April 17 Horoscope: ಈ ರಾಶಿಯವರಿಗೆ ಇಂದು ಮಾತೇ ಕಂಟಕವಾಗಬಹುದು: ನಿತ್ಯ ಭವಿಷ್ಯದಲ್ಲಿ ದ್ವಾದಶ ರಾಶಿಗಳ ಜಾತಕ ಫಲ

Horoscope April 17: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ಸಾಮಾನ್ಯವಾಗಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. ಏಪ್ರಿಲ್ 15 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ: ನಿಮ್ಮ ನಿರೀಕ್ಷೆಗಳು ಈಡೇರದೆ ಮನಸ್ಸಿಗೆ ನೋವುಂಟಾಗಬಹುದು. ಸಂಬಂಧದಲ್ಲಿ ಏರಿಳಿತಗಳು ಉಂಟಾಗುತ್ತವೆ. ಸಂಬಂಧದಲ್ಲಿನ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಶಾಂತವಾಗಿರಿ. ಮಾತುಕತೆ ವೇಳೆ ಬಹಳ ಜಾಗರೂಕರಾಗಿರಿ.

Horoscope April 17

ವೃಷಭ ರಾಶಿ: ನಿಮ್ಮ ಮನದ ಮಾತುಗಳನ್ನು ಸ್ಪಷ್ಟವಾಗಿ ಮುಂದಿಟ್ಟರೆ ಮಾತ್ರ ನಿಮ್ಮ ಕೆಲಸ ನೆರವೇರುವುದು. ಅತ್ಯಂತ ತಾಳ್ಮೆಯಿಂದ ಇರುವುದು ಒಳ್ಳೆಯದು. ಅವಿವಾಹಿತರಿಗೆ ಸಂಬಂಧ ಕೂಡಿ ಬರಬಹುದು.

ಮಿಥುನ ರಾಶಿ: ನಿಮ್ಮ ಸಂಗಾತಿಯ ಸಹಾಯದಿಂದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಇಡೀ ದಿನ ಉತ್ತಮ ರೀತಿಯಲ್ಲಿ ಸಾಗುವುದು.ತಮಾಷೆ ಹಾಸ್ಯದ ಜೊತೆಗೆ ಯಾವುದೇ ರೀತಿಯ ಒತ್ತಡ ಇಲ್ಲದೆ ದಿನ ಕಳೆಯುವುದು.

ಕಟಕ ರಾಶಿ: ತಮಾಷೆಯಾಗಿ ನೀವು ಆಡುವ ಮಾತೇ ನಿಮಗೆ ಮುಳ್ಳಾಗಬಹುದು. ಹಾಗಾಗಿ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಮಾತು ನಿಮ್ಮ ಪ್ರೀತಿ ಪಾತ್ರರ ಮನಸ್ಸು ನೋಯಿಸಬಹುದು. ಹೊಸ ವ್ಯಕ್ತಿಗಳ ಪರಿಚಯವಾಗುವುದು.

ಸಿಂಹ ರಾಶಿ: ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ಒದಗಿ ಬರುವುದು.
ಹಣಕಾಸಿನ ಸಮಸ್ಯೆ ತಕ್ಕ ಮಟ್ಟಿಗೆ ನೀಗುವುದು. ಹಳೆಯ ಸ್ನೇಹಿತರು ಮತ್ತೆ ನಿಮ್ಮ ಜೀವನವನ್ನು ಪ್ರವೇಶಿಸುವರು.

ಕನ್ಯಾ ರಾಶಿ: ಗೊಂದಲ ಅಥವಾ ಅನಿಶ್ಚಿತತೆಯೊಂದಿಗೆಯೇ ದಿನದ ಆರಂಭವಾಗುವುದು. ಮೂರನೇ ವ್ಯಕ್ತಿಯ ಕಾರಣದಿಂದ ಸಂಬಂಧದಲ್ಲಿ ಗೊಂದಲ ಹೆಚ್ಚಾಗಬಹುದು.ಎಲ್ಲರ ಜೊತೆ ಕುಳಿತು ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಬಹುದು.

ತುಲಾ ರಾಶಿ: ಮನೆಯಿರಲಿ, ಕಚೇರಿ ಇರಲಿ ಮನಸ್ಸಿನ ಒತ್ತಡ ಹೆಚ್ಚಾಗುವುದು. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಶ್ಚಿಕ ರಾಶಿ: ಇಂದಿನ ದಿನ ಸವಾಲಿನಿಂದ ಕೂಡಿರಬಹುದು. ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ.ಯಾವುದೇ ತೀರ್ಮಾನಗಳಿಗೆ ಬರುವ ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಧನು ರಾಶಿ: ದಿನ ಸಂತೋಷದಿಂದ ಕೂಡಿರುತ್ತದೆ. ಭವಿಷ್ಯದ ಯೋಜನೆಗಳನ್ನು ರೂಪಿಸಬಹುದು.ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.

ಮಕರ ರಾಶಿ: ಕೆಲಸದ ಒತ್ತಡವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸುವುದು ಪ್ರಯೋಜನಕಾರಿಯಾಗಿರಲಿದೆ.

ಕುಂಭ ರಾಶಿ: ಏನೇ ನಿರ್ಧಾರ ತೆಗೆದುಕೊಳ್ಳುವಯದಾದರೂ ಮನೆ ಮಂದಿ ಜೊತೆ ಕುಳಿತು ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಆತುರದ ನಿರ್ಧಾರಕ್ಕೆ ಕೈ ಹಾಕದಿರಿ.

ಮೀನ ರಾಶಿ: ಹಣಕಾಸಿನ ಸಮಸ್ಯೆ ನೀಗುವುದು.ಬಾಕಿ ಉಳಿದಿರುವ ಕೆಲಸ ಕೈಗೂಡುವುದು. ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಸುಲಭವಾಗಿ ಪರಿಹಾರವಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+