Daily Horoscope: ಈ ರಾಶಿಯವರಿಗೆ ಹಣಕಾಸಿನ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾನಸಿಕ ಶಾಂತಿ
Horoscope June 11: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ರಾಹುಕಾಲವು ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಹೊಸ ಆಲೋಚನೆಗಳೊಂದಿಗೆ ದಿನ ಆರಂಭವಾಗುವುದು. ಉದ್ಯೋಗ ಬದಲಾವಣೆಗೆ ಸರಿಯಾದ ಸಮಯ. ಹೊಸ ವ್ಯಹಾರವನ್ನು ಕೂಡಾ ಆರಂಭಿಸಬಹುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದು.

ವೃಷಭ ರಾಶಿ:
ಉತ್ತಮ ಅವಕಾಶಗಳು ಸಿಗುತ್ತವೆ. ಮನಸ್ಸಿನ ಭಾವನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಿ.
ಆರೋಗ್ಯ ಉತ್ತಮವಾಗಿರುವುದು.
ಮಿಥುನ ರಾಶಿ:
ಹೊಸ ಕೆಲಸ ಶುರು ಮಾಡಲು ಒಳ್ಳೆಯ ದಿನ. ಹಣಕಾಸಿನ ಲಾಭವಾಗುವುದು. ಸಾಲ ನೀಡಿದ ಹಣ ಮತ್ತೆ ನಿಮ್ಮ ಕೈ ಸೇರುವುದು. ಮಾತನಾಡುವಾಗ ತಾಳ್ಮೆ ಇರಲಿ. ಮಾತು ನಿಮ್ಮ ಕೆಲಸವನ್ನು ಕೆಡಿಸಬಹುದು. ಆರೋಗ್ಯ ಸ್ಥಿರವಾಗಿರುವುದು.
ಕರ್ಕಾಟಕ ರಾಶಿ:
ಭಾವನೆಗಳ ಮೇಲೆ ನಿಯಂತ್ರಣವಿದ್ದರೆ ಒಳ್ಳೆಯದು. ಅರ್ಧದಲ್ಲಿಯೇ ನಿಲ್ಲಿಸಿರುವ ಕೆಲಸವನ್ನು ಮತ್ತೆ ಆರಂಭಿಸಬಹುದು. ಹೊಸ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಸ್ನೇಹಿತರ ಭೇಟಿ ಸಂತೋಷ ತರುವುದು.
ಸಿಂಹ ರಾಶಿ:
ಆತ್ಮವಿಶ್ವಾಸ ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು. ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ತಾಳ್ಮೆ ಅಗತ್ಯ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆ ಇರಲಿ. ಆತುರ ಪಟ್ಟು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಕನ್ಯಾರಾಶಿ:
ವಿಶೇಷ ಅವಕಾಶಗಳು ಸಿಗುತ್ತವೆ. ನಿಮ್ಮ ಕೆಲಸ ಕಾರ್ಯಗಳಿಗೆ ಮನ್ನಣೆ ಸಿಗುವುದು. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹೂಡಿಕೆ ಮಾಡಲು ಇದು ಸರಿಯಾದ ಸಮಯ ಅಲ್ಲ, ಆತುರ ಪಟ್ಟರೆ ನಷ್ಟ ಅನುಭವಿಸಬೇಕಾಗಬಹುದು.
ತುಲಾ ರಾಶಿ:
ನಿಮ್ಮ ಮಾತೇ ನಿಮಗೆ ವರವಾಗುವುದು. ನಿಮ್ಮ ಮಾತಿಗೆ ಇತರರು ಕಿವಿಯಾಗುವರು. ನಿಮ್ಮ ಮಾತಿನಂತೆಯೇ ಎಲ್ಲಾ ನಡೆಯುವುದು. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು.
ವೃಶ್ಚಿಕ ರಾಶಿ:
ಹೊಸ ಆರಂಭಗಳಿಗೆ ಇಂದು ಅನುಕೂಲಕರ ದಿನ.ಆತ್ಮ ವಿಶ್ವಾಸ ಹೆಚ್ಚಾಗುವುದು.ಭಾವನಾತ್ಮಕ ಸಂಬಂಧಗಳಲ್ಲಿ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಬೇಡಿ. ಹಳೆಯ ಹೂಡಿಕೆಗಳು ಲಾಭವನ್ನು ತರಬಹುದು. ಖರ್ಚುಗಳ ಮೇಲೆ ನಿಯಂತ್ರಣ ಅಗತ್ಯ.
ಧನು ರಾಶಿ:
ಹೊಸ ಆಲೋಚನೆಗಳೊಂದಿಗೆ ಹೊಸ ಅವಕಾಶಗಳು ಸಿಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗುವುದು. ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದತ್ತ ಗಮನ ಹರಿಸಿ.
ಮಕರ ರಾಶಿ:
ವ್ಯವಹಾರ ಅಥವಾ ಉದ್ಯೋಗದಲ್ಲಿ ಕಠಿಣ ಪರಿಶ್ರಮ ಅಗತ್ಯ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಈ ಮೂಲಕ ಸಂತಸ ನೆಮ್ಮದಿ ಹೆಚ್ಚುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಮಕ್ಕಳ ಮೂಲಕ ಶುಭ ಸುದ್ದಿ ಕೇಳುವಿರಿ.
ಕುಂಭ ರಾಶಿ:
ಹೊಸ ಕೆಲಸ ಆರಂಭಿಸಲು ಸೂಕ್ತ ದಿನ. ನಿಮ್ಮ ಗುರಿ ಸಾಧಿಸುವತ್ತ ಗಮನ ಹರಿಸಿ. ಕೆಲಸದ ಹೊರೆ ಹೆಚ್ಚಾಗುವ ಮೂಲಕ ಮಾನಸಿಕ ಒತ್ತಡ ಹೆಚ್ಚಾಗಬಹುದು. ತಾಳ್ಮೆ ಇರಲಿ. ಸಮಸ್ಯೆಗಳು ಬಗೆಹರಿಯುವುದು.
ಮೀನ ರಾಶಿ:
ಆರೋಗ್ಯ ಸಮಸ್ಯೆ ಕಾಡಬಹುದು. ಹಣಕಾಸಿನ ಸಮಸ್ಯೆಯೂ ಎದುರಾಗುವುದು. ಸ್ನೇಹಿತರ ನೆರವಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಹಳೆಯ ಸ್ನೇಹಿತರ ಭೇಟಿಯಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications