ಹೊಸ ಅವಕಾಶಗಳಿಗೆ ಬಾಗಿಲು ತೆರೆಯುವುದು: ಈ ರಾಶಿಯವರಿಗೆ ಇಂದಿನ ದಿನ ಹೆಚ್ಚು ಲಾಭದಾಯಕ

Horoscope April 24: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ರಾಹುಕಾಲವು ಸಾಮಾನ್ಯವಾಗಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. ಏಪ್ರಿಲ್ 24 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಹೊಸ ಅವಕಾಶಗಳು ಬಾಗಿಲು ತೆರೆಯುತ್ತದೆ. ಕೆಲಸದಲ್ಲಿನ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಸಿಗುತ್ತದೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗುವುದು.

Horoscope April 24

ವೃಷಭ ರಾಶಿ:

ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಗೌರವ ಸಿಗುವುದು. ಅನಗತ್ಯ ಆರ್ಥಿಕ ಸವಾಲುಗಳನ್ನು ತಪ್ಪಿಸಲು ಖರ್ಚುಗಳ ಬಗ್ಗೆ ಗಮನ ಕೊಡಿ. ನಿಮ್ಮ ದಿನ ಸಕಾರಾತ್ಮಕತೆಯಿಂದ ತುಂಬಿರುತ್ತದೆ.

ಮಿಥುನ ರಾಶಿ:

ಇಂದು ಸಕಾರಾತ್ಮಕ ಆಲೋಚನೆಗಳು ಮತ್ತು ಹೊಸ ಯೋಜನೆಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ಕರ್ಕಾಟಕ ರಾಶಿ:

ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಸಯ ಕಳೆಯುವಿರಿ. ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶೀಘ್ರದಲ್ಲೇ ಯಶಸ್ಸನ್ನು ತರುತ್ತದೆ. ಇಂದು ಹೂಡಿಕೆ ಮಾಡಲು ಅಥವಾ ಹೊಸ ವ್ಯವಹಾರ ಆರಂಭಿಸಲು ಉತ್ತಮ ಸಮಯ.

ಸಿಂಹ ರಾಶಿ:

ಸೃಜನಶೀಲತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅನೇಕ ಅವಕಾಶಗಳು ಸಿಗುತ್ತವೆ. ನಿಮ್ಮ ಕಠಿಣ ಪರಿಶ್ರಮವು ಶೀಘ್ರದಲ್ಲೇ ಫಲ ನೀಡುತ್ತದೆ. ಆರೋಗ್ಯದ ದೃಷ್ಟಿಕೋನದಿಂದ, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದ ಮೇಲೆ ಗಮನ ಕೇಂದ್ರೀಕರಿಸಿ.

ಕನ್ಯಾ ರಾಶಿ:

ಹೊಸ ಯೋಜನೆ ತೃಪ್ತಿದಾಯಕ ಫಲಿತಾಂಶಗಳನ್ನು ನೀಡಬಹುದು. ವೈಯಕ್ತಿಕ ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ.

ತುಲಾ ರಾಶಿ:

ಇಂದು ಸಮತೋಲನ ಮತ್ತು ಸಾಮರಸ್ಯದಿಂದ ಕೂಡಿದ ದಿನವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ಧ್ಯಾನ ಮತ್ತು ಯೋಗದಿಂದ ಮನಸ್ಸಿನ ಶಾಂತಿಯನ್ನು ಹೆಚ್ಚಿಸಬಹುದು.

ವೃಶ್ಚಿಕ ರಾಶಿ:

ಕೆಲಸದಲ್ಲಿ ಕೆಲವು ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯಿಂದಿರಿ. ಯಾವುದೇ ಹೂಡಿಕೆ ಮಾಡುವಾಗ ಎಚ್ಚರ ಅಗತ್ಯ. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.

ಧನು ರಾಶಿ:

ನಿಮ್ಮ ಉತ್ಸಾಹ ಮತ್ತು ಆತ್ಮವಿಶ್ವಾಸವು ಅನೇಕ ಹೊಸ ಅವಕಾಶಗಳನ್ನು ತರುತ್ತದೆ. ಸಾಮಾಜಿಕ ಜೀವನವು ಸಂತೋಷವಾಗಿರುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ.

ಮಕರ ರಾಶಿ:

ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬ ಸಂಬಂಧಗಳು ಬಲಗೊಳ್ಳಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಆರ್ಥಿಕವಾಗಿ ಜಾಗರೂಕರಾಗಿರಿ. ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಲು ಖರ್ಚುಗಳನ್ನು ನಿಯಂತ್ರಿಸಿ.

ಕುಂಭ ರಾಶಿ :

ಹೊಸ ಅವಕಾಶಗಳು ಒಲಿದು ಬರುವುದು. ಈ ದಿನವನ್ನು ನಿಮಗಾಗಿ ಸಕಾರಾತ್ಮಕ ಮತ್ತು ಸ್ಪೂರ್ತಿದಾಯಕವಾಗಿಸಲು ಪ್ರಯತ್ನಿಸಿ. ಬೇರೆಯವರ ಮಾತಿಗೆ ಕಿವಿಗೊಡಬೇಡಿ. ನಿಮ್ಮ ಮನಸ್ಸಿನ ಮಾತು ಕೇಳಿ ಮುಂದುವರೆಯಿರಿ.

ಮೀನ ರಾಶಿ:

ಹಳೆಯ ಸ್ನೇಹಿತರ ಭೇಟಿ ಸಂತೋಷ ತರುವುದು. ವೃತ್ತಿ ಜೀವನದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು. ಕಲೆ ಅಥವಾ ಬರವಣಿಗೆಯ ಕ್ಷೇತ್ರದಲಿ ಇರುವವರಿಗೆ ಲಾಭದಾಯಕ ದಿನವಾಗಿದೆ.ಮನಸ್ಸಿನ ಶಾಂತಿ ಹೆಚ್ಚಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+