• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ, 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆ

|
Google Oneindia Kannada News

ಡಿಸೆಂಬರ್ ನಾಲ್ಕರಂದು ಸಂಭವಿಸಲಿರುವ ಸೂರ್ಯ ಗ್ರಹಣವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೊಂದು ಕಠಿಣ ಗ್ರಹಣವಾಗಲಿದೆ. ಈ ಸೂರ್ಯ ಗ್ರಹಣ ವೃಶ್ಚಿಕ ರಾಶಿ, ಹದಿನೆಂಟು ರೇಖೆಯಲ್ಲಿ, ಜ್ಯೇಷ್ಠಾ ನಕ್ಷತ್ರದಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ.

ಭಾರತದಲ್ಲಿ ಗೋಚರಿಸದೇ ಇರುವುದರಿಂದ ಧಾರ್ಮಿಕ ಮಾನ್ಯತೆ ಇದಕ್ಕಿಲ್ಲ, ಆದರೆ ಸೂರ್ಯ ನಮ್ಮೆಲ್ಲರ ಆತ್ಮ, ಹಾಗಾಗಿ ಸೂರ್ಯನಿಗೆ ಪ್ರಪಂಚದ ಯಾವುದೇ ಭಾಗದಲ್ಲಿ ಗ್ರಹಣವಾದರೂ, ಜನರ ಜೀವನದ ಮೇಲೆ ಪ್ರಭಾವವನ್ನು ಖಂಡಿತ ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಮುಖೇಶ್ ವತ್ಸ್ ಅಭಿಪ್ರಾಯ ಪಟ್ಟಿದ್ದಾರೆ.

Surya Grahan 2021 Effects : ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಯಾವ ಪರಿಣಾಮ?Surya Grahan 2021 Effects : ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಯಾವ ಪರಿಣಾಮ?

ಸೂರ್ಯ ಗ್ರಹಣದ ಸಂಬಂಧ ವಿಡಿಯೋ ಮೂಲಕ ಜ್ಯೋತಿಷ್ಯ ನುಡಿದಿರುವ ಮುಖೇಶ್, "ಸೂರ್ಯ ಗ್ರಹಣ ಎಲ್ಲಿ ಗೋಚರಿಸುತ್ತದೋ ಅಲ್ಲಿ ನೂರಕ್ಕೆ ನೂರು, ಕಾಣದೇ ಇರುವ ಜಾಗದಲ್ಲಿ ಅದರ ಅರ್ಧದಷ್ಟು ಪ್ರಭಾವವನ್ನಂತೂ ಬೀರಲಿದೆ. ಕಳೆದ ವರ್ಷ ಕೂಡಾ ಡಿಸೆಂಬರ್ ತಿಂಗಳಲ್ಲಿ ಜ್ಯೇಷ್ಠಾ ನಕ್ಷತ್ರದಲ್ಲೇ ಗ್ರಹಣ ಸಂಭವಿಸಿತ್ತು"ಎಂದು ಅವರು ಹೇಳಿದ್ದಾರೆ.

"ರಾಹು ಮತ್ತು ಕೇತು, ಏಪ್ರಿಲ್ ತಿಂಗಳಲ್ಲಿ ಪಥವನ್ನು ಬದಲಿಸಿದ್ದಾನೆ. ವೃಶ್ಚಿಕ ರಾಶಿಗೆ ಇದು ಅಂತಿಮ ಸೂರ್ಯ ಗ್ರಹಣವಲ್ಲ. ಮುಂದಿನ ವರ್ಷದ ಏಪ್ರಿಲ್ ಮೂವತ್ತಕ್ಕೆ ಇನ್ನೊಂದು ಸೂರ್ಯ ಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ಇದುವರೆಗೆ ಚಂದ್ರ ಗ್ರಹಣದ ನಂತರ ಸೂರ್ಯ ಗ್ರಹಣವಾಗುತ್ತಿತ್ತು. ಇನ್ನು ಮುಂದೆ, ಸೂರ್ಯ ಗ್ರಹಣ ಮೊದಲು ಸಂಭವಿಸಲಿದೆ" ಎಂದು ಮುಖೇಶ್ ವತ್ಸ್ ಹೇಳಿದ್ದಾರೆ. ಮುಂದೆ ಓದಿ..

