April 18 Horoscope: ದ್ವಾದಶ ರಾಶಿಗಳ ಇಂದಿನ ಭವಿಷ್ಯ - ಮಿಥುನ ರಾಶಿಗೆ ಯಾಕೆ ಬಂಪರ್ ಗೊತ್ತಾ?
Horoscope April 18: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. ಏಪ್ರಿಲ್ 18 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ವೃತ್ತಿರಂಗದಲ್ಲಿ ಇಂದು ಶುಭದಿನ. ಹೊಸ ಅವಕಾಶಗಳು ಗೋಚರಿಸಲಿವೆ. ನಿಮಗೆ ನಾಯಕತ್ವದ ಅವಕಾಶವೂ ಸಿಗಲಿದೆ. ಅತಿ ಮಾತು, ಆವೇಶದಿಂದ ಸಂಕಷ್ಟಕ್ಕೆ ಸಿಲುಕುವಿರಿ. ಪ್ರೀತಿಯ ವಿಷಯದಲ್ಲೂ ಇಂದು ನಿಮ್ಮದೇ ಗೆಲುವು. ಪ್ರಿಯತಮೆಯೊಂದಿಗೆ ತಪ್ಪುತಿಳುವಳಿಕೆ ಉಂಟಾದೀತು. ಆರೋಗ್ಯದ ಕಡೆ ಗಮನ ಇರಲಿ. ಹಣಕಾಸು ವಿಚಾರ ಸ್ಥಿರವಾಗುಳಿಯಲಿದೆ. ಆದರೆ, ವೆಚ್ಚದ ಮೇಲೆ ಕಡಿವಾಣ ಅಗತ್ಯ.

ವೃಷಭ ರಾಶಿ:
ವೃತ್ತಿರಂಗದಲ್ಲಿ ಎಚ್ಚರಿಕೆಯಿಂದರಬೇಕು. ಸಂವಹನದಲ್ಲಿ ಜಾಗರೂಕರಾಗಿರಿ. ತಾಳ್ಮೆ, ಸ್ಪಷ್ಟತೆ ಇದ್ದರೆ ವೃತ್ತಿಯಲ್ಲಿ ಪ್ರಗತಿ ಖಂಡಿತಾ. ಸಾಮಾಜಿಕ ಜೀವನ ಸುಖ-ಕಷ್ಟಗಳ ಮಿಶ್ರಣ. ಹಠಾತ್ ಆರ್ಥಿಕ ನಿರ್ಧಾರ ಖಂಡಿತಾ ಬೇಡ. ಪ್ರೀತಿ ಭಾವನಾತ್ಮಕ ಮಾತುಕತೆಗೆ ಹೊರಳಿದೆ. ಮಾನಸಿಕ, ದೈಹಿಕ ಆಯಾಸ ಹೆಚ್ಚಲಿದೆ. ಹಾಗಾಗಿ, ಆರೋಗ್ಯದ ಮೇಲೆ ಕಣ್ಣಿರಲಿ.
ಮಿಥುನ ರಾಶಿ:
ವೃತ್ತಿ ಜವಾಬ್ದಾರಿ ಹೆಚ್ಚಲಿದೆ. ಜೀವನದಲ್ಲಿ ಪ್ರಭಾವಿಗಳ ಪ್ರವೇಶ. ಸಾಮಾಜಿಕ ಲಾಭ ಹೆಚ್ಚು. ಆತುರದ ವೃತ್ತಿ ನಿರ್ಧಾರ ಕೈಬಿಡಿ. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ. ಮಾತು ಪ್ರಾಮಾಣಿಕವಾಗಿರಲಿ. ಒತ್ತಡದಿಂದ ಆರೋಗ್ಯ ಏರುಪೇರು.ವಿಶ್ರಾಂತಿ ಅಗತ್ಯ. ಹಣಕಾಸು ಸ್ಥಿತಿ ಸ್ಥಿರಗೊಳ್ಳಲಿದೆ. ಉಳಿತಾಯ, ಹಣಕಾಸು ಶಿಸ್ತು ಅಳವಡಿಸಿಕೊಳ್ಳಿ.
