Daily Horoscope Oct 13: ಪ್ರೀತಿ ಯೋಗದಿಂದ ಬೆಳಗುವುದು ಈ ರಾಶಿಯವರ ಭವಿಷ್ಯ; ಕರಿಯರ್‌ಗೆ ಹೊಸ ಟ್ವಿಸ್ಟ್, ಬಂಪರ್ ಧನ ಲಾಭ

Daily Horoscope: ಅಶ್ವಿನಿ ಶುಕ್ಲ ಪಕ್ಷದ ಮೂರನೇ ತಿಥಿ ರಾತ್ರಿ 11.28 ರವರೆಗೆ ಇರುತ್ತದೆ. ನಂತರ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ವಿಶಾಖ ನಕ್ಷತ್ರದ ಪರಿಣಾಮವು ದಿನವಿಡೀ ಇರುತ್ತದೆ. ಚಂದ್ರನು ತುಲಾ ರಾಶಿಯಲ್ಲಿ ಸಂಜೆ 7.12 ರವರೆಗೆ ಸಂಚರಿಸುತ್ತಾನೆ. ಪ್ರೀತಿ ಯೋಗ, ಲಕ್ಷ್ಮೀನಾರಾಯಣ ಯೋಗ, ಪಾರಿಜಾತ ಯೋಗ, ವಾಶಿ ಯೋಗ, ಆನಂದದಾದಿ ಯೋಗ, ಸುಂಫ ಯೋಗ ಮತ್ತು ಮಾಳವ್ಯ ಯೋಗಗಳು ರೂಪುಗೊಳ್ಳುತ್ತಿವೆ. ಇದರ ಶುಭ ಪರಿಣಾಮ ಯಾವ ರಾಶಿಯವರ ಮೇಲೆ ಇರುತ್ತದೆ ನೋಡೋಣ.

ಮೇಷ ರಾಶಿ (Aries)

ಪ್ರೀತಿ ಯೋಗದ ರಚನೆಯೊಂದಿಗೆ, ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನವಾಗುವುದು. ಉದ್ಯೋಗ ಬದಲಾಯಿಸುವ ಯೋಚನೆ ಇದ್ದರೆ ಇಂದು ಉತ್ತಮ ದಿನವಾಗಬಹುದು. ವೃತ್ತಿಜೀವನಕ್ಕೆ ಹೊಸ ತಿರುವು ಸಿಗುವುದು. ವೈವಾಹಿಕ ಜೀವನದಲ್ಲಿ ಹೊಸತನ ಇರುವುದು. ಭವಿಷ್ಯದ ಯೋಜನೆ ಬಗ್ಗೆ ಸಂಗಾತಿಯೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವುದು ಒಳ್ಳೆಯದು. ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು. ಆರೋಗ್ಯವು ಉತ್ತಮವಾಗಿರುತ್ತದೆ.

Daily Horoscope October 13 Love Career Breakthroughs and Financial Gains for These Zodiac Signs

ವೃಷಭ ರಾಶಿ (Taurus)

ಪ್ರೀತಿ ಯೋಗದ ಪರಿಣಾಮದಿಂದಾಗಿ ಹೊರಗೆ ಉಳಿದಿರುವ ಹಣ ಕೈ ಸೇರುವುದು.ಹಣದ ಸಮಸ್ಯೆ ನಿವಾರಣೆಯಾಗುವುದು. ವ್ಯವಹಾರ ಉತ್ತಮವಾಗಿ ನಡೆಯುತ್ತದೆ. ಮಧ್ಯಾಹ್ನದ ವೇಳೆಗೆ ಕೆಲಸದ ಒತ್ತಡ ಹೆಚ್ಚಾಗುವುದು. ವೈವಾಹಿಕ ಜೀವನದಲ್ಲಿ ಪ್ರೀತಿ ಪ್ರಣಯ ಹೆಚ್ಚಾಗುವುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

ಮಿಥುನ ರಾಶಿ (Gemini)