Nostradamus Predictions : 2022 ರಲ್ಲಿ ಯುದ್ಧ, ಅಣುಬಾಂಬ್‌ ಸ್ಪೋಟ: ನಾಸ್ಟ್ರಾಡಾಮಸ್‌ ಭಯಾನಕ ಭವಿಷ್ಯವಾಣಿNostradamus Predictions : 2022 ರಲ್ಲಿ ಯುದ್ಧ, ಅಣುಬಾಂಬ್‌ ಸ್ಪೋಟ: ನಾಸ್ಟ್ರಾಡಾಮಸ್‌ ಭಯಾನಕ ಭವಿಷ್ಯವಾಣಿ

 ಡಿಸೆಂಬರ್ ನಾಲ್ಕರಂದು ಸಂಭವಿಸಲಿರುವ ಸೂರ್ಯ ಗ್ರಹಣ

ಡಿಸೆಂಬರ್ ನಾಲ್ಕರಂದು ಸಂಭವಿಸಲಿರುವ ಸೂರ್ಯ ಗ್ರಹಣ

"ಡಿಸೆಂಬರ್ ನಾಲ್ಕರಂದು ಸಂಭವಿಸಲಿರುವ ಸೂರ್ಯ ಗ್ರಹಣ ಯಾಕೆ ಕಠಿಣ ಎಂದರೆ, ಯಾವ ರಾಶಿಯ ಮೇಲೆ ಗ್ರಹಣ ಸಂಭವಿಸಲಿದೆಯೋ ಆ ರಾಶಿಯ ಅಧಿಪತಿ ದುರ್ಭಲನಾಗಿದ್ದಾನೆ. ಇನ್ನೊಂದು ವಿಚಾರವೇನಂದರೆ ಗ್ರಹಣದ ಸ್ಥಾನದಿಂದ ಈ ರಾಶಿ ಹನ್ನೆರಡನೇ ಮನೆಯಲ್ಲಿದ್ದಾನೆ. ಶುಕ್ರನು ಉತ್ತರಾಷಾಡ ನಕ್ಷತ್ರದಲ್ಲಿದ್ದಾನೆ, ಶನಿ ಶ್ರವಣ ನಕ್ಷತ್ರದಲ್ಲಿದ್ದಾನೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಇದ್ದೇ ಇರಲಿದೆ" ಎಂದು ಮುಖೇಶ್ ವತ್ಸ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

 ಖ್ಯಾತ ಜ್ಯೋತಿಷಿ ಮುಖೇಶ್ ವತ್ಸ್ ಅಭಿಪ್ರಾಯ ಪಟ್ಟಿದ್ದಾರೆ

ಖ್ಯಾತ ಜ್ಯೋತಿಷಿ ಮುಖೇಶ್ ವತ್ಸ್ ಅಭಿಪ್ರಾಯ ಪಟ್ಟಿದ್ದಾರೆ

"21.06.2002 ಸೂರ್ಯ ಗ್ರಹಣ ಸಂಭವಿಸಿತ್ತು, ಇದಾದ ನಂತರ ರಾಹು ಗ್ರಹಣ ರೇಖೆಯನ್ನು ದಾಟಿದ್ದ. ಇದರ ಪ್ರಭಾವದಿಂದ ಅಮೆರಿಕಾದ ದ್ವಿವಳಿ ಕಟ್ಟಡದ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ವೃಶ್ಚಿಕ ರಾಶಿ ಎಂಟನೇ ಮನೆಯಲ್ಲಿ ಇರುವುದರಿಂದ ಇದು ಮೃತ್ಯು, ಭಯ, ಅಭದ್ರತೆಯ ಸೂಚನೆಯಾಗಿದೆ. ಕೆಲವೊಂದು ರಾಶಿಯವರಿಗೆ ಇದು ಒಳ್ಳೆಯ ಸಮಯವಲ್ಲ. ಜ್ಯೇಷ್ಠಾ ನಕ್ಷತ್ರದ ಅಧಿಪತಿ ಇಂದ್ರ, ಹಾಗಾಗಿ ಈ ರಾಶಿಯವರನ್ನು ಪ್ರಭಾವಿ ಎಂದು ಹೇಳಲಾಗುತ್ತದೆ. ಈ ಗ್ರಹಣ ಅದೇ ರಾಶಿಯ ಮೇಲೆ ಸಂಭವಿಸಲಿದೆ, ಹಾಗಾಗಿ, ಇದು ಆಡಳಿತದಲ್ಲಿ ಇರುವವರಿಗೆ ಶುಭ ಶಕುನವಲ್ಲ" -
ಮುಖೇಶ್ ವತ್ಸ್.

