ಯಾವ ರಾಶಿಯವರ ಅದೃಷ್ಟ ಹೇಗಿರುತ್ತದೆ? ಯಾರಿಗೆ ಇಂದು ಶುಭ ಯಾರಿಗೆ ಅಶುಭ? ಇಂದಿನ ನಿತ್ಯ ಭವಿಷ್ಯದಲ್ಲಿ ಸಂಪೂರ್ಣ ಮಾಹಿತಿ

ಮೇಷ ರಾಶಿ : ಇಂದು ದಿನ ಪೂರ್ತಿ ಕಾರ್ಯನಿರತರಾಗಿರುತ್ತೀರಿ ಜವಾಬ್ದಾರಿಗಳ ಬಗ್ಗೆ ಎಚ್ಚರದಿಂದಿರಿ. ಕಠಿಣ ಪರಿಶ್ರಮದೊಂದಿಗೆ ಅದೃಷ್ಟದ ಬೆಂಬಲವೂ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ವೃಷಭ ರಾಶಿ : ಆದಾಯ ಹೆಚ್ಚಾವುದು. ಲಾಭದಾಯಕ ಅವಕಾಶಗಳು ಹುಟ್ಟಿಕೊಳ್ಳುವುದು. ದೀರ್ಘಾವಧಿಯ ಹೂಡಿಕೆಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಖ್ಯಾತಿ ಮತ್ತು ಗೌರವ ಹೆಚ್ಚಾಗುವುದು.

Horoscope

ಮಿಥುನ ರಾಶಿ : ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಆರೋಗ್ಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ: ಯಾವುದೇ ವಿಚಾರವಾಗಿರಲಿ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಮಾತುಕತೆ ನಡೆಸುವಾಗ ಎಚ್ಚರ ಅಗತ್ಯ.

ಸಿಂಹ ರಾಶಿ : ಆರೋಗ್ಯದ ದೃಷ್ಟಿಕೋನದಿಂದ ದಿನವು ಉತ್ತಮವಾಗಿದೆ. ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯ ಕೊರತೆ ಎದುರಾಗುವುದು.ಕೋಪ ಮಾಡಿಕೊಳ್ಳುವ ಬದಲು ತಾಳ್ಮೆಯಿಂದ ಇರಿ.

ಕನ್ಯಾ ರಾಶಿ : ಆದಾಯದ ಮೂಲಗಳು ಹೆಚ್ಚಾಗುತ್ತವೆ. ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ ಒತ್ತಡವನ್ನು ಅನುಭವಿಸಬೇಕಾಗಬಹುದು.

ತುಲಾ ರಾಶಿ : ಸಾಲ ನೀಡಿರುವ ಹಣವು ಲಾಭದೊಂದಿಗೆ ಮರಳಿ ಕೈ ಸೇರುವುದು. ವೃತ್ತಿ ಜೀವನದಲ್ಲಿ ಪ್ರಗತಿಯಾಗುವುದು. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ.

ವೃಶ್ಚಿಕ ರಾಶಿ : ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಂಬಂಧಗಳು ಅನುಕೂಲಕರವಾಗಿರುತ್ತವೆ. ಮಕ್ಕಳ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಜವಾಬ್ದಾರಿಗಳು ಹೆಚ್ಚಾಗುತ್ತವೆ.

ಧನು ರಾಶಿ : ಸಂಬಂಧಗಳ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಒತ್ತಡಕ್ಕೆ ಕಾರಣವಾಗಬಹುದು. ಆರೋಗ್ಯವು ಉತ್ತಮವಾಗಿರುವುದು. ದೂರ ಪ್ರಯಾಣದ ಅವಕಾಶ ಸಿಗುವುದು.

ಮಕರ ರಾಶಿ : ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.ಸಂಬಂಧಗಳಲ್ಲಿ ಏರಿಳಿತ ಕಂಡುಬರಬಹುದು. ಆರೋಗ್ಯವು ಸಾಮಾನ್ಯವಾಗಿರುವುದು.

ಕುಂಭ ರಾಶಿ : ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಗೊಂದಲಗಳು ಪರಿಹಾರವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕವಾಗಿ, ನಿಮ್ಮ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಮೀನ ರಾಶಿ : ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳ ಮೂಲಕವೇ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಬಹುದು. ಮನೆಯಲ್ಲಿರುವ ವೃದ್ಧ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ.

(ಬರಹ : ರಂಜಿತಾ ಆರ್.‌ ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+