ಹಳೆ ಸ್ನೇಹಿತನ ಜೊತೆ ಸೇರಿ ಹೊಸ ಉದ್ಯಮ ಶುರು ಮಾಡುವಿರಿ. ಪ್ರೀತಿ ಯೋಗ ವ್ಯವಹಾರದಲ್ಲಿ ಬಂಪರ್ ಲಾಭಕ್ಕೆ ಕಾರಣವಾಗುತ್ತದೆ. ಈ ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗವುದು. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಪಾಲುದಾರಿಕೆ ಮತ್ತು ಹೊಸ ಒಪ್ಪಂದ ಲಾಭ ತರುವುದು.

ಕರ್ಕಾಟಕ ರಾಶಿ (Cancer)

ವ್ಯವಹಾರದಲ್ಲಿ ಆತಂಕ ಹೆಚ್ಚಾಗಬಹುದು. ಹೊಸ ಹೂಡಿಕೆ ಮುಂದೂಡುವುದು ಒಳ್ಳೆಯದು. ಕೌಟುಂಬಿಕ ಭಿನ್ನಾಭಿಪ್ರಾಯ ಕೆಲಸದ ಸ್ಥಳದ ಮೇಲೆ ಪರಿಣಾಮ ಬೀರಬಹುದು. ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಮಾತನಾಡುವಾಗ ಪದ ಬಳಕೆಯ ಬಗ್ಗೆ ಜಾಗೃತೆ ಇರಲಿ. ಹಣಕಾಸಿನ ಬಿಕ್ಕಟ್ಟು ಎದುರಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು.

ಸಿಂಹ ರಾಶಿ (Leo)

ಅದೃಷ್ಟದ ಬೆಂಬಲ ಇರುವುದು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಲಾಭವಾಗುವುದು. ಆದಾಯ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಕೆಲಸದ ಹೊರೆ ಹೆಚ್ಚಾಗುವುದು. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆದಾಯ ಹೆಚ್ಚಾಗುವುದು.

ಕನ್ಯಾರಾಶಿ (Virgo)

ಯುವ ಉದ್ಯಮಿಗಳು ಆರಂಭದಲ್ಲಿ ಸವಾಲು ಎದುರಿಸಬಹುದು. ಆದರೆ ಅವುಗಳನ್ನು ನಿರಂತರವಾಗಿ ನಿಭಾಯಿಸುವುದರಿಂದ ಯಶಸ್ಸು ಸಿಗುವುದು. ಬಡ್ತಿ ಪಡೆಯಬಹುದು. ಮನೆಯಲ್ಲಿ ಸಮಸ್ಯೆಯ ಬಗ್ಗೆ ಗಂಡ ಮತ್ತು ಹೆಂಡತಿಯ ನಡುವೆ ಸ್ವಲ್ಪ ಜಗಳವಾಗಬಹುದು. ವ್ಯವಹಾರದಲ್ಲಿ ಲಾಭವಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ (Libra)

ಪ್ರೀತಿ ಯೋಗದ ರಚನೆಯೊಂದಿಗೆ, ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಸಂತೋಷ ಪ್ರಯೋಜನ ಇರುವುದು. ಹೊಸ ವ್ಯವಹಾರ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸ ಪೂರ್ಣಗೊಳ್ಳುತ್ತದೆ. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು.

ವೃಶ್ಚಿಕ ರಾಶಿ (Scorpio)

ಮಾರುಕಟ್ಟೆಯಲ್ಲಿ ನಗದು ವಹಿವಾಟು ಮಾಡುವಾಗ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ಮಾತಿನ ಮೇಲೆ ನಿಗಾ ಇದ್ದರೆ ಒಳ್ಳೆಯದು. ಇಲ್ಲವಾದರೆ ನಿಮ್ಮ ಮಾತೇ ಮುಳ್ಳಾಗುವುದು. ಖರ್ಚು ಹೆಚ್ಚಾಗಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಅನಗತ್ಯ ಆತಂಕ ಇರಬಹುದು. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಿ.

ಧನು ರಾಶಿ (Sagittarius)

ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸಬಹುದು. ಹಬ್ಬದ ಋತುವಿನಲ್ಲಿ, ಚಿಲ್ಲರೆ ವ್ಯಾಪಾರಿಗಳು ದೊಡ್ಡ ಲಾಭ ಗಳಿಸುವರು. ಕೆಲಸದ ಸ್ಥಳದಲ್ಲಿ ದೀರ್ಘಕಾಲದಿಂದ ಇರುವ ಭಿನ್ನಾಭಿಪ್ರಾಯ ಬಗೆಹರಿಯುತ್ತವೆ. ಕಠಿಣ ಪರಿಶ್ರಮ ಫಲ ನೀಡುತ್ತದೆ. ಕೋಪ ನಿಯಂತ್ರಿಸುವ ಅಗತ್ಯವಿದೆ. ಕುಟುಂಬಕ್ಕೆ ಪೂರ್ಣ ಸಮಯ ನೀಡಿ. ಆದಾಯದ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಮಕರ ರಾಶಿ (Capricorn)

ಮಧ್ಯಾಹ್ನ 12.15 ರಿಂದ 2 ರವರೆಗಿನ ಸಮಯ ಹೊಸ ಕೆಲಸ ಪ್ರಾರಂಭಿಸಲು ಅತ್ಯಂತ ಶುಭವಾಗಿರುತ್ತದೆ. ಗ್ರಹ ಸಂಚಾರವು ವ್ಯವಹಾರ ಪ್ರಗತಿಗೆ ಅನುಕೂಲಕರವಾಗಿರುತ್ತದೆ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ಸಹೋದ್ಯೋಗಿಗಳೊಂದಿಗೆ ವಾದ ಮಾಡಬೇಡಿ. ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು.

ಕುಂಭ ರಾಶಿ (Aquarius)

ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಯೋಜನೆ ಕಾರ್ಯರೂಪಕ್ಕೆ ಬರುವುದು. ಕೆಲಸದ ಮೇಲೆ ಗಮನ ಹರಿಸುವುದು ಅತ್ಯುತ್ತಮ ಫಲ ನೀಡಬಹುದು. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಯತ್ನ ನಡೆಸುವ ವಿದ್ಯಾರ್ಥಿಗಳು ಸಕಾರಾತ್ಮಕ ಮನಸ್ಥಿತಿಯೊಂದಿಗೆ ತಯಾರಿ ನಡೆಸಬೇಕಾಗುತ್ತದೆ. ಪ್ರೀತಿ ಯೋಗದ ಪರಿಣಾಮದಿಂದ ಪೋಷಕರಿಂದ ಆರ್ಥಿಕ ಬೆಂಬಲ ಸಿಗುವುದು.

ಮೀನ ರಾಶಿ (Pisces)

ವ್ಯವಹಾರದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಆತುರ ನಷ್ಟಕ್ಕೆ ಕಾರಣವಾಗಬಹುದು. ಕಚೇರಿಯಲ್ಲಿ ಪ್ರೀತಿ ಮತ್ತು ಸಾಮರಸ್ಯದಿಂದ ಕೆಲಸ ಮಾಡಿ. ಅಹಂಕಾರವನ್ನು ದೂರವಿಟ್ಟರೆ, ವಿರೋಧಿಗಳು ನಿಮ್ಮೊಂದಿಗೆ ಕೈಜೋಡಿಸುವರು. ಅತ್ತೆ-ಮಾವಂದಿರೊಂದಿಗೆ ಸಂಯಮದಿಂದ ನಡೆದುಕೊಳ್ಳಿ. ಆದಾಯದಲ್ಲಿ ಇಳಿಕೆಯಾಗಿ ಖರ್ಚು ಹೆಚ್ಚಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+