 ಭೂಕಂಪ, ಸುನಾಮಿ ಸೇರಿದಂತೆ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಘಟನೆ

ಭೂಕಂಪ, ಸುನಾಮಿ ಸೇರಿದಂತೆ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಘಟನೆ

"ಹಿಂದಿನ ಸೂರ್ಯ ಗ್ರಹಣದಿಂದ ಡಿಸೆಂಬರ್ ನಾಲ್ಕರ ಗ್ರಹಣದ ಅವಧಿಯ ರಾಶಿಫಲವನ್ನು ನೋಡುವುದಾದರೆ, ಗಣ್ಯ ವ್ಯಕ್ತಿಯ ಅಕಾಲಿಕ ಮೃತ್ಯು ಸಂಭವಿಸಲಿದೆ. ಮುಂದಿನ ಸೂರ್ಯ ಗ್ರಹಣದ ಅವಧಿಯ ನಾಲ್ಕು ತಿಂಗಳಲ್ಲಿ ಅನೇಕ ದುರ್ಘಟನೆಗಳು ನಡೆಯಲಿವೆ. ವೃಶ್ಚಿಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ನೀರಿಗೆ ಸಂಬಂಧಿಸಿದ ಅವಘಡಗಳು ಹೆಚ್ಚಾಗಬಹುದು, ಅದು ನೌಕಾಪಡೆಯ ಯುದ್ದವೂ ಇರಬಹುದು. ಭೂಕಂಪ, ಸುನಾಮಿ ಸೇರಿದಂತೆ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಘಟನೆಗಳಿಂದ ಸಾವು ಹೆಚ್ಚಾಗಲಿದೆ" ಎಂದು ಮುಖೇಶ್ ವತ್ಸ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

 ಸರಕಾರದ ನಿಯಮಗಳ ವಿರುದ್ದ ಜನರು ಬೀದಿಗಿಳಿಯಲಿದ್ದಾರೆ

ಸರಕಾರದ ನಿಯಮಗಳ ವಿರುದ್ದ ಜನರು ಬೀದಿಗಿಳಿಯಲಿದ್ದಾರೆ

"ವೃಶ್ಚಿಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಸರಕಾರದ ನಿಯಮಗಳ ವಿರುದ್ದ ಜನರು ಬೀದಿಗಿಳಿಯಲಿದ್ದಾರೆ. ಸರಕಾರದ ಮುಖ್ಯ ಸ್ಥಾನದಲ್ಲಿ ಇರುವವರಿಗೆ ಮತ್ತು ಸರಕಾರೀ ಕೇಂದ್ರಗಳಿಗೆ ತೊಂದರೆಯಾಗಲಿದೆ. ಕೋಮು ಗಲಭೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ, ಸರಕಾರಕ್ಕೆ ಸಂಬಂಧಿಸಿದ ಗಣ್ಯ ವ್ಯಕ್ತಿಗಳಿಗೆ ಇದು ಒಳ್ಳೆಯ ಸಮಯವಲ್ಲ. ವೃಷಭ ರಾಶಿಯವರಿಗೆ ಮತ್ತು ಡಿಸೆಂಬರ್ ಮೊದಲನೇ ವಾರದಲ್ಲಿ ಜನಿಸಿದವರಿಗೆ ಈ ಸೂರ್ಯ ಗ್ರಹಣ ಉತ್ತಮ ಫಲವನ್ನು ನೀಡುವುದಿಲ್ಲ" ಎಂದು ಮುಖೇಶ್ ವತ್ಸ್ ಅವರು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

Recommended Video

   ಬಹಿರಂಗವಾಗೇ ಎಲ್ಲರ ಮುಂದೆ ಬಂದು ನಿಂತ KL Rahul-Athiya Shetty | Oneindia Kannada
   English summary
   December 4, 2021 Solar Eclipse: Astrology Prediction By Well Known Astrologer Mukesh Vats. Know More,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X