ಕರ್ಕಾಟಕ ರಾಶಿ:
ವೃತ್ತಿರಂಗದಲ್ಲಿ ಕೆಲಸದಿಂದ ಗುರುತಿಸಿಕೊಳ್ಳುತ್ತೀರಿ. ಹಿರಿಯರ ಮೆಚ್ಚುಗೆ ಸಿಗಲಿದೆ. ಹೊಸ ಜವಾಬ್ದಾರಿ ಹೆಚ್ಚಲಿದೆ. ಪ್ರೀತಿಯಲ್ಲಿ ಭಾವನಾತ್ಮಕ ನಿರ್ಧಾರ ಬೇಡ. ಪ್ರೀತಿ ಜೀವನದಲ್ಲಿ ತಾಳ್ಮೆ, ತಿಳುವಳಿಕೆಯಿಂದಲೇ ಲಾಭ. ದೇಹಕ್ಕೆ ವಿಶ್ರಾಂತಿ ಬೇಕು. ಕೆಲಸ-ವಿಶ್ರಾಂತಿ ನಡುವೆ ಸಮತೋಲನ ಅಗತ್ಯ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಮುಂದಿನ ಪ್ರಗತಿ ಯೋಜನೆ ಹಾಕಿಕೊಳ್ಳಿ.
ಸಿಂಹ ರಾಶಿ:
ವೃತ್ತಿ ಜೀವನ ಸ್ಥಿರವಾಗಿರಲಿದೆ. ಖಂಡಿತಾ ಅದೃಷ್ಟ ಕೈಹಿಡಿಯುತ್ತೆ. ಆರ್ಥಿಕ ಲಾಭ ಇದೆ. ಹಠಾತ್ ನಿರ್ಧಾರ ಬೇಡ. ಹೊಸ ಅವಕಾಶ ಗೋಚರಿಸಲಿದೆ. ಪ್ರೀತಿಯಲ್ಲಿ ಅಹಂ ತೋರಿಸಬೇಡಿ. ಇದರಿಂದ ಅನಗತ್ಯ ಸಂಘರ್ಷ. ಸಕಾರಾತ್ಮಕತೆ ಬೆಳೆಸಿಕೊಳ್ಳಿ. ದೇಹಾರೋಗ್ಯಕ್ಕೆ ವಿಶ್ರಾಂತಿ ಬೇಕು.
ಕನ್ಯಾ ರಾಶಿ:
ವೃತ್ತಿರಂಗದ ತಾಳ್ಮೆ, ಶಿಸ್ತಿನ ಫಲ ಸಿಗಲಿದೆ. ವೃತ್ತಿರಂಗದ ಬೆಳವಣಿಗೆಗೆ ಅವಕಾಶ ಕೂಡಿ ಬರಲಿದೆ. ಸಂಬಂಧಗಳಲ್ಲಿ ತಪ್ಪುಗ್ರಹಿಕೆ ಬರಬಹುದು. ಅದಕ್ಕೆ ಅವಕಾಶ ಕೊಡಬೇಡಿ. ಮಾನಸಿಕ ಒತ್ತಡ ಹೆಚ್ಚಬಹುದು. ಹಣಕಾಸು ಸ್ಥಿತಿಯಲ್ಲಿ ಸುಧಾರಣೆ. ಹೂಡಿಕೆಯತ್ತ ಗಮನಹರಿಸಿ. ಆತುರದ ನಿರ್ಧಾರ ಬೇಡ.
ತುಲಾ ರಾಶಿ:
ವೃತ್ತಿರಂಗದಲ್ಲಿ ಒತ್ತಡ. ಬದ್ಧತೆ ಹೆಚ್ಚಲಿದೆ. ಪ್ರೀತಿಯ ವಿಷಯದಲ್ಲಿ ಶಾಂತರಾಗಿರಿ. ಇದರಿಂದ ಸಾಮರಸ್ಯ ಸಾಧ್ಯ. ಹೊಸ ಒಪ್ಪಂದಗಳನ್ನು ರೂಪಿಸಲು ಸಕಾಲ. ಒತ್ತಡದಿಂದ ಆರೋಗ್ಯ ಕೆಡಬಹುದು. ಹಣಕಾಸು ವಿಚಾರದಲ್ಲಿ ಸಮಸ್ಯೆ ಇರಲ್ಲ.
