟು ಎಚ್ಚರ ವಹಿಸುವುದು, ಧರ್ಮ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದೇ ಅಶುಭ ಫಲಗಳನ್ನು ತಡೆಯುವ ಮೊದಲ ಸ್ಪೀಡ್ ಬ್ರೇಕರ್ ಎಂಬುದು ನೆನಪಿನಲ್ಲಿಡಿ.

ಯುದ್ಧ ಮುಂದೂಡಿದಂತೆ

ಯುದ್ಧ ಮುಂದೂಡಿದಂತೆ

ಇನ್ನು ಕನ್ಯಾ ರಾಶಿಯಲ್ಲಿ ಇರುವ ಗುರು ಅಂಥ ಶುಭ ಫಲಗಳನ್ನು ನೀಡುವುದಿಲ್ಲ. ಬರುವ ಸೆಪ್ಟೆಂಬರ್ ವರೆಗೆ ಕನ್ಯಾ ರಾಶಿಯಲ್ಲಿದ್ದು, ಆ ನಂತರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಅಂಥ ಶುಭ ಸಂದರ್ಭವಲ್ಲ. ಸದ್ಯಕ್ಕೇನೋ ಯುದ್ಧ ಅಗದಿರಬಹುದು. ಇದು ಒಂದು ರೀತಿಯಲ್ಲಿ ಯುದ್ಧವನ್ನು ಮುಂದೂಡಿದಂತೆ. ಭವಿಷ್ಯದಲ್ಲಿ ಯುದ್ಧ ಸಾಧ್ಯತೆ ಹೆಚ್ಚಿದೆ.

ಹೆಣ್ಣುಮಕ್ಕಳು ಹುಷಾರಾಗಿರಬೇಕು

ಹೆಣ್ಣುಮಕ್ಕಳು ಹುಷಾರಾಗಿರಬೇಕು

ಇನ್ನು ಹೆಣ್ಣುಮಕ್ಕಳಿಗೂ ಅಂಥ ಒಳ್ಳೆ ಕಾಲವಲ್ಲ. ಹೆಣ್ಣುಮಕ್ಕಳಿನ ಮೇಲೆ ದೌರ್ಜನ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು. ನವೆಂಬರ್ 11ರಂದು 2,000 ಮುಖಬೆಲೆಯ ನೋಟು ದೇಶದಲ್ಲಿ ಬಿಡುಗಡೆಯಾಗಿದೆ. ಆ ದಿನದಂದು ಹೊಸ ನೋಟು ಬಿಡುಗಡೆಯಾಗಿದ್ದು ದೇಶದ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What would have happened had Narendra Modi not taken any decision on demonetisation? According to well known astrologer Vittal Bhat, it would have lead to war between India and Pakistan, as per planetary positions. Kudos to Narendra Modi's far sightedness.
Please Wait while comments are loading...