Horoscope Today: ದಿನ ಭವಿಷ್ಯ ಜನವರಿ 5- ಭಾನುವಾರ 12 ರಾಶಿಗಳ ಜಾತಕ ಹೇಗಿದೆ?

ಪ್ರತಿದಿನ ಗ್ರಹಗಳ ಸ್ಥಾನ ಬದಲಾಗುತ್ತವೆ. ಸಂಚಾರದ ವೇಳೆ ನವಗ್ರಹಗಳು ಕಾಲ ಕಾಲಕ್ಕೆ ರಾಶಿ ಹಾಗೂ ನಕ್ಷತ್ರಗಳಲ್ಲಿ ಸಾಗುತ್ತವೆ. ಹೀಗೆ ಗ್ರಹಗಳ ರಾಶಿ ಹಾಗೂ ನಕ್ಷತ್ರ ಬದಲಾವಣೆ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜನವರಿ 5ರಂದು ಚಂದ್ರ ಗ್ರಹ ಕುಂಭ ರಾಶಿಯ ನಂತರ ಮೀನ ರಾಶಿಗೆ ಸಂಚಾರ ಮಾಡಲಿದೆ. ಅಲ್ಲದೇ ಇಂದು ಪುಷ್ಯ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ ಇದೆ. ಈ ದಿನ ತ್ರಿಪುಷ್ಕರ ಯೋಗ, ರವಿಯೋಗ ಹಾಗೂ ಪೂರ್ವಾಭಾದ್ರಪದ ನಕ್ಷತ್ರದ ಶುಭ ಸಂಯೋಗ ಸಂಭವಿಸಲಿದೆ. ಹಾಗಾದರೆ ಜನವರಿ 5ರಂದು 12 ರಾಶಿಗಳ ಫಲಾನುಫಲ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಹೇಳಿಕೊಳ್ಳುವ ಮಟ್ಟಿಗೆ ಉತ್ತಮವಾಗಿರುವುದಿಲ್ಲ. ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮ ಇರುತ್ತದೆ. ಕೌಟುಂಬಿಕ ಗೌರವ ಹೆಚ್ಚಲಿದೆ. ಸ್ನೇಹಿತರು ಅಥವಾ ಸಂಬಂಧಿಕರನ್ನು ಭೇಟಿಯಾದ ನಂತರ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಇದರಿಂದ ಖರ್ಚು ಕೂಡ ಹೆಚ್ಚಾಗಲಿದೆ. ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬೆಳಗ್ಗೆ ಸೂರ್ಯ ದೇವರಿಗೆ ಪೂಜೆಯನ್ನು ಸಲ್ಲಿಸಿ.

horoscope today astrological prediction january 5 2025 for 12 zodiac signs in kannada

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನ ಅದ್ಭುತವಾಗಿರುತ್ತದೆ. ಈ ದಿನ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನೀವು ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತೀರಿ. ಕೆಲಸದಲ್ಲಿ ಅಧಿಕಾರಿಗಳ ಬೆಂಬಲ ಸಹ ಸಿಗಲಿದೆ. ಆರ್ಥಿಕ ಜೀವನ ಸುಧಾರಿಸುವುದರಿಂದ ಜೀವನದಲ್ಲಿ ಸಂತೋಷ ಇರಲಿದೆ. ಬೆಳಗ್ಗೆ ಸೂರ್ಯ ದೇವರ ಮಂತ್ರವನ್ನು ಪಠಿಸಿ, ಸೂರ್ಯೋದಕ್ಕಿಂತ ಮುಂಚೆ ಎಂದು ಮನೆ ಬಾಗಿಲಿಗೆ ದೀಪ ಬೆಳಗಿಸಿ. ಇದರಿಂದ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಮುಶ್ರವಾಗಿರುತ್ತದೆ. ಕೆಲಸದಲ್ಲಿ ಸರಕಾರದಿಂದ ಸಹಕಾರ ದೊರೆಯಲಿದೆ. ಮಕ್ಕಳ ಜವಾಬ್ದಾರಿಗಳು ಹೆಚ್ಚಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುವುದು. ಬೆಳಿಗ್ಗೆ, ಹಸುವಿಗೆ ಹಸಿರು ಮೇವು ಅಥವಾ ಆಹಾರವನ್ನು ನೀಡಿ. ಸೂರ್ಯ ದೇವರ ಮಂತ್ರವನ್ನು ಜಪಿಸಿ. ಇದು ಜೀವನದಲ್ಲಿ ಬರುವ ಅಡೆತಡೆಗಳನ್ನು ದೂರ ಮಾಡುತ್ತದೆ.

ಕಟಕ ರಾಶಿ

ಈ ದಿನ ಕರ್ಕಾಟಕ ರಾಶಿಯವರಿಗೆ ಅತ್ಯುತ್ತಮವಾಗಿಲ್ಲ. ಜೀವನದಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಉದ್ಯೋಗಿಗಳು ಕೆಲಸದ ಒತ್ತಡವನ್ನು ಎದುರಿಸುವಿರಿ. ಸೂರ್ಯದೇವನ ಮಂತ್ರವನ್ನು ಪಠಿಸಿ ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ ಪೂಜಿಸಿ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ದಿನ ಮಂಗಳಕರವಾಗಿರುತ್ತದೆ. ಶಿಕ್ಷಣದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಮನಸ್ಸು ಗೊಂದಲದಿಂದ ದೂರವಾಗಲಿದೆ. ಅನಾವಶ್ಯಕ ಓಡಾಟ ಇರುವುದಿಲ್ಲ. ಕೆಲವು ಭಯದಿಂದ ಮನಸ್ಸು ನಿರ್ಭೀತವಾಗುತ್ತದೆ. ವ್ಯಾಪಾರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಂಗಾತಿಯಿಂದ ಬೆಂಬಲವಿರುತ್ತದೆ. ತಂದೆಯ ಆರೋಗ್ಯ ಸುಧಾರಿಸಲಿದೆ. ಸೈರ್ಯ ಮಂತ್ರವನ್ನು ಪಠಿಸಿ. ಪ್ರಾಣಿಗಳಿಗೆ ಆಹಾರ ನೀಡಿ, ಅಗತ್ಯವಿರುವವರಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ಕಷ್ಟಕರವಾಗಿರುತ್ತದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳಲಿದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಆದರೆ ನಿಮಗೆ ಶತ್ರುಗಳ ಕಾಟ ಹೆಚ್ಚಾಗಬಹುದು. ಅವರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಇದರಿಂದ ಪರಿಹಾರಕ್ಕಾಗಿ ಸೂರ್ಯ ದೇವರ ಮಂತ್ರವನ್ನು ಪಠಿಸಿ. ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿ.

ತುಲಾ ರಾಶಿ

ತುಲಾರಾಶಿಯವರಿಗೆ ಈ ದಿನ ಶುಭವಾಗಿರಲಿದೆ. ಕೌಟುಂಬಿಕ ಗೌರವ ಹೆಚ್ಚಲಿದೆ. ಮನಸ್ಸು ಸಂತೋಷವಾಗಿರುತ್ತದೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಸಂಬಂಧಗಳು ಬಲಗೊಳ್ಳಲಿವೆ. ಭಾನುವಾರ ರಜೆಯನ್ನು ಆನಂದಿಸುವಿರಿ. ಸೂರ್ಯ ಮಂತ್ರವನ್ನು ಪಠಿಸಿ. ಬಡವರಿಗೆ ಅಕ್ಕಿಯನ್ನು ದಾನ ಮಾಡಿ. ಇದರಿಂದ ಸೂರ್ಯದೇವರ ಅನುಗ್ರಹ ನಿಮ್ಮ ಮೇಲೆ ಇರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ನೀವು ಸಹೋದರ ಅಥವಾ ಸಹೋದರಿಯಿಂದ ಒತ್ತಡವನ್ನು ಅನುಭವಿಸಬಹುದು. ಮನಸ್ಸು ವಿಚಲಿತವಾಗಬಹುದು. ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ. ತಂದೆಯಿಂದ ಬೆಂಬಲ ಸಿಗಲಿದೆ. ನಿಮ್ಮ ಕುಟುಂಬದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಬೆಳಿಗ್ಗೆ ಸೂರ್ಯ ದೇವರ ಮಂತ್ರವನ್ನು ಪಠಿಸಿ, ಪೂಜೆ ಮಾಡಿ, ಕೋತಿಗೆ ಬಾಳೆಹಣ್ಣು ನೀಡಿ, ಬೀದಿ ಪ್ರಾಣಿಗಳಿಗೆ ಆಹಾರ ನೀಡುವುದು ಉತ್ತಮ ಫಲ ನೀಡುತ್ತದೆ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಆದರೆ ಸಣ್ಣ ವಿಷಯಗಳಿಗೆ ವಾದ ಮಾಡಬೇಡಿ. ಪ್ರಗತಿಯ ಹಾದಿ ಸುಗಮವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಉದ್ವಿಗ್ನತೆ ಕಡಿಮೆಯಾಗಲಿದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ನಿಧಾನವಾಗಿ ಚಾಲನೆ ಮಾಡಿ. ಈ ದಿನ ಮನೆ ದೇವರಿಗೆ ಪೂಜೆ ಮಾಡಿ, ಹಸುವಿಗೆ ಆಹಾರವನ್ನು ನೀಡಿ, ಮನೆಯಂಗಳದಲ್ಲಿ ಜಾಗವಿದ್ದರೆ ಆಲದ ಗಿಡವನ್ನು ನೆಟ್ಟು ಪೋಷಣೆ ಮಾಡಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಮಿಶ್ರವಾಗಿರುತ್ತದೆ. ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ವೈಯಕ್ತಿಕ ಸಂಬಂಧಗಳು ಗಾಢವಾಗುತ್ತವೆ. ನೀವು ಪ್ರಮುಖ ವ್ಯಕ್ತಿಗಳಿಂದ ವಯವಹಾರದಲ್ಲಿ ಬೆಂಬಲವನ್ನು ಪಡೆಯುತ್ತೀರಿ. ಬೆಳಿಗ್ಗೆ ಬೀದಿ ಪ್ರಾಣಿಗಳಿಗೆ ಆಹಾರವನ್ನು ನೀಡಿ ಮತ್ತು ಶನಿ ಮಂತ್ರವನ್ನು ಜಪಿಸಿ.

ಕುಂಭ ರಾಶಿ

ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಪತ್ತು, ಕೀರ್ತಿ ಮತ್ತು ವೈಭವದಲ್ಲಿ ಹೆಚ್ಚಳವಾಗುತ್ತದೆ. ಪ್ರಯಾಣ ಮತ್ತು ದೇಶ ಪ್ರಯಾಣದ ಪರಿಸ್ಥಿತಿಯು ಆಹ್ಲಾದಕರವಾಗಿರುತ್ತದೆ. ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡಿ ಮತ್ತು ಶನಿ ದೇವರನ್ನು ಪೂಜಿಸಿ. ಸಂಜೆ ಸೂರ್ಯ ದೇವಾಲಯಕ್ಕೆ ಹೋಗಿ ಎಣ್ಣೆಯ ದೀಪ ಹಚ್ಚಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಕ್ಕಳಿಂದಾಗಿ ಒತ್ತಡ ಉಂಟಾಗಬಹುದು. ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಶಾಂತಿ ಸಿಗಬಹುದು. ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ. ಗೋವಿನ ಸೇವೆ ಮಾಡಿದರೆ ವಿಶೇಷ ಪುಣ್ಯ ಸಿಗುತ್ತದೆ. ಗುರುವಿನ ಮಂತ್ರವನ್ನು ಪಠಿಸಿ. ಮನೆ ದೇವರನ್ನು ಪೂಜಿಸಿ ಮನೆಯಿಂದ ಹೊರಗಡೆ ಹೋಗಿ. ಇದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+