ವೃಶ್ಚಿಕ ರಾಶಿ:
ವೃತ್ತಿರಂಗ ಆಶಾದಾಯಕ ಎನಿಸಲಿದೆ. ಸ್ಥಿರ ಪ್ರಯತ್ನಕ್ಕೆ ಪ್ರೋತ್ಸಾಹ ಸಿಗಲಿದೆ. ಕೆಲಸದ ಯಶಸ್ಸು ನಿಮಗೆ ಸಿಗಲಿದೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅಪಾಯಕಾರಿ ಆರ್ಥಿಕ ನಿರ್ಧಾರಗಳು ಬೇಡ. ಆರೋಗ್ಯಕ್ಕೆ ಆದ್ಯತೆ ನೀಡಿ. ಪ್ರೀತಿಯಲ್ಲಿ ಮಾತು ಸ್ಪಷ್ಟ ಇರಲಿ. ಭಾವನಾತ್ಮಕವಾಗಿ ಗೊಂದಲ ಹೆಚ್ಚಾಗಬಹುದು.
ಧನು ರಾಶಿ:
ವೃತ್ತಿರಂಗದಲ್ಲಿ ಕ್ರಿಯೇಟಿವಿಟಿಗೆ ಅವಕಾಶ. ಕುಟುಂಬದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು. ಪ್ರೀತಿಯ ಬದುಕು ರೋಮಾಂಚಕ ತಿರುವು ಪಡೆಯಲಿದೆ. ಮನಸ್ಸಿಗೆ ವಿಶ್ರಾಂತಿ ಬೇಕು. ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ದೂರಗಾಮಿ ಗುರಿಗಳ ಮೇಲೆ ಕಣ್ಣಿಡಿ.
ಮಕರ ರಾಶಿ:
ವೃತ್ತಿರಂಗದಲ್ಲಿ ಶುಭ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಪ್ರೀತಿ ಬದುಕು ಅರ್ಥಪೂರ್ಣವಾಗಿರಲಿ. ಅರ್ಥಪೂರ್ಣ ಸಂಭಾಷಣೆ ಮಾಡಿ. ಸಂವಹನದಲ್ಲಿ ಎಚ್ಚರ ಅಗತ್ಯ. ಆರ್ಥಿಕವಾಗಿಯೂ ಶುಭದಿನ. ಮನಃಶಾಂತಿ ಅಗತ್ಯ.
ಕುಂಭ ರಾಶಿ:
ವೃತ್ತಿಯಲ್ಲಿ ಹೊಸ ಅವಕಾಶ. ನಾಯಕತ್ವ ಸಿಗಲಿದೆ. ಪ್ರೀತಿ ಜೀವನದಲ್ಲಿ ಬಹುಕಾಲದ ಸ್ಪಷ್ಟತೆ ಸಿಗಲಿದೆ. ಆರೋಗ್ಯ ಏರುಪೇರಾಗಬಹುದು. ಹಣಕಾಸು ಹಿಡಿತ ಬಿಗಿ ಇರಲಿ. ವೆಚ್ಚವನ್ನು ಎಚ್ಚರಿಕೆಯಿಂದ ಮಾಡಿ.
ಮೀನ ರಾಶಿ:
ವೃತ್ತಿ ಜೀವನದ ಪ್ರಗತಿ ನಿಧಾನಗತಿಯಲ್ಲಿರುತ್ತದೆ. ತಾಳ್ಮೆಯೇ ಅತಿದೊಡ್ಡ ವರ. ಯಾವುದೇ ಪ್ರಮುಖ ನಿರ್ಧಾರಗಳು ಇವತ್ತು ಬೇಡ. ಹಣಕಾಸು ಸುಧಾರಣೆಯಾಗಲಿದೆ. ಪ್ರೀತಿಯ ವಿಚಾರದಲ್ಲಿ ಕಠೋರವಾಗಿ ವರ್ತಿಸಬೇಡಿ. ಸೌಮ್ಯ ಮಾತುಕತೆಯಿಂದ ಅನಗತ್ಯ ಆವೇಶ ಕಡಿಮೆಯಾಗಲಿದೆ. ಆರೋಗ್ಯದ ಕಡೆ ಗಮನ ಕೊಡಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications