Horoscope Today: ದಿನ ಭವಿಷ್ಯ ಜನವರಿ 10- ವೈಕುಂಠ ಏಕಾದಶಿಯಂದು ಈ ರಾಶಿಗೆ ವಿಷ್ಣುವಿನ ಕೃಪೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ವೈಕುಂಠ ಏಕಾದಶಿ ಜನವರಿ 10 ಶುಕ್ರವಾರ ಆಚರಿಸಲಾಗುತ್ತದೆ. ಈ ದಿನ ಕೆಲವು ರಾಶಿಗಳಿಗೆ ತುಂಬಾ ಶುಭವಾಗಲಿದೆ. ಈ ದಿನದಂದು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ಕೆಲವು ರಾಶಿಗಳಿಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯಲಿವೆ. ಉದ್ಯೋಗಸ್ಥರಾಗಿರಲಿ ಅಥವಾ ಉದ್ಯಮಿಯಾಗಿರಲಿ ಈ ದಿನ ಅವರಿಗೆ ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಅಲ್ಲದೆ ಆರ್ಥಿಕ ಸ್ಥಿತಿ ಸುಧಾರಿಸಿ ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಹಾಗಾದರೆ ಜನವರಿ 10 ಶುಕ್ರವಾರ ವೈಕುಂಠ ಏಕಾದಶಿಯಂದು 12 ರಾಶಿಗಳ ಭವಿಷ್ಯ ಹೇಗಿದೆ, ಜೊತೆಗೆ ಯಾವ ರಾಶಿ ವಿಷ್ಣುವಿನ ನೆಚ್ಚಿನ ರಾಶಿ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಜನವರಿ 10 ತುಂಬಾ ಶುಭ ದಿನವಾಗಿದೆ. ವಿಷ್ಣುವಿನ ನೆಚ್ಚಿನ ರಾಶಿಗಳಲ್ಲಿ ಮೇಷ ರಾಶಿಯೂ ಒಂದಾಗಿದೆ. ಈ ದಿನ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

Horoscope today january 10 these zodiac signs bank balance increase by vishnu on vaikuntha ekadashi

ನೀವು ಉದ್ಯೋಗದಲ್ಲಿದ್ದರೆ ಬಡ್ತಿ ಅಥವಾ ಹೊಸ ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆಯಿದೆ. ವೈಕುಂಠ ಏಕಾದಶಿಯ ಈ ಶುಭ ದಿನದಂದು ಯಾವುದೇ ಹೊಸ ಕೆಲಸಗಳನ್ನು ಆರಂಭಿಸಿ, ವಿಷ್ಣು ದೇವರನ್ನು ಭಕ್ತಿಯಿಂದ ಪೂಜಿಸಿ. ಇದರಿಂದ ನಿಮ್ಮ ಭವಿಷ್ಯ ಮತ್ತಷ್ಟು ಉಜ್ವರಲಾಗಿರುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನವು ಹೊಸ ಆರಂಭದ ಸೂಚನೆಯಾಗಿದೆ. ವೃಷಭ ರಾಶಿಯವರಿಗೆ ವೈಕುಂಠ ಏಕಾದಶಿಯಂದು ಮಾಡುವ ಕಾರ್ಯಗಳಲ್ಲಿ ಹೆಚ್ಚಿನ ಆದಾಯ ಸಿಗಲಿದೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ಇದು ಭವಿಷ್ಯದಲ್ಲಿ ನಿಮಗೆ ದೊಡ್ಡ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಸಿಗಲಿದೆ. ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರಲಿದೆ. ವ್ಯವಹಾರದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಈ ದಿನ ದಾನಕ್ಕೆ ವಿಶೇಷವಾಗಿದ್ದು ಈ ದಿನ ಬಡವರಿಗೆ ದಾನ ಮಾಡಿದರೆ ದುಪ್ಪಟ್ಟು ಫಲ ಸಿಗಲಿದೆ.

ಮಿಥುನ ರಾಶಿ

ಜನವರಿ 10 ಮಿಥುನ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಆಸ್ತಿ, ವಾಹನ, ಮನೆ ಖರೀದಿ ಮಾಡಲು ಉತ್ತಮ ಸಮಯ ಇದು. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಋತುಮಾನದ ರೋಗಗಳು ಸಣ್ಣ ಪುಟ್ಟ ತೊಂದರೆ ಮಾಡಬಹುದು. ಶಿಕ್ಷಣದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಮನೆಯಲ್ಲಿ ವಾತಾವರಣ ಚೆನ್ನಾಗಿರುತ್ತದೆ. ನೀವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ದಿನ ವಿಷ್ಣು ಹಾಗೂ ಲಕ್ಷ್ಮೀ ದೇವಿಯನ್ನು ಪೂಜಿಸುವುದು ತುಂಬಾ ಶುಭಕರ ಫಲಿತಾಂಶವನ್ನು ನೀಡಲಿದೆ.

ಕರ್ಕಾಟಕ ರಾಶಿ

ಕಟಕ ರಾಶಿಯವರಿಗೆ ವಿಷ್ಣವಿನ ಆಶೀರ್ವಾದದಿಂದ ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ವ್ಯಪಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ದಿನ ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಲಕ್ಷ್ಮೀ ದೇವಿಯನ್ನು ಆರಾಧಿ, ಅಗತ್ಯವಿರುವವರಿಗೆ ಈ ದಿನ ದಾನ ಮಾಡುವುದು ತುಂಬಾ ಉತ್ತಮ ಫಲವನ್ನು ನೀಡುತ್ತದೆ.

ಸಿಂಹ ರಾಶಿ

ಜನವರಿ 10 ಸಿಂಹ ರಾಶಿಯವರಿಗೆ ಅದ್ಭುತ ದಿನವಾಗಿದೆ. ವಿಷ್ಣುವಿನ ನೆಚ್ಚಿನ ರಾಶಿಯಲ್ಲಿ ಸಿಂಹ ರಾಶಿಯೂ ಒಂದಾಗಿದೆ. ಹೀಗಾಗಿ ಸಿಂಹ ರಾಶಿಯವರಿಗೆ ಈ ದಿನ ತುಂಬಾ ವಿಶೇಷವಾಗಿರಲಿದೆ. ನಿಮ್ಮ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗಲಿದೆ. ನೀವು ಉದ್ಯೋಗಗಳನ್ನು ಬದಲಾಯಿಸುವ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯ.

ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಇರಲಿದೆ. ಬೆಳಿಗ್ಗೆ ವಿಷ್ಣುವನ್ನು ಪೂಜಿಸಿ ಅಗತ್ಯ ಇರುವವರಿಗೆ ದಾನ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಜನವರಿ 10 ಮಿಶ್ರ ಫಲ ನೀಡಲಿದೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತದೆ. ಗುರುವಿನಿಂದ ನಿಮಗೆ ಬೆಂಬಲ ಸಿಗಲಿದೆ. ದೀರ್ಘ ಪ್ರಯಾಣದ ಸಾಧ್ಯತೆ ಕೂಡ ಇದೆ. ಬೆಳಿಗ್ಗೆ ಲಕ್ಷ್ಮೀ ದೇವಿಯ ಮಂತ್ರವನ್ನು ಪಠಿಸಿ, ಹಸುವಿಗೆ ಮೇವು ನೀಡಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಜನವರಿ 10 ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪ್ರೀತಿಪಾತ್ರರಿಂದ ನಿಮಗೆ ನೋವುಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ತಂದೆ ಅಥವಾ ಧಾರ್ಮಿಕ ಗುರುಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಶುಕ್ರವಾರ ವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಉತ್ತಮ ಫಲ ನೀಡುತ್ತದೆ. ಅಲ್ಲದೆ ಬಡವನಿಗೆ ಬಿಳಿ ಬಟ್ಟೆ ದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಜನವರಿ 10 ಅಷ್ಟೊಂದು ಉತ್ತಮವಾಗಿಲ್ಲ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಬೆಳಿಗ್ಗೆ ಕುಬೇರನ ಮಂತ್ರವನ್ನು ಪಠಿಸಿ. ಜೊತೆಗೆ ಮಂಗಗಳಿಗೆ ಬಾಳೆಹಣ್ಣು ನೀಡಿ. ಬೆಳಿಗ್ಗೆ ತಂದೆಯ ಪಾದಗಳನ್ನು ಮುಟ್ಟಿ ಮನೆಯಿಂದ ಹೊರಡಿ.

ಧನು ರಾಶಿ

ಧನು ರಾಶಿಯವರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸದಲ್ಲಿ ಸಂಗಾತಿಯಿಂದ ಬೆಂಬಲ ಸಿಗಲಿದೆ. ಕುಟುಂಬ ಅಥವಾ ಸಾಂಸ್ಕೃತಿಕ ವಿಷಯಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಲಿದೆ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಬೆಳಿಗ್ಗೆ ಹಸುವಿಗೆ ಆಹಾರ ನೀಡಿ, ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಮತ್ತು ಕುಬೇರನ ಮಂತ್ರವನ್ನು ಪಠಿಸಿ.

ಮಕರ ರಾಶಿ

ಮಕರ ರಾಶಿಯವರು ಶುಕ್ರವಾರ ಅನಗತ್ಯವಾಗಿ ಓಡಾಡಬೇಕಾಗಬಹುದು. ಮಕರ ರಾಶಿಯವರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಶುಭ ಫಲ ಸಿಗಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ವೈಕುಂಠ ಏಕಾದಶಿ ಉತ್ತಮವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ನೀವು ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಅಗತ್ಯ ಇರುವವರಿಗೆ ಆಹಾರ ಹಾಗೂ ವಸ್ತ್ರ ದಾನ ಮಾಡುವುದು ಉತ್ತಮ. ಇದರಿಂದ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

ಮೀನ ರಾಶಿ

ಮೀನ ರಾಶಿಯವರ ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಕುಟುಂಬಸ್ಥರ ಬೆಂಬಲ ದೊರೆಯಲಿದೆ. ಇಂದು ನಿಮ್ಮ ಮಕ್ಕಳಿಂದ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ. ಬೆಳಿಗ್ಗೆ ಹಸುವಿಗೆ ಆಹಾರ ನೀಡಿ. ವಿಷ್ಣು ಮಂತ್ರವನ್ನು ಪಠಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಿಂದ ಪಡೆದ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+