Daily Horoscope: ಸಿದ್ದಿ ಯೋಗ! ಇಂದು ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಉದ್ಯೋಗದಲ್ಲಿ ಬಡ್ತಿ ಸಂಭವ

Daily Horoscope: ಅಶ್ವಿನಿ ಕೃಷ್ಣ ಪಕ್ಷದ ಸಪ್ತಮಿ ತಿಥಿ ನಾಳೆ ಬೆಳಿಗ್ಗೆ 8 ಗಂಟೆಯವರೆಗೆ ಇರುತ್ತದೆ. ನಂತರ ಅಷ್ಟಮಿ ತಿಥಿ ಪ್ರಾರಂಭವಾಗುತ್ತದೆ. ಆರ್ದ್ರಾ ನಕ್ಷತ್ರವು ದಿನವಿಡೀ ಇರುವುದು. ಚಂದ್ರ ಇಡೀ ದಿನ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಸಿದ್ಧಿಯೋಗ, ಲಕ್ಷ್ಮಿನಾರಾಯಣ ಯೋಗ, ಪಾರಿಜಾತ ಯೋಗ, ಬುಧಾದಿತ್ಯ ಯೋಗ ಮತ್ತು ಮಾಲವ್ಯ ಯೋಗದ ಉತ್ತಮ ಸಂಯೋಜನೆ ಇರುವುದು.

ಮೇಷ ರಾಶಿ (Aries):

ನಿಂತು ಹೋಗಿದ್ದ ಕೆಲಸ ಪೂರ್ಣವಾಗುವುದು. ಅನುಕೂಲಕರ ಗ್ರಹ ಸಂಚಾರದ ಫಲವಾಗಿ ಕಚೇರಿ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ವರ್ಗಾವಣೆಯಾಗಬಹುದು. ಮನೆಯಲ್ಲಿರುವ ವಯಸ್ಸಾದ ವ್ಯಕ್ತಿಯ ಆರೋಗ್ಯ ಸುಧಾರಿಸುವುದು. ಮಾನಸಿಕ ಒತ್ತಡ ಹೆಚ್ಚಾಗುವುದು.

Daily Horoscope October 3

ವೃಷಭ ರಾಶಿ (Taurus):

ಪ್ರಮುಖ ವ್ಯವಹಾರ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ಪಿತೃ ಪಕ್ಷದ ನಂತರವೇ ಹೊಸ ವ್ಯವಹಾರ ಪ್ರಾರಂಭಿಸಿ. ಉದ್ಯೋಗದಲ್ಲಿರುವವರು ಪ್ರಗತಿ ಹೊಂದುವರು. ಕೆಲಸದ ಹೊರೆ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಆಳವಾದ ಭಾವನಾತ್ಮಕ ಸಂಬಂಧ ಇರುವುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುವುದು.

ಮಿಥುನ ರಾಶಿ (Gemini):

ಸಿದ್ಧಿ ಯೋಗದಿಂದ ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು ಸಿಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಉದ್ಯಮಿಗಳ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ಮಾರ್ಕೆಟಿಂಗ್‌ನಲ್ಲಿ ತೊಡಗಿರುವವರು ಕಾರ್ಯತಂತ್ರ ರೂಪಿಸಬೇಕು. ಕೆಲಸಕ್ಕೆ ಅಡೆತಡೆ ಉಂಟಾಗಬಹುದು. ಇದು ಉದ್ಯೋಗ ಬದಲಾಯಿಸುವ ಆಲೋಚನೆಗೆ ಕಾರಣವಾಗಬಹುದು. ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು.

ಕಟಕ ರಾಶಿ (Cancer):

ಪಿತೃ ಪಕ್ಷ ನಡೆಯುತ್ತಿರುವುದರಿಂದ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ. ನೀವು ಬಳಸುವ ಪದಗಳೇ ಮುಳ್ಳಾಗಬಹುದು. ವ್ಯಾಪಾರದಲ್ಲಿ ನಷ್ಟಕ್ಕೆ ಕಾರಣವಾಗಬಹುದು. ಸಣ್ಣ ವಿಷಯಗಳಿಗೆ ಜಗಳ ಮಾಡಲು ಹೋಗಬೇಡಿ. ಖರ್ಚು ಹೆಚ್ಚಾಗುವುದು. ಕಾಸಿನ ವಹಿವಾಟುಗಳಲ್ಲಿ ಎಚ್ಚರಿಕೆ ವಹಿಸಿ.

ಸಿಂಹ ರಾಶಿ (leo):

ಸಿದ್ಧಿ ಯೋಗದಿಂದ ಆರ್ಥಿಕ ಸಮೃದ್ದಿಯಾಗುವುದು. ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡುವುದನ್ನು ನಿಲ್ಲಿಸಿ. ಒಂದು ಪ್ರಮುಖ ಸುದ್ದಿ ಸಿಗುವುದು. ಕುಟುಂಬ ಜೀವನ ಸಂತೋಷದಿಂದ ಕೂಡಿರುವುದು. ಅನಗತ್ಯ ವಾದವನ್ನು ತಪ್ಪಿಸಿ. ವ್ಯವಹಾರದಲ್ಲಿ ಬಂಪರ್ ಲಾಭವಾಗುವುದು. ಅನಗತ್ಯವಾಗಿ ಖರ್ಚು ಮಾಡಲು ಹೋಗಬೇಡಿ.

ಕನ್ಯಾರಾಶಿ (Virgo):

ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಮಯ ಅನುಕೂಲಕರವಾಗಿದೆ. ವರ್ಗಾವಣೆ ಅಥವಾ ಬಡ್ತಿಯ ಅವಕಾಶವಿದೆ. ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಶಾಂತಿ ಸಂತೋಷ ನೆಲೆಯಾಗುವುದು. ಮಕ್ಕಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ವೃತ್ತಿ ಜೀವನದಲ್ಲಿ ಪ್ರಗತಿಯಾಗುವುದು. ಹಣ ಸಿಗುವುದು.

ತುಲಾ ರಾಶಿ (Libra):

ಸಿದ್ಧಿ ಯೋಗದಿಂದ ಮಾರುಕಟ್ಟೆ ವಾತಾವರಣ ಸಂಪೂರ್ಣವಾಗಿ ನಿಮ್ಮ ಪರವಾಗಿರುವುದು. ಗ್ರಾಹಕರನ್ನು ಸೆಳೆಯಲು ಹೊಸ ತಂತ್ರವನ್ನು ಮಾಡಬೇಕಾಗಬಹುದು. ವ್ಯವಹಾರವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವಿರಿ. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಧಾರ್ಮಿಕ ಆಚರಣೆ ಪೂಜೆಗೆ ಹಣ ಖರ್ಚು ಮಾಡಬೇಕಾಗುವುದು.

ವೃಶ್ಚಿಕ ರಾಶಿ (Scorpio):

ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಆರ್ಡರ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಕಷ್ಟವಾಗಬಹುದು. ಉದ್ಯೋಗಗಳನ್ನು ಬದಲಾಯಿಸುವ ಯೋಚನೆ ಇದ್ದರೆ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ಅನಿರೀಕ್ಷಿತ ಖರ್ಚು ಹೆಚ್ಚಾಗುವುದು.

ಧನು ರಾಶಿ (Sagittarius):

ಸಿದ್ಧಿ ಯೋಗದಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ನಿಮ್ಮ ಜವಾಬ್ದಾರಿ ಹೆಚ್ಚಾಗುವುದು. ವಿದೇಶ ಪ್ರಯಾಣ ಯೋಗವಿದೆ. ದೊಡ್ಡ ಮಟ್ಟದ ಲಾಭವಾಗುವುದು. ನಿಮ್ಮ ಖ್ಯಾತಿ ಹೆಚ್ಚಾಗುವುದು. ಸಂಗಾತಿಯೊಂದಿಗೆ ಸಾಮರಸ್ಯ ಕಾಪಾಡಿಕೊಳ್ಳಿ. ವೈವಾಹಿಕ ಜೀವನ ಸಾಮರಸ್ಯದಿಂದ ಕೂಡಿರುವುದು. ಆರೋಗ್ಯವು ಅತ್ಯುತ್ತಮವಾಗಿರುವುದು.

ಮಕರ ರಾಶಿ (capricorn):

ಹಿಂದೆ ಮಾಡಿರುವ ಹೂಡಿಕೆ ಲಾಭ ತರುವುದು. ಸಿದ್ಧಿ ಯೋಗದಿಂದ ಮನಸ್ಸಿನ ಶಾಂತಿ ಹೆಚ್ಚಾಗುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಪ್ರಗತಿಯ ಬಾಗಿಲು ತೆರೆಯುವುದು. ಸಂಗಾತಿಯೊಂದಿಗೆ ಕೆಲವು ಸಣ್ಣಪುಟ್ಟ ವಾದಗಳಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರುವುದು. ಮೈ ಕೈ ನೋವು ಕಾಣಿಸಿಕೊಳ್ಳಬಹುದು.

ಕುಂಭ ರಾಶಿ (Aquarius):

ವ್ಯವಹಾರದಲ್ಲಿ ಇವತ್ತು ಹೆಚ್ಚಿನ ಲಾಭವಾಗುವುದು. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರು ಕೆಲಸದ ಮೇಲೆ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ಅವಿವಾಹಿತರ ಮದುವೆಯ ಮಾತುಕತೆ ನಡೆಯಬಹುದು. ಹಿರಿಯರ ಆಶೀರ್ವಾದ ಸಿಗುವುದು. ಸಿದ್ಧಿ ಯೋಗದ ಪ್ರಭಾವದಿಂದ ಹಣದ ಲಾಭವಾಗುವುದು. ಆರೋಗ್ಯದ ದೃಷ್ಟಿಕೋನದಿಂದ ದಿನ ಅತ್ಯುತ್ತಮವಾಗಿರುವುದು.

ಮೀನ ರಾಶಿ (Pisces):

ಹೊಸ ವ್ಯವಹಾರ ಒಪ್ಪಂದ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಹೊಸ ಕೆಲಸಕ್ಕೆ ಕೈ ಹಾಕಲು ಸಮಯ ಸೂಕ್ತವಲ್ಲ. ಸರ್ಕಾರಿ ಕೆಲಸದಲ್ಲಿರುವವರು ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಮಗುವಿನ ನಡವಳಿಕೆ ಮನಸ್ಸಿಗೆ ನೋವುಂಟು ಮಾಡಬಹುದು. ಹಣದ ವಿಷಯಗಳಲ್ಲಿ ತೀವ್ರ ಜಾಗರೂಕರಾಗಿರಿ. ತಲೆನೋವಿನ ಸಮಸ್ಯೆ ಕಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+