• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ವ್ಯಾಧಿ ಬೂದಿ ಆದಿತಲೇ.. ಪರಾಕ್': ಐತಿಹಾಸಿಕ ದೇವರಗುಡ್ಡ ಗೊರವಯ್ಯ ನುಡಿದ ದಸರಾ ಮಹಾನವಮಿ ಭವಿಷ್ಯ

|

ಕಳೆದ ವರ್ಷ ನವರಾತ್ರಿಯ ವೇಳೆ, ದೇವರಗುಡ್ಡ ಸುಕ್ಷೇತ್ರದಲ್ಲಿ ನುಡಿಯಲಾಗಿದ್ದ ಭವಿಷ್ಯದಲ್ಲಿ ಮಹಾಮಾರಿಯೊಂದು ಮುಂಬರುವ ದಿನಗಳಲ್ಲಿ, ವಕ್ಕರಿಸುವ ಮುನ್ಸೂಚನೆಯನ್ನು ನೀಡಲಾಗಿತ್ತು. ಈ ಬಾರಿ ನುಡಿಯಲಾಗಿರುವ ಕಾರ್ಣಿಕ, ನಿಟ್ಟುಸಿರು ಬಿಡುವಂತಿದೆ.

ಕೊರೊನಾ ಮತ್ತು ಅತಿವೃಷ್ಟಿಯ ಹಾವಳಿಯ ಬಗ್ಗೆ ಕೋಡಿಮಠದ ಶ್ರೀಗಳು ಕೂಡಾ ಭವಿಷ್ಯ ನುಡಿದಿದ್ದರು. ಅಶ್ವಯುಜ ಮತ್ತು ಕಾರ್ತಿಕ ಮಾಸದಲ್ಲಿ ಸಾರ್ವಜನಿಕರು ಕೊರೊನಾ ಸೋಂಕು ತಗಲದಂತೆ ಇರಲು, ಜಾಗರೂಕತೆಯಿಂದ ಇರಬೇಕು ಎನ್ನುವ ಮಾತನ್ನು ಕೋಡಿಶ್ರೀಗಳು ಹೇಳಿದ್ದರು.

ಕೋಡಿಮಠದ ಶ್ರೀಗಳ ಭವಿಷ್ಯ

ಇನ್ನು, ಕೊರೊನಾ ವಿಚಾರದಲ್ಲಿ ಹಲವು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯವಾಣಿ ಸರಿಯಾಗಿ ಹೊರಹೊಮ್ಮಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಪ್ರತೀ ಬಾರಿ ನವರಾತ್ರಿಯಂದು ಕಾರ್ಣಿಕ ನುಡಿಯುವ ಪದ್ದತಿಯಿದೆ.

ಈ ಬಾರಿಯೂ ಗೊರವಯ್ಯ ಭವಿಷ್ಯವನ್ನು ನುಡಿದಿದ್ದು, ಕೊರೊನಾ ಹಾವಳಿಯಿಂದಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೂ, ಸಾಮಾನ್ಯವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದ ಭಕ್ತರು, ಈ ಬಾರಿ, ಪೊಲೀಸರ ಕಣ್ಣು ತಪ್ಪಿಸಿ, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ವ್ಯಾಧಿ ಬೂದಿ ಆದಿತಲೇ.. ಪರಾಕ್..

ಭವಿಷ್ಯ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಗೆಲುವು

ಕಾರ್ಣಿಕ ನುಡಿಯುವ ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಭವಿಷ್ಯ ನುಡಿಯುತ್ತಾರೆ

ಕಾರ್ಣಿಕ ನುಡಿಯುವ ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಭವಿಷ್ಯ ನುಡಿಯುತ್ತಾರೆ

ಹೆಚ್ಚಾಗಿ ಮಳೆಬೆಳೆ, ನಾಡಿನ ಕ್ಷೇಮ, ರಾಜಕೀಯ ಸ್ಥಿತ್ಯಂತರದ ವಿಚಾರದಲ್ಲಿ ನುಡಿಯಲಾಗುವ ಈ ಭವಿಷ್ಯವನ್ನು, ಈ ಭಾಗದ ಜನರು ಬಹುಪಾಲು ನಂಬಿಕೊಂಡು ಬರುತ್ತಿದ್ದಾರೆ. ಒಗಟಿನ ರೂಪದಲ್ಲಿ ಮತ್ತು ಒಂದೆರಡು ವಾಕ್ಯದಲ್ಲಿ ಹೇಳುವ ಈ ಭವಿಷ್ಯವನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ. ಕಾರ್ಣಿಕ ನುಡಿಯುವ ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಭವಿಷ್ಯ ನುಡಿಯುತ್ತಾರೆ.

'ಘಟಸರ್ಪ ಕಂಗಾಲಾದೀತಲೇ ಪರಾಕ್'

'ಘಟಸರ್ಪ ಕಂಗಾಲಾದೀತಲೇ ಪರಾಕ್'

ಕಳೆದ ವರ್ಷ 'ಘಟಸರ್ಪ ಕಂಗಾಲಾದೀತಲೇ ಪರಾಕ್' ಎಂದು ಕಾರ್ಣಿಕ ನುಡಿದಿದ್ದರು. 'ಘಟಸರ್ಪ' ಎಂಬ ಪದವು ದೊಡ್ಡ ವ್ಯಕ್ತಿಯನ್ನು ಕುರಿತದ್ದಾಗಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ಕಂಗಾಲಾದೀತಲೇ ಎನ್ನುವುದರಲ್ಲಿ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡಲಾಗಿದೆಎಂದು ಕಳೆದ ಕಾರ್ಣಿಕವನ್ನು ವ್ಯಾಖ್ಯಾನಿಸಲಾಗಿತ್ತು.

ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ

ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ

'ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ.. ಪರಾಕ್' ಇದು ಈ ಬಾರಿ ನುಡಿಯಲಾಗಿರುವ ಭವಿಷ್ಯ. ದೇವರಗುಡ್ಡದ ಮೈಲಾರಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕರ ಪ್ರಕಾರ, ನಾಡು ಸುಭಿಕ್ಷವಾಗಲಿದೆ, ಕಷ್ಟ ದೂರವಾಗಲಿದೆ ಎಂದು ಇವರು ಹೇಳಿದ್ದಾರೆ.

  CSK ವಿರುದ್ಧ ರೊಚ್ಚಿಗೆದ್ದ Simple Suni | CSKvsMI | Oneindia Kannada
  ನಾಡು ಕೊರೊನಾ ಹಾವಳಿಯಿಂದ ಮುಕ್ತವಾಗಲಿದೆ

  ನಾಡು ಕೊರೊನಾ ಹಾವಳಿಯಿಂದ ಮುಕ್ತವಾಗಲಿದೆ

  ಪ್ರಧಾನ ಅರ್ಚಕರ ಪ್ರಕಾರ, "ನಾಡು ಕೊರೊನಾ ಹಾವಳಿಯಿಂದ ಮುಕ್ತವಾಗಲಿದೆ. ಕೊರೊನಾ ಕಾಲಕ್ರಮೇಣ ಬೂದಿಯಾಗಲಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮುಂದೆ ರೈತರ ಬಾಳು ಹಸನಾಗಲಿದೆ. ರಾಜ್ಯ ಸರಕಾರ ನಿರಾಂತಕವಾಗಿ ಕಾರ್ಯಭಾರ ಮಾಡಲಿದೆ" ಎಂದು ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ಮಿ, ಶನಿವಾರ (ಅ 24) ನುಡಿದ ಭವಿಷ್ಯವನ್ನು ಅರ್ಚಕರು ಹೀಗೆ ವಿಶ್ಲೇಷಿಸಿದ್ದಾರೆ.

  English summary
  Devaragudda Mylara Lingeshwara Temple Annual Dasara Prediction 2020 By Goravaiah.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X